• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಿಗ್ಗೆ ಎಂಟರಿಂದ ಸಂಜೆ ಹತ್ತರವರೆಗೆ ವಾರದಲ್ಲಿ ಆರು ದಿನ

By ಸಂದರ್ಶನ: ಸುರೇಶ ಎಚ್.ಸಿ., ಸಿಂಗಪುರ
|

(ಸಂದರ್ಶನ ಮುಂದುವರಿದಿದೆ...)

ಹೇಮಮಾಲಿನಿ : ಖಂಡಿತವಾಗಿ. ಧನ್ಯವಾದಗಳು. ನೀವು ಸ್ಥಳೀಯ ಮಾಲೀಕರಾದ ಆಡ್ರಿ ಅವರನ್ನೂ ಭೇಟಿಮಾಡಿ.

ಪ್ರಶ್ನೆ : ನಮಸ್ಕಾರ ಆಡ್ರಿ ಅವರೆ. ನಿಮ್ಮ ಬಗ್ಗೆ ಸ್ವಲ್ಪ ತಿಳಿಸಿ.

ಆಡ್ರಿ : ನಮಸ್ಕಾರ. ನಾನು ಸಿಂಗಪುರಕ್ಕೆ ಬಂದು 15 ವರ್ಷಗಳಾಯಿತು. ಇಲ್ಲಿಯ ಊಟ ಚೆನ್ನಾಗಿಲ್ಲ, ಎಂಟಿಆರನ್ನು ಇಲ್ಲಿಗೆ ತರಿಸಬೇಕೆಂಬ ಆಸೆಯಿತ್ತು! (ನಗುತ್ತಾ) ಆದರೆ ಅದರ ಹಿಂದೆ ಇಷ್ಟೊಂದು ಕೆಲಸವಿದೆಯೆಂದು ಗೊತ್ತಿರಲಿಲ್ಲ! ಇಲ್ಲಿ ನಲ್ಲಿ, ಎಕ್ಸಾಸ್ಟ್ ಫ್ಯಾನ್, ಒಲೆ ಹೀಗೆ ಪ್ರತಿಯೊಂದನ್ನೂ ಸರಿಯಾದ ಜಾಗದಲ್ಲಿ, ಸರಿಯಾದ ಕ್ರಮದಲ್ಲಿ ಸ್ಥಾಪನೆ ಮಾಡಬೇಕು ಮತ್ತು ಪ್ರತಿಯೊಂದಕ್ಕೂ ಪರವಾನಗಿ ಬೇಕು. ಈ ಎಲ್ಲಾ ಅಗತ್ಯಗಳನ್ನೂ ಪೂರೈಸಿದ್ದೇವೆ; ಇದುವರೆಗಿನ ಪಯಣ ಸಾಕಷ್ಟು ಕಲಿಸಿದೆ.

ಪ್ರಶ್ನೆ : ನಿಮ್ಮ ವೃತ್ತಿ ಅನುಭವ ಯಾವ ಕ್ಷೇತ್ರದಲ್ಲಿ?

ಆಡ್ರಿ : ನನ್ನ ಅನುಭವ ಫೈನಾನ್ಸ್‌ನಲ್ಲಿ. ನಾನು ಸಮನ್ವಯ್ ಸಿಂಗಪೂರ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್. ಇದನ್ನು ಮತ್ತು ಎಂಟಿಆರ್‌ಅನ್ನು ಒಟ್ಟಿಗೇ ನಡೆಸಿಕೊಂಡು ಹೋಗುವ ಆಶಯ, ವಿಶ್ವಾಸ ನನಗಿದೆ.

ಪ್ರಶ್ನೆ : ಈ ದಿನ ರೆಸ್ಟೋರೆಂಟಿನ ಉದ್ಘಾಟನೆಗೆ ಯಾರು ಬಂದಿದ್ದರು?

ಆಡ್ರಿ, ಹೇಮಮಾಲಿನಿ, ವಿಕ್ರಮ್ : ಸಿಂಗಪುರದ ಭಾರತೀಯ ಹೈಕಮಿಶನರ್ ಟಿ.ಆರ್. ರಾಘವನ್, ಡೆಪುಟಿ ಹೈಕಮಿಶನರ್, ಫಸ್ಟ್ ಸೆಕ್ರೆಟರಿ ಮತ್ತಿತರರು; SICCIಯ ನಾರಾಯಣಮೋಹನ್, LISHAದ ಶ್ರೀನಿವಾಸನ್, ಜ್ಯೋತಿ ಹೋಲ್ಡಿಂಗ್ಸ್‌ನ ರಾಜ್‌ಕುಮಾರ್ ಚಂದ್ರ ಮುಂತಾದವರು ಬಂದಿದ್ದರು.

ಸುರೇಶ : ಬಹುಶ ನಾನು ಬೆಂಗಳೂರಿಗೆ ಬಂದಾಗಲೂ ನಿಮ್ಮ ಭೇಟಿ ಸಾಧ್ಯವಾಗುತ್ತಿತ್ತೋ ಇಲ್ಲವೋ, ಹೋಟೆಲ್ ತೆರೆಯುವ ಬಿಡುವಿರದ ಕೆಲಸಗಳ ಈ ದಿನ ನಿಮ್ಮ ಭೇಟಿ ಮತ್ತು ಸಂದರ್ಶನ ಮಾಡಲು ಅವಕಾಶ ಕೊಟ್ಟದ್ದಕ್ಕೆ ಹೃತ್ಪೂರಕ ಧನ್ಯವಾದಗಳು.

