ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗರೂ ನಾಡಿನಲ್ಲೊಂದು ಕನ್ನಡ ಶಾಲೆಯ ಜನನ

By Prasad
|
Google Oneindia Kannada News

Students of Kannada school in Adelaide with Gayathri
ಆಸ್ಟ್ರೇಲಿಯಾ ದೇಶದ ಅಡಿಲೇಡ್ ನಗರದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಶಾಲೆ ಮಾರ್ಚ್ 18ರಂದು ಭಾನುವಾರ ಪ್ರೊ. ಧರಣೇಂದ್ರ ಕುರಕುರಿ ಅವರಿಂದ ಅಮೃತಹಸ್ತದಿಂದ ವಿಧ್ಯುಕ್ತವಾಗಿ ಆರಂಭವಾಯಿತು. ಗಾಯತ್ರಿ ಹಿರೇಮಠ ಮತ್ತು ಅವರ ಯಜಮಾನರಾದ ಷಡಕ್ಷರಿ ಅದವಯ್ಯನಮಠರವರು ಈ ಮಹತ್ ಕಾರ್ಯದ ರೂವಾರಿಗಳು.

ಅಡಿಲೇಡ್ ಕನ್ನಡ ಸಂಘದ ಉಪಾಧ್ಯಕ್ಷರಾದ ಉಮೇಶ್ ನಾಗಸಂದ್ರ ಅವರು ಈ ದಂಪತಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಪ್ರೊ. ಧರಣೇಂದ್ರ ಅವರು ದೀಪ ಬೆಳಗುವ ಮೂಲಕ ಕನ್ನಡ ಜ್ಯೋತಿಯನ್ನು ಈ ಕಾಂಗರೂ ನಾಡಿನಲ್ಲಿ ಪಸರಿಸಿದ್ದಾರೆ. ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ, ನೀವು ಇಲ್ಲಿ ಕನ್ನಡ ಶಾಲೆ ಶುರುಮಾಡುತ್ತಿದ್ದೀರಾ. ನಿಮಗೆ ಕನ್ನಡಾಂಬೆ ಆಶೀರ್ವಾದ ಸದಾ ಇರುತ್ತದೆ ಎಂದು ಹಾರೈಸಿದರು.

ಗಾಯತ್ರಿ ಅವರು ಎಲ್ಲರನ್ನೂ ಸ್ವಾಗತಿಸಿ, ಈ ಶಾಲೆ ಅ ಮೂಲ ಉದ್ದೇಶವನ್ನು ವಿವರಿಸಿದರು. ಅಡಿಲೇಡ್ ಇಂಗ್ಲಿಷ್ ಸ್ಕೂಲ್ ನ ಪ್ರಿನ್ಸಿಪಾಲ್ ಆದ ಮಿಸ್ ಜೂಲಿ ಪ್ರೆಸ್ಸರ್ ಅವರು ಕನ್ನಡ ಶಾಲೆ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ. ಎಥ್ನಿಕ್ ಸ್ಕೂಲ್ ನ ಅಧ್ಯಕ್ಷರಾದ ಮಸ್ ಇಂತ ರುಂಪ್ ಮತ್ತು ಅಡಿಲೇಡ್ ಇಂಗ್ಲಿಷ್ ಸ್ಕೂಲ್ ನ ಉಪ ಪ್ರಾಂಶುಪಾಲರಾದ ಬಿನ್ಹ್ ಕುಇನ್ಹ ನ್ಗುಇನ್ ಪಾಲ್ಗೊಂಡಿದ್ದರು. ಕನ್ನಡ ಕಲಿಯುತ್ತಿರುವ ಮಕ್ಕಳು 'ಬಾರಿಸು ಕನ್ನಡ ಡಿಂಡಿಮವ' ಹಾಡನ್ನು ಗಾಯತ್ರಿ ಅವರ ಮಾರ್ಗದರ್ಶನದಲ್ಲಿ ಸುಶ್ರಾವ್ಯವಾಗಿ ಹಾಡಿದರು.

ಶಾಲೆಯ ಕಾರ್ಯಕಾರಿ ಸಮಿತಿಯ ವಿವರ

ಡಾ. ಉಮೇಶ್ ನಾಗಸಂದ್ರ - ಅಧ್ಯಕ್ಷರು
ಕನ್ವಾಲ್ ಸಿಂಗ್- ಉಪ ಅಧ್ಯಕ್ಷರು
ಗಾಯತ್ರಿ ಹಿರೇಮಠ- ಕಾರ್ಯಕಾರಿಣಿ
ಷಡಕ್ಷರಿ ಅದವಯ್ಯನ ಮಠ - ಖಜಾಂಜಿ

ನಿಮ್ಮ ಮಕ್ಕಳಿಗೂ ಈ ಅಡಿಲೇಡ್ ನಗರದಲ್ಲಿ ಕನ್ನಡ ಕಲಿಸಬೇಕೆಂಬ ಆಸಕ್ತಿಯಿದ್ದರೆ, ಸಂಪರ್ಕಿಸಿ ಈಮೈಲ್: [email protected] ಅಥವಾ ಉಮೇಶ್ ನಾಗಸಂದ್ರ ಅವರ ದೂರವಾಣಿ ಸಂಖ್ಯೆ 0401 034 456.

English summary
At the time Kannada schools are being closed in Karnataka, a Kannada language and cultural school was inaugurated in Adelaide, Australia on March 18. Mrs Gayatri Hiremath and her husband Shadakshari are the backbone of this Kannada school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X