ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಧನ್ಯವಾದಗಳು

By ವೆಂಕಟ್, ಸಿಂಗಪುರ
|
Google Oneindia Kannada News

ಎರಡನೆಯ ವಾರ ನಾವೆಲ್ಲಾ ಬೇಗ ಬಂದು ಸೇರಿ, ಬಹುಶಃ ಈ ವಾರ ಸುಮಾರು ಮಕ್ಕಳು ತರಗತಿಗೆ ಚಕ್ಕರ್ ಹಾಕ್ತಾರೆ ಎಂಬ ನಮ್ಮ ಕಲ್ಪನೆಯನ್ನು ಸುಳ್ಳುಮಾಡಲು ಸುಮಾರು ಮಕ್ಕಳು ನಮಗಿಂತ ಮುಂಚಿತವಾಗಿಯೇ... ಬಂದು ಕೂತಿದಿದ್ದು, ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವಂತೆ ಮಾಡಿತ್ತು.

ಎರಡನೆಯ ದಿನದ ಪಾಠ ಸ್ವಲ್ಪ ತೀವ್ರಗತಿಯಲ್ಲಿ ಸಾಗಿ ಮಕ್ಕಳಿಗೆ ಎಲ್ಲಾ ವ್ಯಂಜನಗಳ ಪರಿಚಯವಾಯಿತು. ಮಕ್ಕಳು ಬೇಗ ಕಲಿಯುತ್ತಾರೆಂಬುದು ಸದೃಶ ಸತ್ಯವಾಗಿ ಕಣ್ಮುಂದೆ ದರ್ಶನವನ್ನು ತೋರಿತ್ತೆಂದರೂ ಅತಿಶಯೋಕ್ತಿಯಾಗಲಾರದು. ಯಥಾ ಪ್ರಕಾರದ ವಿರಾಮ, ತಿಂಡಿ-ತೀರ್ಥ ಹಾಗು ವ್ಯಂಗಚಿತ್ರದ ವಿಡಿಯೋಗಳ ಸರದಿ ಮುಗಿದ ಮೇಲೆ ಈ ಬಾರಿ ಮಕ್ಕಳಿಗೆ "ಒಂದು ಎರಡು ಬಾಳೆಲೆ ಹರಡು", "ಕರಡಿ ಬೆಟ್ಟಕ್ಕೆ ಹೋಯಿತು" ಎಂಬ ಶಿಶುಗೀತೆಗಳನ್ನು ಹೇಳಿಕೊಡಲಾಯಿತು. ಕೇವಲ ಬರಹ, ಅಭ್ಯಾಸಗಳಲ್ಲದೆ ಹಾಡು, ಆಟಗಳ ಮೂಲಕ ಮಕ್ಕಳನ್ನು ಮನರಂಜಿಸುವ ಮೂಲಕ ಕನ್ನಡವನ್ನು ಕಲಿಸುವ ನಮ್ಮ ಮೂಲ ಉದ್ದೇಶ ಸಫಲವಾಯಿತು.

Kannada Kali classes in Singapore

ಮೂರನೆಯ ವಾರದಲ್ಲಿ "ಯ ರ ಲ ವ ಹಾಗು ಎಲ್ಲಾ ವರ್ಣಮಾಲೆಗಳನ್ನೊಳಗೊಂಡ ಸರಳ ಪದಗಳನ್ನು ಓದುವುದು, ಬರೆಯುವ ಪ್ರಯತ್ನವನ್ನು ಎಲ್ಲಾ ಮಕ್ಕಳಿಂದ ಮಾಡಲಾಯಿತು. ನಾಲ್ಕನೆಯ ವಾರದಲ್ಲಿ "ಕಾಗುಣಿತಗಳ ಪರಿಚಯ ಹಾಗು ಮತ್ತೊಮ್ಮೆ ಪುನರ್‌ಅಭ್ಯಾಸಗಳ ಜೊತೆಗೆ ಎಲ್ಲ ಮಕ್ಕಳು ಬಂದು ತಾವೇ ನಾವುಗಳು ಹೇಳಿದ ಪದಗಳನ್ನು ಪಲಕದ ಮೇಲೆ ಬರೆಯುವಂತೆ ಮಾಡುವ ಅಭ್ಯಾಸವನ್ನು ಮಾಡಲಾಯಿತು. ತಮ್ಮ ಹೆಸರನ್ನು ಕನ್ನಡದಲ್ಲಿ ಹೇಗೆ ಬರೆಯಬೇಕೆಂದು ಬಹುತೇಕ ಎಲ್ಲರೂ ಬಹು ಉತ್ಸುಕತೆಯಿಂದ ತಿಳಿದು ಬರೆಯುವ ಪ್ರಯತ್ನ ಮಾಡುತ್ತಿದ್ದುದು ಗಮನೀಯವಾದಂತಹ ಸಂಗತಿ. ಕೊನೆಯ ತರಗತಿಯಲ್ಲಿ ಒಂದು ಸಣ್ಣ ಪರೀಕ್ಷೆಯಲ್ಲಿ ಮಕ್ಕಳಿಗೆಲ್ಲರಿಗೂ ವರ್ಣಮಾಲೆ ಹಾಗು ಸರಳಪದಗಳನ್ನು ಬರೆಯಲು ಸೂಚಿಸಿಲಾಯಿತು.

ಕೆಲವು ಮಕ್ಕಳು ಅಕ್ಷರಗಳನ್ನು ಬೇಗ ಗುರುತಿಸಿ ಓದುವಲ್ಲಿ ನಿಪುಣರಾದರೂ, ಅಕ್ಷರಗಳನ್ನು ತಾವೇ ಸ್ವತಃ ಬರೆಯುವಲ್ಲಿ ಸ್ವಲ್ಪ ಹಿಂಜರಿದರು ಎನ್ನುವುದು ನಿಜಾಂಶ. ಇದಕ್ಕಾಗಿಯೇ ನಾವು ಮಕ್ಕಳಿಗೆ ಬರೆಯುವದನ್ನು ಅಭ್ಯಾಸ ಮಾಡಬೇಕೆಂದು ಕೋರಿದ್ದೇವೆ. ಮಕ್ಕಳಲ್ಲಿ ಕನ್ನಡ ಭಾಷೆ ಹಾಗೂ ನುಡಿಯ ಪರಿಚಯದ ಜೊತೆಗೆ ಇದು ನಮ್ಮ ಮಾತೃಭಾಷೆ ಎಂಬ ಹೆಮ್ಮೆಯನ್ನು ತುಂಬಿ, ಕನ್ನಡದ ಬಗ್ಗೆ ಅಭಿರುಚಿಯನ್ನು ಹುಟ್ಟಿಸಿ ಸರಳ ಪದಗಳನ್ನು ಗುರುತಿಸಿ ಓದುವಂತಾದರೆ ನಮ್ಮ ಈ ಶ್ರಮ ಸಾರ್ಥಕ. ನಮ್ಮ ಈ ಪ್ರಯತ್ನಕ್ಕೆ ಸದಾ ಬೆನ್ನೆಲುಬಾಗಿ ನಿಂತು ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರಕ್ಕೆ ನಮ್ಮ ಧನ್ಯವಾದಗಳು.

-ವೆಂಕಟ್, ಕಾರ್ಯದರ್ಶಿ, ಕನ್ನಡ ಸಂಘ (ಸಿಂಗಪುರ)

English summary
Singapore Kannada Sangha has started 'Kannada Kali' - Kannada language teaching classes for children. Kannada development authority has provided easy to understand text books to the organization. Children have been participating with enthusiasm. A report by Venkat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X