ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದಲ್ಲಿ ಏರ್‌ಟೆಲ್‌ಗೆ ಹಿಡಿದ ವೈರಲ್ ಜ್ವರ (ಭಾಗ 4)

By * ವಿಜಯ ರಂಗ ಪ್ರಸಾದ್ ಎನ್.ಎಸ್, ಸಿಂಗಪುರ
|
Google Oneindia Kannada News

Vijaya Ranga Prasad, Singapore
2 ಗಂಟೆ ಸಮಯವಾದರೂ ಯಾರಿಂದಲೂ ಕರೆಯಿಲ್ಲ. ಒಂದು ಕಡೆ ಆಶ್ಚರ್ಯ ಮತ್ತೊಂದು ಕಡೆ ಕೋಪ. ಒಬ್ಬರಾದರೂ ಕರೆಮಾಡಲಿಲ್ಲವಲ್ಲ ಅಂತ. ಕೊನೆಗೂ ನಾನೇ ನನ್ನ ಆಪ್ತ ಸ್ನೇಹಿತನಿಗೆ ಕರೆಮಾಡಿದೆ. "ಲೋ ರಂಗ, ರಾಂಗ್ ನಂಬರ್ ಕೊಟ್ಟಿದ್ದೀಯಲ್ಲೋ? ಈ ನಂಬರ್ ಚಾಲನೆಯಲಿಲ್ಲ ಅಂತ ಬರ್ತಾಯಿದೆಯಲ್ಲೋ?” ಅಂದ. ನಾನು "ಏ ಎನ್ ಹೇಳ್ತಾ ಇದೀಯಾ ನನ್ನ ಅಕ್ಕ ಕರೆ ಮಾಡಿದ್ದಳು. ನಾನೆ ಈಗ ನಿನಗೆ ಇದೇ ನಂಬರ್‌ನಿಂದ ಕರೆ ಮಾಡಿ ಮಾತನಾಡುತ್ತಿದ್ದೇನೆ. ಯಾವ ನಂಬರ್ ಬಳಸಿದ್ದೇನೆ ನೋಡು" ಅಂತ ನಾನು ವಾದಿಸಿದೆ. "ಇರು ಆಫೀಸ್ ಫೋನ್‌ನಲ್ಲಿ ಪ್ರಯತ್ನಿಸುತ್ತೇನೆ" ಅಂತ ಹೇಳಿ ಕಟ್ ಮಾಡಿದ. ಸ್ವಲ್ಪ ಸಮಯದ ನಂತರ ಆ ಸ್ನೇಹಿತನಿಂದ ಮೆಸೇಜ್ "Not able to reach you". ನಾನೇ ಕರೆ ಮಾಡಿದೆ. "ಲೋ ನಂಬರ್ ಚಾಲನೆಯಿಲ್ಲ ಅಂತ ಬರ್ತಾಯಿದೆ" ಅಂದ. ನನಗೆ ಏನೂ ಅರ್ಥವಾಗದು. ನಾನು ಕರೆ ಮಾಡಬಹುದು, ಮೆಸೇಜ್ ಬರ್ತಾಯಿದೆ, ನನ್ನ ಅಕ್ಕ ಕರೆಮಾಡಿದ್ದಾಳೆ. ಆದರೂ ಇವನು ಹೀಗೆ ಹೇಳ್ತಿದಾನಲ್ಲ ಅಂತ. ಅವನಿಗೂ ಅರ್ಥವಾಗದು.

