ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬುಧಾಬಿಯಲ್ಲಿ ಬೆಂಗಳೂರು ಹುಡುಗಿಯ ಸಾಧನೆ

By Prasad
|
Google Oneindia Kannada News

Bangalore girl shines in Abudhabi in CBSE exam
ಅಬುಧಾಬಿ, ಮೇ 30 : ಭಾರತದಲ್ಲಿ ಇದ್ದುಕೊಂಡು ಸುದ್ದಿ ಮಾಡೋದೇ ಕಷ್ಟದ ಮಾತು. ಆದ್ರೆ ಬೆಂಗಳೂರಿನ ಹುಡುಗಿ ಮಾಳವಿಕ ವಿನೋದ್ ಅಬುಧಾಬಿಯಲ್ಲಿ ಇದ್ದುಕೊಂಡೇ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಅಬುಧಾಬಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಾಳವಿಕ ಈಗ ಸಿಬಿಎಸ್‌ಇ ಪರೀಕ್ಷೆಯಲ್ಲಿ ಟಾಪರ್ ಆಗಿ ದಾಖಲೆ ಬರೆದಿದ್ದಾರೆ.

ಅಬುಧಾಬಿಯ ಸನ್‌ರೈಸ್ ಇಂಗ್ಲಿಷ್ ಪ್ರೈವೇಟ್ ಸ್ಕೂಲ್‌ನಲ್ಲಿ ಕಲಿಯುತ್ತಿರುವ ಮಾಳವಿಕ ಕೆಮಿಸ್ಟ್ರಿ(ರಸಾಯನಶಾಸ್ತ್ರ)ಯಲ್ಲಿ 100ಕ್ಕೆ 100 ಅಂಕ ಪಡೆದುಕೊಂಡ್ರೆ, ಬಯಾಲಜಿ(ಜೀವಶಾಸ್ತ್ರ)ಯಲ್ಲಿ 98 ಅಂಕ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಇತರ 3 ವಿಷಯಗಳಲ್ಲೂ ಮಾಳವಿಕ ಶಾಲೆಗೇ ಫಸ್ಟ್.

ಶೇಕಡಾ 96.6 ಅಂಕಗಳನ್ನು ಪಡೆದಿರುವ ಮಾಳವಿಕ ತನ್ನ ಯಶಸ್ಸಿನ ಹಿಂದೆ ತಂದೆತಾಯಿಗಳ ಪ್ರೋತ್ಸಾಹ ಹಾಗೂ ದೇವರ ಕೃಪೆ ಇದೆ ಎನ್ನುತ್ತಾರೆ. ಸಂಗೀತದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಮಾಳವಿಕ, ಅಧ್ಯಯನ ಮೇಲೆ ವಿಶೇಷ ಗಮನ ಇದ್ರೆ ಸ್ಪೇಷಲ್ ಕೋಚಿಂಗ್‌ನ ಅಗತ್ಯ ಇಲ್ಲ ಎಂದು ನಂಬಿದ್ದಾರೆ.

ಮಾಳವಿಕ ಆರನೇ ತರಗತಿಯ ತನಕ ಬೆಂಗಳೂರಿನ ಪುಟ್ಟೇನಹಳ್ಳಿಯ ರಾಯಲ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಸದ್ಯ ರಜೆ ಕಳೆಯಲು ಬೆಂಗಳೂರಿಗೆ ಆಗಮಿಸಿರುವ ಮಾಳವಿಕ ಮಾಧ್ಯಮಗಳ ಜೊತೆ ಮನಬಿಚ್ಚಿ ಮಾತನಾಡಿದರು. ಕಠಿಣ ಶ್ರಮ ತನ್ನ ಯಶಸ್ಸಿನ ಗುಟ್ಟು ಅನ್ನೋ ರಹಸ್ಯವನ್ನು ಬಿಚ್ಚಿಟ್ಟರು.

ಮಾಳವಿಕ ತಂದೆ-ತಾಯಿ ಈಗಾಗಲೇ ಅಬುಧಾಬಿಯಲ್ಲಿ ಖ್ಯಾತ ಆರ್ಕಿಟೆಕ್ಚರ್ ಇಂಜಿನೀಯರ್‌ಗಳಾಗಿರೋದ್ರಿಂದ ಮಾಳವಿಕಗೂ ಅದ್ರ ಬಗ್ಗೆ ಆಸಕ್ತಿ ಹೆಚ್ಚಿದೆ. ದುಬೈನಲ್ಲಿ ಆರ್ಕಿಟೆಕ್ಚರ್ ಇಂಜಿನಿಯರಿಂಗ್ ಪದವಿ ಪಡೆಯುವುದು ಮಾಳವಿಕ ಕನಸು ಕೂಡ ಆಗಿದೆ. ಕರ್ನಾಟಕದ ಮಾಜಿ ಸಿಎಂ ಕಡಿದಾಳ್ ಮಂಜಪ್ಪಗೆ ಮಾಳವಿಕ ಕುಟುಂಬ ದೂರದ ಸಂಬಂಧಿಯೂ ಹೌದು. ಮಲ್ಲೇಶ್ವರಂನಲ್ಲಿ ಮಾಳವಿಕ ಅಜ್ಜ ಫರ್ನಿಷಿಂಗ್ ಹೌಸ್ ಒಂದರ ಮಾಲೀಕರೂ ಆಗಿದ್ದಾರೆ. ಅನೇಕ ಕನಸುಗಳನ್ನು ಕಟ್ಟಿಕೊಂಡಿರುವ ಮಾಳವಿಕ ಭವಿಷ್ಯಕ್ಕೆ ಶುಭ ಹಾರೈಸೋಣ.

English summary
Malavika Vinod, Bangalore girl and distant relative of Kadidal Manjappa, has shown outstanding performance in CBSE exam in Abu Dhabi, scoring 96.6% with a centum in Chemistry and 98% in Biology. She has topped her school in 3 subjects including English and the above subjects. Congratulations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X