ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗನ್ನಡಿಗರ ಪ್ರತಿಭಾಕನ್ನಡಿ 'ಸಿಂಚನ' ಮಾಸ ಪತ್ರಿಕೆ

By Prasad
|
Google Oneindia Kannada News

Talented artists of Singapore
ಕೆಲವು ದಶಕಗಳ ಹಿಂದೆ ಕನ್ನಡಿಗರು ಸಿಂಗಪುರದಲ್ಲಿ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಒಟ್ಟುಗೂಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೂ ಕನ್ನಡ ಸಂಘ (ಸಿಂಗಪುರ)ವು ಅಧಿಕೃತವಾಗಿ ನೋಂದಣಿಯಾಗಿ ಅಸ್ತಿತ್ವಕ್ಕೆ ಬಂದಿದ್ದು 11 ಸೆಪ್ಟೆಂಬರ್ 1996ರಂದು. ಆರಂಭವಾದಂದಿನಿಂದ ಸಿಂಗನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ ಅನೇಕ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ವಿನೋದ ಹಾಗೂ ಶುಭ ಕಾರ್ಯಕ್ರಮಗಳನ್ನು ಆಯೋಜಿಸಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಇದಲ್ಲದೆ ಜಗತ್ತಿನ ವಿವಿದೆಡೆಯಲ್ಲಿರುವ ಕನ್ನಡಿಗರೊಡನೆ ಸಾಂಸ್ಕೃತಿಕ ಸಂಬಂಧವನ್ನು ಬೆಳೆಸಿ ಸಿಂಗಪುರದ ಕನ್ನಡ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದೆ.

ಸಿಂಗನ್ನಡಿಗರಿಗೆ ಒಂದಿಲ್ಲೊಂದು ನವೀನ ಕಾರ್ಯಕ್ರಮಗಳನ್ನು, ಕಲೆ ಹಾಗು ಸಾಹಿತ್ಯ ಪ್ರತಿಭೆ ಪ್ರದರ್ಶಿಸಲು ವೇದಿಕೆ ಮತ್ತು ಅವಕಾಶವನ್ನು ಕೊಡುತ್ತಲೇ ಬಂದಿದೆ ಕನ್ನಡ ಸಂಘ(ಸಿಂಗಪುರ). ಈ ನಿಟ್ಟಿನಲ್ಲಿ ಹುಟ್ಟಿಕೊಂಡಿದ್ದೇ "ಸಿಂಚನ" ಮಾಸ ಪತ್ರಿಕೆ. ಸಿಂಗನ್ನಡಿಗರೆಲ್ಲರನ್ನು ಸಮೀಪಕ್ಕೆ ತರುವ ಒಂದು ಶ್ಲಾಘನೀಯ ಪ್ರಯತ್ನ "ಸಿಂಚನ". ಆಗಸ್ಟ್ 2011ರಲ್ಲಿ ಪಾದಾರ್ಪಣೆ ಮಾಡಿದ "ಸಿಂಚನ"ವು ಅಲ್ಲಿಂದೀಚೆಗೆ ತಿಂಗಳಿಗೊಂದರಂತೆ ಸಂಪುಟ 1ರಲ್ಲಿ 5 ಸಂಚಿಕೆಗಳನ್ನು ಯಶಸ್ವಿಯಾಗಿ ಹೊರತಂದು ಇದೀಗ ಎರಡನೆ ಸಂಪುಟಕ್ಕೆ ಕಾಲಿಟ್ಟಿದೆ.

ಅನೇಕ ಉಪಯುಕ್ತ ಕಿರು ಲೇಖನಗಳು, ಕನ್ನಡ ಸಂಘದ ಕಾರ್ಯಚಟುವಟಿಕೆಗಳ ಸಚಿತ್ರ ವರದಿ (ಮುನ್ನೊಟ-ಹಿನ್ನೋಟ), ಪದ-ಪಂದ್ಯ, ಚಿಂತನ ಚಾವಡಿ ಮತ್ತು ಸ್ಥಿರ ಶೀರ್ಷಿಕೆಗಳನ್ನು ಒಳಗೊಂಡು ಸಿಂಗನ್ನಡಿಗರಿಗೆ ಸಿರಿಗನ್ನಡದ ಶ್ರೀಗಂಧದ ಕಂಪನ್ನು ಅಮೋಘವಾಗಿ ಸೂಸುತ್ತಾ ಬರುತ್ತಿದೆ. ಸ್ಥಳೀಯ ಲೇಖಕರಿಗೆ, ಮಕ್ಕಳನ್ನು ಸೇರಿ, ತಮ್ಮ ಬರಹದ ಚಾತುರ್ಯವನ್ನು ಅನಾವರಣಗೊಳಿಸಲು ಈ ಮಾಸಪತ್ರಿಕೆ ಒಂದು ಉತ್ತಮ ವೇದಿಕೆಯೆಂದರೆ ಅತಿಶಯವೇನಲ್ಲ. "ಸಿಂಚನ"ಕ್ಕೆ ಸಿಂಗನ್ನಡಿಗರಿಂದ ಬಹಳ ಉತ್ತೇಜಕಕರ ಪ್ರತಿಕ್ರಿಯೆ, ಆದರ, ಆಧಾರ ಮತ್ತು ಪ್ರೋತ್ಸಾಹ ಮೊದಲ ಸಂಚಿಕೆಯಿಂದಲೇ ದೊರಕಿರುವುದು ಕನ್ನಡ ಸಂಘ (ಸಿಂಗಪುರ)ದ ಸೌಭಾಗ್ಯ.

