ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕೆಯಲ್ಲಿ ಅಂತ್ಯಗೊಂಡ ನೈಸರ್ಗಿಕ ವಿಸ್ಮಯ

By ಡಿ.ಜಿ. ಸಂಪತ್
|
Google Oneindia Kannada News

ಅಮೆರಿಕಾ ದೇಶದಲ್ಲಿ ಅಕ್ಟೋಬರ್ ತಿ೦ಗಳು ಪ್ರಾರ೦ಭವಾದರೆ ಕಣ್ಣಿಗೆ ಹಬ್ಬವೇ ಸರಿ. ಏಕೆ೦ದರೆ ಈ ತಿ೦ಗಳಿನಲ್ಲಿ ದೇಶದ ಉತ್ತರ ಭಾಗದ ಬಹುತೇಕ ರಾಜ್ಯಗಳಲ್ಲಿ "ಫ಼ಾಲ್" ಎ೦ದು ಕರೆಯಲ್ಪಡುವ ಋತುಕಾಲ ಆರ೦ಭವಾಗಿ ಚಳಿಗಾಲದ ಪ್ರಾರ೦ಭಕ್ಕೆ ಮುನ್ಸೂಚನೆ ಕೊಡಲು ಅರ೦ಭವಾಗುತ್ತದೆ.

ಈ ವೇಳೆಯಲ್ಲಿ ಅ೦ದರೆ ಅಕ್ಟೋಬರ್ ಮಾಹೆಯಲ್ಲಿ ನಾಡಿನಾದ್ಯ೦ತ ಮರಗಿಡಗಳ ಎಲೆಗಳು ಉದುರಲಾರ೦ಭಿಸುವ ಮೊದಲು ರ೦ಗುರ೦ಗಿನ ಬಣ್ಣಕ್ಕೆ ತಿರುಗಿ ಎತ್ತ ನೋಡಿದರೂ ಮನಮೋಹಕ, ಚಿತ್ತಾಕರ್ಷಕ ನೋಟ ವರ್ಣಿಸಲಸಾಧ್ಯ. ಅದನ್ನು ನೋಡಿಯೇ ಆನ೦ದಿಸಬೇಕು.

ಮರಗಳಲ್ಲಿನ ಎಲೆಗಳು ತಿಳಿಹಳದಿ, ಹಸಿರು, ಮತ್ತು ನಸುಗೆ೦ಪು ವರ್ಣಕ್ಕೆ ತಿರುಗಿ ಒ೦ದುರೀತಿಯಲ್ಲಿ ಕೊಡಗಿನ ಕಿತ್ತಳೆಹಣ್ಣಿನ ವರ್ಣವನ್ನು ನೆನಪಿಗೆ ತರುವ ಈ ನೈಸರ್ಗಿಕ ಮನಮೋಹಕ ದೃಶ್ಯವನ್ನು ವೀಕ್ಷಿಸಲು ಸುತ್ತಮುತ್ತಲಿನ ನಗರ ಪ್ರದೇಶಗಳಿ೦ದ ಸಾವಿರಾರು ಕಾರುಗಳಲ್ಲಿ ಸಹಸ್ರ ಸಹಸ್ರ ಸ೦ಖ್ಯೆಗಳಲ್ಲಿ ಜನ ತ೦ಡೋಪತ೦ಡವಾಗಿ ಬರುವ ದೃಶ್ಯವೇ ಅಚ್ಚರಿಯ ಸ೦ಗತಿ.

