• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಹೈಸ್ಕೂಲ್ ಹೆಡ್ ಮಾಸ್ಟ್ರನ್ನು ಮತ್ತೆ ನೆನಪಿಗೆ ತಂದ ಮೋದಿ!

By ನಾಗರಾಜ್ ಎಂ
|

ಹಳ್ಳಿಯ ಸರ್ಕಾರಿ ಹೈಸ್ಕೂಲ್ಗೆ ಹೊಸದಾಗಿ ಸೇರಿದ್ದ ದಿನಗಳು... ಹೊಸ ಊರು, ಹೊಸ ಗೆಳೆಯರು, ಹೊಸ ಮೇಷ್ಟ್ರುಗಳು... ಅಪ್ಪನಿಗೆ ಕೆಲ್ಸದ ಮೇಲೆ ಅಲ್ಲಿಗೆ ವರ್ಗ ಆಗಿದ್ದರಿಂದ ಅಲ್ಲಿದ್ದ ಅದೊಂದೇ (ಸುತ್ತಮುತ್ತಲ 10-15 ಕಿಲೋ ಮೀಟರು ರೇಂಜ್ನಲ್ಲಿ ಇದ್ದುದ್ದು ಅದೊಂದೇ) ಹೈಸ್ಕೂಲ್ಗೆ ಸೇರಿದ್ದೆ. ಹೊಸ ಹುರುಪಲ್ಲಿ ಬರ್ತ್ಡೇಗೆ ಅಪ್ಪ ಕೊಡಿಸಿದ್ದ ವೈಟ್ ಟೀಶರ್ಟ್ (ಕಾಲರ್ ಇಲ್ಲದ್ದು) ಹಾಕೊಂಡು ಹೋಗಿದ್ದೆ. ಜೊತೆಗೆ ಒಳ್ಳೆ ಶೂ ಹಾಕ್ಕೊಂಡು!

ಅಲ್ಲಿ ಹೋಗಿ ನೋಡಿದರೆ ಶೂ ಹಾಕೊಂಡು ಬಂದಿದ್ದು ನಾನೊಬ್ಬನೇ! ಎಲ್ಲಾ ಹುಡುಗರು-ಹುಡುಗಿಯರು ಚಪ್ಪಲ್ ಹಾಕೊಂಡು (ಕೆಲವರು ಬರಿಕಾಲಲ್ಲೇ) ಬಂದಿದ್ರು. ಒಂದೆರಡು ಕ್ಲಾಸ್ ಆದಮೇಲೆ maths ಕ್ಲಾಸ್ ಟೀಚರ್ ಬರೋಕು ಮುಂಚೆನೇ ಎಲ್ಲಾ ಗಪ್-ಚುಪ್. ಸೋ ಸೈಲೆಂಟ್... ಯಾಕೆ ಎಲ್ಲರೂ ಇಷ್ಟೊಂದು ಸೈಲೆಂಟ್ ಆಗಿದ್ದಾರಲ್ಲ ಅಂತ ಯೋಚ್ನೆ ಮಾಡಿ ಪಕ್ಕದಲ್ಲಿದ್ದ ನಾಣಿಯ ಕೇಳಿದಾಗ... "ಹೆಡ್ ಮಾಸ್ಟರ್ ಕ್ಲಾಸ್...ಬಹಳ ಸ್ಟ್ರಿಕ್ಟ್ ಕಣೋ" ಅಂತ ಅಂದಿದ್ದ.

ಪ್ರಧಾನಿ ಮೋದಿ ಯೋಜನೆಗೆ ಶಹಬ್ಬಾಸ್ ಎಂದ ವಿಶ್ವಸಂಸ್ಥೆ!

