ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಅತೀ ಚಳಿ... ಅಲ್ಲಲ್ಲ ಮಾರಕ ಚಳಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಅಮೆರಿಕದಲ್ಲಿ ಅತೀ ಚಳಿ ... ಅಲ್ಲಲ್ಲ ಮಾರಕ ಚಳಿ . . . ಅಂದ್ರೆ ಅಮೇರಿಕದ ಸಕಲ ರಾಜ್ಯಗಳಲ್ಲಿ ಚಳಿಯೇ? ಅಲ್ಲ! ಅಮೇರಿಕದ midwest ರಾಜ್ಯಗಳು ಈ ಭೀಕರ ಚಳಿಗೆ ನಲುಗಿವೆ. ಇದು ಕೇವಲ ಗಡಗಡ ಅಂತ ನಡುವೆ ಚಳಿ ಅಲ್ಲ. ನಿಂತಲ್ಲೇ ಹೆಪ್ಪುಗಟ್ಟಿ ಹೋಗಬಹುದಾದ ಚಳಿ. ಹೆಚ್ಚಿಗೆ ಸಮಯ ಹೊರಗೆ ಇದ್ದಲ್ಲಿ Frostbite ಆಗುವುದು ಖಚಿತ. ಇನ್ನೆಷ್ಟರ ಮಟ್ಟಿಗೆ ಚಳಿ ಎಂದರೆ ಕಾರಂಜಿಯಲ್ಲಿನ ನೀರು ಹರಿಯದೇ ನಿಂತಲ್ಲೇ ನಿಂತಿವೆ ಎನ್ನುವಷ್ಟು. ಉಕ್ಕಿದಂತೆಯೇ ನಿಂತಿದೆ. ನದಿಗಳು ಹೆಪ್ಪುಗಟ್ಟಿವೆ. ಜಲಚರಗಳ ಪರಿಸ್ಥಿತಿ ಬಗ್ಗೆ ಹೇಳಲಾಗದು.

ಅಮೆರಿಕದ ಚಳಿಗಾಳಿ ಸುಂದರ ಮಾತ್ರವಲ್ಲ, ಭೀಕರ ಕೂಡ! ಅಮೆರಿಕದ ಚಳಿಗಾಳಿ ಸುಂದರ ಮಾತ್ರವಲ್ಲ, ಭೀಕರ ಕೂಡ!

ಅಮೆರಿಕದಲ್ಲಿ ತಾಪಮಾನವನ್ನು Fahrenheit'ನಲ್ಲಿ ಅಳೆಯುವುದು ನಿಮಗೆಲ್ಲಾ ಗೊತ್ತೇ ಇದೆ. ಇಂದು ಮಿಡ್ವೆಸ್ಟ್ ರಾಜ್ಯಗಳ ಹಲವಾರು ಕಡೆ ತಾಪಮಾನ ಮೈನಸ್ 20ರಿಂದ ಮೈನಸ್ 40ರ ವರೆಗೂ ಇದೆ. ಇದರೊಂದಿಗೆ ಗಾಳಿಯಲ್ಲಿನ ಥಂಡಿಯೂ ಸೇರಿದರೆ ಮೈನಸ್ 40ರಿಂದ ಮೈನಸ್ 50ವರೆಗೂ ಹೋಗಬಹುದು. ಇದರ ಭೀಕರತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ, ಮೈನಸ್ 40 ಇರುವ ಹೊರಗಿನ ವಾತಾವರಣದಲ್ಲಿ ನೂರು ಡಿಗ್ರಿ ತಾಪಮಾನದ ಕುದಿಯುವ ನೀರನ್ನು ಚೆಲ್ಲಿ. ಚೆಲ್ಲಿದ ನೀರು ಕೆಳಕ್ಕೆ ಬೀಳುವಷ್ಟರಲ್ಲಿ ಹೆಪ್ಪುಗಟ್ಟಿರುತ್ತದೆ. ಇಲಿನಾಯ್ ರಾಜ್ಯದಲ್ಲಿ ವಾಸವಾಗಿರುವ ಸ್ನೇಹಿತ ರಾಮಪ್ರಸಾದ್ ಅವರು ವಿಡಿಯೋ ಮಾಡಿ ಫೇಸ್ಬುಕ್'ನಲ್ಲಿ ಹಾಕಿದ್ದಾರೆ.

