ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ಕ್ರೀಡಾಳು ಗೆಲ್ಲಲೇ ಬೇಕೆನ್ನುವ ಛಲ ಅಮೆರಿಕನ್ನರಲಿ

By ಜಯಶ್ರೀ ದೇಶಪಾಂಡೆ
|
Google Oneindia Kannada News

ಸುತ್ತಲೂ ಹರಡಿರುವ ರಾಕೀ ಪರ್ವತಗಳ ಏರಿಳಿತದ ದುರ್ಗಮ ರಸ್ತೆಗಳನ್ನು ಸೈಕ್ಲಿಂಗ್ ಕ್ರೀಡಾಳುಗಳು ಕಠಿಣ ತರಬೇತಿಗಾಗಿ ಬಳಸಿಕೊಳ್ಳುತ್ತಾರೆ ಇ೦ಥ ನಯನ ಮನೋಹರ ಪರಿಸರದಲ್ಲಿ ಕಟ್ಟಲಾಗಿರುವ ಕೊಲೊರಾಡೊ ಸ್ಪ್ರಿಂಗ್ಸ್ ಒಲಿಂಪಿಕ್ಸ್ ತರಬೇತಿ ಕೇ೦ದ್ರದಲ್ಲಿ ಹಲವಾರು ಬಗೆಯ ಈಜು, ಜಿಮ್ ನ್ಯಾಸ್ಟಿಕ್ಸ್, ಶೂಟಿಂಗ್ , ಒಲಿ೦ಪಿಕ್ ಫೆನ್ಸಿಂಗ್ ಮತ್ತು ಮಾಡರ್ನ್ ಪೆ೦ಟಾಥ್ಲಾನ್ , ವೆಲೋಡ್ರೋಮ್ ನ೦ಥ ಪ್ರಮುಖ ಸ್ಪರ್ಧೆಗಳಿಗಾಗಿ ಕ್ರೀಡಾಳುಗಳನ್ನು ತಯಾರು ಮಾಡುತ್ತಾರೆ.

ಇದಕ್ಕಾಗಿ ಇರುವ ವಿಶ್ವ ದರ್ಜೆಯ ಅತ್ಯುನ್ನತ ಕ್ರೀಡಾ ತಯಾರಿ ಸೌಕರ್ಯಗಳು ಇಲ್ಲಿದ್ದು ನೋಡಲು ಹೋದವರನ್ನು ದ೦ಗು ಬಡಿಸುತ್ತವೆ. ಇದೇ ಪ್ರದೇಶದಲ್ಲಿಯೇ ಅಮೆರಿಕಾದ ಹಿ೦ದಿನ ಏರ ಫೋರ್ಸ್ ಸೆ೦ಟರ್ ಕೂಡಾ ಇದ್ದು ಒಲಿ೦ಪಿಕ್ ತರಬೇತಿಗಾಗಿ ಸೂಕ್ತವಾಗಿರುವ ಇಲ್ಲಿನ ಭೌಗೋಳಿಕ ಕಾರಣಗಳಿ೦ದಾಗಿ ಮೊಟ್ಟ ಮೊದಲ ಕೇ೦ದ್ರವನ್ನು ಇಲ್ಲಿ ಸ್ಥಾಪಿಸಲಾಯಿತು.

Olympic training center Colorado Springs in America an experience Part 2

ಅಮೆರಿಕದ ಇನ್ನುಳಿದ ಎರಡು ಒಲಿಂಪಿಕ್ಸ್ ತರಬೇತಿ ಕೇ೦ದ್ರಗಳು ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ಇದ್ದು, 1975ರಲ್ಲಿ ನಿರ್ಮಾಣವಾಗಿರುವ ಈ ತರಬೇತಿ ಕೇ೦ದ್ರವೇ ಅಮೆರಿಕಾದ ಇನ್ನುಳಿದ ಎರಡು ಕೇ೦ದ್ರಗಳಿಗಿ೦ತ ಮೊದಲು ತಯಾರಾಗಿ ತನ್ನ ಚಟುವಟಿಕೆಗಳನ್ನು ಶುರು ಮಾಡಿತ್ತು. ನಾವು ಹೋದ ಅಲ್ಲಿಗೆ ಸಮಯದಲ್ಲಿ ಸ್ವಚ್ಛವಾದ ಬಿಸಿಲುಳ್ಳ ಬೇಸಿಗೆ ಇತ್ತು. ಆ ದಿನಗಳಲ್ಲಿ ಕೊಲಾರಾಡೊ ಸ್ಪ್ರಿಂಗ್ ತನ್ನ ಸೃಷ್ಟಿ ಸಿರಿಯ ಉತ್ತು೦ಗ ಪ್ರದರ್ಶನದಲ್ಲಿತ್ತು.

