ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆ ಪ್ರಶಸ್ತಿಗೆ ಭಾಜನರಾದ ಪ್ರಕಾಶ್ ಪಯ್ಯಾರ್

By Prasad
|
Google Oneindia Kannada News

ಅಬುಧಾಬಿ, ಅ. 31 : ಅಬುಧಾಬಿ ಕರ್ನಾಟಕ ಸಂಘ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದೇಶದಲ್ಲಿ ಕನ್ನಡ ಸೇವೆ ಮಾಡಿದವರನ್ನು ಗುರುತಿಸಿ ಗೌರವಿಸಿ ನೀಡಲಾಗುವ ಪ್ರತಿಷ್ಠಿತ ವರಕವಿ ಡಾ. ದ.ರಾ.ಬೇಂದ್ರೆ ಪ್ರಶಸ್ತಿಗೆ ಕವಿ, ರಂಗಕರ್ಮಿ ಹಾಗೂ ಸಂಘಟಕ ಪ್ರಕಾಶ್ ರಾವ್ ಪಯ್ಯಾರ್ ಅವರು ಆಯ್ಕೆ ಗೊಂಡಿದ್ದಾರೆ.

ಪ್ರಶಸ್ತಿ ಪ್ರದಾನವು ನವೆಂಬರ್ 7, ಶುಕ್ರವಾರ ಮುಂಜಾನೆ 10.30 ಗಂಟೆಗೆ ಅಬುಧಾಬಿಯ ಇಂಡಿಯನ್ ಸೊಷಲ್ ಎಂಡ್ ಕಲ್ಚರಲ್ ಸೆಂಟರ್ ನ ಸಭಾಗೃಹದಲ್ಲಿ ನೆರವೇರಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಡೆಯಲಿದೆ. [ನಾಡಗೀತೆ ಓದಿರಿ, ಎದೆಯುಬ್ಬಿಸಿ ಕೇಳಿರಿ]

DaRa Bendre award to Prakash Rao Payyar

ಸಮಾರಂಭದ ಅಧ್ಯಕ್ಷತೆಯನ್ನು ಅಬುಧಾಬಿಯ ಉದ್ಯಮಿ ಪದ್ಮಶ್ರೀ ಡಾ. ಬಿ.ಅರ್.ಶೆಟ್ಟಿ ಅವರು ವಹಿಸಲಿದ್ದು, ಯು.ಇ.ಎ.ಯಲ್ಲಿ ಭಾರತೀಯ ರಾಯಭಾರಿ ಟಿ.ಪಿ.ಸೀತಾರಾಮ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. [ಯಾರ್ಯಾರಿಗೆ ರಾಜ್ಯೋತ್ಸವ ಪ್ರಶಸ್ತಿ]

ಹಿರಿಯ ಪತ್ರಕರ್ತ ಉದಯವಾಣಿ ದಿನ ಪತ್ರಿಕೆಯ ಬ್ಯೂರೋ ಚೀಫ್ ಮನೋಹರ ಪ್ರಸಾದ್ ಅವರು ಗೌರವ ಅತಿಥಿಗಳಾಗಿರುವರು ಎಂದು ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವರು. ಪ್ರಕಾಶ್ ರಾವ್ ಪಯ್ಯಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಕನ್ನಡ ಸೇವೆ ಹೀಗೆಯೇ ಮುಂದುವರಿಯಲಿ.

English summary
Kannada Poet, theatre person Prakash Rao Payyar has been selected for prestigious Dattatreya Ramachandra Bendre award, instituted by Abudhabi Kannada Sangha. The award ceremony will be held on November 7, 2014 at Abudhabi Indian Social and Cultural Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X