Cold wave disrupts normal life in America

ಈ ರಾಜ್ಯಗಳ ವಿಮಾನ ನಿಲ್ದಾಣದಿಂದ ದೇಶಾದ್ಯಂತ ಹೊರಡುವ ವಿಮಾನಗಳು ಈಗ ನಿಂತಲ್ಲೇ ನಿಂತಿವೆ. Flight Cancellations ಅಂಬೋದು ನಿತ್ಯಸತ್ಯವಾಗಿದೆ. ಮನೆಯ ಹೊರಗೆ ನಿಲ್ಲಿಸಿರುವ ಕಾರಿನ ಗಾಜಿನ ಮೇಲೆ ಗಟ್ಟಿಯಾದ ice ಕಟ್ಟಿದ್ದು ಅದನ್ನು cleanup ಮಾಡುವ ತನಕ ಗಾಡಿಯನ್ನು ಓಡಿಸುವ ಹಾಗೆಯೇ ಇಲ್ಲ. ಇನ್ನು ರಸ್ತೆಯ ಮೇಲಿನ sleet ಬಗ್ಗೆ ಹೇಳುವ ಹಾಗೇ ಇಲ್ಲ. ಕಾಲಿಟ್ಟರೆ ನಿಯಂತ್ರಣಕ್ಕೆ ಸಿಗದಂತೆ ಜಾರಿ ಹೋಗಿರುತ್ತೇವೆ. ನಾವು ನಡೆಯುವ ವೇಗಕ್ಕೇ ನಮಗೆ ನಿಯಂತ್ರಣ ತಪ್ಪುತ್ತೆ ಅಂದರೆ ಗಾಡಿಗಳು ಚಲಿಸುವಾಗ ಈ ರೀತಿ ಆದಾಗ ಪರಿಸ್ಥಿತಿ ಹೇಗಿರುತ್ತೆ ಅಂತ ಊಹಿಸಿಕೊಳ್ಳಿ.

ನಾವು ಈವರೆಗೆ ಕೇಳರಿಯದ ಮತ್ತೊಂದು ಸೋಜಿಗ ಇದೆ. ರೈಲುಗಾಡಿ ಓಡುವ trackಗಳು ಈ ಥಂಡಿಗೆ contract / shrink ಆಗುತ್ತದೆ. ಅವಘಡ ಸಂಭವಿಸಬಹುದು ಅಂತಾಗಿ trackಗಳ ಮಧ್ಯೆ ಬೆಂಕಿಯನ್ನು ಹಾಕಿ ಕಬ್ಬಿಣದ trackಗಳನ್ನು ಸಹಜ ಸ್ಥಿತಿಗೆ ತರುತ್ತಾರೆ.

