ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆರುನಲ್ಲಿರುವ ಮಾಚುಪಿಚು ಪ್ರವಾಸದ ಅನುಭವ

By ಸೀತಾ ಕೇಶವ, ಆಸ್ಟ್ರೇಲಿಯಾ
|
Google Oneindia Kannada News

ಸಿಡ್ನಿಯ ಆಸ್ಟ್ರೇಲಿಯಾ ಇಂಡಿಯಾ ಮೆಡಿಕಲ್ ಗ್ರಾಜುಯೇಟ್ಸ್ ಅಸೋಸಿಯೇಷನ್ (AIMGA) ನವರು ದಕ್ಷಿಣ ಅಮೆರಿಕಾದ ಹೆಸರಾಂತ ಪ್ರಕೃತಿ ಸೌಂದರ್ಯಗಳಿಂದ ಕೂಡಿದ ಚಿಲಿ, ಪೆರು, ಬ್ರೆಜಿಲ್, ಅರ್ಜೆಂಟಿನಾದಲ್ಲಿರುವ ಸಾಂಟಿಯಾಗೊ, ಲಿಮಾ, ಮಾಚು ಪಿಚು, ಕುಸ್ಕೊ, ರಿಯೋಡಿಜನೈರೋ, ಇಗ್ವಾಜು, ಬ್ಯೂನಸ್ ಐರೀಸ್ ಮುಖ್ಯವಾದ ಜಾಗಗಳಿಗೆ ಪ್ರವಾಸ ಏರ್ಪಡಿಸಿದ್ದರು.

ಸೆಪ್ಟೆಂಬರ್ 2ರಂದು ಹೊರಟು 21ರಂದು ವಾಪಸ್ಸು ಬರುವ ಹಾಗೆ ವ್ಯವಸ್ಥೆ ಮತ್ತು ಮೆಡಿಕಲ್ ಕಾನ್ಫೆರನ್ಸ್ ಏರ್ಪಡಿಸಲಾಗಿತ್ತು. ಸುಮಾರು 43 ಜನ ಹೋಗುವುದು ನಿರ್ಧಾರವಾಯಿತು. ಇದರಲ್ಲಿ ನಾನು ಮತ್ತು ನನ್ನ ಯಜಮಾನರೂ ಸೇರಿಕೊಂಡೆವು. ಏಕೆಂದರೆ ನನಗೆ ಟೂರಿನಲ್ಲಿ ಆಕರ್ಷಿಸಿದ್ದು 'ಮಾಚು ಪಿಚು ಮತ್ತು ಇಗ್ವಾಜು ಜಲಪಾತ' ಎತ್ತಿ ತೋರಿಸುತ್ತಿತ್ತು. [ಚಿತ್ರಪಟ]

ಮಾಚು ಪಿಚು ಎಂದರೆ ಹಳೆಯ ಬೆಟ್ಟ. ಗೋಪುರಾಕೃತಿಯ ಕಟ್ಟಡ 15ನೇ ಶತಮಾನದಲ್ಲಿ ದಕ್ಷಿಣ ಅಮೇರಿಕಾದ ಪೆರುವಿನಲ್ಲಿ 2430 ಮೀಟರ್ (7970 ಅಡಿ) ಎತ್ತರ, 13 ಕಿ.ಮೀನಿಂದ ವಿಸ್ತಾರವಾಗಿ ಹರಡಿದ್ದು, ಕುಸ್ಕೊದ ಉರುಬಂಬ ಪ್ರಾಂತ್ಯದಲ್ಲಿದೆ. ಪುರಾತತ್ತ್ವ ಶಾಸ್ತ್ರಜ್ಞರು ಇಂಕದ ರಾಜ ಪಾಚಕುಟಿ (1438-1472) ಕಟ್ಟಿಸಿದ್ದಾಗಿ ಹೇಳಿದ್ದಾರೆ. ಇಂಕನ್ ರಾಜ್ಯದ ಪಟ್ಟಣ ಕುಸ್ಕೊ 1983ರಲ್ಲಿ ಯುನೆಸ್ಕೋ ವಿಶ್ವಪರಂಪರೆಯ ಅತ್ಯುತ್ತಮ ಜಾಗವೆಂದು, 2007ರಲ್ಲಿ ಜಗತ್ತಿನ ಹೊಸ ಏಳು ಅದ್ಭುತಗಳಲ್ಲಿ ಒಂದಾಗಿದೆ ಎಂದು ಕರೆಸಿಕೊಂಡಿದೆ.

