ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಕನ್ನಡಸಂಘದ ಹೊಸ ಪದಾಧಿಕಾರಿಗಳು

By ವಾಷಿಂಗ್ಟನ್ ಬ್ಯೂರೋ ವರದಿ
|
Google Oneindia Kannada News

New office bearers for Kaveri Kannada Sangha
ರಾಜಧಾನಿ ವಾಷಿಂಗ್ಟನ್ ಮೆಟ್ರೋ ಪ್ರದೇಶದ ಕಾವೇರಿ ಕನ್ನಡ ಸಂಘ ಅಮೆರಿಕದ ಹಿರಿಯ ಕನ್ನಡ ಸಂಘಗಳ ಪೈಕಿ ಒಂದು. ಹಿರಿಯ ಅಷ್ಟೇ ಅಲ್ಲ, ಸದಾ ಕ್ರಿಯಾಶೀಲ. ಪ್ರತಿ ವರ್ಷವೂ ಹೊಸ ರಕ್ತದ ತರುಣ ತರುಣಿಯರು ಸಂಘದ ಪದಾಧಿಕಾರಿಗಳಾಗಿ ಚಟುವಟಿಕೆಗಳಲ್ಲಿ ಹೊಸತನವನ್ನು ತಂದುಕೊಳ್ಳುವುದು ಕಾವೇರಿಯ ನಲ್ವತ್ತು ವರ್ಷಗಳ ಇತಿಹಾಸದಲ್ಲಿ ಅನೂಚಾನವಾಗಿ ನಡೆದುಬಂದಿದೆ.

ಈ ವರ್ಷ (2013ರ ಅವಧಿ) ಸಂಘದ ಅಧ್ಯಕ್ಷೆಯಾಗಿ ವರ್ಜೀನಿಯಾ ನಿವಾಸಿ ಕನ್ನಡತಿ ಶರ್ಮಿಳಾ ಮೂರ್ತಿ ಆಯ್ಕೆಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಕಾವೇರಿ ಚಟುವಟಿಕೆಗಳಲ್ಲೆಲ್ಲ ಸಕ್ರಿಯವಾಗಿ ಭಾಗವಹಿಸಿರುವ ಶರ್ಮಿಳಾ, ಉತ್ಸಾಹದ ಬುಗ್ಗೆ. ಈಸಲ ತನ್ನ ನೇತೃತ್ವದಲ್ಲಿ ಕೆಲವು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕನಸು ಅವರದು.

"ಕಾವೇರಿ ಕನ್ನಡ ಸಂಘ ಮೂಲತಃ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ನಾವು ಹೆಚ್ಚಾಗಿ ನಮ್ಮ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತೇವೆ. ಇದರ ಜೊತೆಗೆ ನಮ್ಮ ದಿನನಿತ್ಯ ಜೀವನದಲ್ಲಿ ಅನಕೂಲವಾಗುವಂಥ ವಿಚಾರಗಳನ್ನು ತಿಳಿಸುವ ಕಾರ್ಯಕ್ರಮಗಳನ್ನು ಮಾಡಬೇಕು ಅಂತ ಇದ್ದೇವೆ. ಉದಾಹರಣೆಗೆ ಬಂಡವಾಳ ಹೂಡಿಕೆ, ನಿವೃತ್ತಿಜೀವನದ ಯೋಜನೆಗಳು, ಆರೋಗ್ಯ ಸಂಬಂಧಿ ವಿಚಾರಸಂಕಿರಣಗಳು, ಕಾನೂನು ಸಲಹೆ, ವಿದ್ಯಾರ್ಥಿಗಳಿಗೆ ವೃತ್ತಿಮಾರ್ಗದರ್ಶನ ಹೀಗೆ ಇಲ್ಲಿನ ಕನ್ನಡಿಗರಿಗೆ ಹೆಚ್ಚಿನ ಮಾಹಿತಿ ಕೊಡುವಂಥ ಕಾರ್ಯಕ್ರಮಗಳನ್ನು ಏರ್ಪಡಿಸುವ ಉದ್ದೇಶವಿದೆ. ಎಲ್ಲ ವಯಸ್ಸಿನವರೂ ಭಾಗವಹಿಸುವಂಥ ಕಾರ್ಯಕ್ರಮಗಳನ್ನು ಮಾಡಬೇಕು ಅಂತ ಇದ್ದೇವೆ. ಇಲ್ಲಿನ ಯುವ ಸದಸ್ಯರಿಂದ ಕರ್ನಾಟಕದ ವಿವಿಧ ದತ್ತಿನಿಧಿ ಸಂಸ್ಥೆಗಳಿಗೆ ಧನ ಸಂಗ್ರಹ ಮಾಡುವ ಯೋಜನೆಯೂ ಇದೆ" ಎನ್ನುತ್ತಾರೆ ಶರ್ಮಿಳಾ.

