ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಮತ : ಲಿಂಗಾಯತ ಪ್ರತ್ಯೇಕ ಧರ್ಮ ಬೇಕಿತ್ತಾ?

By ನಾಗರಾಜ್ ಎಂ, ಕನೆಕ್ಟಿಕಟ್
|
Google Oneindia Kannada News

ಮಾರ್ಚ್ ಮುಗಿಯೋಕೆ ಬಂದರೂ, ಈ ಚಳಿ, ಹಿಮ ಇನ್ನೂ ಬಿಡಂಗಿಲ್ವಲ್ಲಾ... ಹಾಳಾದ್ದು ಬೇಜಾರು ಅಂತಾ ಟಿವಿ, ನ್ಯೂಸ್ ಪೇಪರ್ ನೋಡಿದ್ರೆ ಅದೇ ನ್ಯೂಸ್... ಸರಿ, ನಮ್ಮ ರಾಜ್ಯದಲ್ಲಿ ಏನಾಗ್ತಿದೆ, ಯುಗಾದಿ ಹಬ್ಬ ಹೇಗೆ ಆಚರಿಸ್ತಾ ಇದಾರೆ ನೋಡುವಾ ಅಂತಾ... ಕನ್ನಡ TV ಚಾನೆಲ್ ಗೆ ಚೇಂಜ್ ಮಾಡಿದೆ.

"2ರಿಂದ 3 CRPF ತುಕಡಿಗಳು, ಹಲವಾರು ಪೊಲೀಸ್ ಸಿಬ್ಬಂದಿ ಮಾನ್ಯ ಮುಖ್ಯಮಂತ್ರಿ ನಿವಾಸದ ಬಳಿ" ಬ್ರೇಕಿಂಗ್ ನ್ಯೂಸ್... ಅಂತ ತೋರಿಸ್ತಿದ್ದ ಅದನ್ನು ನೋಡಿ ಕುತೂಹಲದಿಂದ ಕಾಫಿ ಹೀರುತ್ತಾ ಕೂತೆ!

ಹಿಂಗ ಐತಿ ನೋಡ್ರಪಾ ನಮ್ಮ ಕರಾಳ ಶುಕ್ರವಾರ!ಹಿಂಗ ಐತಿ ನೋಡ್ರಪಾ ನಮ್ಮ ಕರಾಳ ಶುಕ್ರವಾರ!

ಒಳಗಡೆ ಮಂತ್ರಿಮಂಡಲದ ಸಭೆ ನಡೆದಿದೆ... ಅಪರೂಪಕ್ಕೆ ಎಲ್ಲ ಮಂತ್ರಿಗಳು ಇಂದು ಹಾಜರಾಗಿ ಗಂಭೀರ ಸಮಾಲೋಚನೆ ಮಾಡ್ತಾ ಇದಾರೆ... ಅಂತ ಆ ಟಿವಿ ವರದಿಗಾರನ ನುಡಿ ಕೇಳಿ... "ಬಹುಶಃ ಇನ್ನೇನು ಬಿಸಿಲುಗಾಲ ಬಂತಲ್ಲ... ಅದಕ್ಕೆ 24X7 ಕರೆಂಟ್ ಹೆಂಗೆ ಸಪ್ಲೈ ಮಾಡೋದು? ಇಲ್ಲ... ಹಲವಾರು ವರುಷ, ದಿನಗಳಿಂದ ಹೋರಾಡುತ್ತಿರುವ ಮಹದಾಯಿ ನೀರಿನ ಸಮಸ್ಯೆ ಪರಿಹಾರಕ್ಕೆ ಒಂದು ಕಾಯಂ ಪರಿಹಾರ ಏನಾರ ಕಂಡುಹಿಡಿತಿರಬಹುದಾ?" ಅಂತ ಹಾಗೇ ಮನದಲ್ಲಿ ವಿಚಾರಧಾರೆ ನಡೆದಿತ್ತು!

Ipinion : We did not expect separate religion status to Lingayat

ಪರ್ವಾಗಿಲ್ಲ... ಅಪರೂಪಕ್ಕೆ ಇಂದಾದ್ರು ಗಂಭೀರವಾಗಿ ನಮ್ಮ ರಾಜ್ಯದ ಮಂತ್ರಿಮಂಡಲ ಇವತ್ತಾದ್ರು ಸಭೆ ಸೇರಿ ತೀರ್ಮಾನ ಮಾಡ್ತಿದ್ದಾರಲ್ಲ ಅಂತಾ ಅಂದುಕೊಳ್ತಾನೆ, ಇನ್ನೊಂದು ಕಪ್ ಕಾಫಿ ತಗೊಂಡು ಬಂದು ಕೂತೆ!

