• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕಾದಲ್ಲಿ ಆರು ವಾರ ಆಲ್ ದಿ ಬೆಸ್ಟ್!

By Prasad
|

ಗುರು ಸಂಸ್ಥೆ ಹುಬ್ಬಳ್ಳಿಯ ಹೆಮ್ಮೆಯ ರಂಗ ಪ್ರಯೋಗಗಳಾದ ಆಲ್ ದಿ ಬೆಸ್ಟ್, ರಾಶಿಚಕ್ರ ಮತ್ತು ಮೇಡ್ ಇನ್ ಇಂಡಿಯಾ ಪ್ರದರ್ಶನಗಳು ಅಮೆರಿಕಾ ಹಾಗೂ ಕೆನಡಾದಲ್ಲಿ ಪ್ರದರ್ಶನ ನಡೆಯಲಿವೆ. ಒಟ್ಟು 6 ವಾರಗಳ ಕಾಲ ಅಮೆರಿಕಾದ ವಿವಿಧ ಕಡೆಗಳಲ್ಲಿ ನಡೆಯುವ ಈ ರಂಗ ಪ್ರದರ್ಶನಗಳಿಗೆ ಟಾಂಪಾದ ಡಾ. ರೇಣುಕಾ ರಾಮಪ್ಪ, ಡಾ. ಕೇಶವ ಬಾಬು ಹಾಗೂ ಲಾಸ್ ಏಂಜಲಿಸ್‌ನ ವಲ್ಲೀಶ ಶಾಸ್ತ್ರಿ ಸಹಕಾರ ನೀಡಿದ್ದಾರೆ.

ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ನೂರಾರು ಪ್ರದರ್ಶನ ನೀಡಿ ಜನಮನ ಗೆದ್ದಿರುವ ಈ ನಗೆ ನಾಟಕಗಳನ್ನು ಮನೆ ಮಂದಿಯೊಂದಿಗೆ ನೋಡುವುದೇ ಒಂದು ಸಂಭ್ರಮ. ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗನಟ ನಿರ್ದೇಶಕ ಯಶವಂತ ಸರದೇಶಪಾಂಡೆಯ ನಿರ್ದೇಶನದಲ್ಲಿ ಕತಾರ್ ಭಾಷಾ ಸಾರಿಕಾ ಗೋಡಖಿಂಡಿ ಹಾಗೂ ಪ್ರಹ್ಲಾದ ಆಚಾರ್ಯರ ಅಭಿನಯದಲ್ಲಿ ಆಲ್ ದಿ ಬೆಸ್ಟ್ ಪ್ರದರ್ಶನವಾಗಲಿದೆ.

ಕರ್ನಾಟಕ ಸ್ಟೇಟ್ ಡೆಂಟಲ್ ಮೆಡಿಕಲ್ ಅಸೋಸಿಯೇಷನ್ನಿನ ಪ್ರಮುಖ ಸಲಹೆಗಾರರಾದ ಡಾ. ರಾಮಪ್ಪನವರ ಆಶಯದಂತೆ ಶಿಕಾಗೋದಲ್ಲಿ ನಡೆಯುವ ಕೆ.ಎಸ್.ಡಿ.ಎಂ.ಎಯ ವಾರ್ಷಿಕ ಸಮ್ಮೇಳನದಲ್ಲಿ ವಿಶೇಷ ಪ್ರದರ್ಶನಗಳನ್ನು ಗುರು ಸಂಸ್ಥೆ ಹುಬ್ಬಳ್ಳಿ ನೀಡಲಿದೆ.

ಫ್ಲೋರಿಡಾದಲ್ಲಿ ಡಾ. ರೇಣುಕಾ ರಾಮಪ್ಪ, ಡಾ. ಕೇಶವ ಬಾಬು, ಜಯಪ್ರಕಾಶ, ಶಿಕಾಗೋದಲ್ಲಿ ರವಿ ಹರಸೂರ, ನಂದೀಶಗೌಡ, ವಾಶಿಂಗ್‌ಟನ್‌ನಲ್ಲಿ ಸುರೇಶ್ ರಾಮಚಂದ್ರ, ಬೋಸ್ಟನ್‌ನಲ್ಲಿ ಡಾ. ರಾಜೂರ್, ಕೆನಡಾದಲ್ಲಿ ಯುವರಾಜ್ ಪಾಟೀಲ್ ಇವರ ಸಹಕಾರದಲ್ಲಿ ಮತ್ತಿತರ 6-8 ಕಡೆಗೆ ವಲ್ಲೀಶ ಶಾಸ್ತ್ರಿಯ ಹಾಗೂ ಅಭಿಜಿತ್ ಪ್ರಹ್ಲಾದರ ನೇತೃತ್ವದಲ್ಲಿ ಆಲ್ ದಿ ಬೆಸ್ಟ್ ಪ್ರದರ್ಶನಗಳು ನಡೆಯಲಿವೆ.

ಗುರು ಸಂಸ್ಥೆ ಹುಬ್ಬಳ್ಳಿ ಅಮೆರಿಕಾದ / ಕೆನಡಾದ ಎಲ್ಲಾ ಕನ್ನಡ - ನಾಟಕ ಪ್ರಿಯರಿಗೆ ತಮ್ಮ ಬಂಧು, ಬಾಂಧವ, ಗೆಳೆಯ ಗೆಳತಿಯರೊಂದಿಗೆ ನಾಟಕ ನೋಡಲು ಆಗ್ರಹಿಸುತ್ತದೆ. ಪ್ರದರ್ಶನಗಳ ಪೂರ್ಣ ವೇಳಾಪಟ್ಟಿಯು ಶೀಘ್ರದಲ್ಲಿ ಪ್ರಕಟಿಸಲಿದ್ದು, ಆಸಕ್ತರು ವಲ್ಲೀಶ ಶಾಸ್ತ್ರಿಯವರನ್ನು vshastry@yahoo.com ಡಾ. ಕೇಶವ ಬಾಬು ಅವರನ್ನು hnkbabu@hotmail.com ಅಭಿಜಿತ್ ಪ್ರಹ್ಲಾದ್ ಅವರನ್ನು prbhibhar@gmail.com ಯಶವಂತ ಸರದೇಶಪಾಂಡೆ ಅವರನ್ನು allthebest01@gmail.com ವಿಳಾಸದಲ್ಲಿ ಸಂಪರ್ಕಿಸಬಹುದಾಗಿದೆ.

English summary
Kannada playwright, actor and director Yashwant Sardeshpande and his team will be playing famous Kannada drama 'All the Best', 'Rashi chakra', 'Made in India' in USA and Canada for 6 weeks. The schedule of the program will be intimated very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X