• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾವ್, ವಾಟ್ ಅ ಗ್ರೇಟ್ ಹಾಲಿವುಡ್ ಟೈಪ್ ಮೂವಿ ಟ್ರೈಲರ್ ಮ್ಯಾನ್

By ನಾಗರಾಜ್ ಎಂ, ಕನೆಕ್ಟಿಕಟ್
|
   KFG Kannada Movie : ವಾವ್, ವಾಟ್ ಅ ಗ್ರೇಟ್ ಹಾಲಿವುಡ್ ಟೈಪ್ ಮೂವಿ ಟ್ರೈಲರ್ ಮ್ಯಾನ್..! | Oneindia Kannada

   ನಾನು ಕೆಲಸ ಮಾಡ್ತಿದ್ದ ಕಡೆಯೆಲ್ಲ ಬೇರೆ ಭಾಷೆ ಮಾತಾಡುವವರೇ ಜಾಸ್ತಿ. ಜೊತೆಯಲ್ಲಿ ಕೂತು ಊಟ ಮಾಡುವಾಗ ಸಾಮಾನ್ಯವಾಗಿ ಏನು ವೀಕೆಂಡ್ ಪ್ರೋಗ್ರಾಮ್ ಅಂತಾ ಎಲ್ಲರ ಕೇಳಿಕೆ.

   ಏನು ಇಲ್ಲ ಗುರು... ನಾರ್ಮಲ್ ವೀಕೆಂಡ್ ಅಂತ ನಾ ಹೇಳಿದಾಗ... ಅವರು, ನಮ್ಮ ಹೀರೋದು ಹೊಸ ಮಸ್ತ್ ಮೂವಿ ರಿಲೀಸ್ ಆಗಿದೆ... you also come... you don't get these types of ಗ್ರೇಟ್ ಮೂವೀಸ್ ಇನ್ ಯುವರ್ ಸ್ಯಾಂಡಲ್ವುಡ್" ಅಂತ ಹೇಳಿ ಅವರು ಕರೆದಾಗ... ಅದರಲ್ಲಿ ಕುಹಕ ನಗೆ ಬೆರೆತಿದ್ದು ಕಣ್ಣಿಗೆ ಗೋಚರಿಸುತ್ತಿತ್ತು!

   'ಕೆ.ಜಿ.ಎಫ್' ಟ್ರೈಲರ್ ನೋಡಿ ಫಿದಾ ಆದ ವಿದೇಶಿ ಪ್ರಜೆಗಳು.!

   ಇವತ್ತು ಶುಕ್ರವಾರ ವೀಕೆಂಡ್ ಮೂಡಲ್ಲಿ ಇದ್ದ ಎಲ್ಲರೂ ಊಟಕ್ಕೆ ಕುಳಿತಿದ್ದಾಗ... ಅವರೇ ಶುರು ಮಾಡಿದ್ದರು "ವಾವ್... ವಾಟ್ ಅ ಗ್ರೇಟ್ ಹಾಲಿವುಡ್ ಟೈಪ್ ಮೂವಿ ಟ್ರೈಲರ್ ಮ್ಯಾನ್... That ಟೂ ಕನ್ನಡ ಮೂವಿ... ಯು guys are ರಾಕಿಂಗ್ ಮ್ಯಾನ್... Never thought ಸ್ಯಾಂಡಲ್ವುಡ್ has so Brilliant - Talented ಆಕ್ಟರ್/ಡೈರೆಕ್ಟರ್/ Brave ಪ್ರೊಡ್ಯೂಸರ್..." This movie is going to Rock all over India for Sure" ಅಂತ ಅವರ ಬಾಯಿಂದಲೇ ಕೇಳಿದಾಗ... ಆಗದಿರುವುದೇ ನೂರ್ಮಡಿ ಸಂತೋಷ?

   ಇಂದು 5 ಭಾಷೆಗಳಲ್ಲಿ ರಿಲೀಸ್ ಆದ K.G.F ಟ್ರೈಲರ್ ನೋಡಿದಾಗ, ಬಂದಿದ್ದು "ವಾವ್" ಉದ್ಗಾರ ... ನನ್ನ ಜೊತೆ ನೋಡಿದ ಅವರೆಲ್ಲರ ಬಾಯಲ್ಲಿ!

