• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಸ್ ಏಂಜಲಿಸ್‌ನಲ್ಲಿ ನ.3ರಂದು ನಾಟಕ 'ಸಪ್ತಮುಖಿ'

By ಆಹಿತಾನಲ, ಆರ್ಕೇಡಿಯ, ದ. ಕ್ಯಾಲಿಫೋರ್ನಿಯ
|

ಲಾಸ್ ಏಂಜಲಿಸ್ ವಲಯದಲ್ಲಿ, ಭಾರತೀಯ ಸಂಸ್ಕೃತಿ ಮತ್ತು ಕಲೆಗಳನ್ನು ಅಮೆರಿಕದಲ್ಲಿ ಪರಿಚಯ ಮಾಡಿಕೊಡುವ ಉದ್ದೇಶದಿಂದ, ಡಾ. ಚಂದ್ರ ಐತಾಳರ ನಿರ್ದೇಶನದಲ್ಲಿ ‘ಅಸೀಮ' ಎಂಬ ಸಾಂಸ್ಕೃತಿಕ ತಂಡವೊಂದು ಸ್ಥಾಪನೆಯಾಗಿದೆ. ಈ ತಂಡದವರು ಎರಡು ವರ್ಷಗಳ ಹಿಂದೆ ಪ್ರದರ್ಶಿಸಿದ, ಸಾಹಿತಿ, ವೆಂಕಟೇಶಮೂರ್ತಿಯವರು ರಚಿಸಿದ, ‘ಚಿತ್ರಪಟ' ನಾಟಕದ ಅಮೋಘ ಯಶಸ್ವಿ ಪ್ರದರ್ಶನ ಎಲ್ಲೆಡೆ ಪ್ರಸಂಶನೆ ಪಡೆದಿತ್ತು. ಇದೀಗ, ಆ ತಂಡದವರ ಎರಡನೆಯ ಕೊಡುಗೆಯಾಗಿ, ‘ಸಪ್ತಮುಖಿ' ಎಂಬ ಅನನ್ಯ ಸಂಗೀತ-ನಾಟಕವೊಂದರ ರಂಗ ಪ್ರದರ್ಶನ, ಇದೇ ನವೆಂಬರ್ 3ರಂದು, ಲಾಸ್ ಏಂಜಲಿಸ್ ಸಮೀಪದ ಬಡಾವಣೆ, ಬಾಲ್ಡ್‌ವಿನ್ ಪಾರ್ಕ್‌ನ, Baldwin Park Performing Arts Centerನಲ್ಲಿ ನಡೆಯಲಿದೆ. ಎಂದಿನಂತೆ ರಂಗ ಪ್ರೇಮಿಗಳು, ಚಂದ್ರ ಐತಾಳರ ಶ್ರಮಕ್ಕೆ ಬೆಂಬಲ ನೀಡುವರೆಂಬ ನಂಬಿಕೆ ಇದೆ.

ಬದುಕೇ ಒಂದು ನಾಟಕವೆಂಬ ಮಾತೊಂದಿದೆ. ಬದುಕಿನಲ್ಲಿ ನಡೆದುಕೊಂಡು ಬಂದ ಪರಂಪರೆಗಳು ನಾಟಕಗಳಲ್ಲಿ, ಅದರಲ್ಲೂ ಇತ್ತೀಚೆಗಿನ ಸಮಕಾಲೀನ ನಾಟಕ ಪ್ರದರ್ಶನಗಳಲ್ಲಿ ಅಭಿವ್ಯಕ್ತಗೊಂಡಿರುವುದನ್ನು ಗಮನಿಸಬಹುದು. ನಮ್ಮ ಒಡಲೊಳಗಿನ ಪಿಸು ಮಾತುಗಳಿಗೆ ಅರ್ಥ ಕಲ್ಪಿಸಿಸಲು, ಈ ಪರಂಪರೆಗಳನ್ನು ಆಗಾಗ ಒರೆಗಿಟ್ಟು ನೋಡಬೇಕಾಗುತ್ತದೆ. ನಮ್ಮ ಧಾರ್ಮಿಕ ಪರಂಪರೆ, ರಾಜಕೀಯ ಪರಂಪರೆ, ಪೌರಾಣಿಕ ಪರಂಪರೆ ಹಾಗೂ ನಂಬಿಕೆಗಳನ್ನು ಒರೆಗಿಟ್ಟಾಗ, ಅವು ಒಂದು ಬಗೆಯ ತರ್ಕಬದ್ಧ ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಡುತ್ತವೆ. ಇದೇ ಅಸೀಮ ಪ್ರಸ್ತುತಪಡಿಸುತ್ತಿರುವ ‘ಸಪ್ತಮುಖಿ' ಸಾರುವ ಮುಖ್ಯ ಸಂದೇಶವಾಗಿದೆ. ಈ ನಾಟಕದಲ್ಲಿ ನಾಟಕಕಾರರ ಚಮತ್ಕಾರವೂ, ಸಾಹಿತ್ಯಕ ಸೃಜನಶೀಲತೆಯೂ ಎದ್ದು ತೋರುತ್ತದೆ.