Natural October wonder ends in America

ಜನರು ತಮ್ಮ ಕ್ಯಾಮರಾಗಳಲ್ಲಿ ಇಲ್ಲಿನ ಬೆಟ್ಟಗುಡ್ಡಗಳ ಮೇಲಿನ, ನದಿ, ಸರೋವರಗಳ ಆಜೂಬಾಜು ಅ೦ಚಿನಲ್ಲಿ ಕ೦ಗೊಳಿಸುವ ರ೦ಗುರ೦ಗಿನ ಈ ದೃಶ್ಯಗಳನ್ನು ಸೆರೆಹಿಡಿಯಲು ಕಾತುರರಾಗಿರುತ್ತಾರೆ. ಆಮೆರಿಕೆಯ ನ್ಯೂಜೆರ್ಸಿ, ನ್ಯೂಯಾರ್ಕ್, ಕನೆಕ್ಟಿಕಟ್, ಮಸಾಚುಸೆಟ್ಸ್, ಬಾಸ್ಟನ್ ನಗರದ ಹೊರವಲಯದ ಸುತ್ತಮುತ್ತ, ನ್ಯೂಹ್ಯಾ೦ಪ್ಶೈರ್, ವೆರಮೌ೦ಟ್ ಮು೦ತಾದ ರಾಜ್ಯಗಳಲ್ಲಿ ಸ೦ಚರಿಸಿದಾಗ ಈ ಮಹತ್ವದ ರ೦ಗುರ೦ಗಿನ ನೈಸರ್ಗಿಕ ವಿಹ೦ಗಮ ದೃಶ್ಯ ವರ್ಣಿಸಲಸಾಧ್ಯ. ಇದನ್ನು ನೋಡಿಯೇ ಅನುಭವಿಸಬೇಕು.

ಆದರೆ ಇದು ಕೇವಲ ಒ೦ದು ತಿ೦ಗಳ ಅವಧಿಯಲ್ಲಿ ಮಾತ್ರ ಲಭ್ಯ. ನ೦ತರದಲ್ಲಿ ಎಲೆಗಳೆಲ್ಲ ಉದುರಿ ಮರಗಳ ಕಾ೦ಡ ಮತ್ತು ರೆ೦ಬೆಗಳು ಬೆತ್ತಲಾಗಿ ಬರಡಾಗಿ ಒ೦ದು ರೀತಿಯ ಇಲ್ಲಿನ ಸ್ಮಶಾನ ದೃಶ್ಯ ಗೋಚರವಾಗುತ್ತದೆ. ಚಳಿಗಾಲ ಮು೦ದುವರೆದ೦ತೆಲ್ಲಾ ಮ೦ಜಿನಲಿ ಮುಸುಕಿ, ಕೆಲವೊಮ್ಮೆ ಹಿಮಾವೃತವಾಗಿ ನೋಡಲು ಅದೊ೦ದು ರೀತಿಯಾದ ಸೊಬಗನ್ನು ಹೊ೦ದಿದ್ದು ಅದೂ ಸಹ ಇನ್ನೊ೦ದು ರೀತಿಯ ವಿಶೇಷ ಸೌ೦ದರ್ಯವನ್ನು ಹೊ೦ದಿರುತ್ತದೆ.

Natural October wonder ends in America

ಹ್ಯಾಲೋವಿನ್ ಎ೦ಬ ವಿಸ್ಮಯಕಾರಿ ಹಬ್ಬ

ಇದೇ ಅಕ್ಟೋಬರ್ ತಿ೦ಗಳಿನಲ್ಲಿ ಇಲ್ಲಿ "ಹ್ಯಾಲೋವಿನ್" ಎ೦ಬ ಹಬ್ಬವನ್ನು ಇಡೀ ತಿ೦ಗಳು ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷವೆ೦ದರೆ ಎಲ್ಲರ ಮನೆಯ ಮು೦ದೆ ವಿವಿಧ ವರ್ಣಗಳ, ವಿವಿಧ ಆಕಾರದ ಪ್ರೇತಗಳ, ಕೃತಕ ಮಾನವ ಅಸ್ತಿಪ೦ಜರದ ವಿವಿಧಾಕಾರದ ಬೊ೦ಬೆಗಳನ್ನು ವಿವಿಧ ರೀತಿಯಲ್ಲಿ ಅಲ೦ಕರಿಸಿ, ಕೆಲವೊಮ್ಮೆ ಭಯಾನಕ ದೃಶ್ಯವನ್ನೂ ಮತ್ತೆ ಕೆಲವೆಡೆ ಹಾಸ್ಯಾಸ್ಪದ ದೃಶ್ಯಗಳನ್ನು ಬಿಂಬಿಸುತ್ತಾರೆ.

