ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದಲ್ಲಿ ಏರ್‌ಟೆಲ್‌ಗೆ ಹಿಡಿದ ವೈರಲ್ ಜ್ವರ (ಭಾಗ 3)

By * ವಿಜಯ ರಂಗ ಪ್ರಸಾದ್ ಎನ್.ಎಸ್, ಸಿಂಗಪುರ
|
Google Oneindia Kannada News

Vijaya Ranga Prasad, Singapore
ಎಲ್ಲಾ ಆಯ್ಕೆಯನಂತರ ಆ ಕಡೆಯಿಂದ ಬಂದ ಧ್ವನಿ "ಈ ಕರೆಗೆ ಒಂದು ನಿಮಷಕ್ಕೆ 50 ಪೈಸೆ. ಮುಂದುವರಿಸಲು ಒಂದನ್ನು ಒತ್ತಿ" ... ಹೋಗಲಿ 50 ಪೈಸೆ ತಾನೇ ಅಂತ ಕರೆ ಮುಂದುವರೆಸಿದೆ. "ನಮಸ್ಕಾರ ಇಂದು ನಿಮಗೆ ಏನು ಸೇವೆ ಮಾಡಲಿ?" ಅಂದ ಒಬ್ಬ ಭೂತ ..ಅಲ್ಲ ಸೇವಾದೂತ! "ನೋಡಪ್ಪ ನೆನ್ನೆ ನಾನು ಒಂದು ಸಿಮ್ ಕಾರ್ಡ್ ತೊಗೊಂಡೆ, 5 ನಿಮಷದಲ್ಲಿ ಸಂಪರ್ಕ ಕೊಡುವೆ ಅಂತ ಹೇಳಿ 12 ಗಂಟೆಯಾಯಿತು, ಇನ್ನೂ ಚಾಲನೆಯಲಿಲ್ಲ" ಅಂದೆ ... "ಸಾರ್ ನೀವು ಅರ್ಜಿಯನ್ನು, ಅರ್ಡಸ್ ಪ್ರೂಫ್, ಫೋಟೋ ಕೊಟ್ಟಿದ್ದಿರಾ" ಅಂದ ಆ ಭೂಪ. ನನಗೋ ಇದೆಂತಹ ಪ್ರಶ್ನೆ, ಇವೆಲ್ಲ ಕೊಡದಿದ್ದರೆ ಸಿಮ್‌ಕಾರ್ಡ್ ಹೇಗೆ ಸಿಗುತ್ತಿತ್ತು? ಹೋಗಲಿ ಅವೆಲ್ಲ ಇವನಿಗ್ಯಾಕೆ ಕೇಳೋದು ಅಂತ "ಹೌದಪ್ಪ ಎಲ್ಲಾ ಕೊಟ್ಟಿದ್ದೀನಿ" ಅಂದೆ. "ಒಂದು ನಿಮಿಷ ಸಾರ್.." ಅಂತ ಹೇಳಿ ರಿಂಬ ರಿಂಬ ರೊ ರೊ ಹಾಡು ಹಾಕಿ ಕಾಯಿಸಿದ. "ಸಾರ್ ನೀವು language ಆಯ್ಕೆ ಮಾಡಿಲ್ಲ ಅಂತ ಕಾಣುತ್ತೆ ಮತ್ತೆ 134 ಕರೆಮಾಡಿ language ಆಯ್ಕೆ ಮಾಡಿ" ಅಂದ.