ಮಾಚು ಪಿಚು ಪಯಣದ ಅನುಭವವನ್ನು ಮುಂದಿನ ಸ್ಲೈಡ್ ಗಳಲ್ಲಿ ಪಡೆಯಿರಿ. [ಓದಲು ಮರೆಯದಿರಿ : ಇಂಕಾ ಮಮ್ಮಿಗಳು ಹೇಳುವ ರೋಚಕ ಕಥೆಗಳು]

ಕುಸ್ಕೊದಲ್ಲಿ ಭವ್ಯ ಸ್ವಾಗತ

ಕುಸ್ಕೊದಲ್ಲಿ ಭವ್ಯ ಸ್ವಾಗತ

ಮಾಚು ಪಿಚುಗೆ ಲಿಮಾದಿಂದ ಕುಸ್ಕೊಗೆ ವಿಮಾನ ಅಥವಾ ಬಸ್ಸಿನಲ್ಲಿ ಬರಬೇಕು. ನಾವು ವಿಮಾನದಲ್ಲಿ ಕುಸ್ಕೊಗೆ ಬಂದೆವು. ಪ್ರಯಾಣ ಸುಮಾರು 90 ನಿಮಿಷದ್ದು. ವಿಮಾನ ನಿಲ್ದಾಣದಲ್ಲಿ ಉಸಿರಾಟಕ್ಕೆ ಸಹಾಯಕಾರಿಯಾದ ಕೊಕೊ ಎಲೆ ನೀರು ಕೊಟ್ಟು ಸ್ವಾಗತಿಸಿದರು. ಕುಸ್ಕೊ ಸುಮಾರು ಸಮುದ್ರ ಮಟ್ಟಕ್ಕಿಂತ 12,000 ಅಡಿ ಎತ್ತರದಲ್ಲಿರುವುದರಿಂದ ಉಸಿರಾಟದ ತೊಂದರೆ ಆಗಬಹುದೆನ್ನುವ ಮುನ್ನೆಚ್ಚರಿಕೆಯಿಂದ 9,000 ಅಡಿ ಎತ್ತರದಲ್ಲಿರುವ ಸೇಕ್ರೆಡ್ ವ್ಯಾಲಿಯಕಡೆ ಹೊರಟೆವು. ಡಯಮಾಕ್ಸ್ ಮಾತ್ರೆಗಳನ್ನೂ ತೆಗೆದುಕೊಳ್ಳುತ್ತಿದ್ದೆವು.

