ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಕನ್ನಡ ಸಂಘದ ಸಂಕ್ರಾಂತಿ ಹಬ್ಬ 2012

By * ಪ್ರಶಾಂತ ಧೋತ್ರೆ, ಮೇರಿಲ್ಯಾಂಡ್
|
Google Oneindia Kannada News

Sankranti 2012 in Kaveri Kannada Sangha
ಪುಟ್ಟ ಮಕ್ಕಳ ಗಾನ ಸುಧೆ, ನಾಟ್ಯ ನರ್ತನ, ಹಿರಿಯರ ಹಬ್ಬದ ಹಿಗ್ಗು, ಸಂಭ್ರಮ ಸಡಗರಗಳು ಒಂದಾಗಿ ವಿಶಿಷ್ಟ ರೀತಿಯಲ್ಲಿ ಮಿಳಿತಗೊಂಡಿದ್ದ ದಿನ ಜ. 21. ಅಂದು ಶ್ರೀ ವಿಷು ದೇವಾಲಯದಲ್ಲಿ Maryland & virginiaದ ಕಾವೇರಿ ಕನ್ನಡ ಸಂಘ ಏರ್ಪಡಿಸಿದ ಸಂಕ್ರಾತಿ ಹಬ್ಬ 2012 ರಲ್ಲಿ ಒಂದು ಪುಟ್ಟ ಕರ್ನಾಟಕವೇ ನೆರೆದಿತ್ತು.

ಸಂಕ್ರಾಂತಿ ಹಬ್ಬದ ವೈಶಿಷ್ಯವನ್ನು ದಾಸ ಸಾಹಿತ್ಯದ ಹರಿಕಾರ ಅರಳುಮಲ್ಲಿಗೆ ಪಾರ್ಥಸಾರಥಿಯವರು ವಿವರಿಸುವುದರೊಂದಿಗೆ ಕಾರ್ಯಕ್ರಮವು ವಿಶಿಷ್ಯವಾಗಿ ಆರಂಭಗೊಂಡಿತು. ನಂತರ ಶುರುವಾದ Kaveri Idol ನಲ್ಲಿ ಚಿಣ್ಣರು ಒಬ್ಬರಿಗಿಂತ ಒಬ್ಬರು ಮೇಲು ಎಂಬಂತೆ ಹಾಡಿದರು. ಅಮೆರಿಕಾದಲ್ಲಿ ಬೆಳೆದ ಪುಟಾಣಿಗಳ ಕನ್ನಡ ಪ್ರೇಮ ನಿಜಕ್ಕೂ ನಿಬ್ಬೆರಗಾಗಿಸಿತ್ತು.

ಶ್ರಾವ್ಯ ನವಿಲೇರವರ ಭರತನಾಟ್ಯ ಸಭಿಕರನ್ನು ರಂಜಿಸಿತು. ತಾನ್ಯ ಮತ್ತು ಮಾನ್ಯ ಪುಟಾಣಿಗಳು ಗಾಳಿಪಟದ 'ಅಹ ಬೆದರು ಬೊಂಬೆ' ನರ್ತನ ಪ್ರೇಕ್ಷಕರೂ ಕುಣಿದು ಕುಪ್ಪಳಿಸುವಂತೆ ಮಾಡಿತು. ರಾಮ್ ರಾವ್ ಹಾಗು ತಂಡದವರ ಹಾಡುಗಳು ಸುಶ್ರಾವ್ಯವಗಿದ್ದವು. ಹಬ್ಬ ಅಂದಮೇಲೆ ಹಬ್ಬದೂಟ ಇರಲೇಬೇಕಲ್ಲ? ಸವಿಸವಿಯಾದ ಕೇಸರಿಭಾತ್, ಚಪಾತಿ, ಮೊಸರನ್ನ ಸಜ್ಜಕಗಳು ಬಂದವರ ಹಸಿವನ್ನು ಇಂಗಿಸಿದವು.

ಕಾವೇರಿ ಐಡಲ್ 2012 ಸ್ಪರ್ಧೆಯ ವಿಜೇತರು

ಜ್ಯೂ. ವಿಭಾಗ : ಮೊದಲನೇ ಸ್ಥಾನ ಮಿಲಮ್ ಮಂಜುನಾಥ್, ಎರಡನೇ ಸ್ಥಾನ ವಿಪ್ರಾ ಭಟ್
ಸೀ. ವಿಭಾಗ : ಮೊದಲನೇ ಸ್ಥಾನ ಅಮೂಲ್ಯ ಪುಟ್ಟರಾಜು, ಎರಡನೇ ಸ್ಥಾನ ಚಿಂತನ್ [ಫೋಟೋಗಳು ಇಲ್ಲಿವೆ]

English summary
Kaveri Kannada Sangha, Maryland, USA celebrated Sankranti festival on January 21 at Sri Siva Vishnu temple. Aralumallige Parthasarathi explained the importance of Sankranti and ellu bella distribution. On this occasion Kaveri Idol 2012 competitions were conducted in junior and senior categories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X