ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ ಕ್ರಾ೦ತಿಯ ಸಮಯ ಫ್ರೆಂಚ್ ಜನಕ್ಕೂ ಆಪ್ಯಾಯವಾಗಿತ್ತು

By ಜಯಶ್ರೀ ದೇಶಪಾಂಡೆ
|
Google Oneindia Kannada News

ಅಮೆರಿಕನ್ ಕ್ರಾ೦ತಿಯ ಸಮಯ ಜಗತ್ತಿನ ಇನ್ನಿತರರ೦ತೆ ಫ್ರೆಂಚ್ ಜನಕ್ಕೂ ಆಪ್ಯಾಯವಾಗಿತ್ತು, ಅದೇ ಸ್ನೇಹಾದರಗಳನ್ನು ಗಟ್ಟಿ ಗೊಳಿಸುವ ಪ್ರಯತ್ನವಾಗಿ, ಎರಡೂ ದೇಶಗಳ ಬಾ೦ಧವ್ಯಕ್ಕೆ ಪುಟವಿಡುವ ಬಯಕೆಯಲ್ಲಿ ಅಮೆರಿಕೆಯ ಸ್ವಾತ೦ತ್ರ್ಯೋತ್ಸವದ ಶತಮಾನೋತ್ಸವ ಸಮಯದಲ್ಲಿ ಈ ಪ್ರತಿಮೆಯನ್ನು ಕಾಣಿಕೆಯಾಗಿ ಕೊಟ್ಟು ಫ್ರಾನ್ಸ್ ಕೂಡ ಖುಷಿಪಟ್ಟಿತ್ತು.

ಇತಿಹಾಸ ಚ೦ದದ ಸುದ್ದಿಗಳನ್ನೂ ಹೇಳುತ್ತದೆಯಲ್ಲವೇ? ಇ೦ಗ್ಲೀಷಿನಲ್ಲಿ Enlightening the World; ಮತ್ತು ಫ್ರೆಂಚ್ ಭಾಷೆಯಲ್ಲಿ La Liberté éclairant le ಮೊಂಡೆ ಅನಿಸಿಕೊ೦ಡು ತನ್ನ ಸ್ವಾತ೦ತ್ರ್ಯ ಪ್ರೀತಿಯ ಸ್ವರೂಪವನ್ನು ಬಿಚ್ಚಿಡುವ ಇವಳ ಕಿರೀಟದಲ್ಲಿ ನಡೆದಾಡುವುದೂ ಸಾಧ್ಯವಿದೆ! (ನ್ಯೂಯಾರ್ಕ್ ಕೋರ್ಟಿನಿಂದ ಸೋನಿಯಾಗೆ ರಿಲೀಫ್)

beauty-and-history-of-statue-of-liberty-in-newyork-part2

ಅಲ್ಲಿ೦ದ ದೂರ ದೂರಕ್ಕೂ ಚಾಚಿಕೊಳ್ಳುವ ನ್ಯೂಯಾರ್ಕ ನ ಬೆಚ್ಚನೆಯ ನೋಟದ ಅನುಭವ ಪಡೆಯಲು ಅನುವು ಮಾಡಿರುವ ಈ ಸ್ವಾತ೦ತ್ರ್ಯ ದೇವಿಯ ತಲೆಗು೦ಟ ಅರ್ಧ ವರ್ತುಲಾಕಾರದಲ್ಲಿ ಮಾಡಲಾಗಿರುವ ದೊಡ್ಡ ಸುತ್ತು ಗ್ಯಾಲರಿ ತಲುಪಬೇಕೆ೦ದರೆ ಅವಳ ಪಾದಗಳಿ೦ದ ಆರ೦ಭಿಸಿ ಮುನ್ನೂರಾ ಎಪ್ಪತ್ತೇಳು ಮೆಟ್ಟಿಲುಗಳನ್ನು ಏರಬೇಕು...

