ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಚನಾಂಜಲಿ : ಗಾಯನ, ನರ್ತನ ಮತ್ತು ಪಠನ

By ವೆಂಕಟ್ (ಸಿಂಗಪುರ)
|
Google Oneindia Kannada News

ವಚನಗಳ ಸಮೂಹ ಗಾಯನ : ಭಾಗ್ಯಮೂರ್ತಿಯವರ ನಿರ್ದೇಶನದಲ್ಲಿ ಪ್ರಧಾನ ಹಾಡುಗಾರರಾದ ಶೋಭ, ಶೃತಿ ಆನಂದ್, ಸಹನ ಹಾಗೂ ಉದಯೋನ್ಮುಖ ಗಾಯಕಿ ಕುಮಾರಿ ಅಕ್ಷಯ ಪ್ರಭು ಅವರ ಜೊತೆಗೂಡಿ ಸುಮಾರು 50 ಹಾಡುಗಾರರು ವೇದಿಕೆಯನ್ನು ಸಂಗೀತಮಯಗೊಳಿಸಿದ್ದರು. ಪಕ್ಕವಾದ್ಯದಲ್ಲಿ ಗಜನ್ (ಮೃದಂಗ), ಸರ್ವೇಶ್ವರ್ (ವಯಲಿನ್) ಮತ್ತು ಶಿವಕುಮಾರ್ (ಕೊಳಲು) 8 ವಚನಗಳನ್ನು ಪ್ರಸ್ತುತಪಡಿಸಿ ನೆರೆದಿದ್ದ ಸಭಿಕರನ್ನು ವಚನಗಳ ಲೋಕಕ್ಕೆ ಕರೆದೊಯ್ದಿದ್ದರು. ಪ್ರತಿ ವಚನಗಳ ಗಾಯನಕ್ಕೆ ಮುಂಚಿತವಾಗಿ ಅರವಿಂದ ಜತ್ತಿ ಅವರು ಆ ವಚನಗಳನ್ನು ವಿಶ್ಲೇಷಿಸಿ ಅವುಗಳ ಒಳಾರ್ಥವನ್ನು ಬಹು ಸುಂದರ ಮತ್ತು ಸರಳವಾಗಿ ಕನ್ನಡದಲ್ಲಿ ಮತ್ತು ಮಕ್ಕಳಿಗೆ ಆಂಗ್ಲಭಾಷೆಯಲ್ಲಿ ತಿಳಿಯಪಡಿಸಿದ್ದು ವಿಶೇಷವಾಗಿತ್ತು. ಈ ಸಮೂಹ ಗಾಯನದಲ್ಲಿ ಬಸವಣ್ಣನವರ "ವಚನದಲ್ಲಿ ನಾಮಾಮೃತ" "ನುಡಿದರೆ ಮುತ್ತಿನ ಹಾರದಂತಿರಬೇಕು", "ಕಳಬೇಡ ಕೊಲಬೇಡ" ಅಕ್ಕಮಹಾದೇವಿಯವರ "ಅಕ್ಕ ಕೇಳವ್ವ" ಗಗನದ ಗುಂಪ" ಅಲ್ಲಮಪ್ರಭು ಅವರ "ಕಲ್ಯಾಣವೆಂಬ ಪ್ರಣತಿಯಲ್ಲಿ" ಅಂಬಿಗರ ಚೌಡಯ್ಯನವರ "ಬಡತನಕೆ ಉಂಬುವ ಚಿಂತೆ" ಮತ್ತು ನಿಜಗುಣ ಶಿವಯೋಗಿಯವರ "ಜ್ಯೋತಿ ಬೆಳಗುತಿದೆ" ವಚನಗಳನ್ನು ಸುಮಧುರವಾಗಿ ಹಾಡಿದರು.

