ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ 'ಕನಕ-ಪುರಂದರ'; ವಿಶ್ವದೆಲ್ಲೆಡೆ ಪ್ರಸಾರ

By ಸುರೇಶ ಭಟ್ಟ (ಸಿಂಗಪುರ)
|
Google Oneindia Kannada News

ಕನ್ನಡ ಸಂಘ (ಸಿಂಗಪುರ)ವು 1998ರಿಂದ ಪ್ರತೀ ವರ್ಷವೂ ಪುರಂದರ ದಾಸರ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದೆ. ಮೊದಲು ಮನೆಗಳಲ್ಲಿ ಶುರುವಾಗಿ, ನಂತರ ದೇವಸ್ಥಾನಗಳಲ್ಲಿ, ಕನ್ನಡ ಸಂಘದ ಆಶ್ರಯದಲ್ಲಿ ಸಮುದಾಯ ಭವನಗಳಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಬಂದಿದೆ. ಫೆಬ್ರವರಿ 20ನೇ ತಾರೀಖು, ಶನಿವಾರ ಸಿಂಗಪುರದಲ್ಲಿ ನಡೆಯುವ ಪುರಂದರ ನಮನ 2016ರ (ಪುರಂದರ ದಾಸರ 451ನೇ ಆರಾಧನೆ) ಕೆಲವು ವೈಶಿಷ್ಟ್ಯಗಳು ಇಲ್ಲಿವೆ. [ಸಿಂಗಪುರದಲ್ಲಿ ಮೇಳೈಸಿದ 'ಲಯತರಂಗ'ದ ನಾದವೈಭವ]

Purandara Namana 2016 by Singapore Kannada Sangha

1. ದಾಸಸಾಹಿತ್ಯ ಮತ್ತು ಸಂಗೀತವನ್ನು ಹೆಚ್ಚಿನ ಕನ್ನಡಿಗರಿಗೆ ಮತ್ತು ಕನ್ನಡೇತರರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಬಾರಿ ಆರಿಸಿಕೊಂಡ ವಿಷಯ "ಕನಕ-ಪುರಂದರ". ಜನವರಿ 31ರಂದು ಸುಮಾರು 120ಕ್ಕೂ ಹೆಚ್ಚು ಹಿರಿ-ಕಿರಿಯರು "ಕನಕ-ಪುರಂದರ" ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

2. ಸಾಹಿತ್ಯ ಮತ್ತು ಸಂಗೀತಾಧಾರಿತವಾದ ಈ ಕಾರ್ಯಕ್ರಮವನ್ನು ಕನ್ನಡ ಸಂಘ (ಸಿಂಗಪುರ)ವು ಇಲ್ಲಿನ ಪ್ರತಿಷ್ಠಿತ ಕಲಾಸಂಸ್ಥೆಯಾದ ಸಿಂಗಪುರ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ (SIFAS)ನ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿದೆ.

3. "ಕನಕ-ಪುರಂದರ" ಸಂಗೀತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ಗಾನಕೋಗಿಲೆ ಡಾ. ಭಾಗ್ಯ ಮೂರ್ತಿ ಅವರ ನೇತೃತ್ವದಲ್ಲಿ ಸಿಂಗಪುರದ ಹಲವಾರು ಸಂಗೀತಗಾರರು, ಶಿಕ್ಷಕರು ಹಾಗೂ ಶಿಷ್ಯವರ್ಗದವರಿಂದ ಸಮೂಹಗಾಯನದ ಜೊತೆಗೆ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ "ಕನಕ-ಪುರಂದರ" ಹಿಂದೂಸ್ಥಾನಿ-ಕರ್ನಾಟಕ ಸಂಗೀತಗಳ ಜುಗಲ್ ಬಂದಿ ಕಾರ್ಯಕ್ರಮ.

4. ಇದಲ್ಲದೆ ಈ ಕಾರ್ಯಕ್ರಮದಲ್ಲಿ ಆಯೋಯಿಸಲಾಗುತ್ತಿರುವ ಪಕ್ಕವಾದ್ಯಗಳಲ್ಲೊಂದು - ಸಾರಂಗಿ. ಅಪರೂಪವಾದ, ಪ್ರಾಯಶಃ ಸಿಂಗಪುರದಲ್ಲಿ ಪ್ರಥಮಬಾರಿಗೆ ಈ ಪಕ್ಕವಾದ್ಯವನ್ನು ನುಡಿಸಿತ್ತಿರುವವರು ಉಸ್ತಾದ್ ಫೈಯಾಜ್ ಖಾನ್ ಅವರ ಪುತ್ರ ಉಸ್ತಾದ್ ಸರ್ಫರಾಜ್ ಖಾನ್.

ಇಷ್ಟೊಂದು ಹೊಸತನ ತುಂಬಿರುವ ಈ ಕಾರ್ಯಕ್ರಮವನ್ನು ನೋಡಲು ನಾನೂ ಸಿಂಗಪುರದಲ್ಲಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನಿಮಗನಿಸಿದರೆ ಅದರಲ್ಲೇನೂ ತಪ್ಪಿಲ್ಲ, ನಿರಾಶರಾಗುವ ಅಗತ್ಯವೂ ಇಲ್ಲ. ಕನಕ-ಪುರಂದರ ದಾಸರ ಸಂಗೀತ ಸುಧೆಯನ್ನು ಎಲ್ಲೆಡೆ ಹರಡುವ ನಿಟ್ಟಿನಲ್ಲಿ ಕನ್ನಡ ಸಂಘ (ಸಿಂಗಪುರ)ವು ತನ್ನ ತಾಂತ್ರಿಕ ತಂಡದ ಸಹಯೋಗದೊಂದಿಗೆ ಹೊಸ ಹೆಜ್ಜೆಯೊಂದನ್ನು ಇಡುತ್ತಿದೆ.

ಇದೇ ಮೊದಲ ಬಾರಿಗೆ ಕಾರ್ಯಕ್ರಮದ ನೇರ ಪ್ರಸಾರ ಮಾಡಲಿದೆ. ಈ ಕಾರ್ಯಕ್ರಮವನ್ನು ಕನ್ನಡ ಸಂಘದ ಯೂಟ್ಯೂಬ್ ಚಾನಲ್ಲಿನಲ್ಲಿ ಈ ಶನಿವಾರ ಮಧ್ಯಾಹ್ನ 2.30 ಗಂಟೆ ಭಾರತೀಯ ಸಮಯದಿಂದ (Live Streaming) ನೋಡಲು ಈ ಕೊಂಡಿಯನ್ನು ಕ್ಲಿಕ್ಕಿಸಿ. ಕೇವಲ ನೀವು ಮಾತ್ರ ನೋಡುವುದಲ್ಲ - ನಿಮ್ಮ ಸಂಗೀತ ಪ್ರಿಯ ಬಂಧುಮಿತ್ರರಿಗೂ ತಿಳಿಸಿ.

English summary
Kannada Sangha Singapore, in association with Singapore Indian Fine Arts Society, has oraganized unique music concert Purandara Namana 2016, to pay tribute to sangeeta pitamaha Purandara Dasaru on 20th February, 2016 . The program will be webcast live.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X