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನೋಡ್ತಾ ಇದ್ದರೆ, ಕೊನೆಗೆ ಗೊತ್ತಾಯ್ತು... ಮಂತ್ರಿಮಂಡಲ ತೀರ್ಮಾನ ಮಾಡಿದ್ದು "ಲಿಂಗಾಯ್ತರಿಗೆ ಪ್ರತ್ಯೇಕ ಧರ್ಮ, ಅವರನ್ನು ಹಿಂದುಳಿದವರು ಅಂತ ಮೀಸಲಾಯ್ತಿಗೆ ಪರಿಗಣಿಸಿ" ಅಂತಾ ಕೇಂದ್ರ ಸರ್ಕಾರಕ್ಕೆ ಶಿಫಾರಸು!

ಡಿಬೇಟ್ : ಲಿಂಗಾಯತ ಧರ್ಮದ ವಿಚಾರದಲ್ಲಿ ಲಾಭ ಯಾರಿಗೆ?ಡಿಬೇಟ್ : ಲಿಂಗಾಯತ ಧರ್ಮದ ವಿಚಾರದಲ್ಲಿ ಲಾಭ ಯಾರಿಗೆ?

"ವೀರಶೈವರೇ ಬೇರೆ, ಲಿಂಗಾಯ್ತರೆ ಬೇರೆ... ಹಿಂದೂ ಧರ್ಮದಿಂದ ಪ್ರತ್ಯೇಕಿಸಿ" ಅಂತಾ ಇವರ ತೀರ್ಮಾನ ನೋಡಿ... ನಗಬೇಕೋ, ಅಳಬೇಕೊ ತಿಳಿಯದಾದೆ!

ಇಪ್ಪತ್ತೊಂದನೇ ಈ ಸ್ಮಾರ್ಟ್ ಯುಗದಲ್ಲಿ ವಿಶ್ವದ ದೊಡ್ಡಣ್ಣನಿಗೆ ಸವಾಲು ಹಾಕುತ್ತ... ಹಿರಿಯನಾಗಲು ಹೊರಟಿರುವ ನಮ್ಮ ಭಾರತದಲ್ಲಿ... ನಾವೆಲ್ಲರೂ ಒಂದು, ನಮ್ಮ ಕುಲವೊಂದು.. ನಾವೆಲ್ಲರೂ ಹಿಂದುಳಿದವರಾಗದೆ... ಮುಂದುವರಿದವರಾಗಬೇಕು ಅನ್ನೋ ಕೂಗುಗಳು ಕೇಳುಬರುತ್ತಿರುವ ಸಮಯದಲ್ಲಿ... ತೆಗೆದುಕೊಂಡಿರುವ ಈ ನಿರ್ಣಯ... ನಿಜಕ್ಕೂ ಅನ್ಯಾಯದ ಪರಮಾವಧಿ!

ಹೇಳುವುದು ಮಾತ್ರ... "ವಿಶ್ವಮಾನವ ಬಸವಣ್ಣನವರು... ಸಾರಿದ್ದು "ಕಾಯಕವೇ ಕೈಲಾಸ" ಅಂತ... ನಿಜವಾಗಿ, ಪ್ರಾಮಾಣಿಕವಾಗಿ ಜನರ ಕಷ್ಟ ದುಃಖಗಳಿಗೆ ಶಾಶ್ವತ ಪರಿಹಾರ (ಉದಾ: ಮಹದಾಯಿ ನೀರಿನ ಸಮಸ್ಯೆ, ಕಾವೇರಿ ನೀರಿನ ಸಮಸ್ಯೆ, ರೈತರ, ಕಾರ್ಮಿಕರ... ಮುಂತಾದ) ದೊರೆಕಿಸಿದ್ದರೆ... ಯಾರು ತಾನೇ ಪರಿಹಾರ ಒದಗಿಸಿದವರಿಗೆ ಜೈಕಾರ ಹಾಕಿ "ಕೈ" ಹಿಡಿಯುತ್ತಿದ್ದಿಲ್ಲಾ? ಎಲೆಕ್ಷನ್ ನಲ್ಲಿ ಮತ್ತೆ ಗೆಲ್ಲಿಸ್ತಿದ್ದಿಲ್ಲ? ಅಲ್ವಾ?