ಅರವಿಂದ ಜತ್ತಿಯವರು ಬಸವಣ್ಣನವರ ವಚನಗಳಲ್ಲಿನ "ಬೇಕು"ಗಳ ಸರಮಾಲೆ (ನುಡಿದರೆ ಮುತ್ತಿನ ಹಾರದಂತಿರಬೇಕು ವಚನದಲ್ಲಿ) ಮತ್ತು "ಬೇಡ"ಗಳ ಸರಮಾಲೆ (ಕಳಬೇಡ..ಕೊಲಬೇಡ)ಗಳನ್ನು ಬಹು ಸುಂದರವಾಗಿ ಉತ್ತಮ ಉದಾಹರಣೆಗಳೊಂದಿಗೆ ವಿವರಿಸಿ, "ವಚನಗಳನ್ನು ಹೇಳುವುದು ಬಹಳ ಸುಲಭ ಆದರೆ ಪಾಲಿಸುವುದು ಕಷ್ಟಕರವೆನಿಸಿದರೂ ಮರ್ಮವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು" ಎಂದು ತಿಳಿಸಿದರು. ಅಂಬಿಗರ ಚೌಡಯ್ಯನವರ "ಬಡವನಿಗೆ ಉಂಬುವ ಚಿಂತೆ"ಯ ಪೀಠಿಕೆಯನ್ನು ವಿವರಿಸಿದ್ದು ತುಂಬ ಅರ್ಥಪೂರ್ಣವಾಗಿತ್ತು ಹಾಗೂ ಭಾಗ್ಯಮೂರ್ತಿ ಮತ್ತು ಅವರ ತಂಡದಿಂದ ಮೂಡಿಬಂದ ಈ ಹಾಡು ಎಲ್ಲರನ್ನೂ ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ದಿತು. ಕೊನೆಯಲ್ಲಿ ಮಂಗಳದ ಹಾಡು "ಜ್ಯೋತಿ ಬೆಳಗುತಿದೆ.." ವಚನದ ನಂತರ ಅರವಿಂದ ಜತ್ತಿ ಅವರು ಭಾಗ್ಯಮೂರ್ತಿ ಅವರಿಗೆ ಪೂಜ್ಯ ಅಕ್ಕನೆಂದು ಸಂಬೋಧಿಸಿ, ಇಂದು ನಿಜಕ್ಕೂ ನಿರ್ಮಲವಾದ ಜ್ಞಾನಜ್ಯೋತಿ ಬೆಳಗಿತೆಂದರು. ಕನ್ನಡನಾಡಿನಿಂದ ದೂರವಿರುವ ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ವಚನಗಳನ್ನು ಬರೆದುಕೊಟ್ಟು ಅದಕ್ಕೆ ಸಂಗೀತ ಸಂಯೋಜನೆ ಮಾಡಿ ಹಾಡಿಸಿದ್ದನ್ನು ಶ್ಲಾಘಿಸಿದರು. ಕನ್ನಡ ಕೇವಲ ಭಾಷೆ ಮಾತ್ರವಲ್ಲ ಅದೊಂದು ಸಂಸ್ಕೃತಿ ಮತ್ತು ಬದುಕೆಂಬ ಸಂದೇಶವನ್ನು ಸಾರಿದರು.

