ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುವೈತ್ ಕನ್ನಡ ಸಂಘದಿಂದ ರಾಜ್ಯೋತ್ಸವಕ್ಕೆ ವಿಡಿಯೋ ಆಹ್ವಾನ

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 09: ಕುವೈತ್ ಕನ್ನಡ ಕೂಟವು ಸುಮಾರು 200ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ 33 ವರ್ಷ ಹಳೆಯ ಮಹತ್ತರ ಸಂಘಟನೆಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ಎಲ್ಲರನ್ನು ಆಹ್ವಾನಿಸಲಾಗಿದೆ.

ರಾಜ್ಯೋತ್ಸವ ವಿಶೇಷ: ಸ್ವಾಗತಿಸಿ ಕುವೈತ್ ಕನ್ನಡ ಸಂಘರಾಜ್ಯೋತ್ಸವ ವಿಶೇಷ: ಸ್ವಾಗತಿಸಿ ಕುವೈತ್ ಕನ್ನಡ ಸಂಘ

ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಹೆಮ್ಮೆಯ ರಾಜ್ಯೋತ್ಸವವನ್ನು ನವಂಬರ್ 17ರಂದು Kuwait College of Science and Technology ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

 Kannada Rajyotsava 2017@Kuwait Kannada Koota - Invitation

ನಾಡಿನ ಹೆಸರಾಂತ ಪರಿಸರವಿಜ್ಞಾನಿ, ವನ್ಯಜೀವಿ ಸಂರಕ್ಷಕ, ರಾಷ್ಟ್ರೀಯ ಹುಲಿ ಪರಿಯೋಜನೆಯ ಮಹತ್ತರ ಸಾಧನೆಗಳ ಕರ್ತೃ ಡಾ. ಉಲ್ಲಾಸ್ ಕಾರಂತರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕರ್ನಾಟಕದ ಉಡುಪಿಯ "ನೃತ್ಯನಿಕೇತನ ಕೊಡವೂರು" ಕಲಾ ಸಂಸ್ಥೆಯ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದೂಷಿ ಶ್ರೀಮತಿ ಮಾನಸಿ ಸುಧೀರ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇವರು ತಾವೇ ಪರಿಕಲ್ಪಿಸಿ ನಿರ್ದೇಶಿಸಲಿರುವ "ಮಳೆಬಂತು ಮಳೆ" ಎಂಬ ನೃತ್ಯ ರೂಪಕವನ್ನು ಕೂಟದ ಮಕ್ಕಳಿಗೆ ಮತ್ತು ಸದಸ್ಯರಿಗೆ ತರಬೇತಿ ನೀಡಿ ಅಣಿಗೊಳಿಸುವ ಮೂಲಕ ಪ್ರಸ್ತುತಪಡಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಕನ್ನಡನಾಡಿನ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯುವ ಕರ್ನಾಟಕದ "ಕರುನಾಡ ಕಣ್ಮಣಿಗಳು" ಎಂಬ ಕಾರ್ಯಕ್ರಮ ಘೋಷವಾಕ್ಯದೊಂದಿಗೆ ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಕರ್ನಾಟಕದ ಇತ್ತೀಚಿನ ಸಾಧಕರ, ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ದೇಶದ ಮತ್ತು ನಾಡಿನ ಅನಿವಾಸಿ ಜನತೆಗೆ ಮಾಡಿಸುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿದೆ.

ಎರಡನೇ ಹಂತದಲ್ಲಿ ಮುಖ್ಯ ಅತಿಥಿಗಳಿಗೆ ಸನ್ಮಾನ ಆಗಮಿತ ಅತಿಥಿಗಳಿಗೆ ಗೌರವಾರ್ಪಣೆ, ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿದ ಎಲ್ಲಾ ಸಹೃದಯಿ ಸಂಸ್ಥೆ/ವ್ಯಕ್ತಿಗಳಿಗೆ ಕೃತಜ್ಞತಾಪೂರ್ವಕ ನೆನಪಿನ ಕಾಣಿಕೆಯ ಅರ್ಪಣೆ ನಡೆಯುತ್ತವೆ. ಮೂರನೇ ಹಂತದಲ್ಲಿ ಶ್ರೀಮತಿ ಮಾನಸಿಯವರು ಪ್ರಸ್ತುತ ಪಡಿಸುವ ಕಾರ್ಯಕ್ರಮಗಳು, ಇರುತ್ತವೆ. ಕೊನೆಯದಾಗಿ ವಂದನಾರ್ಪಣೆ ಮತ್ತು ರಾಜ್ಯೋತ್ಸವ ರಾತ್ರಿಯ ಔತಣದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳುತ್ತದೆ.

English summary
Kuwait Kannada Koota has invited one and all for the Kannada Rajyotsava 2017 celebration to be held on November 17, 2017 at Kuwait College of Science and Technology auditorium. Dr Ullas Karanth is the chief guest for the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X