ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಕೆಎನ್‌ಸಿ ಯುಗಾದಿ ಕಥಾಸ್ಪರ್ಧೆ, ಏ.5ರೊಳಗೆ ಕಳಿಸಿ

By Prasad
|
Google Oneindia Kannada News

Ugadi short story contest by KKNC
ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ(ಕೆ.ಕೆ.ಎನ್.ಸಿ), ರತ್ನ ಮಹೋತ್ಸವದ ಅಂಗವಾಗಿ, ಅಮೆರಿಕಾದ ಉದ್ದಗಲಕ್ಕೂ ಯುಗಾದಿ ಕಥಾಸ್ಪರ್ಧೆಯನ್ನು ಘೋಷಿಸಿದೆ. ಕೆ.ಕೆ.ಎನ್.ಸಿ ಪ್ರತಿ ವರ್ಷವೂ ಬಿಡುಗಡೆ ಮಾಡುವ 'ಸ್ವರ್ಣಸೇತು' ಸಂಚಿಕೆಯಲ್ಲಿ ಆಯ್ದ ಕಥೆಗಳನ್ನು ಪ್ರಕಟಿಸಲಾಗುತ್ತದೆ.

ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ

* ಕಥೆಯು ಕನ್ನಡದಲ್ಲಿರಬೇಕು ಮತ್ತು ಆರು ಪುಟ ಮೀರಬಾರದು.

* ಕಥೆಯು ಸ್ವಂತದ್ದಾಗಿರಬೇಕು ಹಾಗೂ ಬೇರೆ ಎಲ್ಲೂ ಪ್ರಕಟವಾಗಿರಬಾರದು.

* ಅನುವಾದಿತ ಕಥೆಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿಲ್ಲ.

* ಸ್ಪರ್ಧೆಗೆ ಕಳುಹಿಸಿದ ಕಥೆಗಳನ್ನು ಸ್ವರ್ಣಸೇತು 2013 ಸಂಚಿಕೆ ಪ್ರಕಟಣೆಯಾಗುವವರೆಗೂ ಬೇರೆಲ್ಲೂ (ಬ್ಲಾಗ್ ಸೇರಿದಂತೆ) ಪ್ರಕಟಿಸುವಂತಿಲ್ಲ.

* ಕಥೆಗಳು ಯೂನಿಕೋಡ್/ತುಂಗಾ ಫಾಂಟ್ ನಲ್ಲಿ, MS-Wordನಲ್ಲಿ ಫಾಂಟ್ ಸೈಜ಼್ 12ರಲ್ಲಿ ಕಳಿಸತಕ್ಕದ್ದು, ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.

* ಕಳಿಸಿದ ಕಥೆಗಳಲ್ಲಿ ಹೆಚ್ಚಾಗಿ ಕಾಗುಣಿತ/ವ್ಯಾಕರಣ ದೋಷಗಳಿದ್ದಲ್ಲಿ, ಸ್ಪರ್ಧೆಗೆ ಪರಿಗಣಿಸುವುದಿಲ್ಲ.

* ಅಮೇರಿಕನ್ನಡಿಗರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಅವಕಾಶ.

* ನಿಮ್ಮ ಕಥೆಗಳನ್ನು ಏಪ್ರಿಲ್ 5, 2013ರ ಒಳಗೆ ಕಳಿಸತಕ್ಕದ್ದು.

* ಸ್ಪರ್ಧೆಗೆ ಒಂದಕ್ಕಿಂತ ಹೆಚ್ಚು ಕಥೆಗಳನ್ನು ಕಳಿಸುವ ಹಾಗಿಲ್ಲ.

* ಸ್ಪರ್ಧೆಗೆ ಸಲ್ಲಿಸಿದ ಯಾವುದೇ ಕಥೆಯನ್ನಾದರೂ ಸ್ವರ್ಣಸೇತು-2013ರಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದೆ ಇರುವ ತೀರ್ಮಾನ ಸ್ವರ್ಣಸೇತು ಸಂಪಾದಕ ಸಮಿತಿಯದಾಗಿರುತ್ತದೆ.

* ಕಥೆಯೊಂದಿಗೆ ನಿಮ್ಮ ಭಾವಚಿತ್ರ, ಈ-ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ಕಳಿಸತಕ್ಕದ್ದು.

* ನಿಮ್ಮ ಕಥೆಗಳನ್ನು [email protected] ಗೆ ಕಳಿಸಿ.

* ತೀರ್ಪುಗಾರರ ನಿರ್ಧಾರವೇ ಅಂತಿಮ

English summary
Kannada Koota Northern California (KKNC) has organized Ugadi short story competition, as part of Ratna Mahotsava, for American writers only. The interested writers can send their write ups before 15th March, 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X