ಪ್ರಸ್ತುತ, ‘ಸಪ್ತಮುಖಿ'ಯಲ್ಲಿ, "ಅರಹಂತ" (ರಾಮನಾಥ), "ಗಾಳಿ ಎಂಬ ಕುದುರೆ ಏರಿ" (ಪ್ರಭುಶಂಕರ), "ಯುದ್ಧ", (ಜಯಂತ ಕಾಯ್ಕಿಣಿ ಪ್ರಬಂಧದ ಮೇಲೆ ಆಧಾರಿತ), "ಪರಂಪರೆ" (ಜಯಂತ ಕಾಯ್ಕಿಣಿ - ಜತೆಗಿರುವನು ಚಂದಿರ ನಾಟಕದಿಂದ), "ಪರಿತ್ಯಕ್ತ" (ಅಂಬಾತನಯ ಮುದ್ರಾಡಿ), "ಕೊಡೆಗಳು" (ಚಂದ್ರಶೇಖರ ಪಾಟೀಲ) ಮತ್ತು "ಉಳ್ಳವರ ನೆರಳು" (ಎಸ್. ವಿಜಯ) - ಎಂಬ ಏಳು ನಾಟಕಗಳ ದೃಶ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಇವುಗಳನ್ನು ಒಂದು ವಿಶಿಷ್ಟ ಕೊಂಡಿಗಳಿಂದ ಚಂದ್ರ ಐತಾಳರು ಜೋಡಿಸಿದ್ದಾರೆ. ಸೂತ್ರಧಾರರ ಪಾತ್ರಗಳು ಮತ್ತು ಅವರ ಹಾಡುಗಳು ಇಲ್ಲಿ ಪ್ರಮುಖವಾಗಿವೆ. ಹಿಮ್ಮೇಳದ ಸಂಗೀತ ನಾಟಕಗಳ ಒಳಗೇ ಇರುವ ಹಾಡುಗಳು ಮತ್ತು ನಾಟಕಗಳನ್ನು ಒಂದಕ್ಕೊಂದು ಜೋಡಿಸುವ ಹಾಡುಗಳನ್ನು ಹಿಮ್ಮೇಳದವರು ಒದಗಿಸಲಿದ್ದಾರೆ. ಸಪ್ತಸ್ವರಗಳು ಸೇರಿ ಉತ್ತಮ ಗಾಯನವಾಗುವಂತೆ, ಈ ಸಪ್ತ ನಾಟಕಗಳು ಇಲ್ಲಿ ಜೋಡಣೆಯಾಗಿವೆ. ಹೀಗೆ ಜೋಡಿಸುವಲ್ಲಿ, ಮಾನವನ ಮೂರು ಮುಖಗಳಾದ ಮಾನವತೆ, ದಾನವತೆ ಮತ್ತು ದೈವತ್ವಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಇದೊಂದು ಅನನ್ಯ ಪ್ರಯೋಗವೆಂದೇ ಹೇಳಬಹುದು. ನಾಟಕದ ನಿರ್ದೇಶಕರೂ, ಸಂಗೀತ ನಿರ್ದೇಶಕರೂ ಚಂದ್ರ ಐತಾಳರು. ಅಸೀಮ ತಂಡದವರು ಪ್ರಸ್ತುತಪಡಿಸುತ್ತಿರುವ ಈ ಅನನ್ಯ ಕೊಡುಗೆಯ ಪ್ರಾಯೋಜಕರು ದಕ್ಷಿಣ ಕ್ಯಾಲಿಫೋರ್ನಿಯದ ಸಾಂಸ್ಕೃತಿಕ ಸಂಘದವರು. ಈ ಪ್ರದೇಶದ ಕನ್ನಡಿಗರೇ ಪ್ರಸ್ತುತಪಡಿಸುವ ಕಾರ್ಯಕ್ರಮ ಇದು.

ನಾಟಕ ಪ್ರದರ್ಶನದ ವಿವರಗಳು ಹೀಗಿವೆ:

ನಾಟಕ : ‘ಸಪ್ತಮುಖಿ'

ರಚನೆ : ಸಮಕಾಲೀನ ಕನ್ನಡ ನಾಟಕಕಾರರು

ಪ್ರದರ್ಶನ ದಿನಾಂಕ ಮತ್ತು ವೇಳೆ : ಶನಿವಾರ, ನವೆಂಬರ್ 3, 2012; ಅಪರಾಹ್ನ - 5.30ಕ್ಕೆ

ಸ್ಥಳ : Baldwin Park Performing Arts CenteBaldwin Park Performing center, 4640, Maine St, Baldwin Park, CACA 91706

ಪ್ರವೇಶ ಧನ : 15.00 ಡಾಲರುಗಳು

ಕಾರ್ಯಕ್ರಮ ಮುಗಿದ ಮೇಲೆ ಲಘು ಭೋಜನದ ವ್ಯವಸ್ಥೆ ಮಾಡಲಾಗಿದೆ.

ಈ ಕಾರ್ಯಕ್ರಮವನ್ನು ಸಹಪ್ರಾಯೋಜಿಸಲು ಉದಾರೀ ದಾನಿಗಳನ್ನು ನಮ್ರತೆಯಿಂದ ಕೋರಿಕೊಳ್ಳುತ್ತಿದ್ದೇವೆ. ಸಹಪ್ರಾಯೋಜಿಕ ವಿವರಗಳು:

Platinum Co-sponsors : $ 500.00 and above (4 complimentary tickets provided)

Gold Co-sponsors : 250.00 (4 complimentary tickets provided)

Silver Co-sponsors : 100.00 (2 complimentary tickets provided)

ಹೆಚ್ಚಿನ ವಿವರಗಳಿಗೆ ಈ ಕೆಳಗಿನವರನ್ನು ಸಂಪರ್ಕಿಸಿರಿ:

ಶ್ರೀನಿವಾಸ ಭಟ್ - 909-623-3185

ಅಮೃತ ಬಸವಾಪಟ್ನ - 562-556-6198

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Dramatist Chandra Aithal's Aseema drama troupe will be presenting Kannada play Saptamukhi on November 3, 2012 in Los Angeles. The Kannada drama is inspired by 7 Kannada plays by famous dramatists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X