ಹೇಮಮಾಲಿನಿ : ನಿಮಗೂ ಧನ್ಯವಾದಗಳು. ನಾವು ಹೋಟೆಲ್‍ನ ಉದ್ಘಾಟನೆಯನ್ನು ಸರಳವಾಗಿ ಇಟ್ಟುಕೊಂಡಿದ್ದು ಹತ್ತಿರದ ಕೆಲವೇ ಜನರನ್ನು ಮಾತ್ರ ಆಮಂತ್ರಿಸಿದ್ದೆವು. ಹಾಗಾಗಿ ಸಂದರ್ಶನ ನೀಡಲು ಅನುಕೂಲವಾಯಿತು. ಮಧ್ಯಾಹ್ನ 12.30ಕ್ಕೆ ವ್ಯಾಪಾರ ಶುರು. ಅಲ್ಲಿಯವರೆಗೆ ಬಂದವರಿಗೆ ಉಚಿತವಾಗಿ ಉಪಾಹಾರ ಕೊಡುತ್ತಿದ್ದೇವೆ. ಸಿಂಗಪುರಕ್ಕೆ ಮತ್ತೆ ಭೇಟಿ ನೀಡಿದಾಗ ನಿಮ್ಮನ್ನು ಖಂಡಿತ ಸಂಪರ್ಕಿಸುತ್ತೇನೆ.

ಸಂದರ್ಶನದ ಮಾತುಕತೆಯ ನಡುವೆ ಹೋಟೆಲ್‌ನವರು ನನಗಾಗಿ ತಂದಿತ್ತ ಇಡ್ಲಿ, ಸಾಂಬಾರ್, ಚಟ್ನಿ, ಕೇಸರೀಬಾತ್ ತಣ್ಣಗಾಗಿದ್ದರಿಂದ ಮತ್ತೆ ಬಿಸಿ ಮಾಡಿಸಿ ತಂದುಕೊಟ್ಟಿದ್ದು, ಮಾತುಕತೆಯ ನಡುವೆ ಕೆಲಸದವರು ತಂದ ಖಾರಾಬಾತ್‌ನ ರುಚಿ ನೋಡಿ ಅದರ ಬಗ್ಗೆ ಅಭಿಪ್ರಾಯವನ್ನು ಅಡುಗೆ ಭಟ್ಟರಿಗೆ ತಿಳಿಸಿದ್ದು ಗುಣಮಟ್ಟದ ಮತ್ತು ಸೇವೆಯ ಮೇಲಿರುವ ಅವರ ಕಾಳಜಿಯ ಸಂಕೇತವಾಗಿತ್ತು. ಮನೆಯಲ್ಲಿ ತಿಂಡಿಯಾಗಿದ್ದರೂ ಇನ್ನೊಮ್ಮೆ ರುಚಿರುಚಿಯಾದ ತಿಂಡಿ ತಿಂದು, ಬಿಸಿ ಬಿಸಿ ಕಾಫಿ ಹೀರಿ, ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ, ಮತ್ತೆ ಕುಟುಂಬ ಸಮೇತ ಬರುತ್ತೇನೆಂದು ಹೇಳಿ ಅಲ್ಲಿಂದ ಹೊರಟಿದ್ದೆ. ಸಂಜೆ ಪೆರುಮಾಳ್ ದೇವಸ್ಥಾನದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ನೋಡಲು ಮತ್ತೆ ಸೆರಂಗೂನ್‌ಗೆ ಬಂದಾಗ ಸಾಂಪ್ರದಾಯಿಕವಾಗಿ ಎಂಟಿಆರ್ ಕಡೆ ಕಣ್ಣುಹಾಯಿಸಿದೆ. ಅದು ಬೆಂಗಳೂರಿನ ಎಂಟಿಆರ್‌ನಂತೆ ಗ್ರಾಹಕರಿಂದ ಗಿಜುಗುಡುತ್ತಿತ್ತು.

ಮಾಹಿತಿ : ಸಿಂಗಪುರದ ಎಂಟಿಆರ್ ಹೋಟೆಲ್‍ನ ಕಾರ್ಯಾವಧಿ (ತಾತ್ಕಾಲಿಕವಾಗಿ - ಮುಂದೆ ಸ್ವಲ್ಪ ಬದಲಾವಣೆಯಾಗಬಹುದು): ಬೆಳಿಗ್ಗೆ 8 ಗಂಟೆಯಿಂದ ಸಂಜೆ 10 ಗಂಟೆಯವರೆಗೆ - ವಾರದಲ್ಲಿ ಆರು ದಿನ. ಸೋಮವಾರ ರಜಾ ಇರುತ್ತದೆ. ದೂರವಾಣಿ ಸಂಖ್ಯೆ: 62965800. ಫೇರರ್ ಪಾರ್ಕ್ ಎಮ್‌ಆರ್‌ಟಿಯಲ್ಲಿಳಿದು Exit Hನಲ್ಲಿ ಹೊರಬಂದು ಬಲಬದಿಗೆ ಸುಮಾರು 1-2 ನಿಮಿಷ ನಡೆದರೆ ಎಂಟಿಆರ್‌ ಸಿಗುತ್ತದೆ.

English summary
Mavalli Tiffin Rooms, fondly called as MTR in Bangalore, has opened it's branch in Singapore on 26th May, 2013. On this auspecious occasion Suresha Bhatta talks to hotel partners Hemamalini and Vikram Maiya on behalf of Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X