ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7ನೇ ವಸಂತ ಸಾಹಿತ್ಯೋತ್ಸವ : ಕಾರ್ಯಕ್ರಮಗಳ ಪಕ್ಷಿನೋಟ

By Prasad
|
Google Oneindia Kannada News

'ಅನುವಾದ ಸಾಹಿತ್ಯ'ವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು ಅಮೆರಿಕದ ಸೇಂಟ್ ಲೂಯಿಸ್ಸಿನ ಸಂಗಮ ಆಶ್ರಯದಲ್ಲಿ ಮೇ 30 ಮತ್ತು 31ರಂದು ನಡೆಯಲಿರುವ 7ನೇ ವಸಂತ ಸಾಹಿತ್ಯೋತ್ಸವಕ್ಕೆ ಅಂತಿಮ ಹಂತದ ತಯಾರಿಗಳು ನಡೆಯುತ್ತಿವೆ. ಕನ್ನಡ ಸಾಹಿತ್ಯ ರಂಗದ ಈ ಸಾಹಿತ್ಯ ಹಬ್ಬದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಎರಡು ದಿನಗಳ ಕಾಲ ಸಾಹಿತ್ಯ ಗೋಷ್ಠಿ, ಪುಸ್ತಕ ಬಿಡುಗಡೆ, ಅನುವಾದಿತ ಕೃತಿಗಳ ಪ್ರಸ್ತುತಿ, ಕವಿ ನಮನ, ಹಾಡು, ನೃತ್ಯ ಕಾರ್ಯಕ್ರಮ, ನಾಟಕ ಪ್ರದರ್ಶನ, ಅನುವಾದ ಕಮ್ಮಟ, ಪುಸ್ತಕದಂಗಡಿಗೆ ಭೇಟಿ ಮುಂತಾದ ಕಾರ್ಯಕ್ರಮಗಳು ಮಕ್ಕಳಿಂದ ಹಿರಿಯ ಸಾಹಿತ್ಯ ಪ್ರೇಮಿಗಳಿಗೆ ಹಬ್ಬದೂಟವನ್ನು ಬಡಿಸಲಿವೆ. [ಕಸಾರಂದ 7ನೇ ವಸಂತ ಸಾಹಿತ್ಯೋತ್ಸವಕ್ಕೆ ಕ್ಷಣಗಣನೆ]

7th Vasantha Sahityotsava - program details

ಕಾರ್ಯಕ್ರಮಗಳ ವಿವರಗಳು ಹೀಗಿವೆ.

ಶನಿವಾರ

(1) ಮಧ್ಯಾಹ್ನ 12:00-1:00 - ಆಗಮನ ಮತ್ತು ನೋಂದಣಿ
(2) 1:00-2:00 - ಸ್ವಾಗತ ಗೀತೆ, ಉದ್ಘಾಟನೆ, ಅತಿಥಿಗಳ ಸ್ವಾಗತ ಮತ್ತು ಪರಿಚಯ, ಪುಸ್ತಕಗಳ ಲೋಕಾರ್ಪಣೆ ಮತ್ತು ಬರಹಗಾರರಿಗೆ ವಿತರಣೆ
(3) 2:00-3:00 - ಪ್ರಾಸ್ತಾವಿಕ ಭಾಷಣ, "ಅನುವಾದದ ಆಗುಹೋಗುಗಳು" ಮುಖ್ಯ ಅತಿಥಿ ಪ್ರಧಾನ ಗುರುದತ್ತರಿಂದ
(4) 3:00-3:30 - ಚಹಾ ವಿರಾಮ
(5) 3:30-5:00 - ಸಾಹಿತ್ಯ ಗೋಷ್ಠಿ, ಸ್ವಂತ ಹಾಗು ಅನುವಾದಿತ ಕೃತಿಗಳ ಪ್ರಸ್ತುತಿ (ನಡೆಸಿಕೊಡುವವರು: ನಳಿನಿ ಮೈಯ ಮತ್ತು ವೈಶಾಲಿ ಹೆಗ್ಡೆ)
(6) 5:05-5:15 - ಕವಿ ನಮನ (ಸಂಗಮ ಕಲಾವಿದರಿಂದ)
(7) 5:15-5:30 - ಶ್ರದ್ಧಾಂಜಲಿ (ಅಗಲಿದ ಹಿರಿಯರ ಸ್ಮರಣೆ; ನಡೆಸಿಕೊಡುವವರು: ಎಚ್.ಕೆ. ಚಂದ್ರಶೇಖರ್ ಮತ್ತು ನಳಿನಿ ಕುಕ್ಕೆ)
(8) 5:30-6:00 - ಪುಸ್ತಕದಂಗಡಿಗೆ ಭೇಟಿ (ಮಂಜುನಾಥ್ ಮತ್ತು ಶಂಕರ ಹೆಗ್ಡೆ)
(9) 6:00-8:30 - ಸಾಂಸ್ಕೃತಿಕ ಕಾರ್ಯಕ್ರಮ (ಪ್ರಸನ್ನ ಕಸ್ತೂರಿ ಅವರ ನಿರ್ದೇಶನದಲ್ಲಿ ಸಂಗಮ ಹಾಗು ಇತರ ಮಧ್ಯವಲಯದ ಕನ್ನಡ ಕೂಟಗಳಿಂದ ನೃತ್ಯ ಮತ್ತು ನಾಟಕ ಪ್ರದರ್ಶನ)
(10) 8:00-10:00 - ಭೋಜನ