ಸ್ವಲ್ಪ ಹೊತ್ತಿನ ನಂತರ "ಜೀಕ್...ಜೀಕ್" ಅಂತಾ ಚಪ್ಪಲಿ ಸೌಂಡ್ ಮಾಡ್ತಾ ಯಾರೋ ಕಾರಿಡಾರ್ ನಲ್ಲಿ ನಡೆದು ಬರೋದು ಕೇಳಿಬಂದಾಗ... ನಾಣಿ ಕಣ್ಣಲ್ಲೇ ಸನ್ನೆ ಮಾಡಿದ್ದ.

ಗರಿಗರಿಯಾದ ಇಸ್ತ್ರಿ ಮಾಡಿದ ಬಿಳಿ ಜುಬ್ಬಾ, ತಕ್ಕ ಪ್ಯಾಂಟ್ ಹಾಕೊಂಡು ಬಂದಿದ್ದ ಹೆಡ್ ಮಾಸ್ಟರ್ ಅಟೆಂಡೆನ್ಸ್ ಹಾಕುವಾಗ "ಬಂದಿದ್ದೇನೆ ಗುರುಗಳೇ" ಅಂತ ಎಲ್ಲಾ ಹುಡುಗರು ಎದ್ದು ನಿಂತು ಹೇಳುತ್ತಿದ್ದರು. ನಾಗರಾಜ್ ಅಂತಾ ಹೆಸರು ಕೇಳಿಬಂದಾಗ "ಪ್ರೆಸೆಂಟ್ ಸರ್" ಅಂತ ನಾ.. ಎದ್ದು ನಿಂತು ಹೇಳಿದ್ದೆ.

ಹಾಜರಿ ಬುಕ್ನಿಂದ ನಿಧಾನವಾಗಿ ತಲೆ ಎತ್ತಿ, ಕನ್ನಡಕವ ಸರಿಮಾಡಿಕೊಂಡು ನನ್ನೆಡೆನೆ ಹೆಡ್ ಮಾಸ್ಟ್ರು ನೋಡಿದ್ದ ನೋಡಿ ಕೊಂಚ ಕಸಿವಿಸಿಯಾಗಿತ್ತು. "ಹೊಸ ಸ್ಟುಡೆಂಟ್ ಹಾ?" ಅಂತ ಕೇಳಿದಾಗ ಹೌದು ಅಂತ ಗೋಣಾಕಿದ್ದೆ.

ಸರಿ ಕುತ್ಕೋ ...ಕ್ಲಾಸ್ ಮುಗಿದಮೇಲೆ ಬಂದು ಮೀಟ್ ಮಾಡು ಅಂತ ಅವರೇಳಿದ ಮೇಲೆ ಎದೆಯಲಿ ಏನೋ ಒಂತರ ಡವಡವ! ಆಮೇಲೆ ಹೋಗಿ ನಿಂತಿದ್ದೆ ಕೈಕಟ್ಕೊಂಡು... ಹೆಡ್ ಮಾಸ್ಟ್ರು ಹೆಸರು "ಶಿವಶಂಕರ್" ಅಂತಾ ಗೊತ್ತಾಯ್ತು, ಅಲ್ಲೇ ಎದುರಲ್ಲಿ ಅಚ್ಚ ಕನ್ನಡದಲ್ಲಿ ಬರೆದಿದ್ದ ನೇಮ್ ಪ್ಲೇಟ್ ನೋಡಿದಾಗ.

ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿಗೆ ಮೋದಿ ಅಧ್ಯಕ್ಷತೆಯಲ್ಲಿ ಎರಡು ಸಮಿತಿ

ಯಾವ ಊರು, ಎಲ್ಲಿಂದ ಬಂದಿದ್ದು, ಮುಂಚೆ ಯಾವ ಸ್ಕೂಲಲ್ಲಿ ಓದಿದ್ದು ಎಲ್ಲಾ ನಿಧಾನವಾಗಿ ಕೇಳಿ, ಓ... ನಮ್ಮೂರಿಗೆ ಬಂದಿರೋ ಹೊಸ ಡಾಕ್ಟ್ರು ಮಗನಾ... ಗುಡ್ ಗುಡ್ ಅಂತ ಹೇಳಿದಾಗ ಕೊಂಚ ಸಮಾಧಾನ ಆಗಿತ್ತು.

