ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್‌ನಲ್ಲಿ ಬಸವಣ್ಣ ಪುತ್ಥಳಿ ಸ್ಥಾಪನೆಗೆ ಕೌನ್ಸಿಲ್ ಒಪ್ಪಿಗೆ

By Prasad
|
Google Oneindia Kannada News

Basaweshwara Statue in London
ಲಂಡನ್, ಮಾ. 15 : ಜಗತ್ತಿನ ಅತಿ ದೊಡ್ಡದಾದ ಪ್ರಜಾತಂತ್ರದ ಹರಿಕಾರ ಜಗಜ್ಯೋತಿ ಬಸವೇಶ್ವರನ ಕಂಚಿನ ಪುತ್ಥಳಿ, ಜಗತ್ತಿನ ಅತಿ ಹಳೆಯದಾದ ಪ್ರಜಾತಂತ್ರವನ್ನು ಹುಟ್ಟುಹಾಕಿರುವ ಬ್ರಿಟಿಷ್ ಪಾರ್ಲಿಮೆಂಟ್ ಮುಂದೆ ಮತ್ತು ಥೇಮ್ಸ್ ನದಿಯ ದಡದಲ್ಲಿ ಸ್ಥಾಪಿಸಲು ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಯೋಜನಾ ಸಮಿತಿ ಅನುಮೋದನೆ ನೀಡಿದೆ.

ಮಾರ್ಚ್ 13ರಂದು ಸಭೆ ಸೇರಿದ 5 ಸದಸ್ಯರ ಸಮಿತಿ, ಹಿಂದಿನ ಲ್ಯಾಂಬೆತ್ ಮೇಯರ್ ಆಗಿದ್ದ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರ ಅರ್ಜಿಯ ವಿಚಾರಣೆ ಮಾಡಿ, 12ನೇ ಶತಮಾನದಲ್ಲಿಯೇ ಜಾತಿ ತಾರತಮ್ಯ ಮತ್ತು ಗುಲಾಮಗಿರಿಯನ್ನು ತೊಡೆಯಲು ಹೋರಾಟ ಮಾಡಿದ್ದ ಬಸವಣ್ಣನ ಮೂರ್ತಿ ಸ್ಥಾಪನೆಗೆ ಅಂಗೀಕಾರ ನೀಡಿತು.

ಬಸವಣ್ಣನ ಪುತ್ಥಳಿ ಸ್ಥಾಪನೆ, ಭಾರತ ಮತ್ತು ಬ್ರಿಟನ್ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಇನ್ನಷ್ಟು ಗಟ್ಟಿಮಾಡಲು ಸಹಕಾರಿ ಎಂದು ನೀರಜ್ ಪಾಟೀಲ್ ಒನ್ಇಂಡಿಯಾ ಕನ್ನಡಕ್ಕೆ ಹೇಳಿದ್ದಾರೆ. ಇದು ಲಂಡನ್ ಕನ್ನಡಿಗರು ಮಾತ್ರವಲ್ಲ ಇಡೀ ಜಗತ್ತಿನಲ್ಲಿರುವ ಕನ್ನಡಿಗರೆಲ್ಲರು ಹರ್ಷಿಸುವ ಸಂಗತಿ ಎಂದು ಅವರು ನುಡಿದರು. ಲಂಡನ್‌ನಲ್ಲಿರುವ ಪಾಕಿಸ್ತಾನಿ ನಾಗರಿಕರು ಮತ್ತು ಲ್ಯಾಂಬೆತ್ ಏಷ್ಯಾ ಫೋರಂ ಪುತ್ಥಳಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಬಲಿಸಿದ್ದವು.

ಥೇಮ್ಸ್ ನಡಿದ ದಡದಲ್ಲಿ, ಐತಿಹಾಸಿಕ ಅಲ್ಬರ್ಟ್ ಎಂಬ್ಯಾಂಕ್‌ಮೆಂಟ್ ಮೇಲೆ ಪುತ್ಥಳಿಗಾಗಿ ಚೌಕದ ಗ್ರಾನೈಟ್ ಅಡಿಪೀಠ ನಿರ್ಮಿಸಲು ಯೋಜನಾ ಸಮಿತಿ ಅನುಮತಿ ನೀಡಿದೆ. ಆದರೆ, ಬ್ರಿಟನ್ನಿನ ಸಾರ್ವಜನಿಕ ಪುತ್ಥಳಿ ಕಾಯ್ದೆಯ ಪ್ರಕಾರ, ಅಡಿಪೀಠ ನಿರ್ಮಾಣಕ್ಕೆ ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಸಚಿವರಿಂದ ಕೂಡ ಅನುಮೋದನೆ ಪಡೆಯಬೇಕಾಗುತ್ತದೆ.

English summary
The Planning Committee of the London Borough of Lambeth has approved planning permission to install a statue of 12th century philosopher and pioneer of Indian democracy Basaweshwara on the bank of the River Thames. The Immediate Past Mayor of Lambeth Cllr Dr Neeraj Patil had written an application for approval of council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X