ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NAMO to OMAN : ಒಮಾನ್ ಗೆ ಭೇಟಿ ನೀಡಲಿದ್ದಾರೆ ನಮೋ

By ಪಿ.ಎಸ್. ರಂಗನಾಥ್
|
Google Oneindia Kannada News

ಇದೇನು, ಕನ್ನಡ ಲೇಖನಕ್ಕೆ ಆಂಗ್ಲ ಶೀರ್ಷಿಕೆಯಾ? ಎಂದು ನೀವು ಯೋಚಿಸ್ತಾಯಿರಬಹುದು. ನಮಗೆ ಈ ಶೀರ್ಷಿಕೆ ಸೂಕ್ತ ಅನಿಸಿದ್ದು ಯಾಕೆಂದರೆ, ನಮೋ ಟು ಒಮಾನ್ ಎನ್ನುವ ಆಂಗ್ಲ ಬರಹದಲ್ಲಿ ಒಂದು ವಿಶೇಷತೆ ಇದೆ. ಅದೇನಂದರೆ, ನಮೋ (NAMO) ಅನ್ನು ತಿರುಗಿಸಿ ಬರೆದರೆ ಅದು ಒಮಾನ್ (OMAN) ಎಂದಾಗುತ್ತೆ, ಅಲ್ವೆ?

ಇದೇ ಫೆ. 11ನೇ ತಾರೀಖು ಒಮಾನ್ ಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ಫೆಬ್ರವರಿ 9ರಿಂದ 12 ತಾರೀಖಿನವರೆಗೆ ಕ್ರಮವಾಗಿ ಯು.ಎ.ಇ, ಒಮಾನ್ ಮತ್ತು ಪ್ಯಾಲೆಸ್ಟೈನ್ ದೇಶಗಳಿಗೆ ಮೂರು ದಿನಗಳ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಮೋದಿ.

ಯು.ಎ.ಇ.ಗೆ ಇದು ಅವರ 2ನೇ ಭೇಟಿಯಾಗಿದ್ದರೆ, ಒಮಾನ್ ಗೆ ಮೊದಲ ಭೇಟಿಯಾಗಲಿದೆ. ಹಾಗೆಯೆ ಪ್ಯಾಲೆಸ್ಟೈನ್ ಗೆ ಭೇಟಿ ನೀಡುತ್ತಿರುವ ಮೊಟ್ಟ ಮೊದಲ ಭಾರತದ ಪ್ರಧಾನಿ ಎಂಬ ಕೀರ್ತಿಗೂ ಮೋದಿ ಭಾಜನರಾಗಲಿದ್ದಾರೆ.

Narendra Modi to visit Oman on 11th February

ಫೆ.11ರಂದು ದುಬೈನಲ್ಲಿ ನಡೆಯಲಿರುವ ಆರನೇ ವಿಶ್ವ ಸರಕಾರಿ ಸಮ್ಮೇಳನ (ವರ್ಲ್ಡ್ ಗವರ್ನ್ ಮೆಂಟ್‌ ಸಮಿಟ್‌)ನಲ್ಲಿ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ.

ಪ್ರಧಾನ ಮಂತ್ರಿಯವರು ಒಮಾನ್ ಗೆ ಭೇಟಿ ನೀಡುವ ಬಗ್ಗೆ ಬಹುದಿನಗಳಂದಿಲೂ ಚರ್ಚೆ ನಡೆಯುತಿತ್ತು. ಆದರೆ ಭೇಟಿ ಖಚಿತವಾಗಿರಲಿಲ್ಲ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಕಳೆದ ವರ್ಷವೇ ಒಮಾನ್ ಗೆ ಬೇಟಿಯಾಗಬೇಕಿತ್ತು. ಒಮಾನ್ ನ ಕೆಲ ಭಾರತೀಯ ಉದ್ಯಮಿಗಳು ಸಹ ಇತ್ತೀಚಿಗೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ, ಅವರನ್ನು ಒಮಾನ್ ಗೆ ಭೇಟಿ ಮಾಡುವಂತೆ ಆಹ್ವಾನಿಸಿದ್ದರು. ಯು.ಎ.ಇಯಲ್ಲಿ ಕಾರ್ಯಕ್ರಮ ಒಂದು ನಿಗದಿಯಾಗಿದ್ದರಿಂದ, ಪಕ್ಕದಲ್ಲಿರುವ ಒಮಾನ್ ಗೆ ಸಹ ಭೇಟಿ ನೀಡುವ ಕಾರ್ಯಕ್ರಮ ನಿಗದಿಪಡಿಸಿದರು.