ಭಾನುವಾರ

(1) 8:00-9:00 - ಬೆಳಗಿನ ಉಪಾಹಾರ
(2) 9:00-9:10 - ಪ್ರಾರ್ಥನೆ ಮತ್ತು ವಾದ್ಯಗೋಷ್ಠಿ (ಸಂಗಮ ಮಕ್ಕಳಿಂದ)
(3) 9:10-10:40 - ಅನುವಾದ ಕಮ್ಮಟ (ಅನುವಾದಕ್ರಿಯೆಯ ಒಂದು ಮಿಂಚುನೋಟ; ನಡೆಸಿಕೊಡುವವರು: ಗುರುಪ್ರಸಾದ್ ಕಾಗಿನೆಲೆ)
(4) 10:40-10:55 - ವಿವಿಧ ವಿಶೇಷಗಳು (ನಡೆಸಿಕೊಡುವವರು ಮೈ.ಶ್ರೀ. ನಟರಾಜ)
(5) 11:00-12:00 - ನಮ್ಮ ಬರಹಗಾರರು (ಇತ್ತೀಚೆಗೆ ಪ್ರಕಟವಾದ ಪುಸ್ತಕಗಳ ಮತ್ತು ಬರಹಗಾರರ ಪರಿಚಯ; ನಡೆಸಿಕೊಡುವವರು: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಮೀರಾ ರಾಜಗೋಪಾಲ್)
(6) 12:00-1:00 - ಮಧ್ಯಾಹ್ನದ ಭೋಜನ
(7) 1:00-1:30 - ಪುಸ್ತಕದಂಗಡಿಗೆ ಭೇಟಿ
(8) 1:30-2:30 - ಅತಿಥಿಗಳೊಂದಿಗೆ ಸಂವಾದ (ಪ್ರಧಾನ ಗುರುದತ್ತ, ಎಸ್.ಎನ್. ಶ್ರೀಧರ್ ಮತ್ತು ನಾರಾಯಣ ಹೆಗ್ಡೆ ಅವರೊಂದಿಗೆ ಪ್ರಶ್ನೋತ್ತರಗಳು; ನಡೆಸಿಕೊಡುವವರು: ಗುರುಪ್ರಸಾದ್ ಕಾಗಿನೆಲೆ ಮತ್ತಿತರರು)
(9) 2:30-2:45 - ಚಹಾ ವಿರಾಮ
(10) 2:45-3:45 - ಮಧ್ಯವಲಯದ ವಿವಿಧ ಕನ್ನಡ ಕೂಟಗಳ ಮಕ್ಕಳಿಂದ ಮನರಂಜನೆ ಮತ್ತು ಸವಿತಾ ರವಿಶಂಕರ್ ಅವರ "ಚಿಲಿಪಿಲಿ ಕನ್ನಡ ಕಲಿ" ಧ್ವನಿ ಸಂಪುಟ ಬಿಡುಗಡೆ
(11) 3:45-4:30 - ಸ್ವಯಂಸೇವಕರ ಪರಿಚಯ, ವಂದನಾರ್ಪಣೆ ಮತ್ತು ಸಮಾರೋಪ
(12) 4:30ಕ್ಕೆ ವಿದಾಯ!

English summary
Seventh literary conference of Kannada Sahitya Ranga will be held on May 30 and 31, 2015 in St Louis in America. Countdown has begun for the mega literary festival, preparations are on warpath. Lot of programs are lined up to enthrall the Kannada audience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X