"ಸರಿ ಚೆನ್ನಾಗಿ ಓದು. ಏನು ಯೋಚ್ನೆ ಮಾಡ್ಬೇಡ... ಸ್ವಲ್ಪ ಅಡ್ಜಸ್ಟ್ ಆಗೋಕೆ ಕಷ್ಟ ಆಗಬೋದು. ಏನಾದ್ರು ತೊಂದ್ರೆ ಆದ್ರೆ ಡೈರೆಕ್ಟ್ ಆಗಿ ಬಂದು ಮೀಟ್ ಮಾಡು".... ಸರಿ ಅಂತ ಹೇಳಿ ಇನ್ನೇನು ಹೊರಗಡೆ ಬರ್ಬೇಕು ಅನ್ನೋವಾಗ... "ಇನ್ನೊಂದು ಮಾತು...ಈ ರೀತಿಯ ಬನಿಯನ್ ಹಾಕೊಂಡು ಬರೊಂಗಿಲ್ಲ ನಮ್ಮ ಸ್ಕೂಲ್ಗೆ... ಗೊತ್ತಾಯ್ತಾ... ಫುಲ್ ಕಾಲರ್ ಶರ್ಟ್ ಹಾಕೊಂಡು ಬರ್ಬೇಕು" ಅಂತ ಅವರೇಳಿದಾಗ... ಬಗ್ಗಿ ನೋಡಿಕೊಂಡಿದ್ದೆ ಅಪ್ಪ ಕೊಡಿಸಿದ್ದ ವೈಟ್ ಟಿ-ಶರ್ಟ್ನ!

ಬಡ್ ಬಡ್ ಅಂತಾ ಅರ್ಧ ಕಿಲೋಮೀಟರ್ ದೂರ ಇರೋವಾಗ್ಲೇ ಅವರು ಓಡಿಸ್ಕೊಂಡು ಬರ್ತಿದ್ದ ಬುಲೆಟ್ (ಅಂದಿನ ಬುಲೆಟ್ ..ಗೊತ್ತಲ್ವಾ ಹೇಗಿತ್ತು ಅಂತ... ಅದಕ್ಕೆ ಸರಿಯಾಗೇ ಇದ್ರೂ ಕಟ್ಟು ಮಸ್ತಾಗಿ ಅವ್ರು ಸಹ) ಸೌಂಡ್ ಕೇಳಿಸ್ತಿದ್ದಂಗೆ ಎಲ್ಲಾ ಮೇಷ್ಟ್ರುಗಳು, ಹುಡುಗರು ಅಲರ್ಟ್ ಆಗಿ ಚುರುಕಾಗಿ ಪಾಠ ಮಾಡೋದು - ಓದೋದು ಮಾಡೋರು.

ರೈತರಿಗೆ ಬಂಪರ್: ಪ್ರಧಾನಮಂತ್ರಿ-ಕಿಸಾನ್ ಯೋಜನೆ ಇನ್ನಷ್ಟು ವಿಸ್ತರಣೆ

ಪ್ಲೇ ಟೈಮಲ್ಲಿ ಎಲ್ಲಾ ಸ್ಟೂಡೆಂಟ್ಸ್ ಆಡುವಾಗ, PE ಟೀಚರ್ ಆಡಿಸುವಾಗ... ರೂಮಿನಿಂದಲೇ ಕಿಟಕಿ ಬಳಿ ನಿಂತು ಅವರು ನೋಡುತ್ತಿದ್ದ ನೋಟ, ಗತ್ತು ಎಲ್ಲಾ ನೋಡ್ತಿದ್ದ ನಂಗೆ... ಮೇಸ್ಟ್ರು ಅಂದ್ರೆ ಹಿಂಗೇ ಇರ್ಬೇಕು... ಪ್ರೀತಿಯಿಂದಾನೂ ಮಾತಾಡಿಸ್ತಾರೆ, ಸೊಗಸಾಗಿ - ಸುಲಲಿತವಾಗಿ ಅರ್ಥವಾಗುವಂತೆ ಪಾಠ ಮಾಡ್ತಾರೆ ಮತ್ತು ಅಷ್ಟೇ ಸ್ಟ್ರಿಕ್ಟ್ ಆಗಿ ಕೆಲಸ ತಗೋತಾರೆ ಎಲ್ಲರಿಂದ... ಅಂತ ಅವರ ಬಗ್ಗೆ ಹೆಚ್ಚಿನ ಗೌರವ ಭಾವ ಮೂಡಿತ್ತು.

