ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 16, 17ರಂದು ಬೆಂಗಳೂರಿನಲ್ಲಿ 'ನಾವಿಕೋತ್ಸವ 2016'

By Prasad
|
Google Oneindia Kannada News

ಬೆಂಗಳೂರು, ಮೇ 06 : 'ನಾವಿಕ' ಸಂಸ್ಥೆ ಎರಡು ವರ್ಷಗಳಿಗೊಮ್ಮೆ ಆಯೋಜಿಸುವ 'ನಾವಿಕೋತ್ಸವ'ಕ್ಕೆ ದಿನಗಣನೆ ಶುರುವಾಗಿದೆ. ಸ್ಥಳೀಯ ಮತ್ತು ಅನಿವಾಸಿ ಕನ್ನಡಿಗರ ಸಾಹಿತ್ಯ ಮತ್ತು ಸಂಸ್ಕೃತಿಯ ವಿನಿಮಯ ಮತ್ತು ಸಮಾಗಮದ ಸಂಕೇತವಾಗಿರುವ ನಾವಿಕೋತ್ಸವ ಈ ಬಾರಿ ಜುಲೈನಲ್ಲಿ 16 ಮತ್ತು 17ರಂದು ನಡೆಯಲಿದೆ.

ಈ ಸಾಂಸ್ಕೃತಿಕ ಉತ್ಸವಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದ್ದು, ನಾವಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ರೇಣುಕಾ ರಾಮಪ್ಪ ಇದರ ರೂಪುರೇಷೆಗಳನ್ನು ರೂಪಿಸಿದ್ದಾರೆ. ಖಜಾಂಚಿ ವೀಣಾರಾಜ್ ಅವರು ಸಹಕರಿಸುತ್ತಿದ್ದಾರೆ. 'ನಾವಿಕೋತ್ಸವ-2016' ಸಮಿತಿಯ ಸಂಚಾಲಕ ಯಶವಂತ ಸರದೇಶಪಾಂಡೆ ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅನಿವಾಸಿ ಭಾರತೀಯ ಸಮಿತಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಾವಿಕ (ನಾರ್ತ್ ಅಮೆರಿಕ ವಿಶ್ವಕನ್ನಡ ಆಗರ) 2 ದಿನಗಳ ಕಾಲ 'ನಾವಿಕೋತ್ಸವ'ವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದೆ. [2011ರಲ್ಲಿ ನಡೆದ ಅಮೆರಿಕನ್ನಡೋತ್ಸವದ ವರದಿ]

Navikotsava at Ravindra Kalakshetra in Bengaluru

ರವೀಂದ್ರ ಕಲಾಕ್ಷೇತ್ರದಲ್ಲಿ : ಅಮೆರಿಕಾದ ನಾವಿಕ ಸಂಸ್ಥೆ 2 ವರ್ಷಗಳಿಗೊಮ್ಮೆ ನಡೆಸುವ ಈ ಸಾಂಸ್ಕೃತಿಕ ಉತ್ಸವ ಈ ಬಾರಿಯೂ ಬೆಂಗಳೂರಿನಲ್ಲಿ ನಡೆಯಲಿದೆ. ಜುಲೈ 16 ಮತ್ತು 17, ಶನಿವಾರ ಮತ್ತು ಭಾನುವಾರದಂದು ನಡೆಯುವ ಈ ಸಾಂಸ್ಕೃತಿಕ ಉತ್ಸವಕ್ಕೆ ವಿವಿಧ ದೇಶಗಳ 90ಕ್ಕೂ ಹೆಚ್ಚು ಕನ್ನಡದ ಸಂಘ-ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. 2,000ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರು ಮತ್ತು ಸ್ಥಳೀಯರು ನಾವಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಈ 'ನಾವಿಕೋತ್ಸವ'ದಲ್ಲಿ ಕನ್ನಡ ಸಾಹಿತ್ಯಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಾಧನೆ ನಡೆಯಲಿದ್ದು, ಖ್ಯಾತ ಸಾಹಿತಿಗಳು, ಕಲಾವಿದರು, ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಸಚಿವರು ಭಾಗವಹಿಸಲಿದ್ದಾರೆ. ಎರಡೂ ದಿನಗಳ ಕಾಲ ಬೆಳಗ್ಗೆ 8ರಿಂದ ರಾತ್ರಿ 10೦ರವರೆಗೆ ಎಡೆಬಿಡದೆ ವೈವಿಧ್ಯಮಯ ಕಾರ್ಯಕ್ರಮಗಳು, ಪ್ರತಿಭಾ ಪ್ರದರ್ಶನಗಳು ನಡೆಯಲಿವೆ.

ಈ ಹಿಂದೆ ಅಮೆರಿಕನ್ನಡೋತ್ಸವ ಎಂಬ ಹೆಸರಿನಲ್ಲಿ ಆಯೋಜಿಸಲಾಗುತ್ತಿದ್ದ ಸಾಂಸ್ಕೃತಿಕ ಉತ್ಸವವನ್ನು ಈ ಬಾರಿ 'ನಾವಿಕೋತ್ಸವ' ಎಂಬ ಹೆಸರಿನಲ್ಲಿ ನಡೆಸಲು ನಾವಿಕ ಸಂಘಟನೆ ನಿರ್ಧರಿಸಿದೆ. ಸಹ ಸಂಚಾಲಕರಾದ ಸಂಜಯ್ ಜೋಷಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ದಿನಾಂಕ : ಜುಲೈ 16 ಮತ್ತು 17
ಸಮಯ : ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ.
ಸ್ಥಳ : ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

'ಯುವಸೂಚಿ'ಗೆ ಚಾಲನೆ : ಈ ಬಾರಿಯ ವಿಶ್ವ ಕನ್ನಡೋತ್ಸವದ ವಿಶೇಷತೆ ಎಂದರೆ 'ಯುವಸೂಚಿ' ಎಂಬ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕದಿಂದ ಅಮೆರಿಕಾಗೆ ತೆರಳುವ ಯುವಕರಿಗೆ ಮಾರ್ಗದರ್ಶನ ನೀಡಿ, ಸೂಕ್ತ ಸಹಾಯ ಒದಗಿಸುವ ನಿಟ್ಟಿನಲ್ಲಿ ನಾವಿಕ ಸಂಸ್ಥೆಯು ಅಮೆರಿಕಾದಲ್ಲಿ ಯುವಸೂಚಿ ಎಂಬ ನೂತನ ಕಾರ್ಯಕ್ರಮವನ್ನು ರೂಪಿಸಿದೆ.

ಮಾಹಿತಿಗೆ ಸಂಪರ್ಕಿಸಿ : 9845217869

English summary
Countdown has started for 'Navikotsava’ a biennial event organized by ‘NAVIKA’ organization. The two days event will be held at Ravindra Kalakshetra in Bengaluru on July 16 and 17. Thousands of Americannadigas are expected to participate in this World Kannadotsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X