ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹದಿಮೂರನೇ ವಯಸ್ಸಲ್ಲಿ ಉಪೇಂದ್ರ ಕಂಡ ಕನಸು

By ವೈಶಾಲಿ ಹೆಗಡೆ, ಬಾಸ್ಟನ್
|
Google Oneindia Kannada News

ವೈಶಾಲಿ : ನಮಸ್ಕಾರ ಉಪೇಂದ್ರ ಅವ್ರೆ. ಮೊದಲಿಗೆ ಬಾಸ್ಟನ್ನಿನ ಸಮಸ್ತ ಕನ್ನಡಿಗರ ಪರವಾಗಿ ಮತ್ತೊಮ್ಮೆ ಸ್ವಾಗತ. ನಿಮ್ಮ ಅಮೆರಿಕೆಯ ಸುತ್ತಾಟದ ದಾರಿಯಲ್ಲಿ ನಮ್ಮನ್ನೂ ನೋಡಲು ಬಂದಿದ್ದಕ್ಕೆ ತುಂಬಾ ಖುಷಿ. ನೀವು ಕಾಶೀನಾಥ್ ಅವರನ್ನು ನಿಮ್ಮ ಗಾಡ್ಫಾದರ್ ಅಂತ ಹೇಳಿಕೊಂಡಿದ್ದೀರ. ಹಾಗೆ ನೋಡಿದ್ರೆ ಕನ್ನಡ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಹೆಸರಾಗಲೀ, ಕೃಪಾಕಟಾಕ್ಷವಿಲ್ಲದೆ ಮೇಲೆಬಂದವರು ನೀವು. ತರ್ಲೆ ನನ್ಮಗನ ಕ್ರಿಯಾಶೀಲ ಯುವನಿರ್ದೇಶಕನಿಂದ ಆರಂಭಿಸಿ ಉಪ್ಪಿ2ವಿನ ಸೂಪರ್ ಸ್ಟಾರ್ ಉಪೇಂದ್ರ ಅವ್ರ ಈ ಬೆಳವಣಿಗೆ, ಪ್ರಯಾಣ ಹೇಗಿತ್ತು ಅಂತ ಸಂಕ್ಷಿಪ್ತವಾಗಿ ನಮ್ಮ ಜೊತೆ ಹಂಚ್ಕೊತೀರ?

ಉಪ್ಪಿ : ಅಯ್ಯೋ ನಾನು ನಿಮಗೆಲ್ಲ ಥ್ಯಾಂಕ್ಸ್ ಹೇಳಬೇಕು. ಬರೀ ಒಂದು ವಾರದ ಮುಂಚೆ ಹೇಳಿದ್ರೂ ನೀವೆಲ್ಲ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದೀರ. ನನ್ನಂಥ ಒಬ್ಬ ಶಿಳ್ಳೆ ಚಪ್ಪಾಳೆ ಕಲಾವಿದ ಕೂಡ ಹೇಗೆ ಸೂಪರ್ಸ್ಟಾರ್ ಆಗ್ಬೋದು ಅನ್ನೋದಕ್ಕೆ ನಾನೆ ಉದಾಹರಣೆ ಅಂತ ಹೇಳ್ಬೇಕು. ಇನ್ನು ನನ್ನ ಸಿನಿಮಾ ಪ್ರಯಾಣದ ಬಗ್ಗೆ ಹೇಳ್ಬೇಕು ಅಂದ್ರೆ ತುಂಬಾ ಉದ್ದ ಕತೆ ಅದು. ಚಿಕ್ಕವ್ನಿರೋವಾಗ ಸಿಕ್ಕಾಪಟ್ಟೆ ಸ್ಟೇಜ್ ಫಿಯರ್, ಭಯ ನಂಗೆ. ಒಂದು ಡ್ರಾಮಕ್ಕೆ ಡೈಲಾಗ್ ಹೇಳೋದಕ್ಕೆ ಕರದ್ರು. ನಂಗೆ ಸರಿಯಾಗಿ ಹೇಳಕ್ಕೆ ಆಗ್ಲಿಲ್ಲ. ರಿಜೆಕ್ಟ್ ಮಾಡ್ಬಿಟ್ರು.