ಅಲ್ಲಿಗೆ ಆ ಕರೆ ಕಟ್ ಮತ್ತು 1.50ರೂ ಕಟ್.. ಆಗಲೇ ನನಗೆ ಗೊತ್ತಾಗಿದ್ದು ಸಿಮ್‌ಕಾರ್ಡ್ ಚಾಲನೆಯಲಿಲ್ಲದಿದ್ದರೂ ಉಪಯೋಗ ದರದ ಹಣ ಮಾತ್ರ ಇದೆ ಆಂತ. ಆ ಭೂಪ ಹೇಳಿದ ಹಾಗೆ ಭಾಷೆ ಆಯ್ಕೆ ಮಾಡಿದೆ, ಆದರೆ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ. ಮತ್ತೇ ನನ್ನ ಕರೆ Airtel customer careಗೆ...ಮತ್ತೆ ಅದೇ ಆಲಾಪ... "ನಮಸ್ಕಾರ ಏನು ಸಹಾಯ ಬೇಕು?" ಅಂತ ಮತ್ತೊಂದು ಭೂಪ. ಅಯ್ಯೋ ಇವನಿಗೆ ನನ್ನ ಎಲ್ಲಾ ಕಥೆ ಮತ್ತೆ ಹೇಳಾಬೇಕಾ ಅನ್ನೋ ಸಂಕಟ ನನಗೆ. ಭಾಷೆ ಆಯ್ಕೆಯವರೆಗೆ ಎಲ್ಲಾ ಕಥೆ ಹೇಳಿದೆ. "ಒಂದು ನಿಮಿಷ ಸಾರ್" ಎಂದವನೇ ನನ್ನನ್ನು ಕಾದಿರಿಸಿ ಮತ್ತೆ "ರಿಂಬ ರಿಂಬ ರೊ ರೊ" ರಾಗ ಹಾಕಿದ. ಸ್ವಲ್ಪ ಸಮಯದ ನಂತರ "ಸಾರ್ ನಿಮ್ಮ ಅರ್ಜಿ ಸರಿಯಾಗಿಲ್ಲ ನೀವು ಮತ್ತೆ ಅರ್ಜಿ ಕೊಡಬೇಕು" ಎಂದೊಡನೆಯೇ ನನ್ನ ರಕ್ತದ ಒತ್ತಡ ಉತ್ತಂಗಕ್ಕೆ ಒಮ್ಮೆಲೆ ಏರಿತು. ನನ್ನ ಧ್ವನಿ ಜೋರಾಯಿತು. "ಅಲ್ಲಯ್ಯ ಅರ್ಜಿ ಸರಿಯಾಗದಿದ್ದ ಪಕ್ಷದಲ್ಲಿ ನನಗೆ ಸಿಮ್‌ಕಾರ್ಡ್ ಹೇಗೆ ಕೊಟ್ಟಿರಿ?" ಅಂತ ನಾನು ಕಿರುಚಿದಾಗ.. "ಹಲೊ ಹಲೊ ಹಲೊ ಸಾರ್ ಕೇಳಿಸ್ತಾಯಿಲ್ಲ ಸ್ವಲ್ಪ ಜೋರಾಗಿ ಮಾತಾಡಿ" ಅಂದ! ನಾನು "ಇನ್ನೆಷ್ಟಯ್ಯ ಜೋರಾಗಿ..." ಅನ್ನುವಷ್ಟರಲ್ಲಿ ಕಾಲ್ ಕಟ್. 2.50ರೂ. ಕೂಡಾ ಕಟ್. ಸರಿ ಇವರಲ್ಲಿ ಮಾತನಾಡಿ ಪ್ರಯೋಜನವಿಲ್ಲ, ಮತ್ತೆ ಆ ಅಷ್ಟಾವಧಾನಿ ಬಳಿಯೇ ಹೋಗಬೇಕು ಅಂತ ಹೇಳಿ ನನ್ನ ಮೈಸೂರು ಪಯಣವನ್ನು ಮುಂದೂಡಿದೆ.

ಈ ಕಡೆ ಚಳಿ, ಜ್ವರದಿಂದ ಸೊರಗಿದ್ದ ನನ್ನ ಮಗನಿಗೆ ನಿರಾಸೆ, ಎಲ್ಲಾ ಹುಡುಗರು ಆಟವಾಡುತಿದ್ದಾರೆ. ಇವನಿಗೆ ಆಡಲೂ ಆಗದು, ಮಲಗಲೂ ಆಗದು. "ಅಪ್ಪ ಜ್ವರ ಬಿಟ್ಟಮೇಲೆ ಮೈಸೂರಿಗೆ ಹೋಗುವಾಗ ಮದ್ದೂರ್ Mcdonaldsನಲ್ಲಿ ನನಗೆ ಬರ್ಗರ್ ಬೇಕು" ಅಂದ. ಎಲಾ ಇವನಾ... ಬೆಂಗಳೂರು, ಮೈಸೂರು ಗೊತ್ತಿಲ್ಲ ಆದರೆ ಮದ್ದೂರಿನಲ್ಲಿ ಇರುವ Mcdonalds ಗೊತ್ತು....ಅಬ್ಬಾ! ಪಾಶ್ಚಾತ್ಯದ ಧಾಳಿಯ ಪ್ರಭಾವ ಪ್ರಸಿದ್ದ "ಮದ್ದೂರ್ ವಡೆ"ಯುನ್ನು "ಮದ್ದೂರ್ Mcdonalds" ಆಗಿ ಮಾರ್ಪಡಿಸಿದೆಯಲ್ಲ ಅಂದನಿಸಿತು.

