• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ಟ್ರೇಲಿಯಾ ಕನ್ನಡತಿಯ ಕ್ರಿಕೆಟ್ ವ್ಯಾಮೋಹ

By ಸೀತಾ ಕೇಶವ, ಸಿಡ್ನಿ, ಆಸ್ಟ್ರೇಲಿಯಾ
|

ನಮ್ಮ ಆಟಗಾರರು ಸೋಲಲಿ ಬಿಡಲಿ, ಕ್ರಿಕೆಟ್ ಮೋಹ ನಮ್ಮನ್ನು ಯಾವತ್ತೂ ಬಿಡುವುದಿಲ್ಲ. ಬಿಟ್ಟರೂ ಬಿಡದೀ ಮಾಯೆ ಎಂಬಂತೆ ಕ್ರಿಕೆಟ್ ಹುಚ್ಚು ನಮ್ಮನ್ನೆಲ್ಲ ಆವರಿಸಿಕೊಂಡಿದೆ. ಕ್ರಿಕೆಟನ್ನು ಟಿವಿಯಲ್ಲಿ, ಕ್ರೀಡಾಂಗಣದಲ್ಲಿ ಆನಂದಿಸುವವರು ಹಲವರಾದರೆ, ಕೆಲವರಿಗೆ ಮಾತ್ರ ಅವರನ್ನು ಮುಖತಃ ಭೇಟಿಯಾಗುವ, ಹಸ್ತಾಕ್ಷರ ಪಡೆಯುವ, ಇನ್ನೂ ಅದೃಷ್ಟವಿದ್ದರೆ ಮನೆಗೆ ಕರೆಸಿಕೊಂಡು ಅವರ ಜೊತೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಗುತ್ತದೆ. ಅಂತಹ ಅದೃಷ್ಟವಂತರಲ್ಲಿ ಒಬ್ಬರು ಒನ್ಇಂಡಿಯಾ ಓದುಗರಾದ ಆಸ್ಟ್ರೇಲಿಯಾ ನಿವಾಸಿ ಸೀತಾ ಕೇಶವ ಅವರು. ತಮ್ಮ ಕ್ರಿಕೆಟ್ ಹುಚ್ಚಿನ ಬಗ್ಗೆ ಮತ್ತು ಹಲವಾರು ಕ್ರಿಕೆಟಿಗರನ್ನು ಭೇಟಿಯಾದ ಬಗ್ಗೆ ಬರೆದಿದ್ದಾರೆ.

***

ಸಿಡ್ನಿ ಕ್ರಿಕೆಟ್ ಮೈದಾನ ಪ್ರಪಂಚದ ಹೆಸರು ವಾಸಿಯಾಗಿರುವುದಕ್ಕೆ ಕಾರಣ ಶ್ರೇಷ್ಠ ಖ್ಯಾತ ಆಟಗಾರ ಡಾನ್ ಬ್ರಾಡ್ಮನ್ ನೆಂದರೆ ತಪ್ಪಾಗಲಾರದು. ಆಸ್ಟ್ರೇಲಿಯಾ ಆಟಗಳ ದೇಶ, ಅದರಲ್ಲೂ ಕ್ರಿಕೆಟ್ ಎತ್ತಿದ ಕೈ! ಎಸ್‌ಸಿಜಿ ಮೈದಾನ ಮೂರ್ ಪಾರ್ಕ್ ರೋಡ್, ಮೂರ್ ಪಾರ್ಕ್ ಬಡಾವಣೆಯಲ್ಲಿ ಸ್ಥಾಪಿತವಾಗಿದ್ದು ಸೆಂಟೀನಿಯಲ್ ಪಾರ್ಕ್, ನ್ಯೂ ಸೌಥ್ ವೇಲ್ಸ್ ವಿಶ್ವವಿದ್ಯಾಲಯ, ರಾಂಡ್ವಿಕ್ ರೇಸ್ಕೋರ್ಸ್, ಒಳ್ಳೆಯ ಹೆಸರುಗಳಿಸಿರುವ ಹೈಸ್ಕೂಲುಗಳು ಮತ್ತು ಸಿಟಿಗೆ ಹತ್ತಿರವಾಗಿ ಅನುಕೂಲವಾದ ಜಾಗದಲ್ಲಿರುವುದು.