ಒಮಾನ್ ನ ಭೇಟಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭಾರತೀಯ ದೂತವಾಸ ಕಚೇರಿ ಸಕಲ ಸಿದ್ದತೆಯನ್ನು ನಡೆಸಿದ್ದು, ಭದ್ರತೆ ಕಾರಣದಿಂದ ಕಾರ್ಯಕ್ರಮಕ್ಕೆ ಬರುವವರಿಗಾಗಿ ಆನ್ಲೈನ್ ನಲ್ಲಿ ನೋಂದಣಿ ಮಾಡಿಸಲು ಕಚೇರಿಯ ವೆಬ್ ಸೈಟ್ ನಲ್ಲಿ ಸೌಲಭ್ಯವನ್ನು ಮಾಡಲಾಗಿದೆ. ಬಾರತೀಯ ಸಾಮಾಜಿಕ ವೇದಿಕೆಯ(Indian Social Club) ಮುಖಾಂತರವು ನೋಂದಣಿ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಒಮಾನ್ ದೇಶದ ಉಪ ಪ್ರಧಾನಿಗಳಾದ ಎಚ್.ಎಚ್. ಫಹಾದ್ ಬಿನ್ ಮಹಮೂದ್ ಅಲ್ ಸಯೀದ್ ಮತ್ತು ಎಚ್.ಎಚ್. ಸಯೀದ್ ಅಸ್ಸಾದ್ ರವರನ್ನು ಮೋದಿ ಭೇಟಿ ಮಾಡಲಿದ್ದಾರೆ. ಭೇಟಿಯ ಸಮಯದಲ್ಲಿ ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದ, ವ್ಯಾಪಾರ ಸಂಬಂಧಗಳ ಕುರಿತು ಚರ್ಚೆ ನಡೆಸಯಲಿದೆ.

ಭಾರತ ಮತ್ತು ಒಮಾನ್ ದೇಶಗಳ ನಡುವಿನ ಸಂಬಂಧ ಶತಮಾನಗಳಷ್ಟು ಹಳೆಯದಾಗಿದ್ದು, ಈ ಭೇಟಿಯಿಂದ ಎರಡು ದೇಶಗಳ ದ್ವಿಪಕ್ಷೀಯ ಸಂಬಂಧ ಇನ್ನೂ ಹೆಚ್ಚು ಬಲಗೊಳ್ಳಲಿದೆ ಎಂದು ನಂಬಲಾಗಿದೆ. ಸುಮಾರು 9 ಲಕ್ಷದಷ್ಟು ಭಾರತೀಯರು ಒಮಾನ್ ನಲ್ಲಿ ಕೆಲಸ ಮಾಡುತ್ತಿದ್ದು, ತುಂಬಾ ಸಂಖ್ಯೆಯಲ್ಲಿ ಭಾರತೀಯರು ಈ ಭೇಟಿಗಾಗಿ ಕಾತುರದಿಂದ ಕಾಯುತಿದ್ದಾರೆ.

English summary
Indian prime minister Narendra Modi shall be visiting gulf countries from February 9 to 12. He will be visiting Oman on February 11th and will have bilateral talks with the gulf country. Narendra Modi will address the Indian fraternity in Oman too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X