ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಕರ ಕಣ್ಣಾಸ್ಪತ್ರೆಯಿಂದ ಅಮೆರಿಕಾದಲ್ಲಿ ಕೋಲಾಟ

By Prasad
|
Google Oneindia Kannada News

ನವರಾತ್ರಿಯಲ್ಲಿ ನವದೇವಿಯರನ್ನು ಆರಾಧಿಸುವುದರ ಜೊತೆಗೆ ದೇಶದಾದ್ಯಂತ ಮಹಿಳೆಯರು ಲಂಗ ದಾವಣಿ ಉಟ್ಟುಕೊಂಡು ದಾಂಡಿಯಾ (ಕೋಲಾಟ) ಆಡಿ ಸಡಗರಪಡುತ್ತಾರೆ. ಕೋಲಾಟ ಆಡುವವರಿಗೆ ಮಾತ್ರವಲ್ಲ ನೋಡುಗರಿಗೂ ವಿಶಿಷ್ಟ ರೀತಿಯ ಮನರಂಜನೆ ಸಿಗುತ್ತದೆ.

ಅಮೆರಿಕಾದ ಬೇ ಏರಿಯಾದಲ್ಲಿರುವ ಶಂಕರ ಐ ಫೌಂಡೇಷನ್ ದಾಂಡಿಯಾವನ್ನು ಹಣ ಸಂಗ್ರಹಣೆಗೆ ಬಳಸಿಕೊಂಡು ಹೊಸ ಮುನ್ನುಡಿ ಬರೆದಿದೆ. ಭಾರತದಲ್ಲಿ ಮತ್ತಷ್ಟು ಕಣ್ಣಿನ ಆಸ್ಪತ್ರೆಗಳನ್ನು ನಿರ್ಮಿಸುವ ಮಹತ್ತರ ಉದ್ದೇಶದಿಂದ ಅಕ್ಟೋಬರ್ 19ರಿಂದ 27ರವರೆಗೆ 'ದಾಂಡಿಯಾ 2012' ಸ್ಪರ್ಧೆಯನ್ನು ಶಂಕರ ಐ ಫೌಂಡೇಷನ್ ಏರ್ಪಡಿಸಿತ್ತು.

ಅಮೆರಿಕಾದ ಮಿಲ್ಪಿಟಸ್‌ನಲ್ಲಿ ಇರುವ ಶಂಕರ್ ಐ ಫೌಂಡೇಷನ್ ಆಯೋಜಿಸಿದ್ದ ಈ ದಾಂಡಿಯಾ ಉತ್ಸವಕ್ಕೆ ಅಮೆರಿಕದ ದಾನಿಗಳಿಂದ ಭಾರೀ ಸ್ಪಂದನೆ ವ್ಯಕ್ತವಾಯಿತು. ಈಗ ಸಂಗ್ರಹಿಸಲಾಗಿರುವ ಹಣದ ಸಹಾಯದಿಂದ ಭಾರತದ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಸಹಾಯವಾಗಲೆಂದು ಅನೇಕ ಆಸ್ಪತ್ರೆಗಳನ್ನು ಕಟ್ಟಿಸುತ್ತಿದ್ದಾರೆ.

Dandia 2012 by Sankara Eye Foundation

2013ರಲ್ಲಿ ಕಾನ್ಪುರದಲ್ಲಿ 10ನೇ ಕಣ್ಣಿನಾಸ್ಪತ್ರೆ ಮತ್ತು ಉತ್ತರಪ್ರದೇಶದಲ್ಲಿಯೂ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಮುಂದಿನ ಒಂದೇ ವರ್ಷದಲ್ಲಿ ಈ ಆಸ್ಪತ್ರೆಗಳು ಕಣ್ಣುತೆರೆಯಲಿವೆ. ಅಲ್ಲದೆ, ಜನರ ಆಗ್ರಹದ ಮೇರೆಗೆ ಗುಜರಾತ್ ಮತ್ತು ಗುಂಟೂರಿನಲ್ಲಿರುವ ಕಣ್ಣಿನಾಸ್ಪತ್ರೆಗಳನ್ನು ವೃದ್ಧಿಸಲು ನಿರ್ಧರಿಸಿದೆ.

ಈ ಎಲ್ಲ ಆಸ್ಪತ್ರೆಗಳನ್ನು ನಿರ್ಮಿಸಲು ಜಮೀನನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ಫೌಂಡೇಷನ್ನಿನ ಪ್ರಕಟಣೆ ಹೇಳಿದೆ. ಈ ಆಸ್ಪತ್ರೆಗಳಲ್ಲಿ ಪ್ರತಿ ವರ್ಷ 20 ಸಾವಿರ ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲು ಉದ್ದೇಶಿಸಲಾಗಿದೆ. ಶಂಕರ್ ಐ ಫೌಂಡೇಷನ್‌ಗಾಗಿ 2008ರಲ್ಲಿ ನ್ಯೂಜೆರ್ಸಿಯಲ್ಲಿರುವ ಬೃಂದಾವನ ಕನ್ನಡ ಕೂಟದಲ್ಲಿ ಹಣ ಸಂಗ್ರಹಿಸಲಾಗಿತ್ತು.

ಶಂಕರ್ ಐ ಫೌಂಡೇಷನ್ ಮಾಡುತ್ತಿರುವ ಈ ಉದಾತ್ತ ಕೆಲಸಕ್ಕೆ ಉದಾರವಾಗಿ ದೇಣಿಗೆ ನೀಡಬಯಸುವವರು ತಮ್ಮ ಶಕ್ತ್ಯಾನುಸಾರ ದಾನ ಮಾಡಬಹುದು. ಈ ಬಗ್ಗೆ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಈ ವೆಬ್ ಸೈಟ್ ಸಂದರ್ಶಿಸಿ ಮಾಹಿತಿ ಪಡೆಯಬಹುದು : http://www.giftofvision.org

English summary
Sankara EYE Foundation had organized Dandia 2012 in bay area as fundraiser to construct 4 hospitals in rural area in India. Dandia is form of dance, where men and women dressed in traditional dress play and dance with sticks (Kolata) and enjoy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X