ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕಗಳ ಮತ್ತು ಧ್ವನಿ ಸಂಪುಟದ ಲೋಕಾರ್ಪಣೆ

By ತ್ರಿವೇಣಿ ಶ್ರೀನಿವಾಸರಾವ್
|
Google Oneindia Kannada News

ಪ್ರಧಾನ ಸಂಪಾದಕ ಶ್ರೀಕಾಂತಬಾಬು ಅವರು ಸಂಪಾದಕ ಮಂಡಲಿಯನ್ನು ಪರಿಚಯಸಿ ಈ ಸಮ್ಮೇಳನದ ಪ್ರಮುಖ ವಿಷಯವಾದ 'ಅನುವಾದ ಸಾಹಿತ್ಯ' ವನ್ನು ಕುರಿತು ಪ್ರಕಟಿಸಲಾದ ಎರಡು ಪುಸ್ತಕಗಳನ್ನು ಸಭೆಗೆ ಪರಿಚಯಿಸಿ ಅತಿಥಿಗಳಿಗೆ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲು ಕೇಳಿಕೊಂಡರು.

ವಿವಿಧ ಭಾಷೆಗಳಿಂದ ಆಯ್ದ ಲೇಖನಗಳ ಕನ್ನಡ ಅನುವಾದದ ಪುಸ್ತಕ 'ಅನುವಾದ ಸಂವಾದ'ವನ್ನು ಮೊದಲಿಗೆ ಪ್ರೊ. ಪ್ರಧಾನ ಗುರುದತ್ತ ಅವರು ಲೋಕಾರ್ಪಣೆ ಮಾಡಿದರು. ನಂತರ ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ ಪುಸ್ತಕ ಸಂಕಲನ 'A Little Taste of Kannada - in English' ಅನ್ನು ಪ್ರೊ. ನಾರಾಯಣ ಹೆಗ್ಡೆ ಅವರು ಲೋಕಾರ್ಪಣೆ ಮಾಡಿದರು.

Kannada Sahitya Ranga : 7th Vasanta Sahityotsava (part 2)

ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಸಂಪಾದಿಸಿ ಕನ್ನಡ ಸಾಹಿತ್ಯ ರಂಗ ಮತ್ತು ಸಾಹಿತ್ಯಾಂಜಲಿ ಅಭಿನವ ಪ್ರಕಾಶನದ ಸಹಯೋಗದೊಂದಿಗೆ ಪ್ರಕಟಿಸಿದ ಪುಸ್ತಕ 'ಅಮೆರಿಕನ್ನಡ ಬರಹಗಾರರು (ಸಂಕ್ಷಿಪ್ತ ಮಾಹಿತಿ ಕೋಶ)'ವನ್ನು ಪ್ರೊ. ಶ್ರೀಧರ್ ಅವರು ಬಿಡುಗಡೆ ಮಾಡಿದರು.

ಸವಿತಾ ರವಿಶಂಕರ್ ಅವರು ಮಕ್ಕಳಿಗಾಗಿ ತಯಾರಿಸಿದ 'ಚಿಲಿ ಪಿಲಿ ಕನ್ನಡ ಕಲಿ' ಧ್ವನಿ ಸಂಪುಟವನ್ನು ಪ್ರೊ. ಪ್ರಧಾನ್ ಗುರುದತ್ತ ಅವರು ಲೋಕಾರ್ಪಣೆ ಮಾಡಿದರು. ಕೊನೆಯದಾಗಿ ಸಂಗಮದ ಶಂಕರ ಶಾಸ್ತ್ರಿಯವರು ಸಂಪಾದಿಸಿದ ಸಮ್ಮೇಳನದ ಸ್ಮರಣ ಸಂಚಿಕೆ 'ಸೊಬಗು' ವನ್ನು ಪ್ರೊ. ಶ್ರೀಧರ್ ಅವರು ಬಿಡುಗಡೆ ಮಾಡಿದರು.

English summary
7th Vasanta Sahityotsava by Kannada Sahitya Ranga, a Kannada organization of literary activities in America, concluded recently under Sangama. A report by Triveni Srinivasrao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X