ಮತ್ತೆ ಸ್ವಲ್ಪ ಸಮಯದ ನಂತರ ನನ್ನ ಸ್ನೇಹಿತನೇ ಕರೆಮಾಡಿ ಹೇಳಿದ "ಲೋ ಸಮಸ್ಯೆ ಏನಂದರೆ... ನಿನ್ನ ನಂಬರ್‌ಗೆ ಏರ್ ಟೆಲ್ ನಂಬರ್‌ನಿಂದ ಮಾತ್ರ ಕರೆ ಮಾಡಬಹುದು ಬೇರೆ provider‌ನಿಂದ ಕರೆ ಮಾಡಲು ಸಾಧ್ಯವಿಲ್ಲ. ಆದರೆ ನೀನು ಯಾರಿಗಾದರು ಕರೆ ಮಾಡಬಹುದು" ಅಂದ. ಭಲೆ ಏರ್ ಟೆಲ್ ಅಂದುಕೊಂಡೆ. ಮತ್ತೆ "ರಿಂಬ ರಿಂಬ ರೊ ರೊ"ಗೆ ಕರೆ.... ಅದೇ ರಾಗ ಅದೇ ಹಾಡು. ಮತ್ತೆ ಎಲ್ಲಾ ಪ್ರವರ ಹೇಳಿ, ಸಮಸ್ಯೆ ಏನೂ ಅಂತಾನೂ ಹೇಳಿದೆ. ಅವನಿಗೂ ಸಮಸ್ಯೆ ಅರ್ಥವಾಗದು, ಪರಿಹಾರ ತಿಳಿಯದು. "ಸಾರ್ ನಮ್ಮ supervisor‌ಗೆ ಸಂಪರ್ಕಿಸುತ್ತೇನೆ ಮಾತಾಡಿ" ಅಂದ... "How can I help you sir?" ಅಂದ ಕನ್ನಡದ ಮೇಲ್ವಿಚಾರಕ. ಮತ್ತೆ ಮೊದಲನೇ ದಿನದಿಂದ ನಡೆದ ಕಥೆ ಒದರಿದೆ. "ಸರಿ ಸಾರ್, ನಿಮ್ಮ ಸಮಸ್ಯೆ ಅಪರೂಪವಾಗಿದೆ, 24 ಗಂಟೆ ಸಮಯದಲ್ಲಿ ಸರಿಮಾಡುತ್ತೇವೆ" ಅಂದ. ಈಗಾಗಲೇ ಅವರ ಸಮಯಪ್ರಜ್ಞೆಯ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದರೂ. ಇನ್ನೇನೂ ಮಾಡಲಾಗದೆ ಸುಮ್ಮನಾದೆ.

ಏರ್ ಟೆಲ್ ಸಮಸ್ಯೆ ಮತ್ತೆ ಬಂದಂತೆ ಮೈಸೂರಿಗೆ ತಲುಪಿದ ನಂತರ ನನ್ನ ಮಗನಿಗೆ ಚಳಿ, ಜ್ವರ ಮತ್ತೆ ಬಂತು. ವೈದ್ಯರಾದ ನನ್ನ ಭಾವನವರು. ಜ್ವರವು 3ನೇ ದಿನವಾದ್ದರಿಂದ antibiotic ತೊಗೊಳ್ಳಿ ಅಂದರು. ಸದ್ಯ ಮದ್ದೂರ್ ಮ್ಯಾಕ್ ಡೊನಾಲ್ಡ್ ನಲ್ಲಿ ತಿಂದಾಯಿತಲ್ಲ ಇನ್ನು ಪರವಾಗಿಲ್ಲ ಅಂತ ಸಮಾಧಾನ ನನ್ನ ಮಗನಿಗೆ. 4ನೇ ದಿನವೂ ಕಳೆಯಿತು, 24 ಗಂಟೆ ಆಯಿತು - ಏರ್ಟೆಲ್ ಸಿಮ್‍ಕಾರ್ಡ್ ಸಮಸ್ಯೆ ವೈರಲ್ ಜ್ವರದ ತರಹ ಇನ್ನೂ ಸರಿಹೋಗಿಲ್ಲ. ಮಿತಿಮೀರಿದ ಸಹನೆಯಿಂದ ಇದ್ದ ನಾನು ವೈದ್ಯರಿಗೆ “ಇವನಿಗೆ ಒಂದು antibiotic ಕೊಡಬೇಕು” ಎಂದವನೇ... Airtel Nodel officerಗೆ ಇ-ಮೈಲ್ ಮೂಲಕ ಮೊದಲನೆಯ ದಿನದಿಂದ, 4ನೇ ದಿನವರೆಗೂ ನಡೆದ ಹರಿಕಥಾಪ್ರಸಂಗವನ್ನು ಕಳುಹಿಸಿದೆ.