3ನೇ ದಿನ ಸೋಮವಾರ ಮಗನಿಗೆ ಜ್ವರ ಕಡಿಮೆ ಆದಂತೆ ಕಂಡಿತು, ಮೈಸೂರಿಗೆ ಪ್ರಯಾಣ ಮಾಡಬೇಕಾಗಿದ್ದರಿಂದ ಏರ್ ಟೆಲ್ ಅಂಗಡಿಗೆ ಹೋಗಿ ಅದೇ ಪ್ರಿಪೇಯ್ಡ್ ಕಾರ್ಡ್ ಅಷ್ಟಾವಧಾನಿಯ ಮುಂದೆ ನಿಂತೆ. ಗಾಬರಿಯಿಂದ ಅವನು "ಸಾರ್ ಇನ್ನೂ ಕನೆಕ್ಷನ್ ಇಲ್ಲವಾ ಅಂದ". ಸದ್ಯ ಅಷ್ಟು ಕೇಳಿದ್ದಕ್ಕೆ ನನ್ನ ಮನಸ್ಸು ಸ್ವಲ್ಪ ತಣ್ಣಗಾಗಿ "ಇಲ್ಲಪ್ಪ" ಅಂದೆ. "ಕ್ಷಮಿಸಿ ಸಾರ್, ಬನ್ನಿ ಕುಳಿತುಕೊಳ್ಳಿ" ಅಂತ ಹೇಳಿ ಯಾರಿಗೋ ಫೋನಾಯಿಸಿ ತರಾಟೆಗೆ ತೆಗೆದುಕೊಂಡ. ಆಗ ಅರ್ಥವಾಯಿತು, Airtel ಅಂಗಡಿಯವರಿಗೂ, ಸಿಮ್‌ಕಾರ್ಡ್ ಚಾಲನೆ ಮಾಡುವವರಿಗೂ, customer careಗೂ ಯಾವ ಕನೆಕ್ಷನ್ನೂ ಇಲ್ಲಾ ಅಂತ. ಹಾಗೂ ಹೀಗೂ 10 ಕರೆ ಮಾಡಿ ಆ ಅಷ್ಟಾವಧಾನಿ "ಸಾರ್ ಈಗ ಟ್ರೈ ಮಾಡಿ" ಅಂದ.. ಸರಿ ನನ್ನ ಅಕ್ಕನಿಗೆ ಕರೆ ಹಚ್ಚಿದೆ, ಸಿಮ್‌ಕಾರ್ಡ್ ಚಾಲನೆಗೆ ಬಂತು. ಅವಳಿಗೂ ಪುನ: ಕರೆಮಾಡಲು ಹೇಳಿದೆ. ನನ್ನ ಫೋನ್ ರಿಂಗ್ ಆಯಿತು. ಸದ್ಯ ಸರಿಯಾಯಿತಲ್ಲ ಅಂತ ಆ ಅಷ್ಟಾವಧಾನಿಗೆ ಧನ್ಯವಾದ ಹೇಳಿ. ನನ್ನ ಎಲ್ಲಾ ಕುಟುಂಬದವರಿಗೂ, ಸ್ನೇಹಿತರಿಗೂ ನನ್ನ ನಂಬರ್‌ನ್ನು ಮೆಸೇಜ್ ಮಾಡಿದೆ. ಅದೂ ಅಲ್ಲದೆ 3G ಕೆಲಸ ಮಾಡುತ್ತಿದೆಯೋ ಅಂತ ಪರೀಕ್ಷಿಸಲು ಫೇಸ್ ಬುಕ್‌ನ ತಾಣದಲ್ಲಿ ನನ್ನ ನಂಬರ್ ಬರೆದೆ. ಈಗ ಅಕ್ಕಪಕ್ಕದಲ್ಲಿದ್ದವರೂ ಮುಖಕ್ಕೆ ಮುಖ ಕೊಟ್ಟು ಮಾತನಾಡುವ ಬದಲು ಮುಖ-ಪುಸ್ತಕ, ಅದೇ facebook ಮೂಲಕ ಸಂಭಾಷಣೆ ಮಾಡುವ ಕಾಲ ಬಂದಿದೆ. ಒಕೆ ಎಲ್ಲರಿಗೂ ನನ್ನ ನಂಬರ್ ಕೊಟ್ಟಿದ್ದಾಯಿತು ಅಂತ ಹೇಳಿ ಮೈಸೂರಿನ ಕಡೆ ಪ್ರಯಾಣ ಬೆಳಸಿದೆ.

English summary
When leading telecom operator company Airtel itself is infected with virus, what kind of antibiotic should be administered? Vijaya Ranga Prasad from Singapore narrates true and horrifying experience he had with Airtel in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X