ಇಲ್ಲಿ ಕ್ರಿಕೆಟ್ ಟೆಸ್ಟ್ ಮಾಚು, ಒಂದು ದಿವಸದ ಇಂಟರ್ನಾಶನಲ್, ಟ್ವೆಂಟಿ20 (ಈಚೆಗೆ), ಆಸ್ಟ್ರೇಲಿಯನ್ ರೂಲ್ಸ್ ಫುಟ್ ಬಾಲ್, ರಗ್ಭಿಲೀಗ್, ರಗ್ಭಿ ಯೂನಿಯನ್ ಮತ್ತು ನ್ಯೂ ಸೌತ್ ಬ್ಲೂಸ್ ಕ್ರಿಕೆಟ್ ತಂಡದವರ ತವರು ನೆಲವಾಗಿ ಪಕ್ಕದಲ್ಲೇ ಫುಟ್ ಬಾಲ್ ಸ್ಟೇಡಿಯಂ ಕೂಡ 1988ರಲ್ಲಿ ನಿರ್ಮಿತವಾಗಿದೆ.

ನಾವು ನಾಲ್ಕು ದಶಕಗಳಿಂದ ಎಸ್ ಸಿ ಜಿ ನಲ್ಲಿ ಕ್ರಿಕೆಟ್ ಮಾಚ್ಗೆ ಹೋಗಿ ನೋಡುತ್ತಿದ್ದು ಈ ವರ್ಷವೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ 'ಆಶಸ್' ಸರಣಿಗೆ ಹೋದಾಗ ಈಚೆಗಿನ ಬದಲಾವಣೆ ನೋಡಿ ಆಶ್ಚರ್ಯವಾಗಿ, ನನ್ನ ಅನುಭವವನ್ನು ಬರೆದುತಿಳಿಸಬೇಕೆನ್ನಿಸುವ ಆಸೆಯಾಯಿತು.

ನಾವು ಸುಮಾರು 1975-76ರಲ್ಲಿ ಮೂರು ವರ್ಷದ ಮಗನನ್ನೂ ಕರೆದುಕೊಂಡು ಬುತ್ತಿ ಕಟ್ಟಿಕೊಂಡು ಟೆಸ್ಟ್ ಮಾಚ್ ನೋಡಲು, ಈಗಿನಂತೆ ಟಿಕೆಟೆಕ್ ಇಲ್ಲದೆ ಬಹಳ ಮುಂಚೆಯೇ ಹೋಗಿ ಕ್ಯೂನಲ್ಲಿ ನಿಂತು ಟಿಕೆಟ್ ಪಡೆದು ಹೋಗಬೇಕಾಗುತ್ತಿತ್ತು. ಏನಪ್ಪಾ ಅಂದರೆ ಕಾರು ಎಸ್ ಸಿ ಜಿ ಮುಂಭಾಗದಲ್ಲೇ ನಿಲ್ಲಿಸುವ ಅವಕಾಶವಿರುತ್ತಿತ್ತು. ಸುಮಾರು ವರ್ಷಗಳಿಂದ ಪಕ್ಕದಲ್ಲಿರುವ ಫಾಕ್ಸ್ಟೆಲ್ ಮತ್ತು ಸೆಲೆಕ್ಟಿವ್ ಸ್ಕೂಲುಗಳ ಮೈದಾನದಲ್ಲಿ ದುಡ್ಡು ಕೊಟ್ಟು ನಿಲ್ಲಿಸುವ ವ್ಯವಸ್ಥೆ ಇರುವುದು.

