ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.13ರಿಂದ 15 : ನಾದತರಂಗಿಣಿ ಬೆಳ್ಳಿಹಬ್ಬ ಸಂಭ್ರಮ

By Prasad
|
Google Oneindia Kannada News

Purandara Dasaru and Tyagarajaru
ಇಲ್ಲಿನ ಲ್ಯಾನ್ ಹ್ಯಾಮ್ ಶ್ರೀ ಶಿವ ವಿಷ್ಣು ದೇಗುಲದ ಆಡಿಟೋರಿಯಂನಲ್ಲಿ ಮೂರುದಿನಗಳ ಕಾಲ ನಡೆಯಲಿರುವ ಸಂಗೀತ ಸಂಜೆಗೆ ಸಮಸ್ತರನ್ನು ನಾದತರಂಗಿಣಿ ತಂಡ ಆಮಂತ್ರಿಸುತ್ತದೆ. ಪ್ರಸಕ್ತ ವರ್ಷ, ನಾದತರಂಗಿಣಿ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಸಕ್ತರಿಗೆ ಹಾಡುವ ಅವಕಾಶವವೂ ಇದೆ.

ಪುರಂದರ ದಾಸ ಮತ್ತು ತ್ಯಾಗರಾಜದಾಸ ಆರಾಧನಾ ಮಹೋತ್ಸವವು ಏಪ್ರಿಲ್ 13ರಿಂದ 15ರ ತನಕ (ಸಂಜೆ ಆರರ ನಂತರ) ಮೂರುದಿನಗಳ ಕಾಲ ನಡೆಯಲಿದೆ. ಈ ಸಂಗೀತ ಸಂಜೆಯಲ್ಲಿ ನಾದಲಹರಿ ತಂಡದಿಂದ ವೀಣೆ, ವಯೊಲಿನ್, ತಾಳಮೇಳ, ಸರಸ್ವತಿ ನಮೋಸ್ತುತೆ ಸೇರಿದಂತೆ ಹತ್ತು ಹಲವು ವಿಶೇಷ ಕಾರ್ಯಕ್ರಮಗಳು ಇರಲಿವೆ.

ಈ ಸಂಗೀತ ಹಬ್ಬದಲ್ಲಿ ಆಸಕ್ತರು ಹಾಡಬಹುದು. ವೃಂದಗಾನ ತಂಡ ಆಯ್ಕೆಯಲ್ಲಿ ಸಂಘಟಕರ ತೀರ್ಮಾನವೇ ಅಂತಿಮ. ಸೀಮಿತ ಅವಕಾಶ ಇರುವ ಕಾರಣ ಹಾಡಲಿಚ್ಛಿಸುವವರು ಮಾರ್ಚ್ 23ಕ್ಕೆ ಮುನ್ನ ಹೆಸರು ನೊಂದಾಯಿಸಿಕೊಳ್ಳಬೇಕು. ಈ ಲಿಂಕ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದು. ಮೊದಲು ಹೆಸರು ನೀಡಿದ ಗಾಯಕರಿಗೆ ಮೊದಲ ಆದ್ಯತೆ ಎಂದು ನಾದತರಂಗಿಣಿ ಆಯೋಜಕರು ತಿಳಿಸಿದ್ದಾರೆ.

ಸ್ಥಳೀಯ ಮತ್ತು ಭಾರತದ ಕಲಾವಿದರು ನಾದತರಂಗಿಣಿ ಕಾರ್ಯಕ್ರಮಕ್ಕೆ ಆಗಮಿಸಿ ನೆರೆದವರನ್ನು ಸಂಗೀತ ಸುಧೆಯಲ್ಲಿ ಮುದಗೊಳಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸುವಂತೆ ಕರೆಯೋಲೆಯಲ್ಲಿ ತಿಳಿಸಲಾಗಿದೆ.

ಕೊಲಂಬಸ್ ನಲ್ಲಿ ( ಒಹಾಯೊ) 25 ವರ್ಷಗಳ ಹಿಂದೆ ನಾದತರಂಗಿಣಿ ಉದಯವಾಯಿತು. ಈಗ ಇದು ವಾಷಿಂಗ್ಟನ್ ಮತ್ತು ಒಹಾಯೋಗೆ ವ್ಯಾಪಿಸಿದೆ. ಸ್ಥಳೀಯ ಮತ್ತು ಭಾರತದಿಂದ ಆಗಮಿಸುವ ಕಲಾವಿದರನ್ನು ಪ್ರೋತ್ಸಾಹಿಸುವುದು ಈ ಸಂಸ್ಥೆ ಪ್ರಮುಖ ಆದ್ಯತೆ ನೀಡುತ್ತ ಬಂದಿದೆ. ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ ನಾದತರಂಗಿಣಿ ಜಾಲತಾಣಕ್ಕೆ ಭೇಟಿನೀಡಬಹುದು.

English summary
NADATARANGINI Annual Music Festival 2012 marks the 25th – 'Silver Jubilee' year – of celebrating the annual Sri Purandara Dasa and Sri Thyagaraja Aradhana. Festivities will commence at 6.00 pm on April 13th and conclude on Sunday the 15th. Those wishing to participate in individual singing should register before March 23rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X