• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂದಾವನದಲ್ಲಿ ನಲಿದಾಡಿದ ನ್ಯೂಜೆರ್ಸಿ ಮಕ್ಕಳು

By Prasad
|

ಡಿಸೆಂಬರ್ 10ರ ಶನಿವಾರ ಎಡಿಸನ್ ಹೈ ಸ್ಕೂಲ್ ಸಭಾಂಗಣದಲ್ಲಿ ನ್ಯೂ ಜೆರ್ಸಿ ಬೃಂದಾವನ ಕನ್ನಡ ಸಂಘದವರು ಆಯೋಜಿಸಿದ್ದ ವಾರ್ಷಿಕೋತ್ಸವ (ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ) ಕಾರ್ಯಕ್ರಮ ವಿಜೃಂಬಣೆಯಿಂದ ನಡೆಯಿತು.

ಮಧ್ಯಾಹ್ನ ಹನ್ನೆರಡು ಘಂಟೆಯಿಂದ ಆರಂಭವಾದ ಜೆನರಲ್ ಬಾಡಿ ಮೀಟಿಂಗ್‌ನಲ್ಲಿ 2011ರ ಕಾರ್ಯಕ್ರಮಗಳ ವಿವರ, ಆಯ-ವ್ಯಯ ಹಾಗೂ ಸಂಸ್ಥೆಯ ಬೆಳವಣಿಗೆ ಮತ್ತು ಮುಂಬರುವ ಯೋಜನೆಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು. ಅಧ್ಯಕ್ಷ ಸಂತೋಷ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಮುಂದಿನ ವರ್ಷಗಳ ಕಾರ್ಯಕ್ರಮಗಳ ರೂಪುರೇಶೆಯನ್ನು ವಿವರಿಸಿದರು. ಮುಂಬರುವ ದಿನಗಳಲ್ಲಿ ಚಾರಿಟಿಗೆ ಸಂಬಂಧಿಸಿದ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತದೆ, ಅಲ್ಲದೇ ಈ ಸಂಘಕ್ಕೆ ತನ್ನದೇ ಆದ ಒಂದು ಸಭಾಭವನದ ಅವಶ್ಯಕತೆ ಇದ್ದು, ಅದಕ್ಕೆ ಸಂಬಂಧಿಸಿದಂತೆಯೂ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.

ಸಂಗೀತ ಮತ್ತು ನೃತ್ಯ : ಭರತ ನಾಟ್ಯ, ಸಂಗೀತ, ಸಾಮೂಹಿಕ ನೃತ್ಯ ಮತ್ತು ರೂಪಕಗಳನ್ನು ಆಯ್ಕೆ ಮಾಡಲಾಗಿತ್ತು. ನಾಲ್ಕು ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಕ್ಕಳು ಹಾಗೂ ಅನೇಕ ತಂಡಗಳು ಸುಮಾರು ಒಂದು ಗಂಟೆಯ ಕಾಲ ಸಭಿಕರನ್ನು ರಂಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾವಗೀತೆ, ಕರ್ನಾಟಕ ಸಂಗೀತ, ಅಷ್ಟಲಕ್ಷ್ಮಿ ನೃತ್ಯ, ಚಿತ್ರ ವಿಹಾರ, ಫ್ಯೂಷನ್ ಡ್ಯಾನ್ಸ್, ಇಂದು ಬಾನಿಗೆಲ್ಲ ಹಬ್ಬ, ಭಾಗ್ಯದ ಲಕ್ಷ್ಮಿ ಬಾರಮ್ಮ, ಗಜವದನ ಭರತನಾಟ್ಯ, ನಮ್ಮ ಪ್ರೀತಿಯ ಮಾತೃಭೂಮಿ, ಜಾನಪದ ನೃತ್ಯಗಳು ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾದವು.