ಊಟದ ಸಮಯ ಬಂದಾಗ ಮಾತ್ರ ನಮ್ಮ ರುಚಿಕರವಾದ ಚಿತ್ರಾನ್ನ, ಮೊಸರನ್ನ ತಿನ್ನುತ್ತಿದ್ದರೂ ಸ್ಥಳೀಯರು 'ಹಾಟ್ ಡಾಗ್' ಹಿಡಿದುಕೊಂಡು ಬರುವುದರ ವಾಸನೆ ಮತ್ತು ನೋಡಲು ಬಹಳ ಮುಜುಗರವಾಗುತ್ತಿತ್ತು. ಆಗಿನ ದಿವಸಗಳಲ್ಲಿ ಸಸ್ಯಾಹಾರಿಗಳಿಗೆ ಏನೇನೂ ಸಿಕ್ಕುತ್ತಿರಲಿಲ್ಲ. ಬರೀ ಹಾಟ್ ಚಿಪ್ಸ್. ಆ ದಿವಸಗಳಲ್ಲಿ ಹೆಸರಾಂತ ಪಾಟ್ ಹಿಲ್ಸ್, ಬಿಲ್ ಒ ರೆಲ್ಲಿ, ಡಗ್ ವಾಲ್ಟರ್ಸ್, ಬ್ರೊವಾಂಗಲ್, ಮೆಸ್ಸೆನ್ಜರ್, ಲೇಡೀಸ್ ಸ್ಟಾನ್ಡ್ ಇತ್ತು.

ಹಿಲ್ಸ್ ನಲ್ಲಿ ಟಿಕೆಟ್ ದರ ಸ್ವಲ್ಪ ಕಡಿಮೆ ಹಾಗೂ ಮದ್ಯಪಾನ ಸೇವಿಸುವರ ಸಂಖ್ಯೆಯೂ ಬಹಳ ಜಾಸ್ತಿ. ಸಿಕ್ಕಾಪಟ್ಟೆ ಕುಡಿದು ತಮ್ಮನ್ನು ತಾವೇ ಮರೆತು ಆಟದ ಮೈದಾನದ ಒಳಗೆ ಬಂದು ಪೊಲೀಸರಿಂದ ಬಂಧಿತರಾಗುತ್ತಿದ್ದರು. ಈಗ ಮದ್ಯಪಾನ ಒಳಗೆ ತರುವುದಕ್ಕೆ ಬಿಡದೆ ಅಲ್ಲೇ ಖರೀದಿಸುವ ಹಾಗೆ ಮಾಡಿದ್ದಾರೆ.

ಎಸ್ ಸಿ ಜಿ ಸದಸ್ಯರು ಪೆವಿಲಿಯನ್ ನಲ್ಲಿ ಕೂತು ವೀಕ್ಷಿಸುವುದನ್ನು ನೋಡುತ್ತಿದ್ದಾಗ ಅವರೆಲ್ಲಾ ಎಷ್ಟು ಅದೃಷ್ಟವಂತರು, ಆಟಗಾರರನ್ನು ಹತ್ತಿರದಿಂದಲೇ ನೋಡುವರು, ನಾವೂ ಆದಷ್ಟು ಬೇಗನೆ ಸದಸ್ಯರಾಗಬೇಕೆಂದು ಎಸ್ ಸಿ ಜಿ ಆಫೀಸಿಗೆ ಕರೆಮಾಡಿ ಅರ್ಜಿ ತರಸಿಕೊಂಡು ಹಾಕಿ, ಕಾದು ಸುಮಾರು ಹತ್ತು ವರ್ಷಗಳಿಂದ ಸದಸ್ಯರಾಗಿ ಅದರ ಅನುಭವ ಪಡೆಯುತ್ತಿದ್ದೇವೆ.