ಸಖತ್ತಾಗಿ ಕತ್ತರಿಸಿದ್ದೇ ಕತ್ತರಿಸಿದ್ದು

ಸಖತ್ತಾಗಿ ಕತ್ತರಿಸಿದ್ದೇ ಕತ್ತರಿಸಿದ್ದು

ದಾರಿಯಲ್ಲಿ ನಮಗಾಗಿ ಭೋಜನಕ್ಕೆ ಏರ್ಪಡಿಸಿದ್ದ ಎರಡು ಮೂರು ತಲೆಮಾರಿನಿಂದ ನಡೆಸಿಕೊಂಡು ಬರುತ್ತಿರುವ ಸ್ಪಾನಿಶ್ ಫಾರಂ ಹೌಸ್ಗೆ ಬಂದೆವು. ಪ್ರವೇಶ ದ್ವಾರದಲ್ಲಿಂದಲೇ ಸುತ್ತ ಮುತ್ತ ಕಣ್ಣು ಕೋರೈಸುವ ಪ್ರಾಚೀನ ಕಾಲದ ವಸ್ತುಗಳು, ಕುಡಿಯಲು ನಿಂಬೆಹಣ್ಣಿನ ಶರಬತ್, ಸೂಪ್, ಊಟಕ್ಕೂ ಬಗೆ ಬಗೆಯ ತಿನುಸುಗಳು. ಹೊಟ್ಟೆ ಸಖತ್ತಾಗಿ ಹಸಿದಿದ್ದರಿಂದ ಎಲ್ಲರೂ ಸರಿಯಾಗಿ ಕತ್ತರಿಸಿದ್ದೇ ಕತ್ತರಿಸಿದ್ದು! ಅಲ್ಲಿಯ ಮುಖ್ಯಸ್ಥನೂ ಬಂದು ಸ್ಪಾನಿಶ್ನಲ್ಲಿ ಮಾತನಾಡಿದ್ದನ್ನು, ಇಂಗ್ಲಿಷ್‌ಗೆ ಅನುವಾದ ಮಾಡಿ ಸ್ಥಳದ ಬಗ್ಗೆ ಹೇಳಿದರು.

ಸಂಮ್ಮೋಹನಗೊಳಿಸಿದ ರೈಲು ಪಯಣ

ಸಂಮ್ಮೋಹನಗೊಳಿಸಿದ ರೈಲು ಪಯಣ

ನಂತರ ಹೊರಗಡೆಯ ಉದ್ಯಾನವನದ ಪ್ರಕೃತಿ ಸೌಂದರ್ಯವನ್ನು ಹೀರಿ ಬಸ್ಸಿನಲ್ಲಿ ಸೇಕ್ರೆಡ್ ವ್ಯಾಲಿಯ ಅರಾನ್ವ ಹೋಟೆಲಿಗೆ ಬಂದೆವು. ಮಾರನೆಯ ದಿವಸ ವಿಸ್ಟ ಡೋಂ ರೈಲಿನಲ್ಲಿ ಮಾಚು ಪಿಚುಗೆ ಪಯಣಿಸಿದೆವು. ರೈಲಿನ ಪ್ರಯಾಣ ತುಂಬಾ ಚೆನ್ನಾಗಿತ್ತು. ಪ್ರಯಾಣದ ವಿಶೇಷವೇನೆಂದರೆ ಒಂದೇ ಬೋಗಿಯಲ್ಲಿ ನಾವು 43 ಜನದ ತಂಡವೆಲ್ಲಾ ಕೂರುವ ಅವಕಾಶವಿದ್ದದ್ದು. ಸಾಂಡ್‌ವಿಚ್, ಜ್ಯೂಸ್, ಟೀ, ಕಾಫೀ ಸರಬರಾಜು ಮಾಡುತ್ತಿದ್ದರು. ಮಾರ್ಗದಲ್ಲೂ ಆಂಡೀಸ್ ಪರ್ವತ ಶ್ರೇಣಿಗಳು, ಸೇಕ್ರೆಡ್ ವ್ಯಾಲಿ ಆಫ್ ಇಂಕಾನ್ ದೃಶ್ಯಗಳಿಂದ ಕೂಡಿ ಪ್ರಯಾಣ ಮಾಡಿದ್ದೇ ಗೊತ್ತಾಗಲಿಲ್ಲ.

ಅಮೆರಿಕಾದ ಚರಿತ್ರಕಾರನ ಸಂಶೋಧನೆ

ಅಮೆರಿಕಾದ ಚರಿತ್ರಕಾರನ ಸಂಶೋಧನೆ

ಮಾಚು ಪಿಚು ತಲೆತಲಾಂತರದಿಂದ ಪಾಳುಬಿದ್ದು ಕಾಡಾಗಿದ್ದನ್ನ ಅಮೆರಿಕಾದ ಚರಿತ್ರಕಾರ ಹಿರಾಮ್ ಬಿಂಗಹಾಮ 1911ರಲ್ಲಿ ಕಂಡು ಹಿಡಿದರು. ಇದು ಬೆಟ್ಟದ ಮೇಲೆ ಸೇಕ್ರೆಡ್ ವ್ಯಾಲಿಗೆ 80 ಕಿ.ಮೀ. ವಾಯುವ್ಯ ಭಾಗದ ಕುಸ್ಕೊ ಹಾಗೂ ಉರುಬಂಬ ನದಿಯು ಹರಿಯುವ ಜಾಗದಲ್ಲಿದ್ದು ವಿಶೇಷ ರೀತಿಯ ಕಲ್ಲು ಕಟ್ಟಡದಿಂದ ನಿರ್ಮಿತವಾಗಿದೆ.

