ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾವಿದರ ಪ್ರತಿಭೆಗೆ ಸಾಣೆಹಿಡಿದ ನಾಟಕ ಚೈತ್ರ

By * ಮಂಗಳಾ ಕುಮಾರ್
|
Google Oneindia Kannada News

Natakachaitra 2012 in San Jose
ಚುಮು ಚುಮು ಚಳಿಗೆ, ಥಂಡಿಗೆ ಬೈ ಹೇಳಲು, ಹೊಸ ಚಿಗುರು ಸೂಸುತ್ತ ಮುದ ತರುವ ಪ್ರಕೃತಿ ಮಾತೆಗೆ ವೆಲ್ ಕಂ ಎನ್ನಲು ನಮಗೆ ಪ್ರತೀ ವರ್ಷವೂ ಕಾತುರ. ಚೈತ್ರ ಮಾಸದ ಸೊಗಸೇ ಹಾಗೆ. ಜೊತೆಗೆ "ನಾಟಕ ಚೈತ್ರ"ವೂ ಕೈಬೀಸಿ ಕರೆದು ಬೇ ಏರಿಯಾ ಕನ್ನಡಿಗರನ್ನು ಒಂದು ಒಳ್ಳೆಯ ಕೆಲಸಕ್ಕೆ ಕಲೆಹಾಕಿದ ಬಗ್ಗೆ ಕೇಳಿ.

2010ರಲ್ಲಿ ನಮ್ಮೂರಿನ ಪ್ರತಿಭಾನ್ವಿತ ಕಲಾವಿದೆ ಶರ್ಮಿಳಾ ವಿದ್ಯಾಧರ ನೆಟ್ಟ ಬೀಜ "ನಾಟಕ ಚೈತ್ರ". ನಮ್ಮೂರಿನ ಹವ್ಯಾಸಿ ರಂಗ ಕಲಾವಿದರನ್ನು ಒಟ್ಟುಗೂಡಿಸಿ, ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿ, ಸಂಗ್ರಹಿಸಿದ ದುಡ್ದೆಲ್ಲವನ್ನೂ ಭಾರತದಲ್ಲಿ ಜನಸೇವೆ ನಡೆಸುತ್ತಿರುವ ಒಂದಲ್ಲ ಒಂದು ಲಾಭರಹಿತ ಸಂಸ್ಥೆಗೆ ದಾನ ಮಾಡುವ ಉದ್ದೇಶದಿಂದ ನೆಟ್ಟ ಬೀಜಕ್ಕೆ ನೀರು, ನೆರಳು, ರಸಗೊಬ್ಬರ ಎಲ್ಲವನ್ನೂ ತನುಮನಧನ ಸಮೇತ ಧಾರೆ ಎರೆದವರು ನೂರಾರು ಮಂದಿ - ಕಲಾವಿದರು ಮತ್ತು ಅವರ ಮನೆಮಂದಿ, ದಾನಿಗಳು, ಪ್ರೇಕ್ಷಕರು ಮತ್ತು ಕೆ.ಕೆ.ಎನ್.ಸಿ.

ಶರ್ಮಿಳಾ ಅವರು ಆಗ ಬೇ ಏರಿಯಾ ಕನ್ನಡಿಗರಿಗರಿಗೆ "ನಮ್ಮೊಳಗೊಬ್ಬ ನಾಜೂಕಯ್ಯ" ಮತ್ತು "ಕೊರಿಯಪ್ಪನ ಕೊರಿಯೋಗ್ರಫಿ" ಎನ್ನುವ ಎರಡು ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದರು. ಈ ವರ್ಷ ಶರ್ಮಿಳಾ ಅವರು ಓಸಾಟ್ www.osaat.org ಮತ್ತು Second Harvest Food Bank ಸಂಸ್ಥೆಗೆ ಬೆಂಬಲ ನೀಡುವ ಉದ್ದೇಶದಿಂದ ಭಾನುವಾರ, ಮಾರ್ಚ್ 4ರಂದು, ಸ್ಯಾನ್ ಹೋಸೆಯ ಮೌಂಟ್ ಪ್ಲೆಸಂಟ್ ಹೈಸ್ಕೂಲಿನ ಸಭಾಂಗಣದಲ್ಲಿ ಎರಡು ನಾಟಕಗಳನ್ನು ಪ್ರದರ್ಶಿಸಿದರು. [ನಾಟಕ ನಂಗ್ಯಾಕೋ ಡೌಟು]

English summary
Two Kannada plays were enacted in San Jose in USA recently as part of Natakachaitra 2012 celebration. Humor plays Nangyako Dautu written by BR Lakshman Rao and Sambashivana Prahasana written by Dr Chandrashekar Kambar enthralled the audience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X