ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರನಾಡ ಕಥೆಗಾರರಿಗೊಂದು ಅಪೂರ್ವ ಅವಕಾಶ

By Shami
|
Google Oneindia Kannada News

KKNC Kathaspardha 2014 Rules and Regulations
ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ 'ಸ್ವರ್ಣಸೇತು -2014' ಸಮಿತಿಯು ವರ್ಷದ ಕಥಾಸ್ಪರ್ಧೆ ಏರ್ಪಡಿಸಿದ್ದು, ವಿದೇಶದಲ್ಲಿ ನೆಲೆಸಿರುವ ಕನ್ನಡ ಬಾಂಧವರಿಂದ ಕಥೆಗಳನ್ನು ಆಹ್ವಾನಿಸುತ್ತಿದೆ. ನಿಮ್ಮೊಳಗೆ ಹರಿದಾಡುತ್ತಿರುವ ಕಾಲ್ಪನಿಕ ಅಥವಾ ನೈಜ ಚಿತ್ರಣಗಳನ್ನು ಚಿಕ್ಕದಾಗಿ, ಚೊಕ್ಕವಾಗಿ ಕಥೆಯ ರೂಪದಲ್ಲಿ ಹೆಣೆಯುವ ಅಪೂರ್ವ ಅವಕಾಶ ಹೊರನಾಡ ಕನ್ನಡಿಗರದ್ದಾಗಿದೆ.

ಕನ್ನಡದಲ್ಲಿ ಬರೆಯುವ ಅಕ್ಕರೆ ಹಾಗೂ ಕಥೆಗಳನ್ನು ಬಿಡಿಸುವ ಅಭಿರುಚಿಯುಳ್ಳವರು ಹೊಸತನವಿರುವ ಕಥೆಗಳನ್ನು ಬರೆದು 'ಸ್ವರ್ಣಸೇತು-2014' ರ ಸಂಪಾದಕ ಸಮಿತಿಗೆ ಕಳುಹಿಸಬಹುದು. ಉತ್ಕೃಷ್ಟತೆಯುಳ್ಳ ಕಥೆಗಳಿಗೆ ಸೂಕ್ತ ಬಹುಮಾನವಿರುವುದು ಮತ್ತು ಆಯ್ದಾ ಕಥೆಗಳು ಸ್ವರ್ಣಸೇತು 2014ರ ಸಂಚಿಕೆಯಲ್ಲಿ ಅಚ್ಚಾಗುತ್ತವೆ. ಸ್ವರ್ಣಸೇತು 2014ರ ಕಥಾಸ್ಪರ್ಧೆಯ ಚೌಕಟ್ಟು ಮತ್ತು ನಿಯಾಮವಾಳಿಗಳು ಕೆಳಗಿನಂತಿವೆ:

1. ಕಥೆಯು ಕನ್ನಡದಲ್ಲಿರಬೇಕು ಹಾಗೂ 1250 ಪದಗಳನ್ನು ಮೀರಿರಬಾರದು.
2. ಕಥೆಯಲ್ಲಿ ಸ್ವಂತಿಕೆ ಹಾಗೂ ಹೊಸತನವಿರಬೇಕು. ನಕಲು ಮಾಡಿದ ಹಾಗೂ ಅನುವಾದಿಸಿದ ಕಥೆಗಳನ್ನು ತಿರಸ್ಕರಿಸಲಾಗುವುದು.
3. ಸ್ವರ್ಣಸೇತುವಿಗೆ ಸಲ್ಲಿಸುವ ಕಥೆಗಳು ಮುಂಚಿತವಾಗಿ ಬೇರೆಯೆಲ್ಲೂ ಪ್ರಕಟಿತವಾಗಿರಬಾರದು.
4. ವಿದೇಶದಲ್ಲಿ ವಾಸಿಸುತ್ತಿರುವ, ಕನ್ನಡದಲ್ಲಿ ಕಥೆಗಳನ್ನು ಬರೆಯುವ ಇಚ್ಛೆ ಹಾಗೂ ಸ್ವಯಂಪ್ರೇರಣೆಯುಳ್ಳ ಕನ್ನಡಿಗರು ಸ್ವರ್ಣಸೇತು 2014ರ ಕಥಾಸ್ಪರ್ಧೆಗೆ ಅರ್ಹರು.
5. ಕಥೆಗಳನ್ನು ಬರಹ ಅಥವಾ ಯೂನಿಕೋಡ್ ಅನ್ನು ಸಹಕರಿಸುವ ಯಾವುದೇ ಕನ್ನಡ ತಂತ್ರಾಂಶ (software) ಉಪಯೋಗಿಸಿಕೊಂಡು ಬರೆದಿರಬೇಕು. ಕೈಯಲ್ಲಿ ಬರೆದು ಸ್ಕ್ಯಾನ್ ಮಾಡಿ ಕಳುಹಿಸಿದ ಅಥವಾ ಹಸ್ತಪ್ರತಿ ರೂಪದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ.
6. ನೀವು ಬರೆದ ಕಥೆಗಳನ್ನು ಸರಿಯಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ [email protected] ಗೆ ಕಳುಹಿಸಿ. ವಿಷಯ ಸೂಚಿ (ಸಬ್ಜೆಕ್ಟ್ ಲೈನ್) ನಲ್ಲಿ 'Kathaspardhe 2014' ಎಂದು ನಮೂದಿಸುವುದನ್ನು ಮರೆಯಬೇಡಿ.

ಸೂಚನೆ : ಮೇಲೆ ತಿಳಿಸಿರುವ ಇ-ಮೇಲ್ ಗೆ ಕಳುಹಿಸುವಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಎದುರಾದಲ್ಲಿ, ನಿಮ್ಮ ಕಥೆಗಳನ್ನು [email protected] ಗೆ ಕಳುಹಿಸಿ.

7. ಕಥೆಗಳನ್ನು ಕಳುಹಿಸಲು ಅಂತಿಮ ದಿನಾಂಕ 15.03.2014.
8. ಸ್ವರ್ಣಸೇತು 2014ರ ಕಥಾಸ್ಪರ್ಧೆಗೆ ಕಳುಹಿಸಿದ ಕಥೆಗಳನ್ನು ಒಂದು ವರ್ಷ ಬೇರೆಯಲ್ಲೂ ಪ್ರಕಟಿಸುವಂತಿಲ್ಲ.
9. ಕೊನೆಯದಾಗಿ ಮತ್ತು ಮುಖ್ಯವಾಗಿ, ಕಥೆಗಳನ್ನು ಆಯ್ಕೆಮಾಡುವ ಅಥವಾ ಮಾಡದ ಹಾಗೂ ಸ್ವರ್ಣಸೇತು 2014ರ ಸಂಚಿಕೆಯಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದ ಸಂಪೂರ್ಣ ಹಕ್ಕು ಸ್ವರ್ಣಸೇತು ಸಂಪಾದಕ ಸಮಿತಿಯದ್ದಾಗಿರುತ್ತೆ.

English summary
Kannada Koota Northern California (KKNC), a Kannada organization located in west coast of USA, has organized Kannada short story contest for yearly magazine Swarnasetu-2014. Kannadigas residing in America can participate in this contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X