• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾರ್ಥಸಾರಥಿಯವರಿಗೆ ಕೊಲರಾಡೋ ಕನ್ನಡ ಪ್ರಶಸ್ತಿ

By Prasad
|

ಅರಳುಮಲ್ಲಿಗೆ ಪಾರ್ಥಸಾರಥಿಯವರದು ಹರಿದಾಸ ಸಾಹಿತ್ಯ ಪ್ರಚಾರ ಕಾರ್ಯದಲ್ಲಿ ಚಿರಪರಿಚಿತ ಹೆಸರು. ಸೆಪ್ಟೆಂಬರ್ ತಿಂಗಳಿನಿಂದ ಅಮೆರಿಕ ಪ್ರವಾಸದಲ್ಲಿರುವ ಅವರು, ಅಮೆರಿಕದ ವಿವಿಧ ರಾಜ್ಯಗಳಲ್ಲಿ ಸಂಚಾರ ಕೈಗೊಂಡು, ಅನೇಕ ಉಪನ್ಯಾಸಗಳನ್ನು ನಡೆಸಿ, ಸಾಂಸ್ಕೃತಿಕ, ಅಧ್ಯಾತ್ಮಿಕ ಜಾಗೃತಿ ಮೂಡಿಸಿರುವುದನ್ನು ಗುರುತಿಸಿ, ಅಮೆರಿಕದ ‘ಕೊಲರಾಡೋ ಕನ್ನಡ ಕೂಟವು ಪಾರ್ಥಸಾರಥಿಯವರಿಗೆ 'ಕೊಲರಾಡೋ ಕನ್ನಡ ಪ್ರಶಸ್ತಿ' ನೀಡಿ ಗೌರವಿಸಿದೆ.

2011ರ ಡಿಸೆಂಬರ್ 9ರಂದು ಡೆನ್ವರ್‌ನ ನಾದ ಕೊಲರಾಡೋ ಸಭಾಂಗಣದಲ್ಲಿ ನಡೆದ ಹರಿದಾಸ ವಂದನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪಾರ್ಥಸಾರಥಿಯವರಿಗೆ ನೀಡಲಾಯಿತು. ಪ್ರಶಸ್ತಿಯು ಒಂದು ಲಕ್ಷದ ಐವತ್ತು ಸಾವಿರದ ಒಂದು ರೂಪಾಯಿಗಳ ಮೌಲ್ಯದ ಚೆಕ್, ಪ್ರಶಸ್ತಿ ಫಲಕ, ಶಾಲು ಹಾಗೂ ಫಲತಾಂಬೂಲಗಳನ್ನೊಳಗೊಂಡಿದೆ. ಕೊಲರಾಡೋ ಕನ್ನಡ ಕೂಟದ ಸಂಸ್ಥಾಪಕರಾದ ಡಾ. ಪ್ರಭಾಕರ ರಾವ್ ಅವರು ಪ್ರಶಸ್ತಿ ಫಲಕ ನೀಡಿ, ಪ್ರಸ್ತಾವನ ಭಾಷಣ ಮಾಡಿದರು.

ಶೇಕ್‌ಸ್ಪಿಯರ್, ಪೈಥಾಗರಸ್, ವಡ್ಸ್‌ವರ್ತ್, ಎಮರ್ಸನ್ ಮುಂತಾದ ಪಾಶ್ಚಾತ್ಯ ಧೀಮಂತರ ವಿಚಾರ ಸರಣಿಗಳನ್ನು ಶತಮಾನಗಳಿಂದಲೂ ವ್ಯವಸ್ಥಿತವಾಗಿ ಭಾರತದಲ್ಲಿ ಪ್ರಚುರಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಹಾಗೂ ಭಾರತದ ಶ್ರೇಷ್ಠ ಸಾಧಕರ ಚಿಂತನೆ, ಸಾಧನೆಗಳನ್ನು ಪಾಶ್ಚಾತ್ಯ ಜಗತ್ತಿಗೆ ವ್ಯಾಪಕವಾಗಿ ಪರಿಚಯಿಸಬೇಕಾದ ಅಗತ್ಯ ಇಂದು ಬಹಳಷ್ಟಿದೆ. ಈ ಕೆಲಸವನ್ನು ಅರಳುಮಲ್ಲಿಗೆ ಪಾರ್ಥಸಾರಥಿಯವರು ಎರಡು ದಶಕಗಳಿಂದಲೂ ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ ಎಂದು ಪ್ರಶಂಶಿಸಿದರು.

ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ದಾಸ ಸಾಹಿತ್ಯ, ಭಾಗವತ ಹಾಗೂ ವಿಷ್ಣು ಸಹಸ್ರನಾಮಗಳನ್ನು ಜಗತ್ತಿನ ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಪಸರಿಸುತ್ತಿದ್ದಾರೆ. ಇವರು ಬರೆದಿರುವ ಇಂಗ್ಲಿಷ್ ಭಾಷೆಯ ವಿಷ್ಣು ಸಹಸ್ರನಾಮವು ಈಗಾಗಲೇ 13ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಿ, ವಿಶ್ವಮಟ್ಟದ ಮನ್ನಣೆಗಳಿಸಿದೆ. ನಲವತ್ತೈದು ಕನ್ನಡ ಗ್ರಂಥಗಳನ್ನು ರಚಿಸಿ, ಮೂವತ್ತೈದು ಧ್ವನಿ ಮುದ್ರಿಕೆಗಳನ್ನು ಹೊರತಂದು, ಸಾವಿರಾರು ಪ್ರವಚನ, ಉಪನ್ಯಾಸಗಳನ್ನು ಜಗತ್ತಿನಾದ್ಯಂತ ನಿರಂತರವಾಗಿ ನಡೆಸಿಕೊಂಡು ಬಂದಿರುವ ಪಾರ್ಥಸಾರಥಿಯವರಿಗೆ ಪ್ರಶಸ್ತಿ ನೀಡುವ ಮೂಲಕ ಕೊಲರಾಡೋ ಕನ್ನಡ ಕೂಟವು ಅವರನ್ನು ಗೌರವಿಸುತ್ತಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಾರ್ಥಸಾರಥಿಯವರು, ಕೊಲರಾಡೋ ಕನ್ನಡ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿ, ಹರಿದಾಸರು ಸಂಗೀತ, ಸಾಹಿತ್ಯದ ಮೂಲಕ ಸಾಮಾಜಿಕ ಬದುಕಿಗೆ ನೀಡಿದ ಗಮನಾರ್ಹ ಕೊಡುಗೆಗಳ ಬಗ್ಗೆ ಮಾತನಾಡಿದರು. ವಿಶೇಷವಾಗಿ ಪುರಂದರದಾಸರ ಕೊಡುಗೆಯ ಬಗ್ಗೆ ಹೇಳುತ್ತ, ಒಬ್ಬ ವ್ಯಕ್ತಿ ಬರೆದ ಒಂದು ಹಾಡನ್ನು ಐದು ಶತಮಾನಗಳ ಕಾಲ ಕೋಟ್ಯಂತರ ಜನ ಹೇಳುತ್ತ ಸಾಂಸ್ಕೃತಿಕ ಸವಿ ಸವಿದಿದ್ದರೆ ಅದು ಪುರಂದರ ದಾಸರ ಭಾಗ್ಯದ ಲಕ್ಷ್ಮೀ ಬಾರಮ್ಮ ಎನ್ನುವ ಹಾಡು ಎಂದು ಹೇಳಿ, ಪುರಂದರ ದಾಸರ ಸಾಧನೆಯನ್ನು, ಅವರ ಅನೇಕ ಪದಗಳನ್ನು ಸಭೆಗೆ ಪರಿಚಯಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Colorado Kannada award to scholor Aralumallige Parthasarathy. The award was presented to him on December 9, 2011 and presented to him by Dr. Prabhakar Rao, founder president, Colorado Kannada Koota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more