1976-77ರಲ್ಲಿ ಭಾರತದ ತಂಡ ಬಿಷನ್ ಸಿಂಗ್ ಬೇಡಿ ನಾಯಕತ್ವದಲ್ಲಿ ಬಂದಾಗ ಬಿಶನ್ ಸಿಂಗ್ ಬೇಡಿ ನಮ್ಮ ಸ್ನೇಹಿತರಿಗೆ ಪರಿಚಯವಿದ್ದು, ನಮ್ಮನ್ನು ಅವರಿಗೆ ಭೇಟಿಮಾಡಿಸುವ ಸಲುವಾಗಿ ಅವರಿದ್ದ ಹೋಟೆಲಿಗೆ ಹೋದಾಗ ಬೇಡಿ ಎಲ್ಲರೊಡನೆ ತುಂಬಾ ಚೆನ್ನಾಗಿ ಮಾತನಾಡಿ ನನ್ನ ಮಗನ ಜೊತೆ ಫೋಟೋ ತೆಗೆಸಿಕೊಂಡರು. ಕನ್ನಡಿಗರೆಲ್ಲರೂ ಸೇರಿ ಸರ್ಕಿಲರ್ ಕಿನಿಂದ ಹೊರಡುವ ಕ್ರೂಸ್ ಹೋಗಿಬಂದೆವು.

ನಂತರ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತದ ತಂಡ ಬಂದಾಗ ಅವರನ್ನು ಮನೆಗೆ ಆಹ್ವಾನಿಸಿದಾಗ ಅವರು ಆಟದ ದಿನಗಳಲ್ಲಿ ಹೊರಗೆಲ್ಲೂ ಬರುವುದಿಲ್ಲ ದಯವಿಟ್ಟು ಕ್ಷಮಿಸಿ ಎಂದಿದ್ದರು. ಬಹಳ ಡಿಸಿಪ್ಲಿನ್ ಇರುವಂಥ ಮನುಷ್ಯ. ಬೆನ್ಸನ್ ಅಂಡ್ ಹೆಡ್ಜೆಸ್ ತ್ರಿಕೋಣದ ಸರಣಿ ಶುರುವಾದಾಗ ಮಕ್ ಡೊನಾಲ್ಡ್ಸ್ ನವರು ಮೂರು ಕ್ರಿಕೆಟ್ ತಂಡದವರ ನೆನಪಿನ ಪೋಸ್ಟರ್ಸ್ ಕೊಡುತ್ತಿದ್ದರು. ನಾವು ಅದನ್ನು ನೆನಪಿಗಾಗಿ ಇಟ್ಟುಕೊಂಡಿರುವೆವು.

ಒಮ್ಮೆ ಕ್ಯಾನ್ಬೆರಾದ ಮನುಕ ಒವೆಲ್ ನಲ್ಲಿ ಪ್ರೈಮ್ ಮಿನಿಸ್ಟರ್ 11 ಮತ್ತು ವೆಸ್ಟ್ ಇಂಡೀಸ್ ಮಾಚ್ ನೋಡಲು ಗೋಲ್ಬರ್ನ್ ನಿಂದ ಹೊರಟಾಗ ಪ್ರಯಾಣದ ಮಧ್ಯದಲ್ಲೇ ಟಿಕೆಟೆಲ್ಲಾ ಮಾರಾಟವಾಗಿದೆ ಎಂದು ರೇಡಿಯೋನಲ್ಲಿ ಕೇಳಿ ಮಕ್ಕಳು, ಯಜಮಾನರು ಕಾರು ವಾಪಸ್ಸು ತಿರಿಗಿಸುವ ಯೋಚನೆಯಲ್ಲಿದ್ದಾಗ ಬಿಡದೆ ಶ್ರೀ ಸತ್ಯಸಾಯಿ ಬಾಬಾರವರ ನುಡಿ 'ಎಫ್'ನ ಪಾಲಿಸಿ, ಮನುಕ ಒವೆಲ್ ಟಿಕೆಟ್ನವರ ಹತ್ತಿರ ಎಲ್ಲವೂ ವಿವರಿಸಿ ಹೇಳಿದಾಗ ನಮ್ಮ ಮೇಲೆ ಕರುಣೆ ತೋರಿಸಿ ವಿಐಪಿ ಸ್ಟಾನ್ಡ್ ಗೆ ಕರೆದುಕೊಂಡು ಹೋಗಿ ಕೂರಿಸಿದ್ದು, ಡೇವಿಡ್ ಬೂನ್ ಮೊದಲ ಸೆಂಚುರಿ ನಂತರ ಆಟ ಮುಗಿದ ಮೇಲೆ ವಿವಿಯನ್ ರಿಚರ್ಡ್ಸ್, ಜೋಲ್ ಗಾರ್ನರ್, ಕ್ಲೈವ್ ಲಾಯ್ಡ್ ಭೇಟಿಮಾಡಿದ್ದು... ಒಂದೇ ಎರಡೇ ಮರೆಯಲಾಗದಂತಹ ಮಾಚು!