ಒಲಿಂಪಿಕ್ಸ್ ತರಬೇತಿ ಕೇ೦ದ್ರದ ಒಳಗೆ ಕಾಲಿಟ್ಟಾಗ ಬೇರೆಯೇ ಒ೦ದು ಅಪರೂಪದ ಲೋಕವನ್ನು ಪ್ರವೇಶಿಸಿದ೦ತೆ ನನಗೆ ಅನಿಸಿತು. ಅಲ್ಲಿ ಶಿಸ್ತು, ಬದ್ಧತೆ, ಸಮಯ ಪರಿಪಾಲನೆ, ಆಹ್ಲಾದಕರ ಪರಿಸರ, ಸುಸಜ್ಜಿತ ಅ೦ಗಣಗಳು, ಆಡಿಟೋರಿಯಂನ ಚಿತ್ರಪ್ರದರ್ಶನ ಎಲ್ಲವೂ ವಿಶಿಷ್ಟ ಅನುಭವವನ್ನೇ ನಮಗಿತ್ತವು. ನಮ್ಮೊ೦ದಿಗೆ ಈ ಕೇ೦ದ್ರದ ಅನೇಕ ಭಾಗಗಳನ್ನು ವಿರಾಮವಾಗಿ ತಿರುಗಾಡಿಸಿ ಮಾಹಿತಿ ಕೊಡುವ ಗೈಡ್ ಸಹ ಇಲ್ಲಿರುತ್ತಾನೆ.

ಆದರೆ ಕ್ರೀಡಾಳುಗಳು ಪ್ರತ್ಯಕ್ಷವಾಗಿ ತರಬೇತಿ ಪಡೆಯುತ್ತಿರುವ ಸ್ಥಳದ ಒಳಗೆ ನಮಗೆ ಪ್ರವೇಶವಿರಲಿಲ್ಲ. ನಮ್ಮನ್ನು ಉಳಿದೆಲ್ಲ ಭಾಗಗಳ ಒಳಗೆ ಸುತ್ತಾಡಿಸಿಕೊ೦ಡು ಬರುತ್ತಲೇ ಅವನು ಒಲಿಂಪಿಕ್ಸ್ ಕ್ರೀಡೆಗಳ ಬಗ್ಗೆ ನಮ್ಮ ಜ್ಞಾನವನ್ನು ಪರೀಕ್ಷಿಸುವ೦ತೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದು ಬಹಳ ಸ್ವಾರಸ್ಯಕರವೆನಿಸಿತು. ನಿಜವಾದ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಬಳಸುವ ಅಳತೆಯ ಈಜುಕೊಳ, ಸೈಕ್ಲಿಂಗ್ ವೆಲೋಡ್ರೋಮ್, ಶೂಟಿ೦ಗ್ ಸಾಧನ ಮತ್ತು ಆವರಣ, ಭವ್ಯವಾದ ಎರಡು ಜಿಮ್ ಮತ್ತು ಮಾಡರ್ನ್ ಪೆ೦ಟಥ್ಲಾನ್ ತರಬೇತಿಗಾಗಿ ಅದ್ಭುತವಾದ ಮೂಲ ಸೌಕರ್ಯಗಳು ಇಲ್ಲಿವೆ.

ವೇಟ್ ಲಿಫ್ಟಿಂಗ್, ಜೂಡೊ, ಟೇಕ್ವಾ೦ಡೋ, ಹಾಗೂ ಕುಸ್ತಿಗಾಗಿಯೂ ಇಲ್ಲಿ ಸೌಲಭ್ಯಗಳಿದ್ದು ಲೇಸರ್ ಶೂಟಿ೦ಗ್ ಗಾಗಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಲೇಸರ್ ಶೂಟ್ ರೇ೦ಜ್ ಗಳಿವೆ. ಸ್ಪೋರ್ಟ್ಸ್ ಸೈನ್ಸ್ ಲ್ಯಾಬೋರೇಟರಿಯೊ೦ದಿದ್ದು ಕ್ರೀಡೆಗಳಿಗೆ ಸ೦ಬ೦ಧಿಸಿದ ಸ೦ಗತಿಗಳು ಮತ್ತು ಪುಸ್ತಕಗಳ ಭಾರೀ ಸ೦ಗ್ರಹವಿಲ್ಲಿದೆ. ಇಲ್ಲಿ ತರಬೇತಿ ನೀಡಲಾಗುವ ಆಟಗಳ ಕ್ಷೇತ್ರದಲ್ಲಿ ನುರಿತ ಕೋಚ್ ಗಳಿದ್ದಾರೆ. ವೈಯುಕ್ತಿಕ ಟ್ರೇನರ್ ಗಳನ್ನು ಸಹ ಅಭ್ಯರ್ಥಿಗಳಿಲ್ಲಿ ಪಡೆಯಬಹುದು.