ಮೂರು ವರ್ಷ ಹೈ ಸ್ಕೂಲ್ ಮುಗಿಯೋದ್ರಲ್ಲಿ ಅವರ ಅಚ್ಚುಮೆಚ್ಚಿನ ಸ್ಟೂಡೆಂಟ್ ಆಗಿದ್ದ ನಂಗೆ... SSLC ಮುಗ್ಸಿ ಹೈಸ್ಕೂಲ್ಗೆ ವಿದಾಯ ಹೇಳಿ ಗೆಳೆಯರನ್ನು, ಎಲ್ಲಾ ಮೇಸ್ಟ್ರುಗಳನ್ನು ಅದ್ರಲ್ಲೂ ಹೆಡ್ ಮಾಸ್ಟ್ರು ಅವರನ್ನು ಬಿಟ್ಟು ಬರುವಾಗ ಮನವೆಲ್ಲ ದುಃಖದಿಂದ ಭಾರವಾಗಿತ್ತು.

ಯಾಕೆ ಇದೆಲ್ಲ ನೆನಪಾಯ್ತು ಅಂದ್ರೆ.. ಮೊನ್ನೆ ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿ ಅವರು ತಮ್ಮ ಮಂತ್ರಿಮಂಡಲ ಸಭೆ ಮಾಡುವಾಗ ಅವರು ಮಾತಾಡ್ತಿದ್ದ, ಕುಳಿತಿದ್ದ, ಮೈಯೆಲ್ಲಾ ಕಿವಿಯಾಗಿಸಿಕೊಂಡು ಉಳಿದವರು ಮಾತಾಡುವಾಗ ಕೇಳಿಸಿಕೊಳ್ತಿದ್ದ ಭಂಗಿ... ನಮ್ಮ ಹೈಸ್ಕೂಲ್ ಹೆಡ್ ಮಾಸ್ಟ್ರನ್ನು ಮತ್ತೆ ನೆನಪಿಗೆ ತಂದಿತ್ತು.

ಮಾಸ್ಟ್ರು ಹಂಗೆ ಇದ್ದಿದ್ದಕ್ಕೆ ನಾವೆಲ್ಲ ಚೆನ್ನಾಗಿ ಓದಿ ಕಷ್ಟಪಟ್ಟು ಇಂದು ಏನೋ ಒಂದು ಒಳ್ಳೆ ಕೆಲಸ-ಜೀವನ ಮಾಡ್ತಿರೋದು... ಹಾಗೆನೇ, ನಮ್ಮ ದೇಶನೂ ಇನ್ನು ಹೆಚ್ಚಿನ ಅಭಿವೃದ್ಧಿ ಖಂಡಿತ ಆಗುತ್ತೆ ದೇಶದ ಅಧಿಕಾರದ ಚುಕ್ಕಾಣಿ ಮತ್ತೊಮ್ಮೆ ಹಿಡಿದಿರುವ ಹೆಡ್ ಮಾಸ್ಟ್ರು ಮೋದಿ ಅವರ ನೇತೃತ್ವದಲ್ಲಿ ಅಂತ... ಅಖಂಡ ನಂಬುಗೆ ನನಗೆ.... ನಿಮಗೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narendra Modi reminded me of our high school head master, writes Nagaraja Maheswarappa from Connecticut, USA. Nagaraja recalls how his teacher was funny as well as strict while teaching.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more