ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸಂತ ಸಾಹಿತ್ಯೋತ್ಸವ : ಕವನ ಓದಲು ಆಹ್ವಾನ

By ನಳಿನಿ ಮೈಯ
|
Google Oneindia Kannada News

Invite to recite Kannada poem
ಅಮೆರಿಕಾದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಂಸ್ಥೆಯಾದ 'ಕನ್ನಡ ಸಾಹಿತ್ಯ ರಂಗ'(ಕಸಾರಂ)ಕ್ಕೆ ಇದೀಗ ಹತ್ತು ವರ್ಷ ತುಂಬಿದೆ. ಬರುವ ಮೇ 18 ಮತ್ತು 19ರಂದು 'ಕಸಾರಂ' ತನ್ನ ದಶಮಾನೋತ್ಸವ ಹಾಗೂ 6ನೆಯ ವಸಂತ ಸಾಹಿತ್ಯೋತ್ಸವವನ್ನು ಹ್ಯೂಸ್ಟನ್ನಿನಲ್ಲಿ ಟೆಕ್ಸಸ್ ಕನ್ನಡಿಗರ ಆಶ್ರಯದಲ್ಲಿ ಆಚರಿಸುತ್ತಿದೆ.

ಸುಪ್ರಸಿದ್ಧ ಸ್ಠಳೀಯ ಕನ್ನಡ ಸಂಸ್ಥೆಯಾದ 'ಹ್ಯೂಸ್ಟನ್ ಕನ್ನಡ ವೃಂದ' ಈ ಸಂಘಟನೆಯಲ್ಲಿ ಸಹಪ್ರವರ್ತಕ ಪಾತ್ರ ವಹಿಸಿದೆ. ಟೆಕ್ಸಸ್ ರಾಜ್ಯದ ಇತರ ಹೆಸರಾಂತ ಕನ್ನಡ ಸಂಸ್ಥೆಗಳಾದ - ಆಸ್ಟಿನ್ ಕನ್ನಡ ಕೂಟ, ಸ್ಯಾನ್ ಆಂಟೋನಿಯೋದ ಕುವೆಂಪು ಕನ್ನಡ ಕೂಟ, ಡಲ್ಲಾಸ್‍ನ ಮಲ್ಲಿಗೆ ಕನ್ನಡ ಕೂಟ, ಮತ್ತು ರಿಯೋ ಗ್ರ್ಯಾಂಡ್ ವ್ಯಾಲಿಯ ಕನ್ನಡಕೂಟ - ಇವು ಈ ಸಮ್ಮೇಳನಕ್ಕೆ ತುಂಬು ಹೃದಯದಿಂದ ತಮ್ಮ ಸಹಕಾರ ಹಸ್ತವನ್ನು ಚಾಚುತ್ತಿವೆ.

ರೈಸ್ ಯೂನಿವರ್ಸಿಟಿಯ ಹ್ಯಾಮನ್ ಹಾಲ್ ಸಭಾಂಗಣದಲ್ಲಿ ನಡೆಯುವ ಈ ಸಾಹಿತ್ಯ ಸಮಾರಂಭದ ಅಂಗವಾಗಿ ನಡೆಯುವ ಕವಿಗೋಷ್ಠಿಯಲ್ಲಿ ನಿಮ್ಮ ಕವನಗಳನ್ನು ಓದಲು ಇದೋ ಇಲ್ಲಿದೆ ಪ್ರೀತಿಯ ಕರೆಯೋಲೆ. ಹೆಸರು 'ಕವಿ ಗೋಷ್ಠಿ'ಯಾದರೂ ಗದ್ಯ ಓದಲು ಅಡ್ಡಿ ಏನಿಲ್ಲ! ನಿಮ್ಮ ಕಂಪ್ಯೂಟರ್ ಕೀಲಿ ಮಣೆಯಲ್ಲಿ ಅಥವಾ ಲೇಖನಿಯಲ್ಲಿ ಹರಿದು ಬಂದ ಸರಸ್ವತಿಯ ನಾದ ಮಾಧುರ್ಯಕ್ಕೆ ಇಲ್ಲಿದೆ ಅಭಿವ್ಯಕ್ತಿಯ ವೇದಿಕೆ.

ಕವಿ ಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿ ವಿನಂತಿ:

* ಪ್ರತಿಯೊಬ್ಬರಿಗೂ ಕವನ ವಾಚನಕ್ಕೆ ಐದು ನಿಮಿಷ ಹಾಗೂ ಗದ್ಯ ವಾಚನಕ್ಕೆ ಏಳು ನಿಮಿಷ ಕಾಲಾವಧಿ ನೀಡಲಾಗುತ್ತದೆ.

* ನಿಮ್ಮ ರಚನೆಯನ್ನು ನೀವೇ ಓದಬೇಕು.

* ನೀವು ಓದಬೇಕೆಂದಿರುವ ಸಾಹಿತ್ಯವನ್ನು 'ಬರಹ'ದಲ್ಲಿ ಟೈಪ್ ಮಾಡಿ ಮುಂಚಿತವಾಗಿ ನಮಗೆ ಕಳಿಸಿಕೊಡಿ.

* ನಿಮ್ಮ ರಚನೆಯನ್ನು ಕಳಿಸಲು ಕೊನೆಯ ದಿನಾಂಕ ಏಪ್ರಿಲ್ 27, 2013.

* ಕವಿಗೋಷ್ಠಿಯಲ್ಲಿ ಪ್ರಸ್ತುತಿಯ ಆಯ್ಕೆಯ ಬಗ್ಗೆ ನಮ್ಮ ನಿರ್ಧಾರವೇ ಅಂತಿಮ.

* ನಿಮ್ಮ ರಚನೆಯನ್ನು ಈ ಕೆಳ ಕಂಡ ವಿಳಾಸಕ್ಕೆ ಈಮೇಲ್ ಮಾಡಿ.

[email protected]

English summary
Kannada Sahitya Ranga is celebrating centenary and conducting 6th Vasanta Sahityotsava in a grand fashion on May 18 and 19, 2013 in America. KSR has invited the Kannadigas to send their poems to be recited by themselves on the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X