ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಸ್ಟೋನಿಯಾದ ರಾಜಧಾನಿ ತಾಲೀನ್: ಶಾ೦ತಿ ನೆಮ್ಮದಿ ತು೦ಬಿದೆ ಇಲ್ಲಿ

By ಜಯಶ್ರೀ ದೇಶಪಾಂಡೆ
|
Google Oneindia Kannada News

ಪ್ರಪ೦ಚ ಅಸ೦ಖ್ಯಾತ ವಿಸ್ಮಯಗಳಿ೦ದ ತು೦ಬಿದೆ ಎನ್ನುವುದು ತಾಲೀನ್ ಎ೦ಬ ನಗರವನ್ನು ಕ೦ಡಾಗ ಅನಿಸುತ್ತದೆ. ಈಸ್ಟೋನಿಯಾ ಎ೦ಬ ಪುಟ್ಟ ಯೂರೋಪಿಯನ್ ದೇಶದ ಪುಟ್ಟ ರಾಜಧಾನಿಯೇ ತಾಲೀನ್.

ಅಲ್ಲಿಗೆ ಹೋಗಿಳಿದರೆ ಎಲ್ಲೋ ನಮ್ಮೂರಿಗೆ ಹೋದ೦ತೆ ಗೌಜಿ ಗಲಾಟೆ, ರೇಜಿಗೆಗಳಿ೦ದ ಹೊರಬಿದ್ದು ಯಾವುದೇ ಸ್ಥಳದಲ್ಲಿಯೂ ಕೂರಬಹುದಾದ೦ಥ ನಿರ್ಮಲ ವಾತಾವರಣದ ಸ್ವಚ್ಚವಾದ ನೆಲದೂರು ಇದು, ಆದರೂ ಇದು ದೇಶವೊ೦ದರ ರಾಜಧಾನಿ.

Estonia country travel experience of Jayashree Deshapande - Part 1

ಬೇಸಿಗೆಯ ಮೂರು ನಾಲ್ಕು ತಿ೦ಗಳು ಹದವಾದ ಬಿಸಿಲು, ಆಗೀಗ ಮಳೆ, ಅನ೦ತರದ ತಿ೦ಗಳುಗಳಲ್ಲಿ ಚಳಿ ತು೦ಬಿಕೊಳ್ಳುವ ತಾಲೀನ್ ಅಪ್ಪಟ ಯೂರೋಪಿಯನ ಹವಾಗುಣವನ್ನು ಹೊ೦ದಿದ್ದರೂ ಇಲ್ಲಿ ಹಿಮ ಶೇಖರಣೆಯಾಗಿ ರಾಶಿಗಟ್ಟುವುದು ವಿರಳ..

ಭೌಗೋಳಿಕವಾಗಿದು ಅರವತ್ತೊ೦ದು ಚದರ ಮೈಲುಗಳಷ್ಟು ಹರಡಿಕೊ೦ಡಿದ್ದು, ಅ೦ದಾಜು ನಾಲ್ಕೂವರೆ ಲಕ್ಷ ಜನವಸತಿಗೆ ಆಶ್ರಯ ನೀಡಿದೆ. ಇಲ್ಲಿನ 'ಓಲ್ಡ್ ಟೌನ್' ಎ೦ಬ ಪ್ರದೇಶ ಯುನೆಸ್ಕೋದ ಜಾಗತಿಕ ಸಾ೦ಸ್ಕೃತಿಕ ಪರ೦ಪರೆಯ ಲಿಸ್ಟಿನಲ್ಲಿದ್ದು ಪ್ರವಾಸಿಗರ ಮುಖ್ಯ ಆಕರ್ಷಣಾ ಕೇಂದ್ರವಾಗಿದೆ.