   ತುಂಬಾ ಕುತೂಹಲಕಾರಿಯಾಗಿ, ಅದ್ದೂರಿಯಾಗಿ (Visuals, ಮೇಕ್ಅಪ್, ಆಕ್ಟಿಂಗ್, ಮ್ಯೂಸಿಕ್), ಕಲಾತ್ಮಕವಾಗಿ ಬಂದಿರುವ ಈ ಟ್ರೈಲರ್ ನೋಡಿದಾಗ ಕಣ್ಣಿಗೆ ಕಂಡಿದ್ದು... ಈ ಸಿನಿಮಾದ ಎಲ್ಲಾ ತಂಡದವರ ಎರಡು-ಮೂರು ವರ್ಷಗಳ ಕಠಿಣ ಶ್ರಮ, passion, ಲವ್ towards ಮೇಕಿಂಗ್ ವೆರಿ ಗುಡ್ ಮೂವಿ! ಹಾಟ್ಸ್ ಆಫ್ ಟು all of them!

   ಕನ್ನಡದ 'ಕೆ ಜಿ ಎಫ್' ಗೆದ್ದರೇ ಏನೆಲ್ಲ ಆಗಬಹುದು?

   ಬಹು ನಿರೀಕ್ಷೆಯ, ಬಹು ಚರ್ಚಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ವಿಜಯ್ ಕಿರಗಂದೂರ್ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ "ಕೆ.ಜಿ.ಫ್"... ಒಂದು ಮೈಲಿಗಲ್ಲು ಆಗುವುದರಲ್ಲಿ ಸಂದೇಹವೇ ಇಲ್ಲ.

   ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ/ಮಾಡುತ್ತಿರುವ ಪ್ರಶಾಂತ್ ನೀಲ್, ಯಶ್, ವಿಜಯ್ ಕಿರಗಂದೂರ್ ಮತ್ತು ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು ಮತ್ತು ಅಭಿನಂದನೆಗಳು!

   ಊಟ ಆದಮೇಲೆ, ನಾ "ನನ್ನ ಡಿಸೆಂಬರ್ 21st ಪ್ರೋಗ್ರಾಮ್ ಫಿಕ್ಸೆಡ್... ಫಸ್ಟ್ ಶೋ, ಫಸ್ಟ್ ಡೇ ಕೆ.ಜಿ.ಫ್.... ಎನಿ ಒನ್? ಅಂದಾಗ ಎಲ್ಲರೂ "ವೀ ಟೂ ಆರ್ ಕಮಿಂಗ್" ಅಂತ ಜೋರಾಗಿ ಹೇಳಿದ್ದ ಕೇಳಿ... ಮೂಡಿತ್ತು ನನ್ನಲ್ಲಿ ನಗೆ. ಆದರೆ ಅದು ಕುಹಕ ನಗೆಯಲ್ಲ... ಅದು ಸಂತೋಷದ - ಅಭಿಮಾನದ ನಗೆ!

   ಕೆಜಿಎಫ್ vs ಕೆಜಿಎಫ್: ಕನ್ನಡಕ್ಕಿಂತ ಪರಭಾಷೆಯಲ್ಲೇ ವೀವ್ಸ್ ಜಾಸ್ತಿ

   "ನಿನ್ನ ಬೆನ್ನ ಹಿಂದೆ, ಸಾವಿರಾರು ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ ಬರಿ ಒಂದು ಯುದ್ಧ ಗೆಲ್ಬೋದು... ಅದೇ ನೀ ಮುಂದೆ ನಿಂತಿದಿಯಾ ಅಂತ ಹಿಂದೆ ಇರೋ ಸಾವಿರಾರು ಜನರಿಗೆ ಧೈರ್ಯ ಬಂದ್ರೆ... ಪ್ರಪಂಚಾನೇ ಗೆಲ್ಲಬಹುದು...!"

   ಸಾವಿರ ಏನು? ಕೋಟಿಗಟ್ಟಲೆ ಜನ

   ನಿಮ್ಮ ಹಿಂದೆ ನಿಂತಿದಾರೆ

   ಧೈರ್ಯವಾಗಿ ಮುನ್ನುಗ್ಗಿ

   ಗೆಲ್ಲುವ ಪ್ರಪಂಚದ ಎಲ್ಲಾ ಜನರ ಹೃದಯವ...!

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   KGF : What a great hollywood type movie trailer! Rocking Star Yash's latest Kannada movie KGF has blown away movie buffs all over the world. How the other language people reacting to it?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more