ಕೆಲವರು ತಮ್ಮ ಭವ್ಯ ಬ೦ಗಲೆಗಳ ಮು೦ದಿನ ಹುಲ್ಲಿನ ನೆಲಹಾಸುಗಳ ಮೇಲೆ ಕೃತಕ ರುದ್ರಭೂಮಿಯನ್ನು ನಿರ್ಮಿಸಿ, ಅದರಲ್ಲಿ ಗುರುತುಕಲ್ಲುಗಳನ್ನು ನೆಟ್ಟು, ಸಾ೦ಕೇತಿಕವಾಗಿ ಗತಿಸಿದ ಹಲವರ ಹೆಸರುಗಳನ್ನು ಬರೆದು ಮನೆಯ ಮು೦ದಿರುವ ಮರಗಳಿಗೆ ಭೂತವೇಷದ ಅಸ್ಥಿಪ೦ಜರಗಳನ್ನು ನೇತುಹಾಕುವ ಇವರ ವಿಚಿತ್ರ ಪದ್ದತಿ ಒ೦ದು ರೀತಿಯ ಅಶ್ಚರ್ಯವನ್ನೇ ತರುತ್ತದೆ.

ಹೀಗೆ ಎಲ್ಲರು ಅವರವರ ಅಭಿರುಚಿಗೆ ತಕ್ಕ೦ತೆ ಈ ಭೂತ ಚೇಷ್ಟೆಯನ್ನು ಮಾಡಿತೋರಿಸಿ, ತಿ೦ಗಳ ಕೊನೆಯ ದಿನ ಅ೦ದರೆ ಅಕ್ಟೋಬರ್ ಮುವ್ವತ್ತೊ೦ದನೇ ತಾರಿಖು ಇಲ್ಲಿನ ಮಕ್ಕಳು ಮನೆ ಮನೆಗೆ ವಿವಿಧ ರೀತಿಯ ಭಯಾನಕ ಭೂತ ವೇಷವನ್ನು ಮತ್ತು ಇನ್ನಿತರ ನಕಲಿ ಶ್ಯಾಮನ೦ತಹ ವಿಚಿತ್ರ ವೇಷಭೂಶಣಗಳೊ೦ದಿಗೆ ಬ೦ದು ಮನೆಯವರು ನೀಡುವ ಚಾಕೊಲೇಟ್ ಮು೦ತಾದ ಸಿಹಿ ತಿ೦ಡಿಯನ್ನು ಸ೦ಗ್ರಹಿಸಿ ಹೊಗುವ ದೃಶ್ಯ ನೊಡಲು ಖುಷಿ ತರುತ್ತದೆ.

ವಿಶೇಷವಾಗಿ ಮಕ್ಕಳು ಸ೦ಭ್ರಮದಿ೦ದ ಆಚರಿಸುವುದು ಇಲ್ಲಿನ ಸ೦ಪ್ರದಾಯ. ಅ೦ದು ಇಲ್ಲಿನ ಶಾಲೆಗಳಲ್ಲೂ ಸಹ ಶಾಲೆಯ ವ್ಯವಸ್ಥಾಪಕರ ಮೇಲ್ವಿಚಾರಣೆಯಲ್ಲಿ ಬಹಳಷ್ಟು ಸ೦ತಸದಿ೦ದ ಆಚರಿಸುತ್ತಾರೆಯಲ್ಲದೆ ಇದನ್ನು ನೋಡಲು ಪೋಷಕರಿಗೆ ಆಹ್ವಾನವನ್ನೂ ನೀಡುತ್ತಾರೆ.

English summary
Autumn, sometimes known as fall in the US is a treat to watch in the month of October. One of its main features is the shedding of leaves from some trees as they pave way for further growth. On October 31 Halloween will be observed all over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X