ನಾಯಿ ಬಾಲ ಡೊಂಕೆ, ಸರಿಮಾಡೋಕೆ ಹೋಗ್ಬೇಡ ಮಂಕೆ!ನಾಯಿ ಬಾಲ ಡೊಂಕೆ, ಸರಿಮಾಡೋಕೆ ಹೋಗ್ಬೇಡ ಮಂಕೆ!

ಅದು ಬಿಟ್ಟು, ಇಷ್ಟುದಿನ ನಾವೆಲ್ಲಾ ಬಯ್ತಿದ್ದ ಆ ಬ್ರಿಟಿಷ್ ಮಂದಿಯನ್ನ ಮೀರಿಸೋ ಹಾಗೇ... ಒಡೆದು ಆಳುವ ನೀತಿಯನ್ನು ಕಣ್ಣಾರೆ ನೋಡಿ ಸಹಿಸಬೇಕಾಗಿರುವುದು ನಮ್ಮ ನಾಡಿನ ದೌರ್ಭಾಗ್ಯವೇ ಸರಿ...

"ಕೆಲ ಮಂದಿ ಇದಕ್ಕಾಗಿ ಒತ್ತಾಯ, ಚಳವಳಿ ಮಾಡಿರಬಹುದು... ಆದ್ರೆ ಅಧಿಕಾರ ನಡೆಸುವ ಹೊಣೆಗಾರಿಕೆ ಹೊತ್ತವರು... ಇದೆಲ್ಲ ಆಗದ ಕೆಲಸ... ಬೇಕಾದ್ರೆ, ನಿಮ್ಮಲ್ಲೂ ಬಡವರು, ಅನಾಥರು ಇದ್ದರೆ ಅವರಿಗೆ ಸರ್ಕಾರದಿಂದ ಎಲ್ಲ ಹಣಕಾಸಿನ, ವಿದ್ಯಾಭ್ಯಾಸದ ವ್ಯವಸ್ಥೆ ಮಾಡುತ್ತೀವಿ... ಪ್ರತ್ಯೇಕತೆ ಮಾಡದೆ ಎಲ್ಲರೂ ಒಂದಾಗಿ ಇರಬೇಕು ಅಂತ ಬುದ್ದಿ ಹೇಳಿ" ಸಹಾಯ ಮಾಡೋದು ಬಿಟ್ಟು ಬರಲಿರುವ ಎಲೆಕ್ಷನ್ ನಲ್ಲಿ ಹೇಗಾದ್ರು ಮಾಡಿ ಮತ್ತೆ ನಾವೇ ಅಧಿಕಾರಕ್ಕೆ ಬರಬೇಕು... ಜನ ಹೆಂಗಾದ್ರೂ ಹಾಳಾಗ್ಲಿ, ನಮಗೆ ವೋಟ್ ಜಾಸ್ತಿ ಬಂದ್ರೆ ಸಾಕು... ಅಂತ ತೀರ್ಮಾನ ತಗಂಡ ಇವರಿಗೆ ಹೇಗೆ ಹೇಳಬೇಕೋ? ಅಂತ ಬಹುತೇಕ ಮಂದಿಯ ಅಭಿಮತ!

ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ಕರ್ನಾಟಕ ರಾಜ್ಯದ ಮತದಾರರು ಹೆಚ್ಚು ಪರಿಜ್ಞಾನ ಹೊಂದಿದವರು ಅಂತ ಎಲ್ಲರ ಅನಿಸಿಕೆ. ಮತದಾರ ಪ್ರಭುವೇ ಈ ಅನ್ಯಾಯದ ವಿರುದ್ಧ ಸಿಡಿದೆದ್ದು ಮತ ಚಲಾಯಿಸಿ "ರಾಜ್ಯ, ದೇಶವನ್ನು ಮುನ್ನೆಡಸದೆ ಬರೀ ಆಮಿಷ, ರುಷುವತ್ತು" ಕೊಡುವವರಿಗೆ ತಕ್ಕ ಬುದ್ದಿ ಕಳಿಸ್ತಾರೆ ಅಂತ ಇನ್ನೂ ಇದೆ ನಂಬುಗೆ!

"ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ
ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ
ಒಬ್ಬ ಜಂಗಮದ ಅಭಿಮಾನದಿಂದ
ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು
ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ - ಬಸವಣ್ಣ"

English summary
Ipinion : We did not expect separate religion status to Lingayat. Nagaraja Maheswarappa has lambasted Siddaramaiah government for recommending separate religion status for Lingayat. By doing to he has divided the society. Nagaraja thinks, people will teach Congress a lesson in assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X