"ಸಿಂಚನ"ದ ಈ ಸಾಫಲ್ಯಕ್ಕೆ ಕಾರಣ ಅದರ ಸಶಕ್ತವಾದ ಸಂಪಾದಕ ಸಮಿತಿ. ಸುರೇಶ ಭಟ್ಟ, ಗಿರೀಶ್ ಜಮದಗ್ನಿ ಮತ್ತು ವಸಂತ್ ಕುಲಕರ್ಣಿಯವರ ಸಕ್ರಿಯ ಪ್ರಯತ್ನ; ಸಂಘದ ಕಾರ್ಯಕಾರೀ ಸಮಿತಿಯ ಸಲಹೆ-ಸಹಕಾರ ಹಾಗೂ, ಸ್ಥಳೀಯ ನುರಿತ ಉದಯೋನ್ಮುಖ ಲೇಖಕರ ಲೇಖನ ಹಾಗೂ ಓದುಗರ ಪ್ರೋತ್ಸಾಹದಿಂದ ಪ್ರತಿ ತಿಂಗಳು ಸರಳ-ಸುಂದರ ವಿನ್ಯಾಸ ಮತ್ತು ನವನವೀನ ವಿಚಾರಗಳೊಂದಿಗೆ ಸಿಂಗನ್ನಡಿಗರಿಗೆ ಕನ್ನಡದ ಕಂಪನ್ನು ಸಿಂಪಡಿಸುತ್ತಾ, ಮುಂದಿನ ಸಂಚಿಕೆಗೆ ಕುತೂಹಲದಿಂದ ಎದುರುನೋಡಿಸುತ್ತಾ ಹೊಸ ದಿಗಂತದತ್ತ ಸಾಗುತ್ತಿದೆ ಕನ್ನಡ ಸಂಘ (ಸಿಂಗಪುರ)ದ ಈ ವರ್ಣರಂಜಿತ "ಸಿಂಚನ".

"ಸಿಂಚನ"ವನ್ನು ಓದಲು ಈ ಅಂತರ್ಜಾಲದ-ತಾಣದಲ್ಲಿ ವಿಹರಿಸಿ: ಈ ಮಾಸಪತ್ರಿಕೆಯನ್ನು ಓದಿದ ಮೇಲೆ ನಿಮ್ಮ ಅನಿಸಿಕೆಗಳನ್ನುಗೆ ಬರೆದು ತಿಳಿಸಿ. ಪ್ರತಿ-ತಿಂಗಳು "ಸಿಂಚನ"ದ ಇ-ಪ್ರತಿ ಹಾಗೂ ಕನ್ನಡ ಸಂಘದ ಇನ್ನಿತರ ಇ-ಅಂಚೆ ನಿಮ್ಮ ಇ-ಮೈಲ್‌ಗೆ ತಲುಪಲು ಸಂಘದ ಅಂತರ್ಜಾಲ-ತಾಣದಲ್ಲಿ ನಿಮ್ಮ ಇ-ಮೈಲ್ ವಿಳಾಸವನ್ನು ನೋಂದಾಯಿಸಿ.

-ರಾಮನಾಥ್ ಹೆಚ್. ಎಸ್.
ಸಹ ಕಾರ್ಯದರ್ಶಿ
ಕನ್ನಡ ಸಂಘ (ಸಿಂಗಪುರ)

English summary
Kannada Sangha (Singapore) established in 1996 has been bringing monthly magazine Sinchana every month from Singalore. It has brought out 5 editions. It has given platform to many writers artists to showcase their hidden talent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X