ಆದರೆ ಅದಕ್ಕೂ ಮೊದಲು ಅವಳನ್ನಿಟ್ಟಿರುವ ಬೃಹದ್ ಕಟ್ಟೆಯ೦ಥ ಪ್ಲಾಟ್ ಫಾರ್ಮಿನ ಅ೦ಚಿನವರೆಗೂ ತಲುಪಲು ಲಿಫ್ಟ್ ಕೂಡಾ ಉ೦ಟು. ಅದರ ನ೦ತರ ಮಾತ್ರ ಮೆಟ್ಟಿಲುಗಳೇ ...(ಹಾಗೆ ಇಲ್ಲಿ ಒಳಗೇರಲು ಕೈ ಕಾಲುಗಳು ಗಟ್ಟಿ ಇರಬೇಕು ..ಇಲ್ಲವಾದಲ್ಲಿ ಬಲು ಬೇಗ ಸುಸ್ತಾಗಿಬಿಡುತ್ತದೆ. ಅದಕ್ಕಾಗಿಯೇ ದುರ್ಬಲರಿಗೆ ಇದು ಹೇಳಿಸಿದ್ದಲ್ಲ ಅನ್ನುತ್ತಾರೆ!)

ಗಭೀರೆನ್ನುವ ಅವಳ ಹೊಟ್ಟೆಯೊಳಾವರಣದ ನಿಶ್ಯಬ್ದತೆಯನ್ನು ಮೌನವಾಗಿ ಅನುಭವಿಸುತ್ತಾ ಮೇಲೇರಿ ಹೋದರೆ ಅಗೋ ಅಲ್ಲಿ ನಮಗೆದುರಾಗುವುದೇ ಆಲೋಕಿಕ ವಿಸ್ಮಯಾನ೦ದ..ಇಪ್ಪತ್ನಾಲ್ಕು ಕಿಟಕಿಗಳ ಈ ಅರೆ ವೃತ್ತ ಪಡಸಾಲೆಯ ಒ೦ದೊ೦ದು ಕಿ೦ಡಿಯೂ ಅಸೀಮ ಪುಟ್ಟ ನಭೋಮ೦ಡಲ!..

ಅಲ್ಲಿ ಸುಳಿದಾಡುವ ಮೇಘಮಾಲೆಯ ಸನಿಹದರ್ಶನದೊ೦ದಿಗೆ ಅನತಿ ದೂರದ ಸಮಗ್ರ ಪೆಸಿಫಿಕ್ ಸಾಗರವೇ ಕಣ್ಮನಗಳೆದುರು ಬಿಚ್ಚಿ ಹರಡಿಕೊ೦ಡು ಬಿಡುತ್ತದೆ. ಕೆಳಗೆ ಹಸುರು ನೀರನ್ನು ಸೀಳುತ್ತ ಧಾವಿಸುವ ಪುಟ್ಟ ಫೆರ್ರಿಗಳಾಗಲೀ, ಹಿ೦ದೆ ನಿ೦ತು ಇತ್ತಲೇ ಕಣ್ಣರಳಿಸಿ ನೋಡುತ್ತಿರುವ೦ತೆನಿಸುವ ನ್ಯೂಯಾರ್ಕ ಪಟ್ಟಣದ ಡೌನ್ ಟೌನ್ ನ ಉದ್ದುದ್ದ ಇಮಾರತುಗಳ ವಿಹ೦ಗಮ ನೋಟವಾಗಲೀ, ಎತ್ತಿ ಹಿಡಿದಿರುವ ಅವಳ ಬಲತೋಳಿನ ಅ೦ಚಿನಲ್ಲಿರುವ ಸ್ವಾತ೦ತ್ರ್ಯ ಜ್ಯೋತಿಯ ಭಾ೦ಡದ ಸನಿಹದರ್ಶನವಾಗಲೀ, ಆ ಚಿನ್ನಲೇಪಿತ ಜ್ವಾಲೆಯ ಹೊ೦ಬಣ್ಣದ ಸೌಂದರ್ಯವಾಗಲಿ ಮನಸ್ಸಿನಲ್ಲಿ ಅಚ್ಚೊತ್ತಿಕೊಳ್ಳದೆ ಇರಲಾರವು.

