ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಕನ್ನಡ ಶಾಲೆಯ 4ನೇ ವಾರ್ಷಿಕೋತ್ಸವ

By Prasad
|
Google Oneindia Kannada News

ಕರ್ನಾಟಕದಲ್ಲೇ ಕನ್ನಡ ಶಾಲೆಗಳು ಅಪರೂಪವಾಗಿ ದುರ್ಬೀನ್ ಇಟ್ಕೊಂಡು ಹುಡುಕಾಡೋ ಈ ಕಾಲದಲ್ಲಿ, ಕನ್ನಡ ಶಾಲೆಗಳಿದ್ದರೂ ಮಕ್ಕಳೇ ಕನ್ನಡ ಶಾಲೆಗೆ ಬಾರದಂತಹ ಈ ಕಾಲದಲ್ಲಿ.. ದೂರದ ಅಮೆರಿಕಾದ ಕನೆಕ್ಟಿಕಟ್ನಲ್ಲಿ ಇರುವ ಅಮೆರಿಕನ್ನಡ ಶಾಲೆ ಯಶಸ್ವಿಯಾಗಿ ತನ್ನ 4ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಜೂನ್ 15ರಂದು ಕನೆಕ್ಟಿಕಟ್ನ ಸೌತ್ ವಿಂಡ್ಸರ್ ನಲ್ಲಿ ಏರ್ಪಡಿಸಿತ್ತು.

ಎಲ್ಲ ಮಕ್ಕಳು ತಮ್ಮ ಪೋಷಕರೊಂದಿಗೆ ಮತ್ತು ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟದ ಪದಾಧಿಕಾರಿಗಳು ಸಂಭ್ರಮದಿಂದ ಭಾಗವಹಿಸಿದ್ದರು. 2013 ವಾರ್ಷಿಕ ಘಟಿಕೋತ್ಸವ ಕು|ಸಾನ್ವಿಯ ಪ್ರಾರ್ಥನೆಯೊಂದಿಗೆ ಶುರುವಾಯಿತು. ನಂತರ ಅನಿತಾ ಜೋಯಿಸ್ ರವರಿಂದ ಸ್ವಾಗತ ಸಮಾರಂಭ ನಡೆಯಿತು.

Kannada school in America completes 4 years

ಪ್ರತೀ ವಾರ ಒಂದೊಂದು ಉತ್ತಮ ಕನ್ನಡ ನೀತಿಕಥೆ ಹೇಳಿ ಮಕ್ಕಳಿಗೆ ರಂಜಿಸುತ್ತಿದ್ದ ರಘು ಸೋಸಲೆಯವರು ಕನ್ನಡ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪ್ರೋತ್ಸಾಹಿಸಿದರು. ಕನೆಕ್ಟಿಕಟ್ನ ಕನ್ನಡ ಕೂಟ ಅದ್ಯಕ್ಷರಾದ ದಿನೇಶ್ ಹರ್ಯಾಡಿಯವರಿಂದ ಒಂದು ಪುಟ್ಟ ಭಾಷಣ. ಆಮೇಲೆ ಎಲ್ಲ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಕನ್ನಡದಲ್ಲೇ ಎಲ್ಲರೊಂದಿಗೆ ಹಂಚಿಕೊಂಡು ಸಭಿಕರನ್ನು ಪುಳಕಿತಗೊಳಿಸಿದರು. ಬಳಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳಿಗೂ ಸರ್ಟಿಫಿಕೇಟ್ ನೀಡಲಾಯಿತು.

ವಂದನಾರ್ಪಣೆಯಾದ ಮೇಲೆ ಲಘು ಉಪಹಾರದೊಂದಿಗೆ ಈ ಚಿಕ್ಕ ಹಾಗು ಚೊಕ್ಕ ಕನ್ನಡ ಕಾರ್ಯಕ್ರಮಕ್ಕೆ ಪೋಷಕರೊಂದಿಗೆ ಭಾರತದಿಂದ ಆಗಮಿಸಿದ್ದ ಅಜ್ಜ-ಅಜ್ಜಿಯರು ಮಕ್ಕಳ-ಮೊಮ್ಮಕ್ಕಳ ಕನ್ನಡದ ಕಲಿಕೆ, ಅಭಿಮಾನ ನೋಡಿ ಸಂತೋಷಗೊಂಡರೆ, ಅಕ್ಷರ ಕಲಿಸಿದ ಅನಿತಾ ಜೋಯಿಸ್ ಹಾಗು ತಂಡದವರಿಗೆ ಏನೋ ಒಂದು ರೀತಿಯ ಸಂತೃಪ್ತಿ, ಸಮಾಧಾನ.

ಹೀಗೆಯೇ ಈ ಕನ್ನಡ ಶಾಲೆ ಮುಂದೆಯೂ ಯಶಸ್ವಿಯಾಗಿ ನಡೆಯಲಿ... ಕನ್ನಡದ ಕಂಪನ್ನು ಎಲ್ಲೆಡೆ ಹರಡಲಿ.

English summary
Kannada school in Connecticut, USA has successfully completed 4 years. Now-a-days it is very difficult to run Kannada schools in Karnataka itself. If such is the situation, the effort put in to teach Kannada to students in America is commendable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X