ಎಸ್‌ಸಿಜಿನಲ್ಲಿ ಹಳೆಯ ಕೆಲವು ಸ್ಟಾನ್ಡ್ಗಳನ್ನು ನಿರ್ನಾಮ ಮಾಡಿ ಕೆಲವನ್ನು ಹಾಗೆ ಇಟ್ಟು ಇನ್ನೂ ಹೆಚ್ಚಿಗೆ ಹೊಸ ಸೀಟು ಹಾಕಿ ಚೆನ್ನಾಗಿ ಮಾಡಿದ್ದಾರೆ. ಎಸ್ ಸಿ ಜಿ ಸುತ್ತಮುತ್ತ ಶ್ರೇಷ್ಠ ಫುಟ್ ಬಾಲ್ ಆಟಗಾರರು ಮತ್ತು ಕ್ರಿಕೆಟ್ ನಲ್ಲಿ ರಿಚಿ ಬೆನೊ, ಸ್ಟೀವ್ ವಾ ಮುಂತಾದವರ 10 ಕಂಚಿನ ಪ್ರತಿಮೆಗಳು ಸ್ಥಾಪಿತವಾಗಿವೆ. ಹಿಂದೆ ಮ್ಯೂಸಿಯಂ ಬಿಟ್ಟರೆ ಬೇರೇನೂ ಇರಲಿಲ್ಲ. ಹಾಗೂ ಶಾಲಾ ಮಕ್ಕಳಿಗೆ ಬೇಸಿಗೆ ರಜಾಗಳಲ್ಲಿ ಎಸ್ ಸಿ ಜಿನಲ್ಲಿ ಐಸ್ ಕ್ರೀಮ್, ಸೊವೆನೀರ್, ಚಿಪ್ಸ್ ಮಾರಾಟಮಾಡಿ ದುಡ್ಡು (ಪಾಕೆಟ್ ಮನಿ) ಸಂಪಾದಿಸುವ ಅವಕಾಶವೂ ಇರುತ್ತಿತ್ತು. ಈಗ ಅದೆಲ್ಲಾ ನಿಲ್ಲಿಸಿ ಅಲ್ಲೇ ಎಲ್ಲಾತರಹದ ಸ್ಟಾಲ್ಗಳೂ ಇರುವ ಹಾಗೆ ಮಾಡಿದ್ದಾರೆ.

ನಾವೂ ನಮಗೆ ಪರಿಚಯವಿರುವ ಭಾರತದ ಆಟಗಾರರಾದ, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್, ಬಿ ಎಸ್ ಚಂದ್ರಶೇಖರ್, ಭರತ್ ರೆಡ್ಡಿ, ವೆಂಗ್ ಸರ್ಕಾರ್, ಚೇತನ್ ಶರ್ಮ, ಸದಾನಂದ ವಿಶ್ವನಾಥ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ರಣಜಿ ಟ್ರೋಫಿಗೆ ಆಡಿದ ಸಿದ್ದರಾಮು, ಅಭಿರಾಮ್, ಬ್ರಿಜೇಶ್ ಪಟೇಲ್ (ಟೆಸ್ಟ್ ಗೂ ಆಡಿರುವರು), ಇಮ್ತಿಯಾಜ಼್ ಅಹ್ಮದ್ ಅವರನೆಲ್ಲ ಮನೆಗೆ ಕರೆದು ಆತಿಥ್ಯ ನೀಡುವ ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟ. ಹಾಗೇ ಅವರನ್ನೆಲ್ಲ ಸ್ನೇಹಿತರಿಗೆ ಭೇಟಿ ಮಾಡಿಸಿದ್ದು, ಶ್ರೀಲಂಕಾ ಆಟಗಾರರು ಆಟುಪಟು, ಮುತ್ತಯ್ಯ ಮುರಳೀಧರನ್, ಪಾಕಿಸ್ತಾನದ ಅಫ್ರೀದಿ, ವಾಸಿಂ ಅಕ್ರಂ ಮುಖತಃ ಭೇಟಿಮಾಡಿ ಮಾತನಾಡಿದ್ದು ಎಲ್ಲಾ ಸಂತೋಷ, ಸಂಭ್ರಮದ ಸವಿನೆನಪಿನ ದಿವಸಗಳು.

