• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಕ್ಷಿಣ ಕೊರಿಯಾದಲ್ಲಿ ಮೊಳಗಿದ ಕನ್ನಡ ಕಹಳೆ

By ನವನೀತ್ ಬಾಸುಟ್ಕರ್
|

ಕನ್ನಡ ರಾಜ್ಯೋತ್ಸವವು ನವೆಂಬರ್ 4ರಂದು ದಕ್ಷಿಣ ಕೊರಿಯಾ ರಾಜಧಾನಿಯಾದ ಸಿಯೋಲ್ ನಗರದ ಇಂಡಿಯನ್ ಎಂಬಸ್ಸಿ'ಗೆ ಸೇರಿದ ಇಂಡಿಯನ್ ಕಲ್ಚರಲ್ ಸೆಂಟರ್' ನಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು 'ಕೊರಿಯ ಕನ್ನಡ ಕೂಟ' ಸಂಘ ಹಮ್ಮಿಕೊಂಡಿತ್ತು. ತುಂಬಾ ಉತ್ಸಾಹದಿಂದ 40ಕ್ಕೂ ಹೆಚ್ಚು ಕನ್ನಡಿಗರು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು.

ದಕ್ಷಿಣ ಕೊರಿಯಾದ ವಿವಿಧ ಭಾಗಗಳಿಂದ ಕನ್ನಡಿಗರು ಕನ್ನಡ ರಾಜ್ಯೋತ್ಸವದ ಸಲುವಾಗಿ ಸಿಯೋಲ್ ನಗರಕ್ಕೆ ಆಗಮಿಸಿದ್ದರು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ಶುರುವಾಗಿದ್ದ ಕಾರ್ಯಕ್ರಮಗಳು ಸಂಜೆ 4 ಗಂಟೆಯವರಗೆ ಜರುಗಿದವು. ಬಂದಿದ್ದ ಕನ್ನಡಿಗರೆಲ್ಲರಿಗೂ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯೋತ್ಸವ ಕಾರ್ಯಕ್ರಮವು ಸಾಯಿಬಾಬು ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲಿಗೆ ಪ್ರಾರ್ಥನೆ ತದನಂತರ ಧ್ವಜಾರೋಹಣ ನಡೆಯಿತು. ಎಲ್ಲರೂ ಸೇರಿ ನಾಡಗೀತೆಯನ್ನು ಹಾಡಿದರು. ಸಾಯಿಬಾಬು ಅವರು ಕನ್ನಡದ ಬಗ್ಗೆ ಹಿತವಚನಗಳನ್ನು ನುಡಿದರು. ಕೆಲುವು ಕನ್ನಡಿಗರು ಭಾವಗೀತೆ ಮತ್ತು ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನರಂಜಿಸಿದರು. ಮಕ್ಕಳಿಂದ ಡಿ.ವಿ.ಜಿ ಅವರ 'ಮಂಕುತಿಮ್ಮನ ಕಗ್ಗ'ದ ಕೆಲುವು ಸಾಲುಗಳ ಪಠಣವಾಯಿತು. ಮಕ್ಕಳು ಸರ್.ಎಮ್.ವಿಶ್ವೇಶ್ವರಯ್ಯ, ಸಂಗೊಳ್ಳಿ ರಾಯಣ್ಣ ಮತ್ತು ಮಿಸ್ ಕರ್ನಾಟಕ ವೇಷಗಳನ್ನು ಹಾಕಿ ವೇಷ ಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡು ರಂಜಿಸಿದರು.

ಮಧ್ಯಾಹ್ನ ಭೋಜನಾನಂತರ ಎಲ್ಲರೂ ಉತ್ಸಾಹದಿಂದ ಕನ್ನಡ ಚಲನಚಿತ್ರದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದಂಪತಿಗಳ ಸ್ಪರ್ಧಾತ್ಮಕ ಆಟಗಳು ಪ್ರೇಕ್ಷಕರಿಗೆ ಮುದ ನೀಡಿದವು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. [ವಿಡಿಯೋ : ದಕ್ಷಿಣ ಕೊರಿಯಾದಲ್ಲಿ ರಾಜ್ಯೋತ್ಸವ]

ಕೊರಿಯಾ ಕನ್ನಡ ಕೂಟ ಪ್ರತಿ ವರ್ಷ ಹೀಗೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತದೆ ಹಾಗು ನಾನಾ ವಿವಿಧ ಕಾರ್ಯಕ್ರಮಗಳನ್ನು (ಕೊರಿಯಾದ ವಿವಿಧ ಭಾಗಗಳಿಗೆ ಪ್ರವಾಸ, ಕ್ರಿಕೆಟ್ ಪಂದ್ಯಾವಳಿ ಇತ್ಯಾದಿ) ಹಮ್ಮಿಕೊಳ್ಳುತ್ತದೆ. ಆಸಕ್ತಿ ಇದ್ಹವರು "kannadakoreakoota@yahoogroups.com" ಅಥವಾ "ಕೊರಿಯಾ ಕನ್ನಡ ಕೂಟ/korea kannada koota" ಫೇಸ್ ಬುಕ್ ಗ್ರುಪ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Rajyotsava celebrated in South Korea on 4th November 2012. Korea Kannada Koota had organized the function which was attended by more than 40 Kannadigas. Various cultural activities enthralled the gathered audience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more