• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರಿಯದಲ್ಲಿ ಭಾನುವಾರ ಹಾರಲಿದೆ ಕನ್ನಡ ಬಾವುಟ

By ರಾಹುಲ್ ಗೌಡ
|
ಕನ್ನಡ ರಾಜ್ಯೋತ್ಸವ ಕರ್ನಾಟಕದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಎಲ್ಲೆಲ್ಲಿ ಕನ್ನಡಿಗರು ಪಸರಿಸಿದ್ದಾರೋ, ಎಲ್ಲೆಲ್ಲಿ ಕನ್ನಡದ ಬಗೆಗಿನ ಪ್ರೇಮ ಇನ್ನೂ ಜಾಗೃತವಾಗಿದೆಯೋ ಅಲ್ಲೆಲ್ಲ ಅತ್ಯಂತ ಸಂಭ್ರಮದಿಂದ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿವರ್ಷದಂತೆ ಕೊರಿಯ ಕನ್ನಡ ಕೂಟ (KKK) ಕೂಡ ಇದೇ ಭಾನುವಾರ, ನ.17ರಂದು ಕನ್ನಡ ರಾಜ್ಯೋತ್ಸವ ಆಚರಿಸಲು ಎಲ್ಲ ತಯಾರಿ ಮಾಡಿಕೊಂಡಿದೆ.

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೆ ನೀ ಕನ್ನಡವಾಗಿರು

ಕನ್ನಡವೇ ಸತ್ಯಾ ಕನ್ನಡವೇ ನಿತ್ಯ ಎಂಬ ದ್ಯೇಯವಾಕ್ಯ ಇಟ್ಟುಕೊಂಡ ಕೊರಿಯಾ ಕನ್ನಡ ಕೂಟದ ಗೆಳೆಯರು ಈ ಬಾರಿಯ ಕನ್ನಡ ರಾಜ್ಯೋತ್ವವನ್ನು ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕೊರಿಯಾ ಕನ್ನಡ ಕೂಟವು ಭಾನುವಾರ ನವೆಂಬರ್ 17th, 2013ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು, ಸಿಯೋಲ್ ನ್ಯಾಷನಲ್ ವಿಶ್ವವಿದ್ಯಾಲಯ ಗೊನ್ ಹಾಲ್, ಸಿಯೋಲ್ ನಲ್ಲಿ ಹಮ್ಮಿಕೊಂಡಿದೆ. ಎಲ್ಲರೂ, ಅಂದು ತಮ್ಮ ಬೇರೆ ಕೆಲಸಗಳನ್ನು ಬದಿಗೊತ್ತಿ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ.

ಕಾರ್ಯಕ್ರಮದ ವೇಳಾಪಟ್ಟಿ

10:00 ಕಾರ್ಯಕ್ರಮ ಪ್ರಾರಂಭ

10:30 ಧ್ವಜಾರೋಹಣ ಮತ್ತು ನಾಡಗೀತೆ

11:00 ಸಾಂಸ್ಕೃತಿಕ ಕಾರ್ಯಕ್ರಮಗಳು

13:00 ಮಧ್ಯಾಹ್ನ ಭೋಜನ

14:30 ಚಟುವಟಿಕೆಗಳು

15:40 ಬಹುಮಾನ ವಿತರಣೆ

15:50 ವಂದನಾರ್ಪಣೆ

15:55 ಸಾಮೂಹಿಕ ಭಾವಚಿತ್ರ

16:00 ಕಾರ್ಯಕ್ರಮ ಮುಕ್ತಾಯ [2012ರ ಕೊರಿಯ ಕನ್ನಡ ರಾಜ್ಯೋತ್ಸವ ವರದಿ]

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ರಾಹುಲ್ ಗೌಡ

010-2600-1947

Rahulgowdru@yahoo.co.in.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Korea Kannada Koota (KKK) will be celebrating Kannada Rajyotsava on Sunday, 17th November, 2013. It has planned lots of cultural activities on that occasion. Programme details are here.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more