ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕ 2013 ವಿಶ್ವ ಕನ್ನಡ ಸಮಾವೇಶಕ್ಕೆ ಭರದ ಸಿದ್ಧತೆ

By ಮಧುಸೂದನ್ ಅಕ್ಕಿಹೆಬ್ಬಾಳ್
|
Google Oneindia Kannada News

ನಾವಿಕ 2013 ವಿಶ್ವ ಕನ್ನಡ ಸಮಾವೇಶ ಅಮೆರಿಕಾದ ಬೋಸ್ಟನ್ ನಲ್ಲಿ ನಡೆಯುವುದು ಎಲ್ಲರಿಗೂ ತಿಳಿದ ವಿಷಯ. ಇಂಥ ದೊಡ್ಡ ಪ್ರಮಾಣದ ಕಾರ್ಯಕ್ರಮ ಬೋಸ್ಟನ್ ನಲ್ಲಿ ಮೊದಲ ಬಾರಿಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಇದರ ಅಂಗವಾಗಿ ನವೆಂಬರ್ 18ರಂದು ಬೋಸ್ಟನ್ ಹತ್ತಿರದ ಆಂಡೋವರ್ ನಲ್ಲಿ 'ನಾವಿಕ 2013' ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯಲ್ಲಿ ಪ್ರಮುಖ ಉದ್ಯಮಿ ಗುರುರಾಜ್ ದೇಶಪಾಂಡೆ, ನಾವಿಕ ಅಧ್ಯಕ್ಷ ಡಾ|| ಕೇಶವ ಬಾಬು, ನಾವಿಕ ಕೇಂದ್ರೀಯ ಸಮಿತಿಯ ಸದಸ್ಯರಾದ ಸುರೇಶ ರಾಮಚಂದ್ರ ಮತ್ತು ಡಾ|| ರಾಮಪ್ಪ ಅವರು ಉಪಸ್ಥಿತರಿದರು. ಕಾರ್ಯಕ್ರಮದ ನಿರೂಪಣೆಯನ್ನು ನಾವಿಕ 2013ರ ಸಾಂಸ್ಕೃತಿಕ ಸಮಿತಿಯವರು ನಡೆಸಿಕೊಟ್ಟರು. ನಾವಿಕ 2013ರ ಸಂಚಾಲಕರಾದ ಶರಣಬಸವ ರಾಜೂರ್ ಅವರು ಕಾರ್ಯಕರ್ತರನ್ನು ಸ್ವಾಗತಿಸಿ ಇಂಥ ಕಾರ್ಯಕ್ರಮದಿಂದ ಕನ್ನಡಿಗ ಸಮುದಾಯದಲ್ಲಿ ಸಹಕಾರ ಮತ್ತು ಸಂಘಟನೆ ಹೆಚ್ಚಾಗುವುದೆಂಬ ಆಶಯ ವ್ಯಕ್ತಪಡಿಸಿದರು.

ನಾವಿಕ 2013 ಸಲಹಾ ಸಮಿತಿಯ ಸದಸ್ಯರೂ ಆದ ಗುರುರಾಜ್ ದೇಶಪಾಂಡೆ ಅವರು, ಈ ಕಾರ್ಯಕ್ರಮದ ಆಯೋಜನೆಯಲ್ಲಿ ಸಂಸ್ಥೆಯ ಗುರಿಯನ್ನು ಗಮನದಲ್ಲಿಟ್ಟು ಎಲ್ಲರೂ ಒಟ್ಟಾಗಿ ದುಡಿಯಬೇಕು, ವೈಯಕ್ತಿಕ ಉದ್ದೇಶ ಅಥವಾ ಭಾವನೆಗಳು ಅಡ್ಡಿ ಉಂಟು ಮಾಡಬಾರದು ಎಂಬ ಕಿವಿ ಮಾತು ಹೇಳಿದರು. ಕಾರ್ಯಕ್ರಮ ನಿರ್ವಹಣೆ ಬಗ್ಗೆ ಕಾರ್ಯಕರ್ತರ ಪ್ರಶ್ನೆಗಳಿಗೂ ಅವರು ಉತ್ತರ ನೀಡಿದರು.


ಸುರೇಶ ರಾಮಚಂದ್ರ ಅವರು ಮಾತನಾಡಿ, ತಾವು 2006ರಲ್ಲಿ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಂಚಾಲಕರಾಗಿದ್ದ ಅನುಭವ ಹಂಚಿಕೊಂಡರು. ಡಾ|| ರಾಮಪ್ಪ ಅವರು ಮುಂಬರುವ ಸಮಾವೇಶಕ್ಕೆ ಶುಭ ಕೋರಿದರು. ಡಾ|| ಕೇಶವ ಬಾಬು ಅವರು ನಾವಿಕ ವತಿಯಿಂದ ಹೊಸ ಕನ್ನಡಪರ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಆಹ್ವಾನಿಸಿ, ಬೋಸ್ಟನ್ ಕಾರ್ಯಕರ್ತರ ಉತ್ಸಾಹಕ್ಕೆ ಮೆಚ್ಚುಗೆ ಸೂಚಿಸಿದರು.