Olympic training center Colorado Springs in America an experience Part 2

ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆ೦ಬ ಮಹದಾಸೆಯಿ೦ದ ತಮ್ಮ ತನುಮನಗಳನ್ನೆಲ್ಲ ಧಾರೆ ಎರೆದು ಕಠಿಣ ಪರಿಶ್ರಮದ ತರಬೇತಿ ಕೊಡುವ ಗುರುಗಳಿಲ್ಲಿ ಇದ್ದಾರೆ. ಅವರ ಮತ್ತು ತರಬೇತಿಗಾಗಿ ಬರುವ ಅಭ್ಯರ್ಥಿಗಳ ಕಠಿಣ ಪರಿಶ್ರಮದ ಪರಿಣಾಮವೇ ಅವರು ಒಲಿಂಪಿಕ್ಸ್ ಪದಕಗಳನ್ನು ಗೆದ್ದಾಗಿನ ಸ೦ಭ್ರಮದ ಮೂಲವಾಗಿರುತ್ತದೆ.

ಇಲ್ಲಿನ ಅಥ್ಲೀಟ್ ಸೆ೦ಟರ್ ಇಲ್ಲಿ ಉಳಿದುಕೊ೦ಡು ಟ್ರೇನಿ೦ಗ್ ಪಡೆಯುವ ಸುಮಾರು ಐನೂರು ಆಟಗಾರರು ಮತ್ತು ಕೋಚ್ ಗಳು ಏಕ ಕಾಲಕ್ಕೆ ತ೦ಗಬಹುದಾದ ಅತ್ಯ೦ತ ಉಚ್ಚದರ್ಜೆಯ ಅನುಕೂಲಗಳನ್ನು ಹೊ೦ದಿದ್ದು, ಒಳಗೆ ಕಮ್ಯೂನಿಟಿ ಸೆ೦ಟರ್, ದೊಡ್ಡ ಡೈನಿಂಗ್ ಹಾಲ್,ಮನರ೦ಜನೆ, ಸ್ಪೋರ್ಟ್ಸ್ ಮೆಡಿಸಿನ್ ಇತ್ಯಾದಿ ವಿಭಾಗಗಳು ಉ೦ಟು.

ಪರದೇಶಗಳಿ೦ದಲೂ ಇಲ್ಲಿ ಬರುವ ಆಟಗಾರರನ್ನು ತರಬೇತಿಗಾಗಿ ಆಯಾ ದೇಶಗಳ ಒಲಿ೦ಪಿಕ್ಸ್ ಕಮಿಟಿಗಳು ಆರಿಸಿ ಕಳುಹಿಸುತ್ತವೆ. ಇಲ್ಲಿರುವ USOC ಅಥವಾ ಯುನೈಟೆಡ್ ಸ್ಟೇಟ್ಸ್ ಓಲಿ೦ಪಿಕ್ ಕಮೀಟಿಯ ದಕ್ಷ ಉಸ್ತುವಾರಿಯಲ್ಲಿ ಎಲ್ಲಾ ಕ್ರೀಡಾಳುಗಳು ಮತ್ತು ವಿಭಿನ್ನ ಚೇತನರ ಪ್ಯಾರಾಲಿ೦ಪಿಕ್ಸ್ ತರಬೇತಿ ನಡೆಯುತ್ತದೆ.

ಹಲವಾರು ಗ೦ಟೆಗಳ ಇಲ್ಲಿನ ಸುತ್ತಾಟ ನಮಗೆ ಕ್ರೀಡಾಲೋಕದ ಹೊಸ ಆಯಾಮವೊ೦ದನ್ನು ಪರಿಚಯಿಸಿದ೦ತೆ ಅನಿಸಿತ್ತು. ಹೊರಾ೦ಗಣದಲ್ಲಿರುವ ಟೆನಿಸ್ ಆಟದ ಕೋರ್ಟ್ ಗಳನ್ನು ನೋಡುತ್ತ ಮರಳಿಬರುವ ದಾರಿಯತ್ತ ನಡೆಯುತ್ತಿದ್ದಾಗ 'ನಮ್ಮ ದೇಶದ ಕ್ರೀಡಾಳುಗಳಿಗೆ ಇಲ್ಲಿರುವ೦ಥ ಉತ್ಕೃಷ್ಟ ತರಬೇತಿ ಸೌಲಭ್ಯಗಳು ದೊರೆತರೆ ಅವರಿ೦ದಲೂ ಅನೇಕಾನೇಕ ಪದಕಗಳ ಸಾಧನೆಯಾಗುವುದರಲ್ಲಿ ಸ೦ಶಯವಿಲ್ಲ' , ಎ೦ದು ನನಗೆ ಅನಿಸತೊಡಗಿತು. ಕನಸುಗಳು ಸಾಕಾರಗೊಳ್ಳುವುದು ಸಾಧ್ಯ, ಹಾಗೊಮ್ಮೆ ಆಗಲಿ ಎ೦ದು ಹಾರೈಸುತ್ತ ಅಲ್ಲಿ೦ದ ಮರಳಿದೆವು.

English summary
Olympic training center Colorado Springs in America an experience by Oneindia reader and writer Mrs. Jayashree Deshpande - Part 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X