An interview with Real Star Upendra in America - part2

ಅದಾದ್ ಮೇಲೆ ಸುಮಾರು ನನಗಾಗ 12-13 ವರ್ಷ ಇರಬಹುದು. ಚಾಮರಾಜಪೇಟೆಲ್ಲಿ ಒಂದು ಮಕ್ಕಳ ಕೂಟ ಅಂತ ಇದೆ. ಅಲ್ಲಿ ಕಂಪೌಂಡರ್ ಗುಂಡ ಅನ್ನೋ ಡ್ರಾಮ. ಅಲ್ಲೇ ಆಟ ಆಡ್ತಿರೋ ಮಕ್ಳನ್ನೆಲ್ಲ ಕರದ್ರು ಒಂದು ಡೈಲಾಗ್ ಹೇಳೋಕೆ. ಹಿಂದೆ ಸ್ಕೂಲ್ನಲ್ಲಿ ತೆತೆತೆ ಪೆಪೆಪೆ ಅಂದು ರಿಜೆಕ್ಟ್ ಆಗಿದ್ದು ನೆನಪಿತ್ತಲ್ವಾ. ಅದ್ಕೆ ಡೈಲಾಗ್ನ ಜೋರಾಗಿ ಕೂಗಿದೆ. ಅವ್ರು ಇಂಪ್ರೆಸ್ ಆಗಿ ನಂಗೆ ಹೀರೋ ಪಾತ್ರ ಕೊಟ್ಬಿಟ್ರು. ನಾನೇ ಹೀರೋ ಆ ಡ್ರಾಮಕ್ಕೆ. ಗುಂಡ ಆಗಿ ಅಭಿನಯಿಸ್ದೆ. ಚಿಕ್ಕಮಕ್ಳು ಏನೇ ಮಾಡಿದರೂ ಖುಷಿ ಆಗತ್ತಲ್ಲ. ಜನ ಎಲ್ಲ ಜೋರಾಗಿ ಚಪ್ಪಾಳೆ ತಟ್ಟಿ. ಏನ್ ಅನಿಸಿಬಿಟ್ಟಿತು ನಂಗೆ ಅಂದ್ರೆ ಇವರೆಲ್ಲ ನನ್ ಸಲುವಾಗಿ ಇಷ್ಟೊಂದು ಚಪ್ಪಾಳೆ ತಟ್ಟುತಿದಾರೆ ಅಂದ್ರೆ ನಾನು ಏನೋ ಒಂದು ಆಗಬಹುದು.

ಅವತ್ತೇ ಸಿನಿಮಾದಲ್ಲಿ ದೊಡ್ಡ ಹೀರೋ ಆಗ್ಬೇಕು ಆಮೇಲೆ ಪಾಲಿಟಿಕ್ಸ್ ಹೋಗ್ಬೇಕು, ದೇಶನೆಲ್ಲ ಉದ್ಧಾರ ಮಾಡಬೇಕು ಅಂತ, ನೀವು ನಂಬ್ತೀರೋ ಇಲ್ವೋ 13ನೇ ವರ್ಷದಲ್ಲಿ ಆಲೋಚಿಸಿದ್ದೆ. ಹೀಗೆ ವಿಚಿತ್ರವಾದೊಂದು ಐಡಿಯಾ ಬಂತು. ಆದ್ರೆ ಹೆಂಗ್ ಮಾಡೋದು ಇದ್ನೆಲ್ಲ, ಯಾರ್ ಕರೀತಾರೆ ನನ್ನ, ಅಂತ ವಿಚಾರ ಮಾಡಿ, ಏನಾದರೂ ಕಲ್ತ್ಕೋಬೇಕು ಅಂತ, ಹಾಗಾಗಿ ಆವಾಗ್ಲಿಂದಾನೇ ಕತೆ ಬರಿಯೋದು, ಹಾಡುಗಳನ್ನ ಬರಿಯೋದು ಎಲ್ಲ ಶುರು ಮಾಡಿದೆ. ಆಮೇಲೆ ಕಾಶಿ ಸರ್ನ ಅಪ್ರೋಚ್ ಮಾಡಿದೆ. ಅವ್ರು ನಂಗೆ ಕೆಲಸ ಕೊಟ್ರು. ಒಂದು ಹಾಡು ಬರಿಯೋ ಚಾನ್ಸ್ ಕೊಟ್ರು. ಅದಾದ್ಮೇಲೆ ತರ್ಲೆ ನನ್ಮಗ ಮಾಡಿದೆ, ಶ್ ಮಾಡಿದೆ. ಅದಾದ್ ಮೇಲೆ ಓಂ, ಆಪರೇಶನ್ ಅಂತ. ಹೀಗೆ ಇಲ್ಲಿವರ್ಗೂ ಬಂದಿದೀನಿ.

English summary
An interview with Kannada actor 'Real Star' Upendra in America. Uppi is in America to promote his latest movie Uppi 2. Upendra interacted with Kannadigas, shared his thoughts at a function organized by Mandara and New England Kannada Koota in Boston, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X