ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬುಧಾಬಿಯಲ್ಲಿ ಸಡಗರದ ಕನ್ನಡ ರಾಜ್ಯೋತ್ಸವ

By Prasad
|
Google Oneindia Kannada News

ಅಬುಧಾಬಿ, ನ. 15 : ಕರ್ನಾಟಕ ಸಂಘದ ವತಿಯಿಂದ 59ನೇ ಕನ್ನಡ ರಾಜ್ಯೋತ್ಸವವನ್ನು ಇಂಡಿಯ ಸೋಷಲ್ ಎಂಡ್ ಕಲ್ಚರಲ್ ಆಸೋಸಿಯೇಷನ್ ಸಭಾಂಗಣದಲ್ಲಿ ನ.7ರಂದು ಶುಕ್ರವಾರ ಅತ್ಯಂತ ಅದ್ಧೂರಿಯಾಗಿ ಅಚರಿಸಲಾಯಿತು.

ರಾಜ್ಯೋತ್ಸವದ ಅಂಗವಾಗಿ ನೀಡಲಾಗುತ್ತಿರುವ ವರಕವಿ ದ.ರಾ.ಬೇಂದ್ರೆ ಪ್ರಶಸ್ತಿಯನ್ನು ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಕವಿ ಹಾಗೂ ರಂಗ ನಿರ್ದೇಶಕ ಪ್ರಕಾಶ್ ರಾವ್ ಪಯ್ಯಾರ್ ಅವರಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಅಬುಧಾಬಿಯ ಉದ್ಯಮಿ ಪದ್ಮಶ್ರೀ ಡಾ. ಬಿ.ಆರ್.ಶೆಟ್ಟಿ ಹಾಗೂ ಮುಖ್ಯ ಅತಿಥಿ ಯು.ಎ.ಇ.ಯಲ್ಲಿ ಭಾರತೀಯ ರಾಯಭಾರಿ ಟಿ.ಪಿ, ಸೀತಾರಾಮ್ ಅವರು ಪ್ರದಾನಗೈದರು. [ಅಬುಧಾಬಿಯಲ್ಲಿ ಬೆಂಗಳೂರು ಹುಡುಗಿಯ ಸಾಧನೆ]

Kannada Rajyotsava celebration in Abudhabi

ಕಳೆದ ಇಪ್ಪತೊಂಬತ್ತು ವರ್ಷಗಳಿಂದ ಹೊರನಾಡು ಹಾಗೂ ವಿದೇಶದಲ್ಲಿ ಕನ್ನಡ ರಂಗ ಮತ್ತು ಸಾಹಿತ್ಯಿಕ ಚಟುವಟಿಕೆಯನ್ನು ನಿರಂತರ ನಡೆಸಿ ಕೊಂಡು ಕನ್ನಡ ಸೇವೆ ಮಾಡುತ್ತಿರುವ ಪ್ರಕಾಶ್ ರಾವ್ ಪಯ್ಯಾರ್ ಅವರನ್ನು ಅತಿಥಿಗಳು ಶ್ಲಾಘಿಸಿದರು.

ವೇದಿಕೆಯಲ್ಲಿ ಸುಧೀರ್ ಕುಮಾರ್ ಶೆಟ್ಟಿ, ಶೇಖರ್ ಬಿ.ಶೆಟ್ಟಿ , ಡಿ,ನಟರಾಜನ್, ಸೀತಾರಾಮ್, ಡಾ. ಶ್ರೀಮತಿ ಬಿ.ಅರ್.ಶೆಟ್ಟಿ, ಸಂಘದ ಅದ್ಯಕ್ಷರಾದ ಸರ್ವೊತ್ತಮ ಶೆಟ್ಟಿ ಮುಂತಾದವರು ಉಪಸಿತ್ಥರಿದ್ದರು. [ಒಂದು ರಾತ್ರಿಗೆ 70 ಲಕ್ಷ ರು. ಪಾವತಿಸಿದ ಕುಬೇರ]

ಸಮಾರಂಭದಲ್ಲಿ ಪ್ರಕಾಶ್ ರಾವ್ ಪಯ್ಯಾರ್ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಮನೋಹರ್ ತೋನ್ಸೆ ಅವರು ಸನ್ಮಾನ ಪತ್ರವನ್ನು ವಾಚಿಸಿದರು, ಸರ್ವೊತ್ತಮ ಶೆಟ್ಟಿ ವಂದಿಸಿದರು.

English summary
Kannada Rajyotsava Celebration held on 07.11.2014 at Indian Social and Cultural Association AbuDhabi by Karnataka Sangh Abu Dhabi. Kannada poet Prakash Rao Payyar was conferred with Da Ra Bendre award on the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X