ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾರಸ್ಯಕರ ಕಥೆಯೊಂದನ್ನು ಬರೆಯಿರಿ, ಬಹುಮಾನ ಗೆಲ್ಲಿರಿ

By Prasad
|
Google Oneindia Kannada News

ನಿಮ್ಮಲ್ಲಿರುವ ಕಲ್ಪನೆಯನ್ನು ಅಕ್ಷರ ರೂಪದ ಕಥೆಯಾಗಿಸಿ ಪ್ರತಿಭೆಯನ್ನು ಹೊರ ಚೆಲ್ಲುವ ಅವಕಾಶವನ್ನು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ "ಸ್ವರ್ಣ ಸೇತು 2018" ನೀಡುತ್ತಿದೆ. ಸ್ವಾರಸ್ಯಕರ ಕಥೆಯೊಂದನ್ನು ಬರೆಯಿರಿ, ಆಕರ್ಷಕ ಬಹುಮಾನ ಗೆಲ್ಲಿರಿ.

ಕಥೆ ಬರೆಯುವ ಮುನ್ನ ಅಥವಾ ಬರೆದ ಕಥೆಯನ್ನು ಕಳಿಸುವ ಮುನ್ನ ಕೆಳಗೆರುವ ಕೆಲ ನಿಬಂಧನೆಗಳನ್ನು ಗಮನವಿಟ್ಟು ಓದಿರಿ. ಕಥಾಲೋಕಕ್ಕೆ ನಿಮ್ಮನ್ನು ತೆರೆದುಕೊಳ್ಳಿ, ನಿಮ್ಮಲ್ಲಿ ಅಡಗಿರುವ ಸೃಜನಶೀಲತೆಯನ್ನು ಕಥೆಯಲ್ಲಿ ಅರಳಿಸಿ.

Kannada Short story competition by KKNC

ಸ್ಪರ್ಧೆಯ ನಿಯಮಗಳು:

1. ಕಥೆ 1500 ಪದಗಳನ್ನು ಮೀರಬಾರದು.
2. ಕಥೆ ಸ್ವಂತದ್ದಾಗಿರಬೇಕು.
3. ಕಥೆ ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಪ್ರಕಟವಾಗಿರಬಾರದು.
4. ಒಬ್ಬರು ಒಂದಕ್ಕಿಂತ ಹೆಚ್ಚು ಕಥೆ ಕಳುಹಿಸುವಂತಿಲ್ಲ.
5. ಭಾಷಾಂತರಿಸಿದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ.
6. ಅಮೇರಿಕಾದಲ್ಲಿ(USA) ನೆಲೆಸಿರುವ ಎಲ್ಲಾ ಕನ್ನಡಿಗರಿಗೂ ಭಾಗವಹಿಸುವ ಅವಕಾಶವಿದೆ.
7. ಕಥೆಗಳು ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿರಬೇಕು. ಕೈಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
8. ಆಯ್ದ ಕಥೆಗಳಿಗೆ ಬಹುಮಾನವಿರುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮ.
9. ಆಯ್ದ ಕಥೆಗಳನ್ನು ಸ್ವರ್ಣಸೇತು - 2018 ರಲ್ಲಿ ಪ್ರಕಟಿಸಲಾಗುವುದು. ಪರಿಷ್ಕರಿಸಿ ಪ್ರಕಟಿಸುವ ಹಕ್ಕು ಸ್ವರ್ಣಸೇತು-2018 ರ ಸಂಪಾದಕ ಸಮಿತಿಗೆ ಸೇರಿದ್ದು.
10. ಕಥೆಯ ಜೊತೆಗೆ ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರ ಮತ್ತು ಮಿಂಚಂಚೆ ವಿಳಾಸ (email ID) ಕಳುಹಿಸಬೇಕು.
11. ನಿಮ್ಮ ಕಥೆಗಳನ್ನು ಕಳುಹಿಸಬೇಕಾದ ವಿಳಾಸ - [email protected]
12. ಕಥೆಗಳನ್ನು June 15, 2018 ರ ಒಳಗೆ ಕಳುಹಿಸಬೇಕು.

English summary
Kannada Koota Northern California (KKNC) has organized a short story competition for Americannadigas to be published in Swarna Setu 2018 magazine. Send your Kannada short story before June 15, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X