• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕ್ಲೆಂಡ್ ಕನ್ನಡಿಗರ ಹೆಮ್ಮೆ ಡಾ.ಲಿಂಗಪ್ಪ ಕಲ್ಬುರ್ಗಿ

By ಪ್ರಕಾಶ್ ರಾಜಾರಾವ್, ಆಕ್ಲೆಂಡ್
|

"ಈ ಪ್ರಶಸ್ತಿ ನನಗೆ ಮಾತ್ರ ದೊರೆತಿಲ್ಲ, ಇದು ನಮ್ಮ ನ್ಯೂಜಿಲೆಂಡ್ ಕನ್ನಡ ಸಮುದಾಯಕ್ಕೆ ಲಭಿಸಿದ ಗೌರವ. ನನಗೆ ಸೂಕ್ತ ವೇದಿಕೆ ಕಲ್ಪಿಸಿದ ಕನ್ನಡ ಕೂಟಕ್ಕೆ ನಾನು ಕೃತಜ್ಞನಾಗಿದ್ದೇನೆ" ಎಂದು ನಮ್ರತೆಯಿಂದ ನುಡಿದಿದ್ದಾರೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ನ್ಯೂಜಿಲೆಂಡ್ ಕನ್ನಡ ಕೂಟದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ.ಲಿಂಗಪ್ಪ ಕಲ್ಬುರ್ಗಿ.

"ಈ ಪ್ರಶಸ್ತಿ ಹೊರನಾಡಿನ ಕನ್ನಡಿಗರಿಗೆ ಒಂದು ಸಂದೇಶವೂ ಹೌದು, ಎಲ್ಲೇ ಇರಲಿ ನಾವು ಕನ್ನಡಕ್ಕಾಗಿ ಶ್ರಮಿಸಿದರೆ ನಮ್ಮ ಮಾತೃ ಭೂಮಿ ನಮ್ಮನ್ನು ಆದರಿಸುತ್ತದೆ" ಎಂದು ಹೇಳಿರುವ ಡಾ.ಕಲ್ಬುರ್ಗಿ ಅವರು ನ್ಯೂಜಿಲೆಂಡ್ ಕನ್ನಡ ಕೂಟ ತನ್ನ ಎಲ್ಲಾ ಕನ್ನಡ ಪರ ಕೆಲಸಗಳನ್ನೂ ಮುಂದುವರೆಸಿಕೊಂಡು ಹೋಗಲು ಇದು ಪ್ರೇರಣೆಯಾಗುತ್ತದೆ ಎಂದು ಆಶಿಸಿದರು.

ಸುಮಾರು ಹದಿನೆಂಟು ವರ್ಷದ ಹಿಂದೆ 'ಅಂಕಲ್' ಎಮ್.ಕೆ. ವಾಮನ ಮೂರ್ತಿ ಮುಂತಾದ ಸದಭಿಮಾನಿಗಳೊಂದಿಗೆ ಸೇರಿ ನ್ಯೂಜಿಲೆಂಡ್ ಕನ್ನಡ ಕೂಟ ಸ್ಥಾಪನೆಗೆ ನೆರವಾಗಿ ಅದರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದರು. ಗ್ರಂಥಾಲಯ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿರುವ ಡಾ.ಕಲ್ಬುರ್ಗಿ ಅವರು ಆಕ್ಲೆಂಡಿನಲ್ಲಿರುವ ಕನ್ನಡ ಗ್ರಂಥಾಲಯಕ್ಕೆ ತಮ್ಮ ಸ್ವಂತ ಸಂಗ್ರಹದಿಂದ ಅನೇಕ ಅಮೂಲ್ಯ ಪುಸ್ತಕಗಳನ್ನು ನೀಡಿ ಅದರಿಂದ ಉತೃಷ್ಟ ಸೇವೆ ದೊರೆಯುವಂತೆ ಮಾಡಿದ್ದಾರೆ. ಈಗ ಕನ್ನಡ ಕೂಟ ನಡೆಸುತ್ತಿರುವ ಕನ್ನಡ ಶಾಲೆ, ಪತ್ರಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲವನ್ನು ಒಂದು ಸುಭದ್ರ ಅಡಿಪಾಯದ ಮೇಲೆ ನಿಲ್ಲುವಂತೆ ಮಾಡುವುದರಲ್ಲಿ ಅವರ ಕೊಡುಗೆ ಅಪಾರ.