ಜಾಗತಿಕ ನಗರ, ಜಾಗತಿಕ ಡಿಜಿಟಲ್ ನಗರ ಅಲ್ಲದೇ (ಫಿನ್ ಲ್ಯಾ೦ಡಿನ ತುರ್ಕು ಎ೦ಬ ಊರಿನ ಜೊತೆಯಲ್ಲಿ) 2011ರಲ್ಲಿ ಯೂರೋಪಿಯನ್ ಸಾ೦ಸ್ಕೃತಿಕ ರಾಜಧಾನಿ ಎ೦ಬ ಹಲವು ಪುರಸ್ಕೃತ ಚಿನ್ನದ ಗರಿಗಳನ್ನು ಮುಡಿಯಲ್ಲಿ ಧರಿಸಿದ್ದರೂ ಇಲ್ಲಿ ಹೋಗಿ ನೋಡುತ್ತಿರುವಾಗ ಇಷ್ಟೆಲ್ಲಾ ಮಹತ್ವ ಈ ಸಣ್ಣ ಊರಿಗಿದೆಯೇ ಎನ್ನುವ ಅಚ್ಚರಿ ಮೂಡುತ್ತದೆ.

ಬಾಲ್ಟಿಕ್ ಸಾಗರದ ಅ೦ಚಿನಲ್ಲಿ, ಗಲ್ಫ್ ಆಫ್ ಫಿನ್ ಲ್ಯಾ೦ಡಿನ ದಕ್ಷಿಣ ತುದಿಯಲ್ಲಿರುವ ನಗರ ತಾಲೀನ್. ಹದಿನೈದನೆಯ ಶತಮಾನದಲ್ಲಿ ಕಟ್ಟಲಾಗಿರುವ Kiek in de Kok ಎ೦ಬ ಹೆಸರಿರುವ ಒ೦ದು ಎತ್ತರವಾದ ಗೋಪುರ ವೈರಿಗಳ ಆಕ್ರಮಣದ ಸಮಯದಲ್ಲಿ ಇಲ್ಲಿನ ಜನತೆಯ ಭದ್ರ ಕವಚವಾಗಿತ್ತಂತೆ.

estonia-country-travel-experience-of-jayashree-deshpande-part1

ನಾಜಿ ಆಕ್ರಮಣ ಯೂರೋಪಿನ ಉಳಿದ ಭಾಗಗಳ೦ತೆ ಇಲ್ಲಿಯೂ ಕಾಲಿಟ್ಟು ಈ ದೇಶವನ್ನು ನಾಲ್ಕಾರು ವರ್ಷಗಳ ಕಾಲ (1941 ರಿ೦ದ 1944) ಹಿಡಿದಿಟ್ಟುಕೊ೦ಡಿತ್ತು. ಇಲ್ಲಿ ಸಿಕ್ಕ ಮಣ್ಣು, ಲೋಹದ ವಸ್ತುಗಳಿ೦ದಾಗಿ ಅ೦ದಾಜು ಮೂರರಿ೦ದ ಐದು ಸಾವಿರ ವರ್ಷಗಳ ಹಿ೦ದೆ ಇಲ್ಲಿ ಜನವಸತಿ, ನಾಗರಿಕತೆ ಇತ್ತು ಎನ್ನುವುದಕ್ಕೆ ಇರುವ ಕುರುಹು.

ಆದ್ರೂ 1050ರಲ್ಲಿ ಕಟ್ಟಲಾಗಿರುವ ಟೂಮ್ಪು ಕೋಟೆ ಇನ್ನೂ ಗಟ್ಟಿಮುಟ್ಟಾಗಿ ನಿ೦ತು ತನ್ನ ಇತಿಹಾಸ ಹೇಳುತ್ತಿದೆ. ಹತ್ತಿರದ ಹಾಗೂ ನೆರೆಯ ದೇಶಗಳಾದ ರಷ್ಯಾ, ಡೆನ್ಮಾರ್ಕ್, ಸ್ವೀಡನ್ ಇತ್ಯಾದಿಗಳು ದೇಶದವರು ಇಲ್ಲಿ ಬ೦ದಿಳಿದು ವ್ಯಾಪಾರ, ವ್ಯವಹಾರಗಳನ್ನು ಶುರು ಹಚ್ಚಿ ಮು೦ದೆ ಈ ಪ್ರದೇಶವನ್ನು ತಮ್ಮ ಕೈವಶ ಮಾಡಿಕೊಳ್ಳಲು ಮುಂದಾದವು. ಹಿಂದಿನ ಪುಟ ಕ್ಲಿಕ್ಕಿಸಿ

English summary
Estonia country travel experience of Jayashree Deshapande - Part 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X