Vachananjali-2012

ನೃತ್ಯ : ಮಾಲಿಕಾ ಗಿರೀಶ್ ಪಾಣಿಕರ್ ಅವರ ನೃತ್ಯ ನಿರ್ವಹಣೆಯಲ್ಲಿ, ಕುಮಾರಿ ಮೇಘನ ಹೆಬ್ಬಾರ್ ಅವರು ಬಸವಣ್ಣನವರ "ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ"ಯ ವಚನಕ್ಕೆ ನೃತ್ಯವನ್ನು ಪ್ರಸ್ತುತ ಪಡಿಸಿದರೆ, ಲಕ್ಷ್ಮಿ ನೃತ್ಯ ನಿರ್ವಹಣೆಯಲ್ಲಿ ಕು. ಅದಿತಿ ನವೀನ್ ಭಟ್, ಅಕ್ಷರ ಮರನ್ ಮತ್ತು ಅಂಕಿತ ರಾಜರಾಮ್ ಅವರು "ಛಲ ಬೇಕು ಶರಣಂಗೆ.." ಎಂಬ ಬಸವಣ್ಣನವರ ವಚನಕ್ಕೆ ಬಹು ಸುಂದರವಾದ ನೃತ್ಯವನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ವಚನಗಳ ಪಠನೆಯ ಸ್ಪರ್ಧೆ ವಿಜೇತರು : ಕನ್ನಡ ಸಂಘವು "ವಚನಾಂಜಲಿ-2012"ಯ ಪ್ರಯುಕ್ತ ಜುಲೈ 15ರಂದು ವಚನಗಳ ಪಠನೆಯ ಸ್ಪರ್ಧೆಗಳನ್ನು 5-8, 9-14 ಮತ್ತು 15 ವರ್ಷಕ್ಕೆ ಮೇಲ್ಪಟ್ಟವರಿಗೆಂದು ಮೂರು ವಿಭಾಗಗಳಲ್ಲಿ ಏರ್ಪಡಿಸಲಾಗಿತ್ತು. ರಶ್ಮಿ ಉದಯ್‌ಕುಮಾರ್ ಅವರ ನಿರ್ವಹಣೆಯಲ್ಲಿ ಈ ಕಾರ್ಯಕ್ರಮಕ್ಕೆ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಭಾಗವಹಿದ್ದರು. ವಸಂತ್ ಕುಲಕರ್ಣಿ, ಸುರೇಶ್ ಭಟ್ಟ ಮತ್ತು ಶಂಕರ್ ಮರೋಳ್ ಅವರು ತೀರ್ಪುಗಾರರಾಗಿ ಸಂಯೋಜಿಸಿದ ಈ ಸ್ಪರ್ಧೆಗಳಲ್ಲಿ ವಿಜೇತರಿಗೆ ಅರವಿಂದ ಜತ್ತಿ ಮತ್ತು ವಿಜಯ ರಂಗ ಪ್ರಸಾದ್ ಅವರ ಮೂಲಕ ಅವರಿಂದ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆಗಳನ್ನು ನೀಡಿ ಪ್ರೋತ್ಸಾಹಿಸಿದರು.

ಮೊದಲನೆ ಭಾಗವಾದ 5-8 ವರ್ಷದ ವಿಭಾಗದಲ್ಲಿ ಕುಮಾರಿ ಭಾನುಶ್ರೀ ಜಯಸಿಂಹ (ಮೊದಲನೆ ಬಹುಮಾನ), ಚಿ. ಪ್ರಣವ್ ತುಮ್ಮಿನಕಟ್ಟಿ (ಎರಡನೆ ಬಹುಮಾನ), ಚಿ. ರಕ್ಷಿತ್ ಹೆಗ್ಡೆ (ಮೂರನೆಯ ಬಹುಮಾನ). ಎರಡನೆಯ ಭಾಗವಾದ 9-14 ವರ್ಷದ ವಿಭಾಗದಲ್ಲಿ ಚಿ. ಹೇಮಂತ್ (ಮೊದಲನೆಯ ಬಹುಮಾನ), ಕುಮಾರಿ ಖುಷಿ ಉದಯಕುಮಾರ್ (ಎರಡನೆಯ ಬಹುಮಾನ), ಚಿ. ಮನೋಘ್ಞ ನರಸಿಂಹ (ಮೂರನೆಯ ಬಹುಮಾನ), 15 ವರ್ಷಕ್ಕೆ ಮೇಲ್ಪಟ್ಟ ಸ್ಪರ್ಧೆಯಲ್ಲಿ ರಾಮದಾಸ್ ರಾವ್(ಮೊದಲನೆಯ ಬಹುಮಾನ), ರಶ್ಮಿ ಹೆಗ್ಡೆ (ಎರಡನೆಯ ಬಹುಮಾನ), ಆಶಾ ಶ್ರೀನಿವಾಸ್ ಮೂರ್ತಿ (ಮೂರನೆಯ ಬಹುಮಾನ). ತನ್ನ ವಚನ ಪಠನೆಯಿಂದ ಪ್ರೇಕ್ಷಕರ ಮನಸೂರೆಗೊಂಡ 4 ವರ್ಷದ ಚಿ. ಶಾಶ್ವತ್ ಹೆಗಡೆ ಅವರಿಗೆ ವಿಶೇಷ ಬಹುಮಾನವನ್ನು ನೀಡಲಾಯಿತು. (ಛಾಯಾಚಿತ್ರ: ರಾಜೇಶ್ ಹೆಗಡೆ, ಸಿಂಗಪುರ)

English summary
Vachananjali-2012 was organized by Singapore Kannada Sangha in Singapore on July 21, 2012 in association with Woodlands CC IAEC. A report by Venkat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X