• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೂನ್ ಕೊನೆಯಲ್ಲಿ ಡೆಟ್ರಾಯಿಟ್ ನಲ್ಲಿ 41ನೇ ವೀರಶೈವ ಸಮ್ಮೇಳನ

By Prasad
|

ಅಮೆರಿಕದ ಮಿಚಿಗನ್ ರಾಜ್ಯದಲ್ಲಿರುವ ಡೆಟ್ರಾಯಿಟ್ ನಲ್ಲಿ 41ನೇ ವಿಎಸ್ಎನ್ಎ (ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕ) ಸಮ್ಮೇಳನವನ್ನು ಜೂನ್ 29 ಮತ್ತು 30ರಂದು ಆಯೋಜಿಸಲಾಗಿದೆ.

ಇದೊಂದು ಜಾಗತಿಕ ಕಾರ್ಯಕ್ರಮವಾಗಿರುವುದರಿಂದ ಅಮೆರಿಕ, ಕೆನಡಾದಿಂದ ಮಾತ್ರವಲ್ಲದೆ ಕರ್ನಾಟಕ ಮತ್ತು ಜಗತ್ತಿನ ಇತರ ದೇಶಗಳಿಂದಲೂ ವೀರಶೈವ ಸಮುದಾಯದ ಪ್ರತಿನಿಧಿಗಳು, ಅತಿಥಿಗಳು ಭಾಗವಹಿಸುತ್ತಿದ್ದಾರೆ.

ವೀರಶೈವ ಲಿಂಗಾಯತ ಎರಡೂ ಒಂದೇ : ವೀರಶೈವ ಮಹಾಸಭಾ

ಕಾರ್ಯಕ್ರಮದ ಉದ್ದೇಶ

ಉತ್ತರ ಅಮೆರಿಕ ಮತ್ತು ಕೆನಡಾದಲ್ಲಿರುವ ವೀರಶೈವ ಸಮಾಜ ಸಂಸ್ಥೆಯ ಪ್ರತಿನಿಧಿಗಳು ಪ್ರತಿವರ್ಷ ಸಮ್ಮೇಳನವನ್ನು ನಡೆಸುತ್ತಾರೆ. ವಚನ ವಾಚನ, ಆಧ್ಯಾತ್ಮ ಚಿಂತನೆ, ಇಷ್ಟಲಿಂಗ ಪೂಜೆ, ಕಾಯಕ ಮತ್ತು ದಾಸೋಹ (ಸೇವೆ) ಮತ್ತು ಅನುಭವ ಗೋಷ್ಠಿಯನ್ನು ನಡೆಸಲಾಗುತ್ತದೆ.

900 ವರ್ಷಗಳ ಹಿಂದೆ ಸಹಬಾಳ್ವೆಯ ಕ್ರಾಂತಿಯ ಬೀಜವನ್ನು ಬಿತ್ತಿದ, ಸಮಾಜ ಸುಧಾಕರ ಬಸವಣ್ಣ ಎಂಬ ಯುಗಪುರುಷನ ತತ್ತ್ವ, ಚಿಂತನೆಗಳನ್ನು ಜಗತ್ತಿಗೆ ತಿಳಿಸುವ ಪ್ರಯತ್ನವನ್ನೂ ಮಾಡಲಾಗುತ್ತದೆ. ಸಮಾನತೆ, ಸಹೋದರತೆ, ಸ್ವತಂತ್ರತೆ ಇರುವ ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸುವಂತೆ ಪ್ರೇರಣೆ ನೀಡುವುದೇ ಈ ಕಾರ್ಯಕ್ರಮದ ಉದ್ದೇಶ.

ಧರ್ಮ ಒಡೆಯಲು ಹೊರಟವರನ್ನು ಬಸವಣ್ಣನೇ ಕ್ಷಮಿಸಲಿ!

ಭಾಗವಹಿಸುತ್ತಿರುವ ಅತಿಥಿಗಳು

* ಜಗದ್ಗುರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

* ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ

* ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ

* ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ

* ಯೋಗಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಯೋಗ ನಡೆಸಿಕೊಡಲಿದ್ದಾರೆ.

ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ, ಪ್ರಭಾಕರ ಕೋರೆ, ಮಾಜಿ ಜಿಲ್ಲಾಧಿಕಾರಿ ಡಾ. ಸಿ ಸೋಮಶೇಖರ, ಪದ್ಮಶ್ರೀ ಡಾ. ಕಿರಣ್ ಕುಮಾರ್, ಮಾಜಿ ಪೊಲೀಸ್ ಆಯುಕ್ತ ಶಂಕರ್ ಬಿದರಿ, ಚಿತ್ರ ನಿರ್ಮಾಪಕ ಶೈಲೇಂದ್ರ ಪ್ರಸಾದ್, ಚಿತ್ರದುರ್ಗದ ಬಿಜೆಪಿ ಅಧ್ಯಕ್ಷ ನವೀನ್ ಕೊಟ್ಟಿಗೆ ಅವರು ಕೂಡ ಭಾಗವಹಿಸುತ್ತಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ : ಜೊತೆಗೆ ರಂಗಕರ್ಮಿ ಯಶವಂತ ಸರದೇಶಪಾಂಡೆ ಮತ್ತು ತಂಡದಿಂದ ಹಾಸ್ಯ ಸಂಜೆ ಇರಲಿದೆ. ಸುನಿತಾ ಅನಂತಸ್ವಾಮಿ ಮತ್ತು ಅನಿತಾ ಅನಂತಸ್ವಾಮಿ ಅವರಿಂದ ವಚನ ಮತ್ತು ಭಾವಗೀತೆ ಸಭಿಕರನ್ನು ರಂಜಿಸಲಿದೆ. ಬೆಂಗಳೂರಿನ ವಿಶ್ವೇಶ ಭಟ್ ತಂಡದಿಂದ ಸಂಗೀತ ಸಂಜೆ ಇರಲಿದ್ದು, ಫ್ಯುನಾಚ್ ಡಾನ್ಸ್ ತಂಡದಿಂದ ಕ್ರಿಯೆಟಿವ್ ಡಾನ್ಸ್ ಇರಲಿದೆ.

ಕಳೆದ 25 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ, ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಿಸಿದ್ದ ನನ್ನ ಪ್ರೀತಿಯ ಹುಡುಗ, ಪ್ಯಾರಿಸ್ ಪ್ರಣಯ ನಿರ್ಮಿಸಿದ್ದ, ತುಮಕೂರು ದಯಾನಂದ್ ಅವರು 41ನೇ ವೀರಶೈವ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಇವರು, ಆಗಸ್ಟ್ ನಲ್ಲಿ ನಡೆಯಲಿರುವ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಕಾರ್ಯಕಾರಿ ತಂಡದಲ್ಲಿಯೂ ದುಡಿಯುತ್ತಿದ್ದಾರೆ.

ನೋಂದಣಿ : ಜೂನ್ 20ರೊಳಗೆ ನೋಂದಾಯಿಸಿಕೊಂಡವರಿಗೆ, ಪ್ರತಿ ವ್ಯಕ್ತಿಗೆ 119 ಡಾಲರ್ ದರದ ವಿಶೇಷ ಕೊಡುಗೆ ನೀಡಲಾಗುತ್ತಿದೆ.

ವಿಎಸ್ಎನ್ಎ ಸಂಸ್ಥೆಯ ಕುರಿತು

1978ರಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಅಂದು ಸಣ್ಣದಾಗಿ ಆರಂಭವಾಗಿದ್ದ ಸಂಸ್ಥೆ ಇಂದು 21 ಶಾಖೆಗಳನ್ನು ಹೊಂದಿದೆ. 300ಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಹೊಂದಿದ್ದು, 2000ಕ್ಕೂ ಹೆಚ್ಚು ಕುಟುಂಬಗಳನ್ನು ಈ ಸಂಸ್ಥೆ ಒಳಗೊಂಡಿದೆ. ವರ್ಷಕ್ಕೊಮ್ಮೆ ಆಯ್ದ ನಗರದಲ್ಲಿ ಸಮ್ಮೇಳನವನ್ನು ನಡೆಸಲಾಗುತ್ತಿದ್ದು, ವಿವಿಧ ಶಾಖೆಗಳ ಪ್ರತಿನಿಧಿಗಳು, ದೇಶವಿದೇಶಗಳ ಅತಿಥಿಗಳು ಸೇರಿ 800ಕ್ಕೂ ಹೆಚ್ಚು ಜನರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ.

English summary
Veerashaiva Samaja of North America (VSNA) will be conducting 41st conference in Detroit, USA on June 29 and 30. Many Veerashaiva seers from Karnataka, dignitaries from America, Canada, Karnataka are participating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more