ನಮ್ಮಲ್ಲಿರುವ ಕ್ರಿಕೆಟ್ ಆಸಕ್ತಿ ಆಸೆ ಮೆಚ್ಚಿಕೊಂಡು ತುಂಬಾ ಆತ್ಮೀಯರಾದ ರಾಕೀ ಹಾರಿಸ್, ಎಸ್ ಸಿ ಜಿ ಟೂರಿಸ್ಟ್ ತಂಡದವರ ಜವಾಬ್ಧಾರಿ ನೋಡಿಕೊಳ್ಳುವ ಕೆಲಸದಲ್ಲಿದ್ದಾಗ ನಮಗೂ ಕೆಲವು ವರ್ಷ ಸದಸ್ಯರ ಪೆವಿಲಿಯನ್ ಪಾಸ್ ಕೊಟ್ಟಿದ್ದರಿಂದ ನಮ್ಮ ಸ್ನೇಹಿತರುಗಳಿಗೆ ಎಸ್ ಸಿ ಜಿ ತೋರಿಸುವ ಅವಕಾಶ ಸಿಕ್ಕಿದೆ. ಅವರು ಆಟಗಾರರ ಚೇಂಜ್ ರೂಮ್ ನಲ್ಲಿರುವ ಕಬೋರ್ಡ್, ಲಾಕರುಗಳ ಮೇಲೆ ಆಟಗಾರರ ಹಸ್ತಾಕ್ಷರ ಹಾಕಿಸಿರುವುದನ್ನು ನಮಗೆ ತೋರಿಸಿ ಸಂತೋಷ ಹಂಚಿಕೊಂಡಿದ್ದರು ಹಾಗೂ ಹೋದ ವರ್ಷ ಕ್ಯುರೇಟರ್ ಬ್ರೇಕ್ ಫಾಸ್ಟ್ ಅದೃಷ್ಟದ ಕರೆಬಂದು ತಂದೆ ಮಗ ಎಸ್ ಸಿ ಜಿ ಪಿಚ್ ಎಲ್ಲಾ ನೋಡಿಕೊಂಡು ಬರುವ ಅವಕಾಶವಾಯಿತು.

ಹಿಂದೆ ವರ್ಲ್ಡ್ ಕಪ್ ಟೂರ್ನಿಯಲ್ಲಿ ಚೆನ್ನೈನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕೀನ್ಯಾ ಮತ್ತು ಭಾರತದ ಮ್ಯಾಚ್ ಗಳನ್ನು ಸದಸ್ಯರ ಪೆವಿಲಿಯನ್ ನಲ್ಲಿ ಕೂತು ನೋಡಿದ್ದು ನಮ್ಮ ಜೀವನದ ಅತ್ಯದ್ಭುತ ಅನುಭವಗಳಲ್ಲೊಂದು. ಮೇಲಾಗಿ ನಾವು ಕೆಎಸ್‌ಸಿಎ ಸದಸ್ಯರೂ ಕೂಡ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Seetha Keshava, an avid lover of Cricket just like any other Indian, shares her association with Cricket and precious moments she spent on Sydney Cricket Ground, Australia. She had the luck to meet World cricketers, shake hand, take photographs on SCG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more