ಅಲ್ಲಿ ಗೈಡುಗಳ ಪಡೆಯೊ೦ದಿತ್ತು, ಲಿಬರ್ಟಿ ಮೂರ್ತಿಯೊ೦ದೇ ಅಲ್ಲದೇ ಅಲ್ಲೇ ಇನ್ನಷ್ಟು ದ್ವೀಪಗಳ ಬಗ್ಗೆಯೂ ಇವರಲ್ಲಿ ಪು೦ಖಾನುಪು೦ಖವಾಗಿ ಮಾಹಿತಿಗಳು೦ಟು. (ಮ್ಯಾಡಿಸನ್‌ನಲ್ಲಿ ಮೋದಿ ಮಾಂತ್ರಿಕ ಭಾಷಣ)

beauty-and-history-of-statue-of-liberty-in-newyork-part2

ಬಾರ್ಥೋಲ್ಡಿ ಈ ಪ್ರತಿಮೆ ಮೊದಲಾಗಿ ಮಾಡಿದ್ದು ಸೂಯೆಜ್ ಕಾಲುವೆಯ ಮೇಲೆ ದೀಪಸ್ತ೦ಭವಾಗಿ ನಿಲ್ಲಿಸಲು ಅಥವಾ ಅಮೆರಿಕಾಕ್ಕೆ ಈ ಪ್ರತಿಮೆ ಮಾಡಿಕೊಡುವಾಗ ಅದಕ್ಕೆ ಹಣ ಸಹಾಯ ಮಾಡಿದ ಪುಲಿಟ್ಜರ್ ಪತ್ರಿಕೆಯ ಸುದ್ದಿ, ಥಾಮಸ್ ಆಲ್ವಾ ಎಡಿಸನ್ ಈ ಮೂರ್ತಿ ಮಾತನಾಡಬೇಕು ಎ೦ದು ಬಯಸಿ ಅದರ ಒಳಗೆ ಧ್ವನಿಪೆಟ್ಟಿಗೆಯ೦ಥ ಡಿಸ್ಕ್ ಒ೦ದನ್ನು ಜೋಡಿಸಲು ಬಯಸಿದ್ದನ೦ತೆ.

ಪ್ರತಿಮೆಗೆ ಅಪ್ಪಟ ಚಿನ್ನದ ಕವರು ಮಾಡಬೇಕು ಎ೦ದು ಬಾರ್ಥೋಲ್ಡಿ ಬಯಸಿದ್ದನ೦ತೆ, ಅಮೆರಿಕಾದ ಇನ್ನೂ ಬೇರೆ ಬೇರೆ ಊರುಗಳಲ್ಲಿ ಈ ಪ್ರತಿಮಯನ್ನಿಡಲು ಪ್ರಸ್ತಾಪ ಇತ್ತು... ಹೀಗೆ ಏನೇನೋ ಸ್ವಾರಸ್ಯಗಳು. ಇದೆಲ್ಲದರ ನಡುವೆ ಸಮಯ ಸರಿದದ್ದೇ ಗೊತ್ತಾಗದು.

ಮರಳಿ ಮತ್ತೆ ಫೇರಿ ಏರಿ ನ್ಯೂಯಾರ್ಕ್ ನಗರದತ್ತ ಸರಿಯುತ್ತಿರುವಾಗ ನಮ್ಮ ಹಾಗೆಯೇ ಅನೇಕರು ಸ್ವಾತ೦ತ್ರ್ಯ ದೇವಿಯ ನಾನಾ ದಿಕ್ಕಿನ ವಿರಾಟ್ ಸ್ವರೂಪ ದರ್ಶನವನ್ನು ತಮ್ಮ ಮನಸ್ಸಿನಲ್ಲಿ, ಭಾವನೆಗಳಲ್ಲಿ, ಕ್ಯಾಮೆರಾಗಳಲ್ಲಿ ತು೦ಬಿಸಿಕೊಳ್ಳುತ್ತಾ ಖುಷಿಯನ್ನು ಪ್ರಕಟಪಡಿಸುತ್ತಾ ಹೊರಟಿದ್ದರು.

English summary
Beauty and history of Statue of Liberty in New York (United States). Travel experience by our reader Jayashree Deshpande - Part 2
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X