ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.16ರಂದು ಧ್ವನಿ ಆನ್‌ಲೈನ್ ಇ-ಪತ್ರಿಕೆ ಬಿಡುಗಡೆ

By Prasad
|
Google Oneindia Kannada News

Prakashrao Payyar
ಬೆಂಗಳೂರು, ನ. 15 : ದುಬೈನ ಸಾಂಸ್ಕೃತಿಕ ಸಂಸ್ಥೆ ಧ್ವನಿ ಪ್ರತಿಷ್ಠಾನದ ಸಾಹಿತ್ಯ ಮತ್ತು ರಂಗಭೂಮಿ ಚಿಂತನೆಯ, ಅನಿವಾಸಿ ಕನ್ನಡಿಗ ನಾಟಕಕಾರ ಪ್ರಕಾಶ್ ರಾವ್ ಪಯ್ಯಾರ್ ಅವರ ಸಂಪಾದಕತ್ವದಲ್ಲಿ ಹೊರಬರಲಿರುವ ಇ-ಮಾಸಿಕ ಪತ್ರಿಕೆ 'www.dhwanionline.com' ಬೆಂಗಳೂರಿನಲ್ಲಿ ಶುಕ್ರವಾರ, ನ.16ರಂದು ಲೋಕಾರ್ಪಣೆಯಾಗಲಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಸಂಜೆ 5.45ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಇ-ಮಾಸಪತ್ರಿಕೆ ಲೋಕಾಪ್ರಣೆಯಾಗಲಿದೆ. ಮಲ್ಲೇಶ್ವರದ ವೈಯಾಲಿ ಕಾವಲ್‌ನಲ್ಲಿರುವ ಪಂಪ ಸಾಂಸ್ಕೃತಿಕ ಕೇಂದ್ರ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ಇ-ಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಜಾತ್ಯತೀತ ಜನತಾದಳದ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ಅವರು ಅಧ್ಯಕ್ಷತೆ ವಹಿಸುತ್ತಿದ್ದಾರೆ. ಖ್ಯಾತ ಕವಿ ಬಿ.ಆರ್. ಲಕ್ಷ್ಮಣರಾವ್ ಅವರು ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.

ರಂಗಭೂಮಿ ಮತ್ತು ಸಿನೆಮಾರಂಗದ ಹಿರಿಯ ಕಲಾವಿದ ಎಚ್.ಜಿ. ಸೋಮಶೇಖರ ರಾವ್, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಜಿ. ಕಪ್ಪಣ್ಣ ಅವರು ಕೂಡ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಕಾಶ್ ರಾವ್ ಪಯ್ಯಾರ್ ಅವರು ಉಪಸ್ಥಿತರಿರಲಿದ್ದು, ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ವೆಂಕಟರಾಜು ಅವರು ನಿರೂಪಣೆ ಮಾಡಲಿದ್ದಾರೆ. ಸಂಜೆ 5.30ಕ್ಕೆ ಚಹಾಕೂಟ ಕೂಡ ಏರ್ಪಡಿಸಲಾಗಿದೆ.

English summary
Dhwanionline monthly e-magazine of Dhwani Pratishthana, Dubai, will released in Bangalore on November 16, Friday at Kannada Sahitya Parishath, Bangalore. Prakashrao Payyar is the editor of the e-magazine. Dr. H.S. Raghavendra Rao is releasing the magazine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X