ಶಿಲ್ಪತಜ್ಞರಿಗೆ ಅಧ್ಯಯನಯೋಗ್ಯ ಸ್ಥಳ

ಶಿಲ್ಪತಜ್ಞರಿಗೆ ಅಧ್ಯಯನಯೋಗ್ಯ ಸ್ಥಳ

ಇಂಕಾ ಜನಾಂಗದ ಪವಿತ್ರ ನಗರವಾದ ಮಾಚು ಪಿಚುವನ್ನು ಕಲ್ಲು ಕಟ್ಟಡಗಳಿಂದ ಆಂಡೀಸ್ ಪರ್ವತ ಶ್ರೇಣಿಯ ಎರಡು ಶಿಖರಗಳ ನಡುವಿನಲ್ಲಿ ನಿರ್ಮಿಸಿ ಅಲ್ಲಿಂದ ಕೆಳಗೆ ಇಳಿಯುವ ಅಮೆಜಾನಿಯನ್ ಕಣಿವೆಯತ್ತ ಹಬ್ಬಿದೆ. ಮಾಚು ಪಿಚು ಒಂದು ಇಂಜಿನಿಯರು ಮತ್ತು ವಾಸ್ತು ಶಿಲ್ಪತಜ್ಞರಿಗೆ ಅಧ್ಯಯನಯೋಗ್ಯ ಸ್ಥಳವಾಗಿದೆ. ಸಾಧಾರಣ ಇಂಕಾದ ಮಾದರಿಯಲ್ಲಿ ಒಣಗಿದ ಕಲ್ಲು ಕಟ್ಟಡದ, ಎತ್ತರದ ಗೋಡೆಗಳು, ಇಳಿಜಾರು, ಮಹಡಿಯಂತೆ ಕಟ್ಟಲ್ಪಟ್ಟಿದೆ.

ಮೂರು ಪಂಗಡಗಳಲ್ಲಿ ಪಯಣ

ಮೂರು ಪಂಗಡಗಳಲ್ಲಿ ಪಯಣ

ಮಾಚುಪಿಚು ಎದುರು ನೋಡುತ್ತಿದ್ದ ದಿವಸ ಬಂದೇ ಬಿಟ್ಟಿತು. ಹತ್ತು ಗಂಟೆಗೆ ಸೂರ್ಯನ ಬಿಸಿಲು ಚುರುಕಾಗಿ, ಸಾಕಷ್ಟು ಪ್ರವಾಸಿಗರು ಸೇರಿಬಿಟ್ಟಿದ್ದರು. ಗೈಡು ಅಲ್ಲಿಯದೆಲ್ಲಾ ವಿವರಿಸಿದರು. ಹಿಚಿಂಗ್ ಪೋಸ್ಟ್ ಆಫ್ ದಿ ಸನ್, ಟೆಂಪಲ್ ಆಫ್ ದಿ ಸನ್, ರೂಮ್ ಆಫ್ ದಿ ತ್ರೀ ವಿಂಡೋಸ್ ಬಗ್ಗೆ ತಿಳಿಸಿ, ಅವರವರ ದೇಹ, ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ 3 ಪಂಗಡಗಳಲ್ಲಿ ಹೊರಟೆವು. ನಾವು 21 ಜನ ಫೆರ್ನಾಂಡಿಸ್ ಜೊತೆ ಸಾಗಿದೆವು. ಸುಮಾರು ಮೆಟ್ಟಲೇರಿದ ಮೇಲೆ ವ್ಯೂ ಪಾಯಿಂಟ್ ತಲುಪಿದೆವು.