5ನೇ ದಿನ ಮೈಸೂರಿನ Airtel distributor ಅಂಗಡಿಗೆ ಹೋದೆ. ಎಲ್ಲಾ ಸಮಸ್ಯೆ ಮತ್ತೆ ಹೇಳಿದೆ. "ಸಾರ್ ನೀವು ಅಲ್ಲಿರುವ ಫೋನ್‌ನಿಂದ customer careಗೆ ಕರೆ ಮಾಡಿ ಅಂದ". ನನಗೆ ಬರುವ ಕೋಪದಲ್ಲಿ ಏನು ಹೇಳಬೇಕೊ ತೋರಲಿಲ್ಲ. "ಇಲ್ಲಪ್ಪ ಮೊನ್ನೆ ಮಾಡಿದ್ದೆ, 24 ಗಂಟೆಯಲ್ಲಿ ಸರಿ ಮಾಡ್ತೀನಿ ಅಂದರು". "ಇಲ್ಲ ಸಾರ್ ನೀವು ಕರೆ ಮಾಡಿ, ನಾನು ಮಾತಾಡ್ತೀನಿ" ಅಂದ. ನನಗೆ “ನಾನು ಯಾಕೆ ಕರೆ ಮಾಡಬೇಕೋ, ಅವನೇ ಮಾಡಬಾರದೆ?” ಅನ್ನಿಸಿದರೂ ವಾದ ಮಾಡದೆ ಕರೆ ಮಾಡಿದೆ. Supervisor ಲೈನಿನಲ್ಲಿ ಬಂದಾಕ್ಷಣ ಅಲ್ಲಿದ್ದವನಿಗೆ ಕೊಟ್ಟೆ. ಅವರಿಬ್ಬರೂ ಏನು ಮಾತಾನಾಡಿದರೋ ತಿಳಿದು... "ಸಾರ್ ಇಂದು 4 ಗಂಟೆಗೆ ನಿಮ್ಮ ನಂಬರ್ ಸರಿಯಾಗುತ್ತೆ" ಅಂದ. ನನಗೆ ಎಲ್ಲಿಲ್ಲದ ಕೋಪ. ಜೋರಾಗಿ ಬೈದೆ. "ಕ್ಷಮಿಸಿ ಸಾರ್ ನಿಮ್ಮ ಕೋಪ ಅರ್ಥವಾಗುತ್ತೆ. ಈ ಒಂದು ಸಲ ಅವಕಾಶ ಕೊಡಿ, ತೊಗೊಳ್ಳಿ ನನ್ನ ನಂಬರ್, ಸರಿಯಾಗಲಿಲ್ಲವಾದಲ್ಲಿ ನನಗೆ ಕರೆ ಮಾಡಿ" ಅಂದ. ಅವನ ಆತ್ಮವಿಶ್ವಾಸಕ್ಕೆ ಓಕೆ ಅಂದವನೇ ಮನೆಗೆ ಬಂದೆ. ಸಂಜೆ 4 ಆಯಿತು, 5 ಆಯಿತು. ಯಾವ ಕರೆಯೂ ಇಲ್ಲ. ಬೆಳಿಗ್ಗೆ ಆಶ್ವಾಸನೆ ಕೊಟ್ಟವನನ್ನು ಸಂಪರ್ಕಿಸೋಣ ಅಂತ ಕರೆ ಮಾಡಿದೆ. ನಂಬರ್ busy... ಪ್ರತಿ ಹತ್ತು ನಿಮಿಷಕೊಮ್ಮೆ ಎಡೆಬಿಡದ ತ್ರಿವಿಕ್ರಮನಂತೆ ಕರೆ ಮಾಡಿದೆ.. ಕೊನಗೂ ಆ ಭೂಪ ಸಿಕ್ಕಿದ.... "ಸಾರ್ ಮೀಟಿಂಗ್‌ನಲ್ಲಿದ್ದೆ , ಇನ್ನೂ ಸರಿಯಾಗಿಲ್ಲವಾ? 10 ನಿಮಿಷ ಸಮಯ ಕೊಡಿ ನಾನೇ ಪುನ: ಕರೆ ಮಾಡುತ್ತೇನೆ" ಎಂದವನೇ 2 ಗಂಟೆಯಾದರೂ ಕರೆ ಮಾಡಲಿಲ್ಲ... ಅಲ್ಲಿಗೆ ಅರ್ಥವಾಯಿತು ಈ ಮಹಾಶಯನ ಆತ್ಮವಿಶ್ವಾಸ.

English summary
When leading telecom operator company Airtel itself is infected with virus, what kind of antibiotic should be administered? Vijaya Ranga Prasad from Singapore narrates true and horrifying experience he had with Airtel in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X