Cold wave disrupts normal life in America

ಓಡಾಡುವ ಹಾಗೆಯೇ ಇಲ್ಲ ಎಂದ ಮೇಲೆ ಶಾಲೆಗಳ ನಡೆಯುವುದಾದರೂ ಹೇಗೆ? ಹಾಗಾಗಿ ಮಕ್ಕಳಿಗೆ ಕಡ್ಡಾಯ ರಜಾ. ಕೆಲಸಕ್ಕೆ ಹೊರಗೆ ಹೋಗುವ ಗಂಡ / ಹೆಂಡತಿ ಅಥವಾ ಇಬ್ಬರೂ ಮನೆಯಿಂದಲೇ ಕೆಲಸ ಮಾಡಬೇಕಾಗುತ್ತದೆ. ಆದರೆ ಎಲ್ಲರಿಗೂ ಈ ರೀತಿ ಸೌಲಭ್ಯ ಇರುವುದಿಲ್ಲ. ಹೊರಗೆ ಹೋಗಲೇಬೇಕು ಎಂಬ ನಿಟ್ಟಿನಲ್ಲಿ snow shovel ಮಾಡುವ ಅಗತ್ಯ ಬೀಳುತ್ತದೆ. ಇಂಥಾ ಭೀಕರ ವಾತಾವರಣದಲ್ಲಿ snow shovel ಮಾಡುವ ನಿಟ್ಟಿನಲ್ಲಿ ಥಂಡಿ ತಾಳಲಾರದೇ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಅಥವಾ ಥಂಡಿ ಗಾಳಿಗೆ ಸಿಲುಕಿ ರೋಗಗ್ರಸ್ತರಾದವರೂ ಇದ್ದಾರೆ.

Cold wave disrupts normal life in America

ಈಗಿನ ಈ ಭೀಕರ ವಾತಾವರಣಕ್ಕೆಂದೇ ದೇಶದ ಹನ್ನೊಂದು ರಾಜ್ಯಗಳಲ್ಲಿ postal service ಕೂಡಾ ಬಂದ್ ಆಗಿದೆ. ನಮ್ಮಲ್ಲಿ ಹಲವು ವರ್ಷಗಳ ಹಿಂದೆ ಅಂಚೆಯ ವ್ಯಾನ್ ಒಂದು ಐಸ್ ಮೇಲೆ ಓಡುವಾಗ ಬ್ರೇಕ್ ಹಾಕಿ ನಿಯಂತ್ರಣ ತಪ್ಪಿ, ನಮಗೆ ಪರಿಚಯವಿದ್ದ ಪಂಜಾಬಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟರು. ಅಂಚೆ ವಾಹನವಷ್ಟೇ ಅಲ್ಲದೆ, trash collectionಗೆ ಬರುವ ವಾಹನ ಕೂಡ ರಸ್ತೆಗೆ ಇಳಿಯುವುದಿಲ್ಲ. ಎಷ್ಟೋ ಕೆಲಸಗಳು ಸ್ಥಗಿತ.

ಅಮೆರಿಕದ ಅಸಾಧ್ಯ ಚಳಿಗಾಳಿಯನ್ನು ತಡೆಯಲು 10 ಉಪಯುಕ್ತ ಟಿಪ್ಸ್ಅಮೆರಿಕದ ಅಸಾಧ್ಯ ಚಳಿಗಾಳಿಯನ್ನು ತಡೆಯಲು 10 ಉಪಯುಕ್ತ ಟಿಪ್ಸ್

ಮನೆಮನೆಗಳಲ್ಲೂ heating system ಇರುತ್ತದೆ ಅಂತ ನಿಮಗೆ ಗೊತ್ತೇ ಇದೆ. ಇಂಥಾ ವಾತಾವರಣದಲ್ಲಿ ಈ heating ಮಷೀನ್ ಮೇಲೆ ಹೆಚ್ಚು ಒತ್ತಡ ಬಿದ್ದು ಕೆಟ್ಟೇ ಹೋಗಬಹುದಾದ ಸನ್ನಿವೇಶ ಎದುರಾಗುತ್ತದೆ. ಆ ಸಮಯದಲ್ಲಿ ಮನೆಯೊಳಗೇ ಇರುವುದು ಖಂಡಿತ ಕ್ಷೇಮವಲ್ಲ. ಥಂಡಿಗೆ ಪ್ರಾಣ ಹೋದರೂ ಆಶ್ಚರ್ಯವಿಲ್ಲ. ಕೆಲವೊಮ್ಮೆ power cut ಕೂಡ ಆಗಬಹುದು. ಆಗ ಪರಿಸ್ಥಿತಿ ಇನ್ನೂ ಘೋರ. ದಿನದ ಇಪ್ಪತ್ತನಾಲ್ಕೂ ಘಂಟೆ heater ಓಡುವಾಗ ಲೈಟ್ ಬಿಲ್ ಚೆನ್ನಾಗಿಯೇ ಬರುತ್ತದೆ.