ಇಂಕಾ ಜನರು ಕಟ್ಟಿದ ಗೋಪುರಾಕಾರದ ಗುಡಿ

ಇಂಕಾ ಜನರು ಕಟ್ಟಿದ ಗೋಪುರಾಕಾರದ ಗುಡಿ

ಇಂಕಾ ಜನರು ಕಟ್ಟಿದ ಗೋಪುರಾಕಾರದ ಗುಡಿಗಳು, ಮನೆಗಳು, ಹುಯಾನಾ ಬೆಟ್ಟ ಸೂರ್ಯನ ಗುಡಿ ನೋಡಲು ಬಹಳ ಚೆನ್ನಾಗಿತ್ತು. ಕೆಳಗಡೆ ಇಳಿದಾಗ ದೊಡ್ಡ ಕೊಠಡಿಗಳು, ಸೂರ್ಯನ ಕಿರಣಗಳು ಬರುವ ಹಾಗಿರುವ ಮೂರು ದೊಡ್ಡ ಕಿಟಕಿಗಳು ಮತ್ತು ಪ್ರವಾಸಿಗರು ಲಾಮಾಗಳಿಗೆ ಸೇಬು ಕೊಡುತ್ತಿರುವುದು ನೋಡಿಕೊಂಡು ಬಂದೆವು. ಇನ್ನು ಕೆಳಗಡೆ ಭಾಗದಲ್ಲಿರುವುದನ್ನು ನೋಡಬೇಕೆನ್ನುವ ಕುತೂಹಲ ಉಂಟಾಗಿ ಮಾರನೆ ದಿವಸ ಬೆಳಿಗ್ಗೆ 6 ಗಂಟೆಗೆ ಗೈಡ್ ಕಮೀಲಾ ಜೊತೆ ಹೊರಟೆವು.

ಅದ್ಭುತವಾದ ಕಾಂಡರ್ ದೇವಸ್ಥಾನ

ಅದ್ಭುತವಾದ ಕಾಂಡರ್ ದೇವಸ್ಥಾನ

ಬಂಡೆಯನ್ನು ಕಾಂಡರ್ ಹಕ್ಕಿಯ ಮುಖ, ಕೊಕ್ಕು, ದೇಹ ಮತ್ತು ಪಕ್ಕದಲ್ಲಿ ರೆಕ್ಕೆಯಂತಿರುವ ಎರಡು ಬಂಡೆಗಳು ಬಹಳ ಸೊಗಸಾಗಿತ್ತು. ಇಂಕಾ ಜನರು ಆಹಾರವನ್ನೆಲ್ಲಾ ಶೇಖರಿಸುವ ದೊಡ್ಡ ಕೊಠಡಿಗಳು ಕಿಟಕಿಗಿಳ ಜೋಡಣೆಯನ್ನು ಬಹಳ ವಿವರವಾಗಿ ವರ್ಣಿಸಿದರು. ಸೂರ್ಯ, ಭೂತಾಯಿ ಮತ್ತು ಪಾತಾಳಲೋಕವನ್ನು, ಕಾಂಡೋರ್ ಪಕ್ಷಿಯನ್ನು ಪೂಜಿಸಿ ಪ್ರಾರ್ಥಿಸಿ ನಂಬುವರು. ಆಂಡೀಸ್ ಪರ್ವತ ಶಿವನ ತ್ರಿಶೂಲ, ಹುಯಾನ ಪಿಚು ವಿನಾಯಕ ಮತ್ತು ಮೈಸೂರಿನ ಜಂಬೂಸವಾರಿಯ ಗಜರಾಯನ ಆಕೃತಿ ಬಂಡೆ ಬಹಳ ವಿಶೇಷವಾಗಿ ಕಾಣುತ್ತಿದ್ದುದನ್ನು ಎಲ್ಲರಿಗೂ ತೋರಿಸಿ ಸಂತೋಷ ಹಂಚಿಕೊಂಡೆ.

English summary
Machu Picchu travelogue by Seetha Keshava from Australia. It is located in the Cusco Region, Urubamba Province, Machupicchu District in Peru. Machu Picchu was built in the classical Inca style, with polished dry-stone walls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X