ಅವರ ಈ ಎಲ್ಲ ಯೋಜನೆಗಳಲ್ಲಿ ಕೈಜೋಡಿಸಲು ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಇತರರೆಂದರೆ...

ಉಪಾಧ್ಯಕ್ಷ - ಗಿರೀಶ ವಾಸುದೇವ
ಕಾರ್ಯದರ್ಶಿ - ರಾಮಕೃಷ್ಣ ಭಟ್
ಜೊತೆಕಾರ್ಯದರ್ಶಿ - ರವಿಶಂಕರ್ ಮಹದೇವಪ್ಪ
ಖಜಾಂಚಿ - ಶೈಲಜಾ ಅರ್ಕಾಚಾರ್ಯ
ಸಹಖಜಾಂಚಿ - ಸುಧಾಕರ್ ಸರಸ್ವತೀಪುರ

ಕಾರ್ಯಕಾರಿ ಸದಸ್ಯರು : ಶೋಭಾ ರಾವ್, ನೂತನ್ ದೊಡ್ಡಬೆಲೆ, ಕುಮಾರ್ ನಿಂಗಾಸ್, ಶಶಿ ಮೂರ್ತಿ, ನಿಖಿಲಾ ಗುರುದತ್ತ, ಮಧುಶಾಲಿನಿ ಭಾಸ್ಕರ್.

ಯುವಸಮಿತಿ ನಿರ್ವಾಹಕಿ : ಸವಿತಾ ರಾವ್
ಲೆಕ್ಕಪತ್ರ ತಪಾಸಣೆ : ಜಯರಾಮ್ ಉಬ್ರಾನಿ

ಕಾವೇರಿ ಸಂಘದಲ್ಲಿ ಪದಾಧಿಕಾರಿಗಳ ಅವಧಿ ಒಂದು ಕ್ಯಾಲೆಂಡರ್ ವರ್ಷ ಮಾತ್ರ. ಜನವರಿಯಲ್ಲಿ ಸಂಕ್ರಾಂತಿ ಹಬ್ಬದ ವಿಶೇಷ ಕಾರ್ಯಕ್ರಮದೊಂದಿಗೆ ಹೊಸ ಸಮಿತಿಯ ಅಧಿಕೃತ ಕಾರ್ಯಭಾರ ಆರಂಭವಾಗುತ್ತದೆ. ಈಸಲ ಜನವರಿ 19ಕ್ಕೆ ಶಿವವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ 'ಕಾವೇರಿ ಐಡಲ್' ಸೇರಿದಂತೆ ಜನಪ್ರಿಯ ಕಾರ್ಯಕ್ರಮಗಳು ಮತ್ತು ಎಳ್ಳುಬೆಲ್ಲ ಹಬ್ಬದೂಟ ಸೇರಿರುವ ಸಂಕ್ರಾಂತಿ ವಿಶೇಷ ಕಾರ್ಯಕ್ರಮ ಇದೆ.

ಸಂಘದ ಅಂತರ್ಜಾಲ ತಾಣ : http://www.kaverionline.org/

English summary
New office bearers for Kaveri Kannada Sangha, Washington DC, USA have been elected. Sharmila Murthy will be the president. Sangha is celebrating Kaveri Idol and Sankranti festival on January 19, 2013 in Shiva Vishnu temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X