ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಯದ ಹೊಡೆತಕ್ಕೆ ಸಿಕ್ಕು ಮಾರ್ಪಾಟಾದ ವಾಚ್

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

Story of my wrist watch
ವಾಚುಗಳು 17ನೇಯ ಶತಮಾನದಲ್ಲಿ ಯುರೋಪಿನಲ್ಲಿ ಕಾಣಿಸಿಕೊಂಡವು. ಅವುಗಳು ಆಗ ಕೈಯಲ್ಲಿ ಕಟ್ಟಿಕೊಳ್ಳುವಷ್ಟು ಚಿಕ್ಕವಾಗಿರಲಿಲ್ಲ. ಅವುಗಳನ್ನು ಗಂಡಸರು ತಮ್ಮ ಕೋಟಿನ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಕೈಗೆ ಕಟ್ಟಿಕೊಳ್ಳುವಂತಹ ವಾಚುಗಳು ಹೆಂಗಸರಿಗಾಗಿ ಎಂದು ಸೃಷ್ಟಿಯಾದವು. ಈ ಹೊಸ ವಿನ್ಯಾಸದ ವಾಚುಗಳು ಸಭ್ಯ ಗಂಡಸರಿಂದ ಸಾಕಷ್ಟು ಟೀಕೆಗೊಳಗಾದವಂತೆ! ಆದರೆ ಮೊದಲನೇ ಮಹಾಯುದ್ಧದ ಕಾಲದಲ್ಲಿ ಜೇಬಿನ ವಾಚುಗಳು ಉಪಯೋಗಿಸಲು ಅನರ್ಹ ಎನಿಸಿದಾಗ ಕೈ ವಾಚುಗಳು ಜನಪ್ರಿಯವಾದವು. ಕ್ರಮೇಣ ಅನೇಕ ತಾಂತ್ರಿಕ ಸುಧಾರಣೆಗಳಾಗಿ ಸರಳ ಯಾಂತ್ರಿಕ ವಾಚುಗಳು ವಿಕಾಸ ಹೊಂದಿ ಕ್ರಮೇಣ ಸ್ವಯಂಚಾಲಿತ ವಾಚು, ಕ್ವಾರ್ಟ್ಸ್ ವಾಚು, ಡಿಜಿಟಲ್ ವಾಚು ಇತ್ಯಾದಿಗಳು ಮೂಡಿಬಂದವು.

ಮೊದಮೊದಲು ವಾಚು ತಯಾರಿಕೆ ಸ್ವಿಟ್ಜರ್‌ಲ್ಯಾಂಡಿನ ಸ್ವಾಮಿತ್ವದಲ್ಲಿದ್ದರೂ, ಕ್ರಮೇಣ ಜಪಾನೀಯರು, ನಂತರ ಏಷಿಯಾದ ಇತರ ದೇಶಗಳೂ ವಾಚು ತಯಾರಿಕೆಯಲ್ಲಿ ಪ್ರಾವೀಣ್ಯತೆ ಪಡೆದರು. ಜಗತ್ತಿಗೆ ಮೊಟ್ಟ ಮೊದಲು ಕ್ವಾರ್ಟ್ಸ್ ವಾಚನ್ನು ಪರಿಚಯಿಸಿದವರು ಜಪಾನಿನ ಸೀಕೋ (Seiko) ಕಂಪನಿಯವರು.

ಎಂಭತ್ತರ ದಶಕ ಮತ್ತು ಅದಕ್ಕೂ ಮುಂಚೆ ಭಾರತದಲ್ಲಿ ವಾಚುಗಳನ್ನು ತಯಾರಿಸುವ ಕಂಪನಿ ನಮ್ಮ ಬೆಂಗಳೂರಿನಲ್ಲೇ ಇರುವ ಎಚ್ ಎಮ್ ಟಿ ಮಾತ್ರ. ಕೇಂದ್ರ ಸರಕಾರದ ಸ್ವಾಮಿತ್ವದ ಈ ಕಂಪನಿ ಜಪಾನಿನ ಸಿಟಿಜನ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಅನೇಕ ಸುಂದರ ವಿನ್ಯಾಸದ ವಾಚುಗಳನ್ನು ಉತ್ಪಾದಿಸುತ್ತಿತ್ತು. "ಎಚ್ಎಮ್‌ಟಿ ದೇಶ ಕಿ ಧಡಕನ್" ಎಂಬುದು ಅದರ ಮೂಲಮಂತ್ರವಾಗಿತ್ತು. ಆದರೆ ಎಂಭತ್ತರ ದಶಕದಲ್ಲಾದ ಉದ್ದಿಮೆಗಳ ಉದಾರೀಕರಣದಿಂದ ಅನೇಕ ಖಾಸಗಿ ಸ್ವಾಮ್ಯದ ವಾಚು ಉದ್ದಿಮೆಗಳು ಕಾಲಿರಿಸಿ ಎಚ್ ಎಮ್ ಟಿ ವಾಚುಗಳು ಸ್ಪರ್ಧೆಯಲ್ಲಿ ಕಳೆಗುಂದಿ ಮೂಲೆಗೊತ್ತಲ್ಪಟ್ಟಿತು.

1987ರಲ್ಲಿ ಕಾಲಿಟ್ಟ ಟಾಟಾ ಕಂಪನಿಯ ಸ್ವಾಮ್ಯದ ಟೈಟಾನ್ ತನ್ನ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡು ಜನಪ್ರಿಯತೆಯ ತುದಿಗೇರಿತು. ಆಗ ತಾನೇ ಮನೆಮನೆಗಳಲ್ಲಿ ಕಾಲಿಟ್ಟಿದ್ದ ದೂರದರ್ಶನದಲ್ಲಿ ಟೈಟಾನ್ ನೀಡುತ್ತಿದ್ದ ಮೋಜಾರ್ಟ್‌ನ 25ನೆಯ ಸಿಂಫೊನಿಯ ಇಂಪಾದ ಸಂಗೀತ ಹೊಂದಿದ ಸುಂದರ ಜಾಹೀರಾತು ಯಾರಿಗೆ ನೆನಪಿಲ್ಲ?

English summary
Wrist watch is not just an instrument to see the time or just a fashion item, now-a-days the watch has become smart too like our mobile phones. It makes us realize that we have run along with the time. Times have changed, so wrist watches. By the by, do you wear wrist watch?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X