ಚಿತ್ರಕಲೆ ಸ್ಪರ್ಧೆ : ಚಿತ್ರಕಲಾ ಸ್ಪರ್ಧೆಯನ್ನು ಮಕ್ಕಳ ವಯೋಮಾನಕ್ಕನುಗುಣವಾಗಿ ಮೂರು ಗುಂಪುಗಳಲ್ಲಿ ಆಯೋಜಿಸಲಾಗಿತ್ತು. ನಾಲ್ಕರಿಂದ ಹದಿನಾರು ವರ್ಷದವರೆಗೆ ಸುಮಾರು ಇಪ್ಪತ್ತು ಮಕ್ಕಳು ತಾವೇ ಮನೆಯಿಂದ ತಂದ ಬಣ್ಣದ ಸಾಮಗ್ರಿಗಳನ್ನು ಬಳಸಿ, ಭಾರತ-ಕರ್ನಾಟಕದ ಬಾವುಟ, ದೀಪಾವಳಿ ಆಚರಣೆ ಹಾಗೂ ಅನೇಕ ಕರ್ನಾಟಕದ ಸ್ಮಾರಕಗಳನ್ನು ಕುರಿತು ಕಪ್ಪು-ಬಿಳಿ ಹಾಗೂ ಬಣ್ಣದ ಕೃತಿಗಳನ್ನು ರಚಿಸಿದ್ದರು. ವಿಜೇತರು : ಸಬ್ ಜ್ಯೂನಿಯರ್: ಗೌರವ್ ಕೊರಟಗೆರೆ, ಕಾರ್ತಿಕ್ ಮುದುಕಲ್ಲಿ ; ಜ್ಯೂನಿಯರ್: ರಿಯಾ ಮೂರ್ತಿ, ಶ್ರೇಯಾ ಗೌಡ ; ಸೀನಿಯರ್: ಅಪೂರ್ವ ರಾವ್, ಆಕಾಶ್ ಮುತ್ತು. ತೀರ್ಪುಗಾರರು: ಶೈಲಾ ಪಾತಂಕರ್, ಛಾಯಾ ಸಮೀರ.

ಫ್ಯಾನ್ಸಿ ಡ್ರೆಸ್ ಮತ್ತು ಬೃಂದಾವನ ಐಡಲ್ 2011 : ಸುಮಾರು ಹತ್ತು ಹನ್ನೆರಡು ಮಕ್ಕಳು ಬಣ್ಣ-ಬಣ್ಣದ ವೇಷಭೂಷಣಗಳಲ್ಲಿ ಕಂಗೊಳಿಸಿದರು. ನಿರೂಪಕರಾಗಿ ಅಮೂಲ್ಯ ಮತ್ತು ಆಕಾಶ್ ಪ್ರತಿಯೊಬ್ಬ ಪುಟಾಣಿಯ ಹೆಸರು ಹಾಗೂ ವೇಷದ ಬಗ್ಗೆ ಕೇಳಿ ತಿಳಿದಾಗ ಪ್ರೇಕ್ಷಕರು ಪ್ರತಿಯೊಂದು ಮಗುವಿಗೂ ಚಪ್ಪಾಳೆಯ ಮೂಲಕ ಮೆಚ್ಚುಗೆ ಸೂಸಿದರು. ಬೃಂದಾವನ ಐಡಲ್ ಕಾರ್ಯಕ್ರಮದಲ್ಲಿ ಅಮೇರಿಕದಲ್ಲಿ ಹುಟ್ಟಿ ಬೆಳೆದ ಮಕ್ಕಳು ಸುಲಲಿತವಾಗಿ ಯಾವುದೇ ಸ್ಕ್ರಿಪ್ಟ್‌ನ ಅಗತ್ಯವಿಲ್ಲದೆ ತಮ್ಮ ಹಾಡಿನ ಪಲ್ಲವಿ ಹಾಗೂ ಒಂದು ಚರಣವನ್ನು ಅಚ್ಚುಕಟ್ಟಾಗಿ ಒಪ್ಪಿಸಿದ್ದು ಪ್ರತಿಯೊಬ್ಬರಿಗೂ ಮೆಚ್ಚುಗೆಯಾಯಿತು. ವಿಜೇತರು : ಸಬ್ ಜ್ಯೂನಿಯರ್: ವೀಣಾ ಕಲ್ಯಾಣಿ ನಾಗಪ್ರಸಾದ್, ನಿಧಿ ಮೂರ್ತಿ ; ಜ್ಯೂನಿಯರ್: ಪ್ರಭಂಜನ್ ಬಾಲಕೃಷ್ಣ, ರಾಜ್‌ಶ್ರೀ ಉಮೇಶ್ ; ಸೀನಿಯರ್: ಪ್ರೀತಿ ಇನಾಮ್‌ದಾರ್, ಲಕ್ಷ್ಮಿ ಶೈಲೇಶ್. ತೀರ್ಪುಗಾರರು: ಸಿಂಹಾದ್ರಿ ಸಂತೇಬೆನ್ನೂರು, ಶಾರದಾ ಖಂಡವಿಲ್ಲಿ. [ಸಂಗೀತ ಸಂಜೆ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Brindavana Kannada Koota in New Jersey, USA celebrated Childrens' day and Kannada Rajyotsava on December 10 in a grand fashion. Here is report of Kannada event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more