• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಅಮೆರಿಕಾದಲ್ಲಿ 3D ಕನ್ನಡ ಕೂಟ' ಹಾಸ್ಯ ನಾಟಕ

By * ನಾಗರಾಜ್ ಎಂ, ಕನೆಕ್ಟಿಕಟ್
|

50ನೇ ದಿನದ, 100ನೇ ದಿನದ ಭರ್ಜರಿ ಪ್ರದರ್ಶನ, ಕಟೌಟ್ಗಳು, ಅಬ್ಬರದ ಪ್ರಚಾರ... ಯಾವುದೋ ಕನ್ನಡ ಚಲನಚಿತ್ರ ಮೆಗಾ ಹಿಟ್ ಅಂತಾ ಏನಾರ ಅಂದು ಕೊಂಡಿರಾ? ಹಮ್... ಇಲ್ಲ... ಇತ್ತೀಚಿಗೆ ಈ ರೀತಿ ಹೆಚ್ಚಾಗಿ ಕಂಡುಬರುತ್ತಿರುವುದು ಯಾವುದೊ ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಮೂವಿಗಳಿಗೆ, ಅದೂ ನಮ್ಮ ಕರ್ನಾಟಕದಲ್ಲಿ.

ನಮ್ಮ ಕನ್ನಡ ನಾಡಲ್ಲಿ ತೆಲುಗು ತಮಿಳು ಅನ್ಯ ಭಾಷೆಗಳ ಗಂಧವೇ ಇಲ್ಲದ ಸಣ್ಣ ಸಣ್ಣ ನಗರಗಳಲ್ಲೂ ಸಹ (ಬೆಂಗಳೂರು ವಿಷಯ ಬಿಟ್ಟು ಬಿಡಿ) ಈ ಪರಭಾಷಾ ಚಿತ್ರಗಳು ಭರ್ಜರಿಯಾಗಿ ಓಡುತ್ತಿರುವ ಈ ಸಮಯದಲ್ಲಿ, ನಮ್ಮ ಕನ್ನಡ ಚಿತ್ರಗಳು ಪ್ರೇಕ್ಷಕರಿಗಾಗಿ ಕಾಯುತ್ತಾ ಒಂದು ವಾರ, ಎರಡು ವಾರ ಅನ್ನೋದರಲ್ಲೇ ಥಿಯೇಟರ್ಗಳಿಂದ ಮಾಯವಾಗುತ್ತಿರುವುದು ಕಟು ಸತ್ಯ.

ಕನ್ನಡ ಸಿನೆಮಾಗಳ ಕಥೆನೇ ಹೀಗಾದರೆ, ಇನ್ನು ಕನ್ನಡ ನಾಟಕಗಳ ಗತಿ ಹೇಗೆ ಇರಬೇಡ?

ಗುಬ್ಬಿ ವೀರಣ್ಣ, ಚಿಂದೋಡಿ ಲೀಲಾ ಮೊದಲಾದ ಪ್ರಖ್ಯಾತ ರಂಗಭೂಮಿ ಕಲಾವಿದರ ಹೆಸರೇ ಗೊತ್ತಿರದಂಥ, ಹಗಲಿರುಳು ಯುಟ್ಯೂಬ್ - ಫೇಸ್ ಬುಕ್ ನಲ್ಲಿ ಮುಖ ಹುದುಗಿಸಿರುವ, ಎಲ್ಲದಕ್ಕೂ ಗೂಗಲಿಟ್ ಮ್ಯಾನ್ ಅನ್ನೋ ಈ ಯುವ ಪೀಳಿಗೆಯ ಫಾಸ್ಟ್ ಫೇಸ್ ಯುಗದಲ್ಲಿ... ಅಲ್ಲೊಂದು, ಇಲ್ಲೊಂದು ನಾಟಕಗಳು ಕರ್ನಾಟಕದಲ್ಲಿ ಅಪರೂಪವಾಗಿ ಪ್ರದರ್ಶಿತವಾಗುತ್ತಿರುವ ಈ ಸಮಯದಲ್ಲಿ... ದೂರದ ವೆಸ್ಟರ್ನ್ ಕಲ್ಚರ್ ಅಮೆರಿಕಾದ ಕನೆಕ್ಟಿಕಟ್ ರಾಜ್ಯದಲ್ಲಿ "ಅಮೆರಿಕಾದಲ್ಲಿ ಯಮರಾಜ" ಖ್ಯಾತಿಯ ಮಲ್ಲಿ ಸಣ್ಣಪ್ಪನವರ್ ವಿರಚಿತ "ಅಮೇರಿಕಾದಲ್ಲಿ 3D ಕನ್ನಡ ಕೂಟ" ನಾಟಕ ಏಪ್ರಿಲ್ 28ಕ್ಕೆ Middletown ನಗರದ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಂನಲ್ಲಿ ಪ್ರದರ್ಶನಗೊಳ್ಳಲಿದೆ ಅಂದರೆ ನಿಮಗೆ ಆಶ್ಚರ್ಯವೇ?

ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ... ನಾಟಕವೊಂದು, ಅದರಲ್ಲೂ ಕನ್ನಡದ ನಾಟಕವೊಂದು 3D ಎಫೆಕ್ಟ್ನಲ್ಲಿ ಮೂಡಿಬರುತ್ತಿರುವುದು ಎಲ್ಲರಿಗೂ ವಿಸ್ಮಯ ತಂದಿರುವುದು ಸುಳ್ಳಲ್ಲ. ತಪ್ಪದೇ ಬನ್ನಿ.. ಎಲ್ಲರೂ ಸಂಸಾರದೊಂದಿಗೆ ನೋಡಲಿಕ್ಕೆ, ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ ಏರ್ಪಡಿಸಿರುವ ಯುಗಾದಿ 2012 ಕಾರ್ಯಕ್ರಮದಲ್ಲಿ ಪ್ರದರ್ಶನವಾಗುತ್ತಿರುವ ಈ ಹಾಸ್ಯಭರಿತ, ನೃತ್ಯಭರಿತ "3D ಕನ್ನಡ ಕೂಟ" ನಾಟಕ. ನೋಡಿ, ನಕ್ಕು-ನಲಿದು, ಪ್ರೋತ್ಸಾಹಿಸಿರಿ. ಕನ್ನಡದ ಕಂಪನ್ನು ಅಮೆರಿಕದಲ್ಲೂ ಹರಡಲು ಯತ್ನಿಸುತ್ತಿರುವ ಈ ಹೊರನಾಡ ಕನ್ನಡಿಗರ ಒಂದು ಚಿಕ್ಕ ಪರಿಶ್ರಮವನ್ನು...

ಬಂದು ನೋಡಿ ನಮ್ಮ ನಾಟಕ,

ಮಾಡಿಕೊಂಡು ಸ್ವಲ್ಪ ಪುರು ಸೊತ್ತು....

ಆಗುವುದು ನಿನ್ನ ಕೈ.. ಕಲ್ಪವೃಕ್ಷ,

ಕನ್ನಡಕ್ಕೆ ಜೈ ಎಂದು ಕೈ ಎತ್ತು!

ನಾಟಕದ ಪಾತ್ರದಾರಿಗಳು

ಮಲ್ಲಿ ಸಣ್ಣಪ್ಪನವರ್

ಮಧು ಸಣ್ಣಪ್ಪನವರ್

ಸೌಮ್ಯ ಕುರ್ತುಕೋಟಿ

ಜ್ಯೋತಿ ಕಬ್ಬಿನಾದ

ಸುಮಾ ಬಸಂತ್

ದಿವ್ಯಾ ಗೌತಮ್

ರಾಮ್ ಹೊಸಪೇಟೆ

ಮಾನಸ್ ರಾಮ್

ನಾಗರಾಜ್ ಮಹೇಶ್ವರಪ್ಪ

ಮಹೇಶ್ ಹುಲಿಕೆರೆ

ಸೂರಜ್ ಕುರ್ತುಕೋಟಿ

ಪ್ರದೀಪ್ ಡೊಳ್ಲಿನ್

ಗಿರೀಶ್ ಕಬ್ಬಿನಾದ

ಬಸಂತ್ ಗೌಡರ್

ಗೌತಮ್ ಪ್ರಸಾದ್

ವೇಣು ಗುಡ್ಡೆರಾ

ರಚನೆ, ನಿರ್ದೇಶನ : ಮಲ್ಲಿ ಸಣ್ಣಪ್ಪನವರ್

ಸ್ಥಳ : CVHTS temple Middletown, ಕನೆಕ್ಟಿಕಟ್, ಅಮೆರಿಕ

ದಿನಾಂಕ, ಸಮಯ : ಏಪ್ರಿಲ್ 28 ರಂದು ಮಧ್ಯಾನ್ಹ 4 ಗಂಟೆಗೆ.

English summary
Americadalli 3D Kannada Koota, a humorous Kannada play written and directed by Malli Sannappanavar will be enacted in Connecticut, USA on April 28 at CVHTS temple Middletown. Encourage Kannada play and artists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X