ನಿರ್ವಹಣಾ ಸಮಿತಿ, ಅಂತರಜಾಲ ಸಮಿತಿ, ಕಾರ್ಯಕ್ರಮ ಸೌಲಭ್ಯ ಸಮಿತಿಯ ಪ್ರತಿನಿಧಿಗಳು ತಮ್ಮ ತಂಡಗಳ ಕಾರ್ಯ ಪ್ರಗತಿಯ ಬಗ್ಗೆ ವಿವರಿಸಿದರು. ಚಂದಾ ವಸೂಲಿ ಸಮಿತಿಯ ಪ್ರತಿನಿಧಿಗಳು ಈ ಸಮಾರಂಭಕ್ಕೆ ಕಾರ್ಯಕರ್ತರ ತನು, ಮನ, ಧನದ ಕೊಡುಗೆಯ ಅಗತ್ಯವನ್ನು ವಿವರಿಸಿದರು. ಇತೀಚೆಗಷ್ಟೇ ರತ್ನ ಮಹೋತ್ಸವ ಆಚರಿಸಿದ ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡ ಕೂಟದ ಪ್ರಪ್ರಥಮ ಅಧ್ಯಕ್ಷರಾಗಿದ್ದ ಎಸ್.ಎಲ್.ಎನ್.ರಾವ್ ಮತ್ತು ಕನೆಕ್ಟಿಕಟ್ ನ ಹೊಯ್ಸಳ ಕನ್ನಡ ಕೂಟದ ಪ್ರತಿನಿಧಿಗಳೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾವಿಕ 2013 ಕಾರ್ಯಕ್ರಮಕ್ಕೆ ಸಹಕಾರ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ಸಮಿತಿಯವರು ನಾವಿಕ 2013 ಕಾರ್ಯಕ್ರಮಕ್ಕೆ ಒಂದು ಆಕರ್ಷಕ ಘೋಷಣೆಯನ್ನು ಆಯ್ಕೆ ಮಾಡುವ ಸ್ಪರ್ಧೆ ಪ್ರಕಟಿಸಿದರು. ನಂತರ, ವಿವಿಧ ಸಮಿತಿಗಳ ಸದಸ್ಯರ ಛಾಯಾಚಿತ್ರಗಳನ್ನು ಸೆರೆಹಿಡಿಯಲಾಯಿತು. ಆಹಾರ ಸಮಿತಿಯವರು ಮಧ್ಯಾಹ್ನದ ಉಪಹಾರ ಮತ್ತು ರಾತ್ರಿಯ ರುಚಿಕರ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿದ 150 ಕಾರ್ಯಕರ್ತರು ಇನ್ನು ಹತ್ತು ತಿಂಗಳಲ್ಲಿ ನಡೆಯುವ ವಿಶ್ವ ಕನ್ನಡ ಸಮಾವೇಶಕ್ಕೆ ತಮ್ಮ ಶಕ್ತ್ಯಾನುಸಾರ ದುಡಿಯುವ ಪಣ ತೊಟ್ಟರು.

ಬೋಸ್ಟನ್ ನಲ್ಲಿ ಮುಂದಿನ ಆಗಸ್ಟ್ 31 - ಸೆಪ್ಟೆಂಬರ್ 2ರಂದು ವಿಶ್ವ ಕನ್ನಡ ಸಮಾವೇಶ ನಡೆಯಲಿದೆ. ನಾವಿಕ ವತಿಯಿಂದ ನಡೆಯುವ ಈ ಬೃಹತ್ ಕನ್ನಡ ಮೇಳವನ್ನು ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಮತ್ತು ಕನೆಕ್ಟಿಕಟ್ ನ ಹೊಯ್ಸಳ ಕನ್ನಡ ಕೂಟದ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿ, ಪ್ರಾಯೋಜನ, ಕಾರ್ಯಕರ್ತರು ಮತ್ತು ಇತರ ವಿವರಣೆಗಳಿಗೆ ಈ-ಮೇಲ್ ಮೂಲಕ ನಮ್ಮನ್ನು ಸಂಧಿಸಬಹುದಾದ ವಿಳಾಸ - [email protected]. ನಮ್ಮ ಅಂತರಜಾಲ ತಾಣಕ್ಕೆ ಭೇಟಿ ಕೊಡಿ - http://navika.org/2013.

English summary
Navika (North America Vishwa Kannada Association) is conducting 2nd World Kannada Summit in Boston from Aug 30 - Sep 1, 2013. A meeting was conducted to kick start the preparations for the Kannada conference. A report by Madhusudhan Akkihebbal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X