ಡಾ. ಕಲ್ಬುರ್ಗಿ ಅವರು ಕನ್ನಡ ಕೂಟಕ್ಕೆ ಮಾತ್ರವಲ್ಲದೆ ಇತರ ಸ್ಥಳೀಯ ಸಂಘ ಸಂಸ್ಥೆಗಳ ಬೆಳವಣಿಗೆಗೂ ಶ್ರಮಿಸಿದ್ದಾರೆ. ನ್ಯೂಜಿಲೆಂಡ್ ಇಂಡಿಯನ್ ಕೇಂದ್ರೀಯ ಸಂಸ್ಥೆ, ಆಕ್ಲೆಂಡಿನ ಭಾರತೀಯ ಸಂಘ ಸಂಸ್ಥೆಗಳು, ಭಾರತೀಯ ಸಮುದಾಯದ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರಾರಂಭಿಸಲಾದ ಅನೇಕ ಸಂಸ್ಥೆಗಳು ಅವರಿಗೆ ಆಭಾರಿಯಾಗಿವೆ. ಅವಕಾಶ ದೊರೆತಾಗ ಅಂತಹ ಸಂಸ್ಥೆಗಳಲ್ಲಿ ಕನ್ನಡಿಗರಿಗೂ ಸ್ಥಾನಮಾನಗಳು ಸಿಗುವಂತೆ ನೆರವಾಗಿದ್ದಾರೆ.

ಇದಲ್ಲದೆ 'ಬಸವ ಸಮಿತಿ'ಯ ನ್ಯೂಜಿಲೆಂಡ್ ವಿಭಾಗ, ಆಕ್ಲೆಂಡ್ ಡಿಸ್ಟ್ರಿಕ್ಟ್ ಕೌನ್ಸಿಲ್ ಆಫ಼್ ಸೊಶಿಯಲ್ ಸರ್ವೀಸಸ್, ದಿ ಏಷ್ಯಾ ನೆಟ್ ವರ್ಕ್ ಇಂಕ್, ಏಷ್ಯಾ ಪೆಸಿಫಿಕ್ ಕನ್ನಡ ಒಕ್ಕೂಟ ಮುಂತಾದ ಹಲವು ಸೇವಾ ಸಂಘಟನೆಗಳಿಗೆ ಅವರ ಕೊಡುಗೆ ಅನನ್ಯ. ಈ ಎಲ್ಲಾ ಕಾರಣಗಳಿಂದ ನ್ಯೂಜಿಲೆಂಡ್ ಸರ್ಕಾರ ಉನ್ನತ ಸಾರ್ವಜನಿಕ ಸೇವೆಸಲ್ಲಿಸುವ ತನ್ನ ನಾಗರೀಕರಿಗೆ ನೀಡುವ 'ಕ್ವೀನ್ಸ್ ಸರ್ವೀಸ್ ಮೆಡಲ್' [MEMBER OF THE NEWZEALAND ORDER OF MERIT] ಅನ್ನು ನೀಡಿ ಡಾ.ಕಲ್ಬುರ್ಗಿಯವರನ್ನು ಗೌರವಿಸಿದೆ.

ಡಾ.ಕಲ್ಬುರ್ಗಿ ಅವರ ಪತ್ನಿ ಲೀನಾ ಕಲ್ಬುರ್ಗಿ ತಮ್ಮ ಪತಿಯ ಎಲ್ಲಾ ಸಮಾಜ ಸೇವಾ ಕಾರ್ಯಗಳಲ್ಲಿ ನೆರವಾಗಿದ್ದಾರೆ. ನ್ಯೂಜಿಲೆಂಡ್ ಕನ್ನಡ ಕೂಟ ತನ್ನ ಸ್ಥಾಪನೆಯ ಉದ್ದೇಶ ಸಫಲಗೊಳಿಸಲಿ, ಕನ್ನಡ ಡಿಂಡಿಮವನ್ನು ಸದಾಕಾಲ ಬಾರಿಸಲಿ ಎಂಬುದು ಈ ಅಪೂರ್ವ ಕನ್ನಡಿಗ ದಂಪತಿಗಳ ಆಶಯ. ಡಾ.ಕಲ್ಬುರ್ಗಿಯವರಿಗೆ ಪ್ರಶಸ್ತಿ ನೀಡಿದ ಕರ್ನಾಟಕ ರಾಜ್ಯ ಸರ್ಕಾರವನ್ನು ಮತ್ತು ಪ್ರಶಸ್ತಿ ಪಡೆದು ನಮ್ಮೆಲ್ಲರಿಗೂ ಹರ್ಷ ತಂದಿರುವ ಡಾ. ಲಿಂಗಪ್ಪ ಕಲ್ಬುರ್ಗಿ ಅವರನ್ನು "ಕೀವಿ ಕನ್ನಡಿಗರು" ನಾವೆಲ್ಲರೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ.

English summary
Dr. Lingappa Kalburgi has been bestowed with Kannada Rajyotsava award by Karnataka Govt for the year 2012. Dr. Kalburgi is one the founders of Newzealand Kannada Koota and has been serving in many associations in Auckland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more