Cold wave disrupts normal life in America

ಅಮೆರಿಕದಲ್ಲೂ ನಿರಾಶ್ರಿತರು ಇದ್ದಾರೆ ಅಂತ ಗೊತ್ತಲ್ಲವೇ? ಇಂಥವರು ಈ ವಾತಾವರಣದಲ್ಲಿ ಬೀದಿಗಳಲ್ಲಿ ಒಂದು ಘಂಟೆಗೂ ಹೆಚ್ಚು ಬದುಕಲಾರರು. ಇಂಥವರಿಗೆಂದೇ ವಸತಿಯನ್ನೂ ಸರಕಾರ ಕಲ್ಪಿಸುತ್ತದೆ.

ಶರದ್ ಋತು ಆಗಮನ, ದೇಶದ 10 ಅತಿ ಹೆಚ್ಚು ಶೀತ ಪ್ರದೇಶಗಳಿವುಶರದ್ ಋತು ಆಗಮನ, ದೇಶದ 10 ಅತಿ ಹೆಚ್ಚು ಶೀತ ಪ್ರದೇಶಗಳಿವು

ರಾಜ್ಯದ ರಾಜ್ಯಪಾಲರು ವಿನಂತಿಸಿಕೊಳ್ಳುವುದೇ 'ಅವಶ್ಯಕತೆ ಇಲ್ಲದಿದ್ದರೆ ಹೊರಗೆ ಅಡಿಯಿಡಬೇಡಿ. ನಿಮಗೆ ತೊಂದರೆಯಾದರೆ ನಿಮ್ಮ ಸಹಾಯಕ್ಕೆ ಪೊಲೀಸರು, ಅಗ್ನಿಶಾಮಕದಳದವರು ಅಥವಾ ವೈದ್ಯಕೀಯ ಸೌಲಭ್ಯ ಒದಗಿಸುವವರು ಧಾವಿಸಬೇಕಾಗುತ್ತದೆ. ಆದರೆ ಅವರೂ ಮನುಷ್ಯರು ಎಂದು ಮರೆಯದಿರಿ' ಅಂತ. ಈ ಸಮಯದಲ್ಲಿ ಸಾಕುಪ್ರಾಣಿಗಳನ್ನೂ ಸರಿಯಾಗಿ ನೋಡಿಕೊಳ್ಳಬೇಕಾದ್ದು ಅವಶ್ಯಕ. ಅವುಗಳಿಗೂ frostbite ಆಗುತ್ತದೆ.

Cold wave disrupts normal life in America

polar vortex ಎಂಬ ನಾಮ ಹೊತ್ತ ಈ ವಿಶಿಷ್ಟ ವಾತಾವರಣ ಹೊಸತೇನಲ್ಲ. ಅಂದೂ ಇತ್ತು, ಇಂದು ಇದೆ, ಮುಂದೆಯೂ ಇರುತ್ತದೆ. ಇಂಥಾ ಹವಾಮಾನವನ್ನು ತಡೆಗಟ್ಟುವುದು ಹೇಗೆ ಎಂದು ಯೋಚಿಸುವ ಬದಲು ಹೇಗೆ ಸುರಕ್ಷತೆಯಿಂದ ಇರಬೇಕು ಎಂದು ಕಲಿಯಬೇಕು. ಈ ಲೋಕ ಸೃಷ್ಟಿಯಾಗಿರೋದು ಬರೀ ನಮಗಾಗಿ ಅಲ್ಲ. ಏನಂತೀರಾ?

English summary
Presently entire midwest America is gripped by extreme cold weather, which has caused due to polor vortex. The chill is simply unbearable and many people are struggling to lead a normal life. A write up by Srinath Bhalle from Richmond.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X